Citadel Honey Bunny; ಬೋಲ್ಡ್ ಸೀನ್‌ನಲ್ಲಿ ಸಮಂತಾ-ವರುಣ್ ಧವನ್; ನೆಟ್ಟಿಗರ ರಿಯಾಕ್ಷನ್ ಏನು?

ಸಮಂತಾ ರುಥ್ ಪ್ರಭು ಹಾಗೂ ವರುಣ್ ಧವನ್ ಜೋಡಿಯ ವೆಬ್ ಸೀರಿಸ್ 'ಸಿಟಾಡೆಲ್; ಹನಿ ಬನ್ನಿ' ಕೊನೆಗೂ ಸ್ಟ್ರೀಮಿಂಗ್ ಆಗಿದೆ. ಓಟಿಟಿ ವೀಕ್ಷಕರು ಈ ಸೀರಿಸ್‌ಗಾಗಿ ಕಾತುರದಿಂದ ಕಾಯುತ್ತಿದ್ದರು. ಇದು ಪ್ರಿಯಾಂಕಾ ಚೋಪ್ರಾ ನಟಿಸಿದ್ದ 'ಸಿಟಾಡೆಲ್' ಹೆಸರಿನ ಇಂಡಿಯನ್ ವರ್ಷನ್. ಹೀಗಾಗಿ ಈ ವೆಬ್‌ ಸೀರಿಸ್‌ನ ಫಾಲೋವರ್ಸ್ ಇಂಡಿಯನ್ ವರ್ಷನ್ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು.

'ಸಿಟಾಡೆಲ್: ಹನ್ನಿ ಬನ್ನಿ' ವೆಬ್‌ ಸೀರಿಸ್ ನಿರೀಕ್ಷೆ ಹುಟ್ಟಿಸಿದ್ದ ಹಲವು ಕಾರಣಗಳಿವೆ. ಈ ವೆಬ್‌ ಸೀರಿಸ್‌ಗೆ ಆಕ್ಷನ್ ಕಟ್ ಹೇಳಿದ್ದು ಭಾರತದ ಜನಪ್ರಿಯ ವೆಬ್ ಸೀರಿಸ್‌ 'ಫ್ಯಾಮಿಲಿ ಮ್ಯಾನ್'ಗೆ ಆಕ್ಷನ್ ಕಟ್ ಹೇಳಿದ್ದ ರಾಜ್‌ ಅಂಡ್ ಡಿಕೆ. ಇನ್ನೊಂದು ಕಡೆ ಸಮಂತಾ ಹಾಗೂ ವರುಣ್ ಧವನ್ ಕಾಂಬಿನೇಷನ್. ಮತ್ತೊಂದು ಈ ವೆಬ್ ಸೀರಿಸ್‌ನಲ್ಲಿರುವ ಆಕ್ಷನ್ ಸೀನ್‌ಗಳು.

Samantha and Varun Dhawan web series citadel honey bunny romantic scenes goes viral

ಈಗಾಗಲೇ ಹಾಲಿವುಡ್ ವರ್ಷನ್‌ನ 'ಸಿಟಾಡೆಲ್' ನೋಡಿದವರಿಗೆ ಇಂಡಿಯನ್ ವರ್ಷನ್ ನೋಡಲೇಬೇಕು ಅಂತಿತ್ತು. ಆದರೆ, ಕಾರಣಾಂತರಗಳಿಂದ ತಡವಾಗುತ್ತಲೇ ಇತ್ತು. ಈಗ ಕೊನೆಗೂ ಅಮೆಜಾನ್ ಪ್ರೈಂ ವಿಡಿಯೋ ಈ ಸೀರಿಸ್ ರಿಲೀಸ್ ಆಗಿದೆ. 'ಫ್ಯಾಮಿಲಿ ಮ್ಯಾನ್‌ಗಿಂತಲೂ ಬೋಲ್ಡ್ ಸೀನ್‌ಗಳಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದೇ ಸೀನ್‌ಗಳು ಸದ್ದು ಮಾಡುತ್ತಿವೆ. ಅಷ್ಟಕ್ಕೂ ಸಮಂತಾ ಬೋಲ್ಡ್ ಅವತಾರಕ್ಕೆ ಟ್ವಿಟರ್ ರಿಯಾಕ್ಷನ್ ಏನಿದೆ? ತಿಳಿಯಲು ಮುಂದೆ ಓದಿ.

ಸಮಂತಾ ಬ್ಯಾಕ್ ಇನ್ ಹಾಟಿ ಮೋಡ್

'ಸಿಟಾಡೆಲ್' ವೆಬ್ ಸೀರಿಸ್ ನೋಡಿದವರಿಗೆ ಸಮಂತಾ ರುಥ್ ಪ್ರಭು ಹಾಗೂ ವರುಣ್ ಧವನ್ ಕೆಮಿಸ್ಟ್ರಿ ಹೇಗಿರುತ್ತೋ ಅನ್ನು ಕುತೂಹಲವಿತ್ತು. ಈ ವೆಬ್ ಸೀರಿಸ್‌ನಲ್ಲಿ ಸಮಂತಾ ಹಾಗೂ ವರಣ್ ಇಬ್ಬರೂ ಗೆದ್ದಿದ್ದಾರೆ. ಆಕ್ಷನ್ ಸೀನ್‌ ಜೊತೆ ಇಬ್ಬರ ರೊಮ್ಯಾಂಟಿಕ್ ಸನ್ನಿವೇಶವನ್ನೂ ಎಂಜಾಯ್ ಮಾಡುತ್ತಿದ್ದಾರೆ. "ಸಮಂತಾ ಹಾಡ್ ಮೋಡ್‌ನಲ್ಲಿ ಕಮ್‌ಬ್ಯಾಕ್ ಮಾಡಿದ್ದಾರೆ. ಬಹಳ ಅದ್ಭುತವಾದ ಸೌಂದರ್ಯ. ಇಂದು ಇಡೀ ಇಂಟರ್‌ನೆಟ್ ಅನ್ನು ಕಂಟ್ರೋಲ್ ಮಾಡುತ್ತಿದ್ದಾರೆ." ಎಂದು ಕಾಮೆಂಟ್ ಮಾಡಿದ್ದಾರೆ.

ಸಮಂತಾ ಆಕ್ಷನ್‌ಗೂ ಫಿದಾ

ಸಮಂತಾ ಹಾಗೂ ವರುಣ್ ಧವನ್ ಬೋಲ್ಡ್ ಸೀನ್‌ಗಳು ಚರ್ಚೆಯಾಗುತ್ತಿರುವುದೇನೋ ನಿಜ. ಇದರೊಂದಿಗೆ ಸಮಂತಾ ಆಕ್ಷನ್‌ ಸೀನ್‌ಗಳಲ್ಲೂ ಮಿಂಚಿದ್ದಾರೆ. ಅದರಲ್ಲೂ ಕಾರ್‌ನಲ್ಲಿ ಫೈಟ್ ಮಾಡುವ ದೃಶ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. "ಕಾರ್ ಅಥವಾ ಬೈಕ್ ಚೇಸ್ ಮಾಡುವ ದೃಶ್ಯ ಬೋರ್ ಹೊಡೆಸುತ್ತವೆ. ಆದರೆ, ಕಾರ್‌ನಲ್ಲಿ ಫೈಟ್ ಮಾಡುವ ದೃಶ್ಯ ಅದ್ಭುತ ಅಂತ ಅನಿಸುತ್ತದೆ" ಎಂದು ಇನ್ನೊಬ್ಬರ ನೆಟ್ಟಿಗರು ಕಿಕ್ ಕೊಟ್ಟಿದ್ದಾರೆ.

ಸಮಂತಾ-ವರುಣ್ ಹಾಟ್ ಸೀನ್

ಸಮಂತಾ ಹಾಗೂ ವರುಣ್ ಧವನ್ ಜೋಡಿಗೆ ನೆಟ್ಟಿಗರು ಬಹುಪರಾಕ್ ಹೇಳಿದ್ದಾರೆ. ಅದರಲ್ಲೂ ಯುವಕರಿಗೆ ಈ ಜೋಡಿಯ ಕೆಮಿಸ್ಟ್ರೀ ಇಷ್ಟ ಆಗಿದೆ. ಅದಕ್ಕೆ ಸೀನ್‌ಗಳ ಸಮೇತ ಟ್ವಿಟರ್‌ನಲ್ಲಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. "ಸಿಟಾಡೆಲ್; ಹನಿ ಬನ್ನಿ 2ನೇ ಎಪಿಸೋಡ್ 30:30 ಸೆಕೆಂಡುಗಳು. ಸಮಂತಾ ಹಾಗೂ ವರುಣ್ ಧವನ್ ಕಿಸ್ಸಿ*ಗ್ ಸೀನ್ ಇದೆ. ಆ ಮೇಲೆ ಧನ್ಯವಾದಗಳನ್ನು ಹೇಳಿ" ಎಂದು ಕಾಮೆಂಟ್ ಹಾಕುತ್ತಿದ್ದಾರೆ.

37ನೇ ವಯಸ್ಸಿನಲ್ಲಿ ಫಿಟ್ನೆಸ್ ನೋಡಿ

ಸಮಂತಾ ಪರ್ಫಾಮೆನ್ಸ್ ಬಗ್ಗೆನೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೋಲ್ಡ್ ಸೀನ್‌ಗಳು, ಆಕ್ಷನ್ ದೃಶ್ಯಗಳ ಜೊತೆ ಜೊತೆಗೆ ಫಿಟ್ನೆಸ್ ಬಗ್ಗೆನೂ ಮಾತಾಡುತ್ತಿದ್ದಾರೆ. ಸಿನಿಮಾ ಬರುವ ಸ್ಕಂಟ್ಸ್‌ನಲ್ಲಿ ಸಮಂತಾ ನೋಡಿ ಹೌಹಾರಿದ್ದಾರೆ. " 37ನೇ ವಯಸ್ಸಿನಲ್ಲಿ ಸಮಂತಾ ಫಿಟ್ನೆಸ್ ನೋಡಿ. ಸಿಟಾಡೆಲ್‌: ಹನಿ ಬನ್ನಿಯಲ್ಲಿ ಅವರು ಮಾಡಿದ ಸ್ಟಂಟ್‌ಗಳನ್ನು ನೋಡಿ. ಒಬ್ಬ ನಟ ಆಕ್ಷನ್ ಸೀಕ್ವೆನ್ಸ್ ಬಳಿಕ ತನ್ನ ದೇಹವನ್ನು ತೋರಿಸುತ್ತಾನೆ ಎಂದಾದರೆ, ನಟಿಯರು ಯಾಕೆ ತೋರಿಸಬಾರದು." ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ.

More from Filmibeat

English summary
Samantha Ruth Prabhu and Varun Dhawan web series citadel honey bunny romantic scenes goes viral;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X