ಥಿಯೇಟರ್‌ನಲ್ಲಿ 'ಡಂಕಿ'ಗೆ ಸೆಡ್ಡು ಹೊಡೆದಿದ್ದ 'ಸಲಾರ್' ಓಟಿಟಿಯಲ್ಲಿ ಸೋತಿದ್ದೇಕೆ? ಏನಿದೆ ಲೆಕ್ಕಾಚಾರ?

ಕಳೆದ ವರ್ಷ ಡಿಸೆಂಬರ್‌ನಲ್ಲಿ ಎರಡು ಸಿನಿಮಾಗಳು ಒಂದು ದಿನದ ಅಂತರದಲ್ಲಿ ಅಖಾಡಕ್ಕೆ ಇಳಿದಿದ್ದವು. ಎರಡೂ ಬಿಗ್ ಬಜೆಟ್ ಸಿನಿಮಾಗಳು, ಮೆಗಾ ಹೀರೊ ಸಿನಿಮಾಗಳೇ. ಅದುವೇ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ನಟನೆಯ 'ಸಲಾರ್'. ಇನ್ನೊಂದು ಬಾಲಿವುಡ್‌ ಕಿಂಗ್ ಶಾರುಖ್ ಖಾನ್ ನಟನೆಯ 'ಡಂಕಿ'. ಈ ಎರಡು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಪೈಪೋಟಿಗೆ ಬಿದ್ದಿದ್ದವು.

ಬಾಕ್ಸಾಫೀಸ್‌ನಲ್ಲಿ ನಡೆದ ಈ ಮಹಾಯುದ್ಧದಲ್ಲಿ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಗೆದ್ದಿದ್ದರು. ಶಾರುಖ್ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ಸೋತಿದ್ದರು. ಹಾಗಂತ 'ಡಂಕಿ' ಸೋತಿದೆ ಅಂತಲ್ಲ. 'ಸಲಾರ್' ಬಾಕ್ಸಾಫೀಸ್‌ ಕಲೆಕ್ಷನ್‌ ಅನ್ನು ಹಿಂದಕ್ಕೆ ಹಾಕುವಲ್ಲಿ ಸೋತಿತ್ತು. ಆದ್ರೀಗ ಎರಡೂ ಸಿನಿಮಾಗಳೂ ಓಟಿಟಿಗೆ ಲಗ್ಗೆ ಇಟ್ಟು ಕೆಲವು ದಿನಗಳೇ ಆಗಿವೆ. ಈ ಬಾರಿ 'ಡಂಕಿ' ಮೇಲು ಗೈ ಸಾಧಿಸಿದೆ.

Salaar Vs Dunki in Netflix Ott

'ಸಲಾರ್' ಹಾಗೂ 'ಡಂಕಿ' ಓಟಿಟಿಗೆ ಲಗ್ಗೆ ಇಡುತ್ತಿದ್ದಂತೆ ಮತ್ತೆ ಯಾವ ಸಿನಿಮಾ ಗೆಲ್ಲುತ್ತೆ ಅನ್ನೋ ಲೆಕ್ಕಾಚಾರ ಹಾಕಿ ಕೂತಿದ್ದರು. ಅದಕ್ಕೀಗ ಉತ್ತರ ಸಿಕ್ಕಿದೆ. 'ಸಲಾರ್' ಹಾಗೂ 'ಡಂಕಿ' ಎರಡೂ ಸಿನಿಮಾಗಳೂ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿದ್ದವು. ಆದರೆ, ಥಿಯೇಟರ್‌ನಲ್ಲಿ ಸಿಕ್ಕ ರಿಸಲ್ಟ್‌ಗಿಂತ ಭಿನ್ನವಾಗಿದೆ. ಹಾಗಿದ್ದರೆ, ಯಾವ ಸಿನಿಮಾಗೆ ಎಷ್ಟು ವೀವ್ಸ್ ಬಂದಿದೆ? ತಿಳಿಯಲು ಮುಂದೆ ಓದಿ..

ಓಟಿಟಿಯಲ್ಲಿ 'ಸಲಾರ್'-'ಡಂಕಿ' ಫೈಟ್

'ಸಲಾರ್' ಹಾಗೂ 'ಡಂಕಿ' ಎರಡೂ ಸಿನಿಮಾಗಳೂ ಬಾಕ್ಸಾಫೀಸ್‌ನಲ್ಲಿಯೇ ಫೈಟ್ ಮಾಡಿದ್ದವು. ಇದರಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿ ಗೆದ್ದಿದ್ದು 'ಸಲಾರ್'. ಇದೇ ಟ್ರೆಂಡ್ ಓಟಿಟಿಯಲ್ಲೂ ಮುಂದುವರೆಯುತ್ತೆ ಅನ್ನೋ ಲೆಕ್ಕಾಚಾರವಿತ್ತು. ಹೀಗಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಆಗಿದ್ದ ಎರಡೂ ಸಿನಿಮಾಗಳು ನಡುವೆ ಮತ್ತೆ ಸ್ಪರ್ಧೆ ಏರ್ಪಟ್ಟಿತ್ತು. ಎರಡೂ ಸಿನಿಮಾಗಳೂ ಬೇರೆ ಬೇರೆ ಸಮಯಕ್ಕೆ ರಿಲೀಸ್ ಆಗಿದ್ದರೂ, 'ಸಲಾರ್' ಸಿನಿಮಾವನ್ನು 'ಡಂಕಿ' ಹಿಂದಿಕ್ಕಿದೆ.

ನೆಟ್‌ಫ್ಲಿಕ್ಸ್‌ನಲ್ಲಿ 'ಸಲಾರ್' ಸಿನಿಮಾವನ್ನು 'ಡಂಕಿ' ಸೈಡ್ ಹೊಡೆದಿದೆ. ಫೆಬ್ರವರಿ 15ರಂದು ರಿಲೀಸ್ 'ಡಂಕಿ' ನೆಟ್‌ಫ್ಲಿಕ್ಸ್‌ಗೆ ಬಂದಿತ್ತು. ಅಲ್ಲಿಂದ ಕೇವಲ ನಾಲ್ಕು ದಿನಗಳಲ್ಲಿಯೇ ದಾಖಲೆ ವೀವ್ಸ್ ಅನ್ನು ಪಡೆದುಕೊಂಡಿದೆ. 'ಸಲಾರ್' ಹೋಲಿಸಿದರೆ, 'ಡಂಕಿ' ಕಡಿಮೆ ಸಮಯದಲ್ಲಿ ಹೆಚ್ಚು ವೀವ್ಸ್ ಅನ್ನು ಪಡೆದುಕೊಂಡಿದೆ.

Salaar Vs Dunki in Netflix Ott

'ಸಲಾರ್‌'ಗೆಷ್ಟು? 'ಡಂಕಿ'ಗೆಷ್ಟು?

ಫೆಬ್ರವರಿ 15ರಂದು ರಿಲೀಸ್ ಆಗಿದ್ದ 'ಡಂಕಿ' ಕೇವಲ ನಾಲ್ಕು ದಿನಗಳಲ್ಲಿ 4.9 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಹಾಗೆಯೇ ಸುಮಾರು 13 ಮಿಲಿಯನ್ ಗಂಟೆಗಳ ಕಾಲ ಈ ಸಿನಿಮಾವನ್ನು ವೀಕ್ಷಕರು ವೀಕ್ಷಿಸಿದ್ದಾರೆ. ಇಂಗ್ಲಿಷ್‌ಯೇತರ ಸಿನಿಮಾಗಳ ವಿಭಾಗದಲ್ಲಿ (ನೆಟ್‌ಫ್ಲಿಕ್ಸ್) 'ಡಂಕಿ' 5ನೇ ಸ್ಥಾನದಲ್ಲಿದೆ. ಈ ಮೂಲಕ 'ಡಂಕಿ' ಓಟಿಟಿಯಲ್ಲಿ ದಾಖಲೆ ಸಾಧನೆ ಮಾಡಿದೆ.

ಅದೇ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಸಿನಿಮಾ 'ಸಲಾರ್' ಜನವರಿ 20ರಂದು ರಿಲೀಸ್ ಆಗಿತ್ತು. ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂನಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ಒಂದು ವಾರದ ಅಂತರದಲ್ಲಿ ಇಂಗ್ಲಿಷ್‌ ಭಾಷೆಯನ್ನು ಹೊರತು ಪಡಿಸಿದ ಸಿನಿಮಾಗಳ ವಿಭಾಗದಲ್ಲಿ ಮೂರನೇ ಸ್ಥಾನದಲ್ಲಿತ್ತು. ಹಾಗೇ 1.6 ಮಿಲಿಯನ್ ವೀವ್ಸ್ ಪಡೆದುಕೊಂಡಿತ್ತು. ಹಾಗೇ ಸುಮಾರು 4.8 ಮಿಲಿಯನ್ ಗಂಟೆಗಳ ಕಾಲ ಸಿನಿಮಾವನ್ನು ವೀಕ್ಷಣೆ ಮಾಡಿದ್ದರು. ಈ ಮೂಲಕ ಶಾರುಖ್ ಖಾನ್ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಭಾಸ್ ವಿರುದ್ಧ ಗೆದ್ದಿರೋದು ಸ್ಪಷ್ಟವಾಗಿದೆ ಎಂದು ಹಿಂದಿ ಮಾಧ್ಯಮಗಳು ವರದಿ ಮಾಡಿವೆ.

More from Filmibeat

English summary
Salaar Vs Dunki: Shah Rukh Khan domination over Prabhas on ott
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X