ಹಾರರ್- ಕಾಮಿಡಿ ಸಿನಿಮಾ 'DD ನೆಕ್ಸ್ಟ್ ಲೆವೆಲ್' ಓಟಿಟಿಗೆ ಲಗ್ಗೆ ಇಡುವುದಕ್ಕೆ ರೆಡಿ; ಯಾವಾಗ? ಎಲ್ಲಿ ರಿಲೀಸ್?

ಓಟಿಟಿಯಲ್ಲಿ ಪ್ರತಿ ವೀಕೆಂಡ್‌ನಲ್ಲೂ ಹೊಸ ಹೊಸ ಕಂಟೆಂಟ್‌ಗಳು ರಿಲೀಸ್ ಆಗುತ್ತವೇ ಇರುತ್ತವೆ. ವೀಕೆಂಡ್‌ನಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಕೂಡ ಹರಸಾಹಸವನ್ನು ಮಾಡುತ್ತಲೇ ಇರುತ್ತವೆ. ಈ ಬಾರಿ ಜೀ 5 ಬೇರೆ ಪ್ಲಾಟ್‌ಫಾರ್ಮ್‌ಗೆ ಪೈಪೋಟಿಯನ್ನು ನೀಡುತ್ತಿದೆ. ಹೊಚ್ಚ ಹೊಸ ಜನಪ್ರಿಯ ಸಿನಿಮಾಗಳನ್ನು ರಿಲೀಸ್ ಮಾಡುತ್ತಿದೆ. ಈ ವೀಕೆಂಡ್‌ನಲ್ಲಿ ಸಿನಿಮಾ ಪ್ರಿಯರಿಗೆ ಸೂಪರ್ ಸಿನಿಮಾವೊಂದು ರೆಡಿಯಾಗಿದೆ.

ತಮಿಳು ಚಿತ್ರರಂಗದ ಹಾಸ್ಯ ನಟ ಸಂತಾನಂ 'ಡಿಡಿ ನೆಕ್ಸ್ಟ್‌ ಲೆವೆಲ್‌' ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಇದೇ ಸಿನಿಮಾವೀಗ ಓಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ. ಇದೊಂದು ಹಾರರ್ ಕಮ್ ಆಕ್ಷನ್ ಕಾಮಿಡಿ ಸಿನಿಮಾ. ಈ ಎರಡೂ ಶೈಲಿಯ ಸಿನಿಮಾಗಳನ್ನು ಇಷ್ಟ ಪಡುವವರಿಗೆ ಈ ಸಿನಿಮಾ ವೀಕೆಂಡ್‌ನಲ್ಲಿ ಸಖತ್ ಕಿಕ್ ಕೊಡಲಿದೆ.

Santhanam starrer horror comedy DD Next Level OTT platform and release date

'ಡಿಡಿ ನೆಕ್ಸ್ಟ್ ಲೆವೆಲ್' ಸಿನಿಮಾವನ್ನು ದಿ ಶೋ ಪೀಪಲ್ ಮತ್ತು ನಿಹಾರಿಕಾ ಎಂಟರ್‌ಟೈನ್‌ಮೆಂಟ್ ನಿರ್ಮಾಣ ಮಾಡಿದೆ. ತಮಿಳು ಚಿತ್ರರಂಗದಲ್ಲಿ ತನ್ನದೇ ಸ್ಥಾನವನ್ನು ಗಿಟ್ಟಿಸಿಕೊಂಡಿರುವ ಸಂತಾನಂ ಇತ್ತೀಚೆಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡಿದ್ದ 'ಡಿಡಿ ನೆಕ್ಸ್ಟ್ ಲೆವೆಲ್' ಸಿನಿಮಾ ಜೀ 5 ಓಟಿಟಿ ವೇದಿಕೆಯಲ್ಲಿ ಪ್ರಸಾರ ಆಗುತ್ತಿದೆ. ಇದೇ ಮಾರ್ಚ್‌ನಿಂದ ದಕ್ಷಿಣ ಭಾರತದ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

ಸಂತಾನಂ ನಟಿಸಿದ 'ಡಿಡಿ ನೆಕ್ಸ್ಟ್ ಲೆವೆಲ್' ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ, ‌ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಈ ಸಿನಿಮಾವನ್ನು ಕೂತು ನೋಡಬಹುದಾಗಿದೆ. ಎಸ್. ಪ್ರೇಮ್ ಆನಂದ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಜೂನ್‌ 13ರಂದು Zee 5ಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ದಿಲ್ಲುಕು ದುಡ್ಡು ಫ್ರ್ಯಾಂಚೈಸ್‌ನ ನಾಲ್ಕನೇ ಚಾಪ್ಟರ್ ಆಗಿರುವ 'DD ನೆಕ್ಸ್ಟ್ ಲೆವೆಲ್'ನಲ್ಲಿ ಸಂತಾನಂ ಜೊತೆಗೆ ಸೆಲ್ವರಾಘವನ್, ಗೌತಮ್ ವಾಸುದೇವ್ ಮೆನನ್ ಮತ್ತು ಗೀತಿಕಾ ತಿವಾರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

'ಡಿಡಿ ನೆಕ್ಸ್ಟ್ ಲೆವೆಲ್' ಸಿನಿಮಾ ಹೀರೋ ಸಂತಾನಂ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. "ಇತ್ತೀಚಿನ ದಿನಗಳಲ್ಲಿ ನಾನು ನಟಿಸಿದ ಅತ್ಯಂತ ಮನರಂಜನೆ ಮತ್ತು ಸೃಜನಾತ್ಮಕವಾಗಿ ತೃಪ್ತಿ ಕೊಟ್ಟ ಪಾತ್ರಗಳಲ್ಲಿ ಕಿಸ್ಸಾ ಕೂಡ ಒಂದು. ಡೆವಿಲ್ಸ್ ಡಬಲ್: ನೆಕ್ಸ್ಟ್ ಲೆವೆಲ್ ಈಗ ZEE5ನಲ್ಲಿ ಚೊಚ್ಚಲ ಬಾರಿಗೆ ಪ್ರದರ್ಶನಗೊಳ್ಳುತ್ತಿದೆ. ಇದು ನನಗೆ ತುಂಬಾನೇ ಸಂತೋಷ ಕೊಟ್ಟಿದೆ. ಈ ಸಿನಿಮಾವನ್ನು ಮನೆಯಲ್ಲಿಯೇ ಸ್ನೇಹಿತರೊಂದಿಗೆ ಲೈಟ್ ಆಫ್ ಮಾಡಿ ಕೈಯಲ್ಲಿ ಪಾಪ್‌ಕಾರ್ನ್‌ ಹಿಡಿದು ಎಂಜಾಯ್ ಮಾಡುಬೇಕು ಎಂದೇ ನಿರ್ಮಿಸಿದ ಸಿನಿಮಾ. ವೀಕ್ಷಕರಿಗೆ ಈ ಸಿನಿಮಾ ಭಯ ಹುಟ್ಟಿಸುತ್ತೆ. ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತೆ. ಯಾವುದಕ್ಕೂ ಹೋಲಿಸಲಾಗದ ವೈಲ್ಡ್ ರೈಡ್ ಜರ್ನಿಯಿದು. ತಮಿಳಿನಲ್ಲಿ ಎಲ್ಲಾ ತರಹದ ಸಿನಿಮಾ ನೋಡಿದ್ದೀರಿ ಎಂದರೆ, ಇದು ಬೇರೆಯೇ ಅನುಭವ ನೀಡುತ್ತೆ" ಎಂದು ಸಂತಾನಂ ಹೇಳಿದ್ದಾರೆ.

Santhanam starrer horror comedy DD Next Level OTT platform and release date

"ZEE5 ವೇದಿಕೆಗೆ ಅದ್ಭುತ ಸಿನಿಮಾಗಳನ್ನು ತೆಗೆದುಕೊಂಡು ಬಂದಿರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ. ಡೆವಿಲ್ಸ್ ಡಬಲ್: ನೆಕ್ಸ್ಟ್ ಲೆವೆಲ್ ಅನ್ನು ಕೊಂಡುಕೊಂಡಿದ್ದು, ನಾವು ವೈವಿಧ್ಯಮಯ ಹಾಗೂ ಆಕರ್ಷಕವಾದ ರಿಜನಲ್ ಕಂಟೆಂಟ್ ಅನ್ನು ನೀಡುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದ್ದೇವೆ. ದಿ ಶೋ ಪೀಪಲ್ ಮತ್ತು ನಿಹಾರಿಕಾ ಎಂಟರ್‌ಟೈನ್‌ಮೆಂಟ್‌ ನಿರ್ಮಾಣ ಮಾಡಿರುವ ಈ ಆಕ್ಷನ್-ಹಾರರ್- ಕಾಮಿಡಿ ಕಥಾಹಂದರದ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಲಿದೆ. ರೊಮ್ಯಾಂಟಿಕ್ ಕಾಮಿಡಿ ಹಾಗೂ ವಿನೂತನವಾಗಿ ಕಥೆ ಹೇಳುವ ಪರಿ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ. ಇದು ನಮ್ಮ ವೀಕ್ಷಕರಿಗೆ ತುಂಬಾನೇ ಇಷ್ಟ ಆಗುತ್ತೆ ಎಂದು ನಾವು ನಂಬುತ್ತೇವೆ. ದಕ್ಷಿಣ ಭಾರತದ ಕಥೆಗಳಿಂದ ಭಾರತದಾದ್ಯಂತ ಅಸಾಧಾರಣ ಏರಿಕೆ ಕಂಡಿದೆ. ಈ ಸಿನಿಮಾ ನಾವು ನಿರಂತರವಾಗಿ ವಿಸ್ತರಿಸುತ್ತಿರುವ ಪ್ರಾದೇಶಿ ಲೈಬ್ರೈರಿಗೆ ಅದ್ಭುತವಾದ ಸೇರ್ಪಡೆ ಎನ್ನಬಹುದು. ಡೆವಿಲ್ಸ್ ಡಬಲ್: ನೆಕ್ಸ್ಟ್ ಲೆವೆಲ್ ನಮ್ಮ ವೀಕ್ಷಕರಿಗೆ ಮನರಂಜನೆಯ ಜೊತೆಗೆ ವಿಶೇಷ ಅನುಭವವನ್ನು ನೀಡುತ್ತದೆ ಎಂಬ ವಿಶ್ವಾಸ ನಮಗಿದೆ." ಎಂದು Zee5ನ ದಕ್ಷಿಣ ಭಾರತದ ಮುಖ್ಯಸ್ಥ ಲಾಯ್ಡ್ ಸಿ ಕ್ಸೇವಿಯರ್ ಹೇಳಿದ್ದಾರೆ.

ನಿರ್ದೇಶಕ ಪ್ರೇಮ್ ಆನಂದ್ ಕೂಡ ಪ್ರತಿಕ್ರಿಯಿಸಿದ್ದಾರೆ. " ನಮ್ಮ ಸಿನಿಮಾಗೆ ZEE5ಗಿಂತ ಉತ್ತಮ ವೇದಿಕೆಯನ್ನು ನಾನು ನಿಜವಾಗಿಯೂ ನಿರೀಕ್ಷೆ ಮಾಡಿರಲಿಲ್ಲ. ನಮ್ಮ ಸಿನಿಮಾಗೆ zee5 ಜಾಗತಿಕ ವೇದಿಕೆಯಾಗಿದ್ದು ಖುಷಿಯಾಗಿದೆ. ಈ ಖುಷಿಯನ್ನು ನಮ್ಮ ವೀಕ್ಷಕರೊಂದಿಗೆ ಹಂಚಿಕೊಳ್ಳವುದಕ್ಕೆ ನಾನು ತುಂಬಾನೇ ಉತ್ಸುಕನಾಗಿದ್ದೇನೆ." ಎಂದು 'ಡಿಡಿ ನೆಕ್ಸ್ಟ್ ಲೆವೆಲ್' ಸಿನಿಮಾ ನಿರ್ದೇಶಕ ಹೇಳಿದ್ದಾರೆ.

More from Filmibeat

English summary
Santhanam starrer horror comedy DD Next Level OTT platform and release date.
Read more about: kollywood tamil movie comedy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X