Kantara Chapter 1 OTT: ₹125 ಕೋಟಿಗೆ 'ಕಾಂತಾರ ಚಾಪ್ಟರ್ 1' ಓಟಿಟಿಗೆ ಮಾರಾಟ? ಷರತ್ತುಗಳೇನು?

ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕಾಂತಾರ ಚಾಪ್ಟರ್ 1'. ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ ಒಂದೊಂದು ಸುದ್ದಿಗಳು ಹೊರಬೀಳುತ್ತಿವೆ. ಸದ್ಯಕ್ಕೆ ಸಿನಿಮಾ ತಂಡವೀಗ ಬ್ಯುಸಿನೆಸ್‌ ಮಾಡುವುದರಲ್ಲಿ ನಿರತವಾಗಿದೆ. ಈ ಸಿನಿಮಾ 7ಕ್ಕೂ ಹೆಚ್ಚು ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವುದರಿಂದ ಒಂದೊಂದೇ ಡೀಲ್‌ಗಳನ್ನು ಕುದುರಿಸಿಕೊಂಡು ಬರುತ್ತಿದೆ.

ಈಗಾಗಲೇ ಬೇರೆ ಬೇರೆ ಭಾಷೆಗೆ 'ಕಾಂತಾರ ಚಾಪ್ಟರ್ 1' ಹಕ್ಕುಗಳು ಮಾರಾಟ ಆಗಿವೆ. ಈಗ ಓಟಿಟಿ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಹೊಂಬಾಳೆ ಫಿಲ್ಮ್ಸ್ ಮಾರಾಟ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಈ ಸಿನಿಮಾ ನೋಡುವುದಕ್ಕೆ ಇಡೀ ದೇಶವೇ ಎದುರ ನೋಡುತ್ತಿದೆ. ಯಾಕಂದ್ರೆ, 'ಕಾಂತಾರ' ಲೆವೆಲ್‌ಗೆ ಸದ್ದು ಮಾಡಿತ್ತು. ಅದೇ ಜೋಷ್‌ನಲ್ಲಿ 'ಕಾಂತಾರ'ದ ಪ್ರೀಕ್ವೆಲ್ ಸೆಟ್ಟಿರಿದ್ದು ಈಗ ರಿಲೀಸ್‌ಗೆ ರೆಡಿಯಾಗಿದೆ.

Rishab Shetty Movie Kantara Chapter 1 OTT Rights Sold to Amazon Prime Video for 125 Crores

ಹೊಂಬಾಳೆ ಫಿಲ್ಮ್ಸ್ 'ಕಾಂತಾರ ಚಾಪ್ಟರ್ 1'ರ ಮೇಲೆ ಹೆಚ್ಚು ಹಣವನ್ನು ಹೂಡಿಕೆ ಮಾಡಿದೆ. ಮೂಲಗಳ ಪ್ರಕಾರ, ಇದೂವರೆಗೂ ಹೊಂಬಾಳೆ ನಿರ್ಮಿಸಿದ ಸಿನಿಮಾಗಳಲ್ಲೇ ಇದು ಅತೀ ದೊಡ್ಡದು. ಹೀಗಾಗಿ ಸಿನಿಮಾ ಕೂಡ ಅಷ್ಟೇ ದೊಡ್ಡ ಮಟ್ಟಕ್ಕೆ ವ್ಯಾಪಾರ ಆಗಬೇಕು. ಈಗ ಓಟಿಟಿ ಹಕ್ಕುಗಳು ₹125 ಕೋಟಿಗೆ ಅಮೆಜಾನ್ ಪ್ರೈಂ ವಿಡಿಯೋಗೆ ಮಾರಾಟ ಮಾಡಲಾಗಿದೆ ಎಂಬ ಸುದ್ದಿ ಓಡಾಡುತ್ತಿದೆ. ಅಧಿಕೃತವಾಗಿ ಹೊಂಬಾಳೆ ಫಿಲ್ಮ್ಸ್ ಹೇಳದೇ ಹೋದರೂ, ಸ್ಯಾಂಡಲ್‌ವುಡ್ ಇದು ನಿಜ ಎನ್ನುತ್ತಿದೆ. ಹಾಗಿದ್ರೆ, ₹125 ಕೋಟಿಯ ಷರತ್ತುಗಳು ಏನು? ಬ್ಯುಸಿನೆಸ್ ಹೇಗಾಗಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಹೌದು, 'ಕಾಂತಾರ ಚಾಪ್ಟರ್ 1' ಪ್ಯಾನ್ ಇಂಡಿಯಾ ಸಿನಿಮಾ. ಇಷ್ಟೊತ್ತಿಗಾಗಲೇ ಸಿನಿಮಾದ ಪ್ರಚಾರ ಈಗಾಗಲೇ ಆರಂಭ ಆಗಬೇಕಿತ್ತು. ಆದರೆ, ಯಾಕೋ ನಿಧಾನವಾಗಿ ಶುರುವಾಗಿದೆ ಎನಿಸುತ್ತಿದ್ದರೂ, ಸಿನಿಮಾದ ಬ್ಯುಸಿನೆಸ್ ದೊಡ್ಡ ಮಟ್ಟಕ್ಕೆ ಸುದ್ದಿ ಮಾಡುತ್ತಿದೆ. ಟೈಮ್ಸ್ ಆಫ್ ಇಂಡಿಯಾ 'ಕಾಂತಾರ ಚಾಪ್ಟರ್ 1' ₹125 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎಂದು ವರದಿ ಮಾಡಿದೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಅತೀ ದೊಡ್ಡ ಡೀಲ್ ಎನ್ನಬಹುದು.

'ಕಾಂತಾರ' ಯಶಸ್ಸಿನ ಬಳಿಕ ಹೊಂಬಾಳೆ ಫಿಲ್ಮ್ಸ್ ದುಬಾರಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡುವುದಕ್ಕೆ ನಿರ್ಧರಿಸಿತ್ತು. ಏಳಕ್ಕೂ ಹೆಚ್ಚು ಭಾಷೆಯಲ್ಲಿ ರಿಲೀಸ್ ಆಗುತ್ತಿರುವುದರಿಂದ ವರ್ಲ್ಡ್‌ಕ್ಲಾಸ್ ಮೇಕಿಂಗ್ ಮಾಡಲಾಗಿದೆ ಎನ್ನಲಾಗಿದೆ. ವಿಎಫ್‌ಎಕ್ಸ್‌ಗೆ ಹೆಚ್ಚು ಹಣವನ್ನು ವ್ಯಯ ಮಾಡಲಾಗಿದೆ. ಹೀಗಾಗಿ ಸಿನಿಮಾದ ಬಜೆಟ್ 100 ಕೋಟಿ ರೂಪಾಯಿ ದಾಟಿದೆಯೆಂದು ವರದಿಗಳಾಗಿವೆ. ಆದರೆ, ಇದೂವರೆಗೂ ಅಧಿಕೃತವಾಗಿ ಈ ಸಿನಿಮಾದ ಬಜೆಟ್ ಅನ್ನು ರಿವೀಲ್ ಮಾಡಿಲ್ಲ.

Rishab Shetty Movie Kantara Chapter 1 OTT Rights Sold to Amazon Prime Video for 125 Crores

ಕೊಯ್‌ಮೊಯ್‌ ವೆಬ್‌ಸೈಟ್ ವರದಿ ಪ್ರಕಾರ, 'ಕಾಂತಾರ' ಸಿನಿಮಾದ ಓಟಿಟಿ ಡೀಲ್ ₹125 ಕೋಟಿ ಆಗಿದ್ದು, ಕೇವಲ ಈ ಓಟಿಟಿ ಬ್ಯುಸಿನೆಸ್‌ನಿಂದಲೇ ಹೊಂಬಾಳೆ ಫಿಲ್ಮ್ಸ್ ಬಜೆಟ್ ಅನ್ನು ರಿಕವರಿ ಮಾಡಿದೆ ಎಂದು ಹೇಳಿದೆ. ಒಂದು ವೇಳೆ ಇದು ನಿಜವೇ ಆಗಿದ್ದರೆ, ಮತ್ತೊಂದು ಮೆಗಾ ಬ್ಲಾಕ್‌ಬಸ್ಟರ್ ಬ್ಯುಸಿನೆಸ್ ಆಗಿದೆ ಅಂತಲೇ ಅರ್ಥ. ಈ ವರ್ಷದ ಅತೀ ದೊಡ್ಡ ಓಟಿಟಿ ಡೀಲ್ ಎಂದು ಹೇಳಬಹುದು. ಅಲ್ಲದೆ 'ಕೆಜಿಎಫ್ 2' ಬಳಿಕ ಅತೀ ಹೆಚ್ಚು ಮೊತ್ತಕ್ಕೆ ಸೇಲ್ ಆದ ಸಿನಿಮಾ 'ಕಾಂತಾರ ಚಾಪ್ಟರ್ 1' ಎಂದು ಹೇಳಲಾಗುತ್ತಿದೆ.

ಇನ್ನು ರಿಷಬ್ ಶೆಟ್ಟಿ ಈ ಸಿನಿಮಾದ ಅಸಲಿ ಪ್ರಚಾರ ಆರಂಭ ಮಾಡಿಲ್ಲ. ಇನ್ನೂ ಚಿಕ್ಕದೊಂದು ಟೀಸರ್, ಸಾಂಗ್ ರಿಲೀಸ್ ಆಗಿಲ್ಲ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಈ ಸಿನಿಮಾ ಸೆಪ್ಟೆಂಬರ್ 20ರಂದು ಟ್ರೈಲರ್ ಅನ್ನು ರಿಲೀಸ್ ಮಾಡುವುದಕ್ಕೆ ಪ್ಲ್ಯಾನ್ ಮಾಡಿಕೊಂಡಿದೆ ಎನ್ನಲಾಗಿದೆ. ಬಿಡುಗಡೆಗೆ 10 ದಿನ ಇರುವಾಗ ಪಬ್ಲಿಸಿಟಿಗೆ ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.

More from Filmibeat

English summary
Rishab Shetty film Kantara Chapter 1 has created history with its OTT rights sold to Amazon Prime Video for a record ₹125 crores. Check details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X