Sikandar OTT:ಓಟಿಟಿಗೆ ಲಗ್ಗೆ ಇಟ್ಟ ಸಲ್ಮಾನ್-ರಶ್ಮಿಕಾ ಸಿನಿಮಾ 'ಸಿಕಂದರ್'; ಎಲ್ಲಿ ನೋಡಬಹುದು?
ಓಟಿಟಿ ಪ್ರಿಯರಿಗೆ ಭಾನುವಾರ (ಮೇ 25) ಬಂಪರ್ ಲಾಟರಿ ಹೊಡೆದಿದೆ. ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವುದಕ್ಕೆ ಆಗದೆ, ಮನೆಯಲ್ಲಿಯೇ ಮನರಂಜನೆ ಹುಡುಕುತ್ತಿರುವವರಿಗೆ ಸೂಪರ್‌ಸ್ಟಾರ್ ಸಿನಿಮಾವೊಂದು ಓಟಿಟಿಗೆ ಲಗ್ಗೆ ಇಟ್ಟಿದೆ. ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವ ಪ್ಲ್ಯಾನ್ ಇಲ್ಲಾ ಅಂದರೆ, ಹೊಚ್ಚ ಸಿನಿಮಾವೊಂದು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದೆ.
ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ನಟಿಸಿದ 'ಸಿಕಂದರ್' ಇತ್ತೀಚೆಗಷ್ಟೇ ಥಿಯೇಟರ್‌ಗೆ ಲಗ್ಗೆ ಇಟ್ಟಿತ್ತು. 'ಘಜನಿ' ಸಿನಿಮಾದ ನಿರ್ದೇಶಕ ಎ ಆರ್ ಮುರುಗದಾಸ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಆದರೆ, ಈ ಸಿನಿಮಾ ಹೇಳಿಕೊಳ್ಳುವಷ್ಟು ಸದ್ದು ಮಾಡಲಿಲ್ಲ. ಥಿಯೇಟರ್‌ನಲ್ಲಿ ಸಿನಿಮಾ ನೋಡಿದವರಿಂದ ಮಿಶ್ರ ಪ್ರತಿಕ್ರಿಯೆಯನ್ನು ವ್ಯಕ್ತವಾಗಿತ್ತು. ಈಗ ಸಿಕಂದರ್ ಸದ್ದಿಲ್ಲದೆ ಓಟಿಟಿಗೆ ಎಂಟ್ರಿ ಲಗ್ಗೆ ಇಟ್ಟಿದೆ.

ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಕಾಂಬಿನೇಷನ್‌ನ ಮೊದಲ ಸಿನಿಮಾವಿದು. ಹೀಗಾಗಿ ತೆರೆಮೇಲೆ ಈ ಜೋಡಿಯನ್ನು ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ಆದರೆ, ಯಾಕೋ ಎ ಆರ್ ಮುರುಗದಾಸ್ ನಿರ್ದೇಶನ ಪ್ರೇಕ್ಷಕರಿಗೆ ಇಷ್ಟ ಆಗಲಿಲ್ಲ. ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಕೆಮಿಸ್ಟ್ರಿಯನ್ನು ದೊಡ್ಡ ಪ್ರಮಾಣದಲ್ಲಿ ಒಪ್ಪಿಕೊಳ್ಳಲಿಲ್ಲ. ಯಾಕೆ ಈ ಸಿನಿಮಾ ನಿರೀಕ್ಷೆ ಮಾಡಿದಷ್ಟು ಯಶಸ್ಸು ಕಾಣಲಿಲ್ಲ? ಸಲ್ಮಾನ್ ಖಾನ್-ರಶ್ಮಿಕಾ ಕಾಂಬಿನೇಷನ್ ಹೇಗಿದೆ? ಎನ್ನುವ ಕುತೂಹಲಕ್ಕೆ ಓಟಿಟಿಯಲ್ಲಿ 'ಸಿಕಂದರ್' ಸಿನಿಮಾವನ್ನು ನೋಡಬಹುದು.
'ಸಿಕಂದರ್' ಎಲ್ಲಿ ನೋಡಬಹುದು?
ಸಲ್ಮಾನ್ ಖಾನ್ 'ಸಿಕಂದರ್' ಅವತಾರವೆತ್ತಿ ಥಿಯೇಟರ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಅದರಲ್ಲೂ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದರಿಂದ ಸಿನಿಮಾ ಬಗ್ಗೆ ಸಹಜವಾಗಿಯೇ ಕುತೂಹಲವಿದ್ದೇ ಇತ್ತು. ಈ ಅಪರೂಪದ ಕಾಂಬಿನೇಷನ್ ಸಿನಿಮಾವನ್ನು ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡವರಿಗೆ 'ಸಿಕಂದರ್' ಸಿನಿಮಾ ನೋಡುವ ಅವಕಾಶ ಮತ್ತೆ ಸಿಕ್ಕಿದೆ. ಇಂದಿನಿಂದಲೇ (ಮೇ 25) ನೆಟ್‌ಫ್ಲಿಕ್ಸ್ ಓಟಿಟಿ ವೇದಿಕೆಯಲ್ಲಿ 'ಸಿಕಂದರ್' ಸ್ಟ್ರೀಮಿಂಗ್ ಆರಂಭಿಸಿದೆ.
'ಸಿಕಂದರ್' ಯಾಕೆ ನೋಡಬೇಕು?
ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರದ್ದು ಅಪರೂಪದ ಕಾಂಬಿನೇಷನ್. ಸಿನಿಮಾ ಬಿಡುಗಡೆಗೂ ಮುನ್ನವೇ ಈ ಜೋಡಿ ಟ್ರೋಲ್ ಆಗಿತ್ತು. ಇಬ್ಬರ ವಯಸ್ಸಿನ ಅಂತರದ ಬಗ್ಗೆ ಟೀಕೆ ಟಿಪ್ಪಣಿಗಳು ಬಂದಿದ್ದವು. ಹೀಗಾಗಿ ಈ ಜೋಡಿಯ ತೆರೆಮೇಲೆ ಹೇಗೆ ಕಾಣಿಸುತ್ತೆ ಅನ್ನೋದನ್ನು ನೋಡಬಹುದು. ಸಲ್ಮಾನ್ ಖಾನ್ ಹಾಗೂ ಮಾಸ್ ಮಸಾಲ ಸಿನಿಮಾಗಳ ಫ್ಯಾನ್ ಆಗಿದ್ದರೆ, ಈ ಸಿನಿಮಾ ಈ ವೀಕೆಂಡ್‌ನಲ್ಲಿ ಒಳ್ಳೆಯ ಆಯ್ಕೆ ಎನ್ನಬಹುದು.
ಬಾಕ್ಸಾಫೀಸ್ ಪರ್ಫಾಮೆನ್ಸ್ ಏನು?
'ಸಿಕಂದರ್' ಸಿನಿಮಾ ನೋಡಿದವರು ನಿರ್ದೇಶನ ಹಾಗೂ ಪರ್ಫಾಮೆನ್ಸ್ ಬಗ್ಗೆ ಟೀಕೆಗಳನ್ನು ಮಾಡಿದ್ದರು. ಹೀಗಾಗಿ ಮೊದಲ ದಿನದಿಂದಲೇ ಸಿನಿಮಾಗೆ ಹಿನ್ನೆಡೆಯಾಗಿತ್ತು. ಹೀಗಾಗಿ ಸಲ್ಮಾನ್ ಖಾನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಲಿಲ್ಲ. ಭಾರತದಲ್ಲಿ ತಿಣುಕಾಡಿಕೊಂಡು 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದರೆ, ವಿಶ್ವದಾದ್ಯಂತ ಈ ಸಿನಿಮಾ 200 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿತ್ತು. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಸಲ್ಮಾನ್ ಖಾನ್ ಲೆವೆಲ್‌ಗೆ ಈ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಯಾವ ಲೆಕ್ಕಕ್ಕೂ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ಸೋಲಿಗೆ ಕಾರಣವೇನು?
ಥಿಯೇಟರ್‌ನಲ್ಲಿ 'ಸಿಕಂದರ್' ಸಿನಿಮಾ ಸೋಲಿಗೆ ಹಲವು ಕಾರಣಗಳನ್ನು ಪಟ್ಟಿ ಮಾಡಲಾಗಿತ್ತು. ಅದರಲ್ಲಿ ಎ ಆರ್ ಮುರುಗದಾಸ್ ನಿರ್ದೇಶನದ ಬಗ್ಗೆ ಟೀಕೆ ಮಾಡಲಾಗಿತ್ತು. ಸಲ್ಮಾನ್ ಖಾನ್ ಆಕ್ಷನ್ ಸಿನಿಮಾಗಳಲ್ಲಿ ಸೂಪರ್ ಎನಿಸಿದರೂ, ಆಕ್ಟಿಂಗ್ ತೆಗೆಸುವಲ್ಲಿ ನಿರ್ದೇಶಕರು ಸೋತಿದ್ದರು. ರಶ್ಮಿಕಾ ಮಂದಣ್ಣ ಡೈಲಾಗ್ ಡಿಲೆವರಿಯಲ್ಲಿ ಸಮಸ್ಯೆಯನ್ನು ಹುಡುಕಿದ್ದರು. ಈ ಎಲ್ಲಾ ಕಾರಣಕ್ಕೆ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಮಕಾಡೆ ಮಲಗಿತ್ತು.


Click it and Unblock the Notifications











