Shah Rukh Khan: OTTಗೆ ಲಗ್ಗೆ ಇಟ್ಟ 'ಪಠಾಣ್'.. ಥಿಯೇಟರ್‌ನಲ್ಲೂ ನೋಡದ ದೃಶ್ಯ ನೋಡಿ ಏನಂದ್ರು ಫ್ಯಾನ್ಸ್?
ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಸಿನಿಮಾ 'ಪಠಾಣ್' ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿದೆ. ಕಳೆದ ನಾಲ್ಕೈದು ವರ್ಷಗಳಿಂದ ನಷ್ಟದಲ್ಲಿದ್ದ ಬಿಟೌನ್‌ಗೆ ಈ ಸಿನಿಮಾ ಕೊಂಚ ರಿಲೀಫ್ ಅಂತೂ ಕೊಟ್ಟಿದೆ. ಬಾಲಿವುಡ್ ಸಿನಿಮಾವನ್ನು ಓವರ್ ಟೇಕ್ ಮಾಡಿ ದಾಖಲೆ ಮಾಡಿದ್ದ ದಕ್ಷಿಣದ ಸಿನಿಮಾಗಳ ಕೆಲವು ದಾಖಲೆಗಳನ್ನು ಮುರಿದು ಮರ್ಯಾದೆಯನ್ನಂತೂ ಉಳಿಸಿಕೊಂಡಿದೆ.
ಈಗ ಇದೇ 'ಪಠಾಣ್' ಓಟಿಟಿಗೂ ಲಗ್ಗೆ ಇಟ್ಟಿದೆ. ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಶಾರುಖ್ ಖಾನ್ ಕಮ್‌ಬ್ಯಾಕ್ ಸಿನಿಮಾ ಬಿಡುಗಡೆ ಮಾಡಲಾಗಿದೆ. 43 ದಿನಗಳ ಕಾಲ ಬಾಕ್ಸಾಫೀಸ್ ಅನ್ನು ಕೊಳ್ಳೆ ಹೊಡೆದ ಬಳಿಕ 'ಪಠಾಣ್' ಓಟಿಟಿಗೆ ಲಗ್ಗೆ ಇಟ್ಟಿದ್ದು, ಇಲ್ಲಿನ ದಾಖಲೆ ಬಗ್ಗೆ ಎಲ್ಲರೂ ಕಣ್ಣಿಟ್ಟಿದ್ದಾರೆ.

'ಪಠಾಣ್' ಸಿನಿಮಾವನ್ನು ಮೂರು ಭಾಷೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಹಿಂದಿಯನ್ನು ಬಿಟ್ಟು ತೆಲುಗು ಹಾಗೂ ತಮಿಳಿನಲ್ಲೂ ಈ ಸಿನಿಮಾಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಅದೇ ಮೂರು ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಆದರೆ, ಓಟಿಟಿಯಲ್ಲಿ ಚಿತ್ರತಂಡ ಬಿಗ್ ಸರ್ಪ್ರೈಸ್ ಕೊಟ್ಟಿದೆ.
ಓಟಿಟಿಯಲ್ಲಿ 'ಪಠಾಣ್' ಡಿಲೀಟ್ ಆದ ಸೀನ್ಸ್
ಮಾರ್ಚ್ 22ರಿಂದ 'ಪಠಾಣ್' ಸಿನಿಮಾ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈಗಾಗಲೇ ಥಿಯೇಟರ್‌ನಲ್ಲಿ ಸಿನಿಮಾ ನೋಡಿದವರೂ ಮತ್ತೆ 'ಪಠಾಣ್' ಅನ್ನು ಓಟಿಟಿಯಲ್ಲೂ ನೋಡಲೇಬೇಕು ಅನ್ನುವಂತಹ ವಾತಾವರಣ ಸೃಷ್ಟಿಯಾಗಿದೆ. ಅದಕ್ಕೆ ಕಾರಣ ಡಿಲಿಟೆಡ್ ಸೀನ್ಸ್.

ಶಾರುಖ್ ಖಾನ್ ಕಮ್‌ಬ್ಯಾಕ್ ಸಿನಿಮಾ ಸಖತ್ ಪವರ್‌ಫುಲ್ ಆಗಿತ್ತು. ಆಕ್ಷನ್ ಸೀನ್‌ಗಳು, ಗ್ಲಾಮರ್ ಎಲ್ಲವೂ ಪ್ರೇಕ್ಷಕರಿಗೆ ಕಿಕ್ ಕೊಟ್ಟಿತ್ತು. ಆದರೆ, ನಿರ್ದೇಶಕ ಸಿದ್ಧಾರ್ಥ್ ಆನಂದ್ ಕೆಲವು ದೃಶ್ಯಗಳಲ್ಲಿ ನಾನಾ ಕಾರಣಗಳಿಗೆ ಕತ್ತರಿ ಹಾಕಿದ್ದರು. ಈಗ ಓಟಿಟಿಯಲ್ಲಿ ಆ ಸೀನ್‌ಗಳು ಕೂಡ ಸೇರಿಸಿ ರಿಲೀಸ್ ಮಾಡಲಾಗಿದೆ. ಇದು ವೀಕ್ಷಕರಿಗೆ ಸರ್ಪ್ರೈಸ್ ಕೊಟ್ಟಿದೆ.
ಸೆನ್ಸಾರ್ ಬೋರ್ಡ್ ಕತ್ತರಿ ಹಾಕಿದ ದೃಶ್ಯ ಲಭ್ಯ?
ಶಾರುಖ್ ಖಾನ್ 'ಪಠಾಣ್' ಸಿನಿಮಾ ಬಿಡುಗಡೆಗೂ ಮುನ್ನ ವಿವಾದಕ್ಕೆ ಸಿಲುಕಿತ್ತು. ದೀಪಿಕಾ ಪಡುಕೋಣೆ ಕೇಸರಿ ಬಿಕಿನಿಯಲ್ಲಿ ಕಂಡ ದೃಶ್ಯಗಳ ಬಗ್ಗೆ ವಿವಾದ ಎದ್ದಿತ್ತು. ಹೀಗಾಗಿ ಸೆನ್ಸಾರ್ ಬೋರ್ಡ್ ಇಂತಹ ಕೆಲವು ದೃಶ್ಯಗಳಲ್ಲಿ ಕತ್ತರಿ ಹಾಕಿತ್ತು. ಅವು ಪ್ರೇಕ್ಷಕರಿಗೆ ಥಿಯೇಟರ್‌ನಲ್ಲಿ ನೋಡುವುದಕ್ಕೆ ಸಿಕ್ಕಿರಲಿಲ್ಲ.
ಓಟಿಟಿಗೆ ಡಿಲೀಟ್ ಆದ ಎಲ್ಲಾ ದೃಶ್ಯಗಳನ್ನು ಸೇರಿದ ಓಟಿಟಿಯಲ್ಲಿ ರಿಲೀಸ್ ಮಾಡಲಾಗಿದೆ ಎಂದು ವರದಿಯಾಗಿವೆ. 'ಪಠಾಣ್' ಥಿಯೇಟರ್‌ಗಳಲ್ಲಿ ಸದ್ದು ಮಾಡಿದಂತೆ ಓಟಿಟಿಯಲ್ಲೂ ಸೌಂಡು ಮಾಡುತ್ತಾ? ದಾಖಲೆಗಳನ್ನು ಬರೆಯುತ್ತಾ? ಅನ್ನೋ ಕುತೂಹಲದಲ್ಲಿ ಅಭಿಮಾನಿಗಳಿದ್ದಾರೆ. ಸದ್ಯ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆಯಂತೂ ಸಿಕ್ಕಿದೆ.
ನೆಟ್ಟಿಗರು ಏನಂತಾರೆ?
'ಪಠಾಣ್' ಸಿನಿಮಾ ಬಾಕ್ಸಾಫೀಸ್‌ನಲ್ಲಿಯೇ ಸುಮಾರು 1040 ಕೋಟಿ ರೂ. ಬ್ಯುಸಿನೆಸ್ ಮಾಡಿದೆ. ಈಗ ಓಟಿಟಿಯಲ್ಲೂ ರಿಲೀಸ್ ಆಗಿರೋ ಸಿನಿಮಾ ಯಾವ್ಯಾವ ದಾಖಲೆ ಬರೆಯುತ್ತೆ ಎಂದು ಎದುರು ನೋಡುತ್ತಿದ್ದಾರೆ. ಈ ಮಧ್ಯೆ ನೆಟ್ಟಿಗರು ಸಿನಿಮಾ ನೋಡಿ ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ನೆಟ್ಟಿಗರೊಬ್ಬರು 'ಪಠಾಣ್' ಶಾರುಖ್ ವಿಭಿನ್ನ ಲುಕ್‌ನ ಎರಡು ಫೋಟೊಗಳನ್ನು ಶೇರ್ ಮಾಡಿ " ಈ ಲುಕ್ ಹಾಗೂ ದೃಶ್ಯವನ್ನು ಸೇರಿಸಿದ್ದಾರೆ. ಪಠಾಣ್ ಡ್ಯಾಶಿಂಗ್ ಆಗಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಕೆಲವರು 'ಪಠಾಣ್'ನಲ್ಲಿ ಡಿಲಿಟೆಡ್ ದೃಶ್ಯಗಳನ್ನು ಸೇರಿಸಿರುವುದಕ್ಕೆ ಫುಲ್ ಖುಷಿಯಾಗಿದ್ದಾರೆ. " ಇದು ಪಠಾಣ್ ಎಕ್ಸ್‌ಟೆಂಡ್ ವರ್ಷನ್. ಪ್ರೈಂ ವಿಡಿಯೋದಲ್ಲಿ ಪಠಾಣ್" ಎಂದಿದ್ದಾರೆ. ಇನ್ನೊಬ್ಬರು " ವಾಕ್, ಬಿಜಿಎಂ,ಪ್ರತಿಕ್ರಿಯೆ ಎಲ್ಲವೂ ಬೆಂಕಿ ಹಚ್ಚಿಸುವಂತಿದೆ" ಎಂದು ಖುಷಿ ಹಂಚಿಕೊಂಡಿದ್ದಾರೆ.


Click it and Unblock the Notifications











