ಓಟಿಟಿಯಲ್ಲಿ 'ಜೈ ಜಗನ್ನಾಥ್' ಸದ್ದು; ಶ್ರೀಕೃಷ್ಣನ ಅವತಾರವೆತ್ತಿದ ಶರದ್ ಮಲ್ಹೋತ್ರಾ
ಓಟಿಟಿಯಲ್ಲಿ ಪ್ರತಿವಾರ ಹೊಸ ಶೋಗಳು ಸ್ಟ್ರೀಮಿಂಗ್ ಆಗುತ್ತಲೇ ಇರುತ್ತವೆ. ಆದರೆ, ಇತ್ತೀಚೆಗೆ ಓಟಿಟಿಯಲ್ಲಿ ಕ್ರೈಂ, ರೊಮ್ಯಾಂಟಿಕ್, ಥ್ರಿಲ್ಲರ್ ವೆಬ್ ಸೀರಿಸ್‌ಗಳೇ ಪ್ರಸಾರ ಆಗುತ್ತಿತ್ತು. ಆದರೆ, ಭಕ್ತಿ ಪ್ರಧಾನ ವೆಬ್ ಸೀರಿಸ್‌ಗಳನ್ನು ಇಷ್ಟ ಪಡುವವರಿಗಾಗಿ 'ಜೈ ಜಗನ್ನಾಥ್' ಅನ್ನೋ ಶೋ ಆರಂಭ ಆಗಿದೆ. ಹಿಂದಿಯ ಜನಪ್ರಿಯ ನಟ ಶರದ್ ಮಲ್ಹೋತ್ರಾ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
'ಜೈ ಜಗನ್ನಾಥ್' ಇದೇ ಮೊದಲ ಬಾರಿಗೆ ಹರಿ ಓಂ ಓಟಿಟಿಯಲ್ಲಿ ಪ್ರಸಾರ ಆಗುತ್ತಿದೆ. ಹೆಚ್ಚಾಗಿ ವೈದಿಕ ಇತಿಹಾಸ ಇರುವ ಕಥೆಗಳನ್ನು ಈ ವೇದಿಕೆಯಲ್ಲಿ ಪ್ರಸಾರ ಆಗುತ್ತೆ. ಈಗ 'ಜೈ ಜಗನ್ನಾಥ್' ಸೀರಿಸ್‌ನಲ್ಲಿ ಹಿಂದಿಯ ಜನಪ್ರಿಯ ನಟ ಶರದ್ ಮಲ್ಹೋತ್ರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಶ್ರೀ ಕೃಷ್ಣನ ಅವತಾರವೆತ್ತಿದ್ದಾರೆ. ಜಗನ್ನಾಥನ ದೇವಸ್ಥಾನವನ್ನು ಸ್ಥಾಪಿಸಲು ಕೃಷ್ಣನ ಹೃದಯವನ್ನು ಯಾವ ರೀತಿ ಪವಿತ್ರವಾದ ಮರದಲ್ಲಿ ಇಡಲಾಯಿತು ಎಂಬುವನ್ನು ಹೇಳಲಾಗಿದೆ. ಈ ನಂಬಲಾಗದ ಪ್ರಯಾಣವನ್ನು 'ಜೈ ಜಗನ್ನಾಥ್' ಸರಣಿಯು ಜೀವಂತಗೊಳಿಸಲಾಗಿದೆ.

ಈ ಸೀರಿಸ್‌ನಲ್ಲಿ ಹಲವು ಕಾರಣಗಳಿಗೆ ಗಮನ ಸೆಳೆದಿದೆ. ಇದು ಆಳವಾದ ಭಕ್ತಿ ಹಾಗೂ ಪ್ರಾಚೀನ ಇತಿಹಾಸವನ್ನು ಹೊಂದಿದೆ. ಹಾಗೆಯೇ ಶ್ರೀಕೃಷ್ಣನ ದಂತಕಥೆಯನ್ನು ದೈವಿಕವಾಗಿ ವೀಕ್ಷಕರ ಮುಂದೆ ತೆರೆದಿಡುತ್ತದೆ. ಶ್ರೀಕೃಷ್ಣ ದಂತ ಕಥೆಯನ್ನು ಇದೇ ಮೊದಲ ಬಾರಿಗೆ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಹರಿ ಓಂ ಓಟಿಟಿಯಲ್ಲಿ 'ಜೈ ಜಗನ್ನಾಥ್' ಸೀರಿಸ್ ಈಗಾಗಲೇ ಸ್ಟ್ರೀಮಿಂಗ್ ಆಗುತ್ತಿದೆ.
ಈ ಸೀರಿಸ್‌ನಲ್ಲಿ ಶರದ್ ಮಲ್ಹೋತ್ರಾ ಜೊತೆ ಸೃಷ್ಠಿ ಮಹೇಶ್ವರಿ, ತರುಣ್ ರಾಜ್, ಜಿಯಾ ಚೌಹಾಣ್ ಹಾಗೂ ಕುನಾಲ್ ಸಿಂಗ್ ರಜಪೂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸೀರಿಸ್ ಬುಡಕಟ್ಟು ಜನಾಂಗದ ಭಕ್ತ ವಿಶ್ವ ವಸುವಿನ ಭಕ್ತಿಯಿಂದ ಹಿಡಿದು ರಾಜ ಪ್ರದ್ಯುಮ್ನನ ಕನಸುಗಳವರೆಗೆ ಸಾಗುತ್ತೆ. ಈ ದಂತ ಕಥೆಯು ನೀಲಮಾಧವನ ಪವಿತ್ರ ವಿಗ್ರಹದ ಆವಿಷ್ಕಾರ ಹೇಗಾಯಿತು ಎಂದು ಹೇಳುತ್ತೆ. ಹಾಗೇ ಭವ್ಯವಾದ ದೇವಾಲಯದ ನಿರ್ಮಾಣ ಹೇಗಾಯಿತು ಎಂಬುದನ್ನು ತೋರಿಸಲಾಗಿದೆ. ಈ ಎಲ್ಲಾ ವಿಷಯಗಳನ್ನು ಬೃಹತ್ ಮೊತ್ತದಲ್ಲಿ ಲಕ್ಷಾಂತರ ಜನರ ಆಳವಾದ ನಂಬಿಕೆ ಹಾಗೂ ಸಂಪ್ರದಾಯವನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸುತ್ತೆ ಎಂದು ಹೇಳಲಾಗಿದೆ.
"ಜೈ ಜಗನ್ನಾಥ್ ಸೀರಿಸ್‌ನ ಭಾಗವಾಗಿರುವುದಕ್ಕೆ ಸಿಕ್ಕಾಪಟ್ಟೆ ಥ್ರಿಲ್ ಆಗಿದೆ. ಶ್ರೀಕೃಷ್ಣನ ಪಾತ್ರ ಮಾಡುತ್ತಿರುವುದು ನನಗೆ ಕೇವಲ ಪಾತ್ರವಷ್ಟೇ ಅಲ್ಲ. ಅದೊಂದು ಆಧ್ಯಾತ್ಮಿಕ ಜರ್ನಿ ಎಂದೆನಿಸಿದೆ. ವಿಭು ಅವರೊಂದಿಗೆ ಕೆಲಸ ಮಾಡುವುದು ಯಾವಾಗಲೂ ಖುಷಿ ಕೊಡುತ್ತೆ. ಇನ್ನು ಹರಿ ಓಂ ಓಟಿಟಿಯ ಮಹತ್ವಾಕಾಂಕ್ಷೆಯ ಸೀರಿಸ್‌ನ ಭಾಗವಾಗಿದ್ದು ನಿಜಕ್ಕೂ ಸ್ಪೆಷಲ್ ಎನಿಸಿದೆ. ಈ ಪ್ರಾಜೆಕ್ಟ್ ಒಂದು ರೀತಿಯಲ್ಲಿ ಕನಸು ನನಸಾದ ಅನುಭವ. ವೀಕ್ಷಕರು ಈ ಅದ್ಭುತ ಜರ್ನಿಯನ್ನು ಕಣ್ತುಂಬಿಕೊಳ್ಳುವುದನ್ನು ಎದುರು ನೋಡುತ್ತಿದ್ದೇನೆ" ಎಂದು ನಟ ಶರದ್ ಮಲ್ಹೋತ್ರಾ ಹೇಳಿದ್ದಾರೆ.
"ಹರಿ ಓಂ ಓಟಿಟಿಯಲ್ಲಿ ಜೈ ಜಗನ್ನಾಥ್ ಅಂತಹ ಅತೀ ದೊಡ್ಡ ಶೋವನ್ನು ಆರಂಭಿಸಿದ್ದಕ್ಕೆ ಖುಷಿಯಿದೆ. ಶ್ರೀಕೃಷ್ಣನ ಪಾತ್ರದಲ್ಲಿ ಶರದ್ ಮಲ್ಹೋತ್ರಾ ನಟಿಸುತ್ತಿರುವುದು ಖುಷಿಕೊಟ್ಟಿದ್ದು, ದೈವಿಕ ಭಾವನೆ ಮೂಡುವಂತೆ ಮಾಡಿದ್ದಾರೆ" ಎಂದು ನಿವೇದಿತಾ ಬಸು ಹೇಳಿದ್ದಾರೆ.
ಹಲವು ಓಟಿಟಿಗಳಲ್ಲಿ ಹಲವು ರೀತಿಯ ಕಂಟೆಂಟ್‌ಗಳು ಪ್ರಸಾರ ಆಗುತ್ತಿವೆ. ಆದರೆ, ಭಕ್ತಿಯನ್ನು ಇಷ್ಟ ಪಡುವ ಜನರಿಗಾಗಿ ಜೈ ಜಗನ್ನಾಥ್ ಸೀರಿಸ್ ಅನ್ನು ತರಲಾಗಿದೆ. ಇದು ಹರಿ ಓಂ ಓಟಿಟಿಯ ವೀಕ್ಷಕರಿಗೆ ಇಷ್ಟ ಆಗುತ್ತೆ ಎಂಬ ನಿರೀಕ್ಷೆಯಿದೆ.


Click it and Unblock the Notifications










