ವೀಕೆಂಡ್‌ನಲ್ಲಿ ಓಟಿಟಿ ವೀಕ್ಷಕರಿಗೆ ಮಸ್ತ್ ಮನರಂಜನೆ: ವೂಟ್‌ನಲ್ಲಿ 'ಹರಿಕಥೆ ಅಲ್ಲ ಗಿರಿಕಥೆ'

ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಪಕ್ಕಾ ಕಾಮಿಡಿ ಎಮೋಷನಲ್ ಸಿನಿಮಾ 'ಹರಿಕಥೆ ಅಲ್ಲ ಗಿರಿಕಥೆ' ರಿಲೀಸ್ ಆಗಿತ್ತು. ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಟ್ಟು ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಯೂತ್ ಕಾಮಿಡಿ ಎಂಟರ್‌ಟೈನ್ಮೆಂಟ್ ಸಿನಿಮಾ ಈಗ ಓಟಿಟಿಗೂ ಲಗ್ಗೆ ಇಟ್ಟಿದೆ.

ಅಂದ್ಹಾಗೆ 'ಹರಿಕಥೆ ಅಲ್ಲ ಗಿರಿಕಥೆ' ಸಿನಿಮಾವನ್ನು ಕರಣ್ ಆನಂತ್ ಹಾಗೂ ಅನಿರುದ್ಧ ಮಹೇಶ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸಂಪೂರ್ಣ ಹಾಸ್ಯಮಯ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ ರಚನಾ ಇಂದರ್ ಹಾಗೂ ಪ್ರಮೋದ್ ಶೆಟ್ಟಿ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವೂಟ್ ಸೆಲೆಕ್ಟ್‌ನಲ್ಲಿ 'ಹರಿಕಥೆಯಲ್ಲ ಗಿರಿಕಥೆ'

ರಿಷಬ್ ಶೆಟ್ಟಿ ಸಿನಿಮಾ 'ಹರಿಕಥೆ ಅಲ್ಲ ಗಿರಿಕಥೆ' ಇದೇ ಮೊಟ್ಟ ಮೊದಲ ಬಾರಿಗೆ ಓಟಿಟಿಯಲ್ಲಿ ಪ್ರಸಾರ ಮಾಡಲಾಗಿದೆ. ವೂಟ್ ಸೆಲೆಕ್ಟ್‌ನಲ್ಲಿ ಇಂದಿನಿಂದ (ಆಗಸ್ಟ್ 12) ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಲು ವೂಟ್ ಸೆಲೆಕ್ಟ್ ಸಿದ್ಧವಾಗಿ ನಿಂತಿದೆ. ವೀಕೆಂಡ್‌ನಲ್ಲಿ ಈ ಹಾಸ್ಯ ಸಿನಿಮಾ ವೀಕ್ಷಕರಿಗೆ ಕಾಮಿಡಿ ಕಿಕ್ ಕೊಡಲಿದೆ.

Rishab shetty Starrer Harikathe Alla Girikathe Streaming On Voot Select

ಈ ಸಿನಿಮಾವನ್ನು ಕರಣ್ ಅನಂತ್ ಹಾಗೂ ಅನಿರುದ್ಧ ಮಹೇಶ್, ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿದ್ರೆ, ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದರು. 'ಹರಿಕಥೆ ಅಲ್ಲ ಗಿರಿಕಥೆ' ಸಿನಿಮಾದ ಮತ್ತೊಂದು ಪ್ರಮುಖ ಆಕರ್ಷಣೆ ಅಂದರೆ, ರಿಷಭ್ ಶೆಟ್ಟಿ ಜೊತೆ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿರುವ ಹಿರಿಯ ನಟ ಹೊನ್ನವಳ್ಳಿ ಕೃಷ್ಣ. ತಮ್ಮ ವೃತ್ತಿ ಜೀವನದಲ್ಲಿಯೇ ಅತ್ಯಂತ ಪ್ರಮುಖವಾದ ಹಾಗೂ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ.

ಮೂವರು 'ಗಿರಿ'ಯರ ಕಥೆ ಈ ಹರಿಕಥೆ

ರಚನಾ ಇಂದರ್, ತಪಸ್ವಿನಿ ಪೂಣಚ್ಚ, ಪ್ರಮೋದ್ ಶೆಟ್ಟಿ ಸೇರಿದಂತೆ ಪ್ರಮುಖ ತಾರೆಯರು ಈ ಸಿನಿಮಾದಲ್ಲಿದ್ದಾರೆ. ವಿಶೇಷ ಅಂದರೆ ಇದು ಗಿರಿ ಎಂಬ ಹೆಸರಿನಿಂದ ಆರಂಭ ಆಗುವ ಮೂವರು ಗಿರಿಯರ ಕಥೆ. ಒಬ್ಬ ಗಿರಿ ಉದಯೋನ್ಮುಖ ನಿರ್ದೇಶಕನಾದರೆ, ಮತ್ತೊಬ್ಬ ವಿಲನ್ ಹಾಗೂ ಮತ್ತೋರ್ವ ನಟಿ ಗಿರಿಜಾ. ಈ ಮೂವರೂ ಆಕಸ್ಮಿಕವಾಗಿ ಸೇರಿಕೊಳ್ಳುವ ಕಥೆಯೇ 'ಹರಿಕಥೆ ಅಲ್ಲ ಗಿರಿಕಥೆ'.

ಈ ಮೂವರು 'ಗಿರಿ'ಯರು ಸೇರಿಕೊಂಡು ಸಿನಿಮಾ ಮಾಡಲು ನಿರ್ಧರಿಸುತ್ತಾರೆ. ಇದೇ ಸಿನಿಮಾದ ಮೂಲಕಥೆ. ಇದೊಂದು ಪಕ್ಕಾ ಮನರಂಜನಾತ್ಮಕ ಸಿನಿಮಾವಾಗಿದ್ದು, ಪ್ರೇಕ್ಷಕರನ್ನು ಎರಡು ಗಂಟೆ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಲಿದೆ.

Rishab shetty Starrer Harikathe Alla Girikathe Streaming On Voot Select

ಹೊನ್ನವಳ್ಳಿ ಕೃಷ್ಣ- ರಿಷಬ್ ನಡುವಿನ ಡೈಲಾಗ್ ಹೈಲೈಟ್

ಈ ಸಿನಿಮಾ ಕೇವಲ ಹಾಸ್ಯಕ್ಕಷ್ಟೇ ಮೀಸಲಾಗಿಲ್ಲ. ಬದಲಾಗಿ ರಿಷಭ್ ಶೆಟ್ಟಿ ಹಾಗೂ ಹಿರಿಯ ನಟ ಹೊನ್ನಾವಳಿ ಕೃಷ್ಣ ಇಬ್ಬರೂ ಹಾಸ್ಯದ ನಡುವೆಯೇ ಭಾವನಾತ್ಮಕ ಸಂಭಾಷಣೆ ಕೂಡ ನೋಡುಗರನ್ನು ಸೆಳೆಯುತ್ತೆ. ಸದ್ಯ ವೂಟ್‌ ಸೆಲೆಕ್ಟ್‌ನಲ್ಲಿ 'ಹರಿಕಥೆ ಅಲ್ಲ ಗಿರಿಕಥೆ' ಆಗಸ್ಟ್ 12 ರಿಂದ ಸ್ಟ್ರೀಮಿಂಗ್ ಆಗುತ್ತಿದೆ.

ಈ ಹಾಸ್ಯಭರಿತ ಸಿನಿಮಾಗೆ ಒಟಿಟಿಯಲ್ಲಿ ಜನ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲವಿದೆ. ಅದರಲ್ಲೂ ರಚನಾ ಇಂದರ್ ಈ ಸಿನಿಮಾ ಮೂಲಕ ವೀಕ್ಷಕರನ್ನು ಸೆಳೆಯಬಹುದು. ಪ್ರತಿಯೊಂದು ಕ್ಷಣವೂ ನಗೆಗಡಲಲ್ಲಿ ತೇಲಿಸುವ ಸಿನಿಮಾ ಗೆದ್ದರೆ ಮತ್ತಷ್ಟು ಸಿನಿಮಾಗಳು ಓಟಿಟಿಯಲ್ಲಿ ಅಬ್ಬರಿಸಲಿವೆ.

More from Filmibeat

English summary
Rishab shetty Starrer Harikathe Alla Girikathe Streaming On Voot Select, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X