ಕಾದೂ ಕಾದು ಮರೆತು ಹೋದವರಿಗೆ 'ಸಿಟಾಡೆಲ್' ಟೀಸರ್: ಆಕ್ಷನ್ ಮೂಡ್‌ನಲ್ಲಿ ಸಮಂತಾ
ದಕ್ಷಿಣ ಭಾರತದ ಸ್ಟಾರ್ ನಟಿ ಸಮಂತಾ ನಟಿಸಿರುವ ವೆಬ್ ಸೀರಿಸ್‌ಗಾಗಿ ಫ್ಯಾನ್ಸ್ ಕಾದೂ ಕಾದು ಸುಸ್ತಾಗಿದ್ದರು. ಅಮೆಜಾನ್ ಪ್ರೈಂನ ವೆಬ್ ಸೀರಿಸ್ 'ಸಿಟಾಡೆಲ್' ಬಗ್ಗೆ ರಿಲೀಸ್‌ಗಾಗಿ ಎದುರು ನೋಡುತ್ತಲೇ ಇದ್ದರು. ಆದರೆ, ಅಂದುಕೊಂಡಿದ್ದಕ್ಕಿಂತ ತುಸು ಹೆಚ್ಚೇ ಸಮಂತಾ ಅಭಿಮಾನಿಗಳನ್ನು ಕಾಯಿಸಿದ್ದಂತೂ ನಿಜ. ಆದ್ರೀಗ ಕೊನೆಗೂ 'ಸಿಟಾಡೆಲ್' ವೆಬ್ ಸೀರಿಸ್‌ನ ಟೀಸರ್ ರಿಲೀಸ್ ಆಗಿದೆ.
'ದಿ ಫ್ಯಾಮಿಲಿ ಮ್ಯಾನ್', 'ಫರ್ಜಿ' ಅಂತಹ ವೆಬ್ ಸೀರಿಸ್ ಅನ್ನು ನಿರ್ದೇಶಿಸಿದ್ದ ರಾಜ್ ಅಂಡ್ ಡಿಕೆ 'ಸಿಟಾಡೆಲ್'ಗೂ ಆಕ್ಷನ್ ಕಟ್ ಹೇಳಿದ್ದಾರೆ. ಇದರ ಜೊತೆನೇ ಸಮಂತಾ ಹಾಗೂ ವರುಣ್ ಧವನ್ ಕಾಂಬಿನೇಷನ್ ಕೂಡ ಅಷ್ಟೇ ಕುತೂಹಲವನ್ನು ಕೆರಳಿಸಿದೆ. ಸಮಂತಾ ರುಥ್ ಪ್ರಭು ಈ ವೆಬ್ ಸೀರಿಸ್‌ನಲ್ಲಿ ಮತ್ತೆ ಆಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'ಸಿಟಾಡೆಲ್' ಇದೇ ಹೆಸರಿನ ವೆಬ್ ಸೀರಿಸ್ ಹಾಲಿವುಡ್‌ನಲ್ಲಿ ಈಗಾಗಲೇ ಬಂದಿದೆ. ಅದರಲ್ಲಿ ಸಮಂತಾ ಪಾತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದರು. ಅದ್ಧೂರಿ ಆಕ್ಷನ್ ಸೀಕ್ವೆನ್ಸ್, ಥ್ರಿಲ್ಲಿಂಗ್ ಸ್ಟೋರಿ ಹಾಗೂ ರೊಮ್ಯಾಂಟಿಕ್ ಸೀನ್‌ಗಳಿರುವ 'ಸಿಟಾಡೆಲ್'ನ ಇಂಡಿಯನ್ ವರ್ಷನ್ ನಿರ್ಮಾಣಕ್ಕೆ ಕೈ ಹಾಕಲಾಗಿತ್ತು. ಅದೇ ವೆಬ್ ಸೀರಿಸ್‌ನ ಟೀಸರ್ ಈಗ ರಿಲೀಸ್ ಆಗಿದೆ.
ಇದೇ ಮೊದಲ ಬಾರಿಗೆ ಬಾಲಿವುಡ್ ನಟ ವರುಣ್ ಧವನ್ ಜೊತೆ ಸಮಂತಾ ರುಥ್ ಪ್ರಭು ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ಗಾಗಿಯೂ ಈ ವೆಬ್ ಸೀರಿಸ್ ಸಾಕಷ್ಟು ಗಮನ ಸೆಳೆದಿದೆ. 'ಸಿಟಾಡೆಲ್' ಇದು ಭಾರತದ ಅವತರಣಿಕೆಯಾಗಿದ್ದರಿಂದ ರಾಜ್ ಮತ್ತು ಡಿಕೆ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.
ಸಮಂತಾ ನಟನೆಯ ಬಹು ನಿರೀಕ್ಷೆಯ 'ಸಿಟಾಡೆಲ್' ಟೀಸರ್ ರಿಲೀಸ್ ಆಗಿದೆ. ಇದರಲ್ಲಿ ಸಮಂತಾ ರುಥ್ ಪ್ರಭು ಹಾಗೂ ವರಣ್ ಧವನ್ ಇಬ್ಬರ ಲುಕ್ ಹಾಗೂ ಆಕ್ಷನ್ ಖದರ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಟೀಸರ್ ಆರಂಭದಿಂದಲೇ ಹಿಂದಿಯ ಜನಪ್ರಿಯ ಸಾಂಗ್ "ರಾತ್ ಬಾಕಿ.." ಪ್ಲೇ ಆಗುತ್ತಿದ್ದು, ಸಮಂತಾ ಹಾಗೂ ವರುಣ್ ಧವನ್ ಲುಕ್, ಆಕ್ಷನ್ ಸೀನ್‌ಗಳ ಝಲಕ್ ಅನ್ನು ತೋರಿಸಲಾಗಿದೆ.

ಸಮಂತಾ ರುಥ್ ಪ್ರಭು, ವರುಣ್ ಧವನ್ ಜೊತೆ ಸಿಕಂದರ್ ಖೇರ್, ಕೆಕೆ ಮೆನನ್ ಹಾಗೂ ಶಕಿಬ್ ಸಲೀಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೆಬ್ ಸೀರಿಸ್ ಅನ್ನು ದುಬಾರಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಸೆರ್ಬಿಯಾದಂತಹ ದೇಶದಲ್ಲಿ ಈ ವೆಬ್ ಸೀರಿಸ್ ಅನ್ನು ಚಿತ್ರೀಕರಣ ಮಾಡಲಾಗಿದೆ. ಈ ವೆಬ್ ಸೀರಿಸ್‌ನಲ್ಲಿ ಸಮಂತಾ ಕಂಪ್ಲೀಟ್ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
'ಸಿಟಾಡೆಲ್' ವೆಬ್ ಸೀರಿಸ್ ಅಮೆಜಾನ್ ಪ್ರೈಂನಲ್ಲಿ ನೆವೆಂಬರ್ 7ರಂದು ಸ್ಟ್ರೀಮಿಂಗ್ ಆಗಲಿದೆ. 'ಸಿಟಾಡೆಲ್' ಒರಿಜಿನಲ್ ವೆಬ್ ಸೀರಿಸ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಹಾಗೂ ಮಾರ್ವೆಲ್ ಸ್ಟಾರ್ ರಿಚರ್ಡ್ ಮ್ಯಾಡೆನ್ ಮೋಡಿ ಮಾಡಿದಂತೆ ಸಮಂತಾ ಹಾಗೂ ವರುಣ್ ಧವನ್ ಕೂಡ ಒಟಿಟಿ ಪ್ರಿಯರ ಗಮನ ಸೆಳೆಯುತ್ತಾರಾ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.


Click it and Unblock the Notifications











