South OTT Releases:ಈ ವಾರ ಓಟಿಟಿಯಲ್ಲಿ ದಕ್ಷಿಣ ಭಾರತದ ಈ ಎಲ್ಲಾ ಸಿನಿಮಾಗಳನ್ನು ನೋಡಬಹುದು; ಇಲ್ಲಿದೆ ಲಿಸ್ಟ್

ಇನ್ನೇನು ಸೆಪ್ಟೆಂಬರ್ ತಿಂಗಳು ಮುಗಿಯುತ್ತಾ ಬರುತ್ತಿದೆ. ತಿಂಗಳ ಕೊನೆಯ ವಾರದಲ್ಲಿ ಓಟಿಟಿ ವೇದಿಕೆಗಳು ಕೆಲವು ಅದ್ಭುತ ಸಿನಿಮಾಗಳನ್ನು ಸ್ಟ್ರೀಮಿಂಗ್ ಮಾಡುವುದಕ್ಕೆ ಮುಂದಾಗಿದೆ. ಅದರಲ್ಲೂ ದಕ್ಷಿಣ ಭಾರತದ ಸಿನಿಮಾಗಳ ಕಡೆಗೆ ಕಣ್ಣಿಟ್ಟಿರುವ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಕಂಟೆಂಟ್ ಸಿನಿಮಾಗಳನ್ನು ಈ ವೀಕೆಂಡ್‌ನಲ್ಲಿ ಪ್ರೇಕ್ಷಕರ ಮುಂದಿಡುವುದಕ್ಕೆ ನಿರ್ಧರಿಸಿದೆ.

ಪ್ರೈಮ್ ವಿಡಿಯೋ, ಡಿಸ್ನಿಪ್ಲಸ್ ಹಾಟ್‌ಸ್ಟಾರ್, ಜೀ 5 ಸೇರಿದಂತೆ ಇನ್ನೂ ಕೆಲವು ವೇದಿಕೆಗಳು ಈ ವಾರ ತನ್ನ ವೀಕ್ಷಕರಿಗಾಗಿ ಹೊಸ ಕಂಟೆಂಟ್‌ಗಳನ್ನು ರಿಲೀಸ್ ಮಾಡುತ್ತಿದೆ. ಈ ವೀಕೆಂಡ್‌ನಲ್ಲಿ ಫ್ಯಾಮಿಲಿ ಜೊತೆ ಕೂಡ ಮನೆಯಲ್ಲೇ ಎಂಜಾಯ್ ಮಾಡಬೇಕು ಅನ್ನೋರಿಗೆ ದಕ್ಷಿಣ ಭಾರತದಲ್ಲಿ ಸದ್ದು ಮಾಡಿದ ಈ ಸಿನಿಮಾ ಸಖತ್ ಕಿಕ್ ಕೊಡಬಹುದು.

ಅಂದ್ಹಾಗೆ ಈ ವಾರ ಓಟಿಟಿ ವೇದಿಕೆಗಳಲ್ಲಿ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಸದ್ದು ಮಾಡಿದ ಸಿನಿಮಾಗಳು ಸ್ಟ್ರೀಮಿಂಗ್ ಆಗುತ್ತಿವೆ. ಕಂಟೆಂಟ್ ಸಿನಿಮಾಗಳ ಜೊತೆ ಮಾಸ್ ಮಸಾಲ ಸಿನಿಮಾಗಳನ್ನು ವೀಕ್ಷಣೆ ಮಾಡಬಹುದು. ಹಾಗಿದ್ದರೆ, ಈ ವಾರ ದಕ್ಷಿಣ ಭಾರತದ ಯಾವ್ಯಾವ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಅನ್ನೋದನ್ನು ತಿಳಿಯಲು ಮುಂದೆ ಓದಿ.

September 23rd to Sep 29th South Indian movies webseris Ott releases list and details in kannada

'ಸರಿಪೋದಾ ಶನಿವಾರಂ'

ನ್ಯಾಚುರಲ್ ಸ್ಟಾರ್ ನಾನಿ ನಟನೆಯ ಸೂಪರ್ ಹಿಟ್ ಸಿನಿಮಾ 'ಸರಿಪೋದಾ ಶನಿವಾರಂ' ಈ ವಾರ ಓಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಕೋಪಿಷ್ಟನಾಗಿ ನ್ಯಾಚುಲರ್ ಸ್ಟಾರ್ ನಾನಿ ಕಾಣಿಸಿಕೊಂಡಿರುವ ಈ ಸಿನಿಮಾ ಥಿಯೇಟರ್‌ನಲ್ಲಿ ಸದ್ದು ಮಾಡಿತ್ತು. ಇದೇ ಸೆಪ್ಟೆಂಬರ್ 26ರಂದು ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದರೂ, ಬಿಡುಗಡೆಯಾಗಿ ಒಂದು ತಿಂಗಳು ಆಗುವುದಕ್ಕೂ ಮುನ್ನವೇ ಓಟಿಟಿ ವೇದಿಕೆಯಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಹಾಗಾಗಿ ಥಿಯೇಟರ್‌ಗಳಲ್ಲಿ ಮಿಸ್ ಮಾಡಿಕೊಂಡವರಿಗೆ ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ನೋಡಬಹುದು.

September 23rd to Sep 29th South Indian movies webseris Ott releases list and details in kannada

'ವಾಳ- ಬಯೋಪಿಕ್ ಆಫ್ ಬಿಲಿಯನ್ ಡೇಸ್'

ನಾಲ್ಕು ಕೋಟಿ ರೂಪಾಯಿ ಬಜೆಟ್‌ನ ನಿರ್ಮಿಸಲಾಗಿದ್ದ 'ವಾಳ- ಬಯೋಪಿಕ್ ಆಫ್ ಬಿಲಿಯನ್ ಡೇಸ್' ಮಲಯಾಳಂ ಸಿನಿಮಾ ಬಾಕ್ಸಾಫೀಸ್‌ನಲ್ಲಿ 40 ಕೋಟಿ ರೂಪಾಯಿ ದೋಚಿತ್ತು. ಆಗಸ್ಟ್‌ 15ರಂದು ತೆರೆಕಂಡಿದ್ದ ಈ ಸಿನಿಮಾಗೆ ಕೇರಳದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಈ ಸಿನಿಮಾ ಈಗಾಗಲೇ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿದೆ. ಸಿಜು ಸನ್ನಿ, ಜ್ಯೊಮನ್ ಜೋತಿರ್, ಮೀನಾ ಉನ್ನಿಕೃಷ್ಣನ್, ಬೆಸಿಲ್ ಜೋಸೆಫ್ ಅತಿಥಿ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವನ್ನು ಓಟಿಟಿಯಲ್ಲಿ ಈಗ ನೋಡಬಹುದು.

September 23rd to Sep 29th South Indian movies webseris Ott releases list and details in kannada

'ವಾಳೈ'

ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಈ ವಾರ ರಿಲೀಸ್ ಆಗುತ್ತಿರುವ ಮತ್ತೊಂದು ಸಿನಿಮಾ 'ವಾಳೈ'. ತಮಿಳಿನ ಈ ಮಕ್ಕಳ ಸಿನಿಮಾ ತಮಿಳುನಾಡಿನಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. 5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಸಿನಿಮಾ 40 ಕೋಟಿ ರೂಪಾಯಿ ಲೂಟಿ ಮಾಡಿತ್ತು. ಡಿಸ್ನಿ + ಹಾಟ್ ಸ್ಟಾರ್‌ನಲ್ಲಿ ಈ ಸಿನಿಮಾ ಸೆಪ್ಟೆಂಬರ್ 27ರಿಂದ ಸ್ಟ್ರೀಮಿಂಗ್ ಆಗಲಿದೆ.

September 23rd to Sep 29th South Indian movies webseris Ott releases list and details in kannada

'ಡಿಮೊಂಟೆ ಕಾಲೋನಿ 2'

ತಮಿಳಿನ ಸೂಪರ್‌ ನ್ಯಾಚುಲರಲ್ ಸಿನಿಮಾ 'ಡಿಮೊಂಟೆ ಕಾಲೋನಿ 2' ರಿಲೀಸ್‌ ಜೀ 5ನಲ್ಲಿ ಸೆಪ್ಟೆಂಬರ್ 27ರಂದು ರಿಲೀಸ್ ಆಗುತ್ತಿದೆ. ತಮಿಳಿನ ಈ ಸೂಪರ್‌ನ್ಯಾಚುರಲ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ 85 ಕೋಟಿ ರೂಪಾಯಿ ಕಲೆ ಹಾಕಿತ್ತು. ಸೂಪರ್‌ಸ್ಟಾರ್‌ಗಳು ಇಲ್ಲದ ಈ ಸಿನಿಮಾ ಕಂಟೆಂಟ್‌ನಿಂದಲೇ ಪ್ರೇಕ್ಷಕರನ್ನು ಸೆಳೆದಿತ್ತು. ಸದ್ಯ ಈ ಸಿನಿಮಾ ಓಟಿಟಿಯಲ್ಲಿ ಹೇಗೆ ಸದ್ದು ಮಾಡುತ್ತೆ ಅನ್ನೋ ಕುತೂಹಲವಿದ್ದು, ಸೂಪರ್‌ ನ್ಯಾಚುಲರಲ್ ಕಥೆಗಳನ್ನು ಇಷ್ಟ ಪಡುವವರಿಗೆ ಈ ಸಿನಿಮಾ ಇಷ್ಟ ಆಗಬಹುದು.

More from Filmibeat

English summary
September 23rd to Sep 29th South Indian movies webseris Ott releases list and details:
Read more about: ott webseries filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X