ಒಟಿಟಿಗೆ ಸಾಯಿ ಪಲ್ಲವಿ 'ಗಾರ್ಗಿ'; ಯಾವಾಗ? ಎಲ್ಲಿಗೆ?

ಜುಲೈ 15ರಂದು ರಿಲೀಸ್ ಆಗಿದ್ದ ಸಾಯಿ ಪಲ್ಲವಿ ನಟನೆಯ 'ಗಾರ್ಗಿ' ಸಿನಿಮಾ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮೆಚ್ಚುಗೆ ಪಡೆದಿತ್ತು. ಆದರೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಕಾಣಲಿಲ್ಲ. ಇದೀಗ ಒಟಿಟಿಯಲ್ಲಿ 'ಗಾರ್ಗಿ' ಸಿನಿಮಾ ಸ್ಟ್ರೀಮಿಂಗ್ ಆಗುವ ಡೇಟ್ ಫಿಕ್ಸ್ ಆಗಿದೆ.

ಗೌತಮ್ ರಾಮಚಂದ್ರನ್ ನಿರ್ದೇಶನದ ಕೋರ್ಟ್‌ ರೂಮ್ ಡ್ರಾಮಾ 'ಗಾರ್ಗಿ'. ಈ ಮಹಿಳಾ ಪ್ರಧಾನ ಚಿತ್ರದಲ್ಲಿ ಟೈಟಲ್‌ ರೋಲ್‌ನಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ತಮಿಳಿನಲ್ಲಿ ನಿರ್ಮಾಣವಾಗಿದ್ದ ಚಿತ್ರ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಿತ್ತು. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಚಿತ್ರವನ್ನು ಕನ್ನಡ ಪ್ರೇಕ್ಷಕರ ಮುಂದೆ ತಂದಿದ್ದರು. ಕೆಳ ಮಧ್ಯಮ ವರ್ಗದ ಕಥೆಯನ್ನೊಳಗೊಂಡ 'ಗಾರ್ಗಿ' ಚಿತ್ರದಲ್ಲಿ ಶಾಲಾ ಶಿಕ್ಷಕಿಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. ಒಂದು ಸಣ್ಣ ಎಳೆಯ ಕಥೆಯನ್ನು ಸಿನಿಮಾ ಮಾಡಿ ಚಿತ್ರತಂಡ ಗೆದ್ದಿತ್ತು.

ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ನೋಡಿ ಸಿನಿಮಾ ಗೆಲ್ಲುತ್ತೆ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಪ್ರೇಕ್ಷಕರ ಮನಗೆದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲೇ ಇಲ್ಲ. ಅದಾಗಲೇ 'ವಿರಾಟ ಪರ್ವಂ' ಸೋಲಿನ ಬೇಸರದಲ್ಲಿದ್ದ ಸಾಯಿ ಪಲ್ಲವಿಗೆ 'ಗಾರ್ಗಿ' ರೂಪದಲ್ಲಿ ಮತ್ತೊಂದು ಸೋಲು ಎದುರಾಗಿತ್ತು. ಅಭಿನಯಕ್ಕೆ ಅವಕಾಶ ಇರುವ ಪಾತ್ರಗಳನ್ನು ಹೆಚ್ಚು ಒಪ್ಪಿಕೊಳ್ಳುವ ಚೆನ್ನೈ ಚೆಲುವೆ ಬಹಳ ಇಷ್ಟಪಟ್ಟು 'ಗಾರ್ಗಿ' ಪಾತ್ರದಲ್ಲಿ ನಟಿಸಿದ್ದರು. ಸೋಲು ಗೆಲುವನ್ನು ಪಕ್ಕಕ್ಕಿಟ್ಟರೆ ಈ ಸಿನಿಮಾ ಆಕೆಯ ಬದುಕಿನಲ್ಲಿ ಎಂದು ಮರೆಯಲಾಗದ ಸಿನಿಮಾ ಆಗಿ ಉಳಿಯಲಿದೆ.

 ಆಗಸ್ಟ್ 12ಕ್ಕೆ ಒಟಿಟಿಗೆ 'ಗಾರ್ಗಿ'

ಆಗಸ್ಟ್ 12ಕ್ಕೆ ಒಟಿಟಿಗೆ 'ಗಾರ್ಗಿ'

ಒಳ್ಳೆ ಪ್ರತಿಕ್ರಿಯೆ ಪಡೆದುಕೊಂಡರೂ ಪ್ರೇಕ್ಷಕರು ಥಿಯೇಟರ್‌ಗೆ ಬಂದು 'ಗಾರ್ಗಿ' ಸಿನಿಮಾ ನೋಡಲಿಲ್ಲ. ಆಗಸ್ಟ್ 12ರಂದು ಒಟಿಟಿಯಲ್ಲಿ ಸಿನಿಮಾ ಮೂಡಿ ಬರಲಿದೆ. ಸೋನಿ ಲಿವ್‌ ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ 'ಗಾರ್ಗಿ' ಕಥೆಯನ್ನು ನೋಡಬಹುದು.

 'ಗಾರ್ಗಿ' ಒನ್‌ಲೈನ್ ಸ್ಟೋರಿ

'ಗಾರ್ಗಿ' ಒನ್‌ಲೈನ್ ಸ್ಟೋರಿ

ಆಕೆಯ ಹೆಸರು ಗಾರ್ಗಿ. ಮಧ್ಯಮ ವರ್ಗದ ಕುಟುಂಬದ ಹೆಣ್ಣು. ಶಾಲಾ ಶಿಕ್ಷಕಿಯ ಕೆಲಸ.ತಂದೆ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯುರಿಟಿ ಗಾರ್ಡ್. ಒಬ್ಬಳು ತಂಗಿ. ದೋಸೆ ಹಿಟ್ಟು ಮಾರಿ ಕುಟುಂಬ ನಡೆಸುವ ತಾಯಿ. ಎಲ್ಲವನ್ನು ಏಗಿಕೊಂಡು ಬದುಕುವ ಕುಟುಂಬದಲ್ಲಿ ಅದೊಂದು ಘಟನೆ ಅಲ್ಲೋಲ ಕಲ್ಲೋಲ ಸೃಷ್ಟಿಸಿಬಿಡುತ್ತೆ. ಮಾಡದ ತಪ್ಪಿಗೆ ತಂದೆ ಜೈಲು ಸೇರುವಂತಾಗುತ್ತದೆ. ನ್ಯಾಯಕ್ಕಾಗಿ ಕೋರ್ಟ್‌ ಮೆಟ್ಟಿಲೇರುವ 'ಗಾರ್ಗಿ' ತಂದೆಯನ್ನು ಬಿಡಿಸಿಕೊಂಡು ಬರಲು ಏನೆಲ್ಲಾ ಹೋರಾಟ ನಡೆಸುತ್ತಾಳೆ ಅನ್ನುವುದು ಸಿನಿಮಾ ಕಥೆ.

 ಫಸ್ಟ್‌ ವೀಕೆಂಡ್‌ ಸಿನಿಮಾ ಗಳಿಕೆ?

ಫಸ್ಟ್‌ ವೀಕೆಂಡ್‌ ಸಿನಿಮಾ ಗಳಿಕೆ?

ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ರಿಲೀಸ್ ಆಗಿದ್ದ'ಗಾರ್ಗಿ' ಸಿನಿಮಾ ಫಸ್ಟ್ ವೀಕೆಂಡ್ ಗಳಿಸಿದ್ದು ಕೇವಲ 2.77 ಕೋಟಿ ರೂ. ಮಾತ್ರ. ಶುಕ್ರವಾರ 67 ಲಕ್ಷ ರೂ., ಶನಿವಾರ 98 ಲಕ್ಷ ರೂ. ಹಾಗೂ ಭಾನುವಾರ 1.12 ರೂ. ಅಷ್ಟೇ ಸಿನಿಮಾ ಕಲೆಕ್ಷನ್ ಮಾಡಿ ನಿರಾಸೆ ಮೂಡಿಸಿತ್ತು. ಲೇಡಿ ಪವರ್ ಸ್ಟಾರ್ ಖ್ಯಾತಿಯ ಸಾಯಿ ಪಲ್ಲವಿ ಕ್ರೇಜ್‌ಗೆ ಇದು ಬಹಳ ಕಮ್ಮಿ ಆಯಿತು.

 ಸ್ವತಃ ಕನ್ನಡದಲ್ಲಿ ಸಾಯಿ ಪಲ್ಲವಿ ಡಬ್ಬಿಂಗ್

ಸ್ವತಃ ಕನ್ನಡದಲ್ಲಿ ಸಾಯಿ ಪಲ್ಲವಿ ಡಬ್ಬಿಂಗ್

ಸಾಯಿ ಪಲ್ಲವಿ ಕನ್ನಡ ಕಲಿತು ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದು, ಕನ್ನಡ ಪ್ರೇಕ್ಷಕರ ಗಮನ ಸೆಳೆದಿತ್ತು. ಕನ್ನಡದವರೇ ತಮ್ಮ ಪಾತ್ರಕ್ಕೆ ಡಬ್ ಮಾಡಲು ಹಿಂದು ಮುಂದು ನೋಡುವಾಗ ತಮಿಳು ನಟಿ ಅಂತಹ ಪ್ರಯತ್ನ ಮಾಡಿದ್ದು ವಿಶೇಷ. ನಿರ್ದೇಶಕಿ ಶೀತಲ್ ಶೆಟ್ಟಿ ಸಾಯಿ ಪಲ್ಲವಿಗೆ ಕನ್ನಡ ಕಲಿಸಿದ್ದರು.

More from Filmibeat

English summary
Sai Pallavi Starrer Gargi Movie OTT Release Date and Streaming Platform Confirmed. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X