ದಿ ಇಂದ್ರಾಣಿ ಮುಖರ್ಜಿ ಸ್ಟೋರಿ ಸೀರಿಸ್ ತಡೆಗೆ ಬಾಂಬೆ ಹೈ ಕೋರ್ಟ್ ನಕಾರ; ಸಿಬಿಐ ಅರ್ಜಿ ವಜಾ, ಏನಿದು ಕೇಸ್?

ನೆಟ್‌ಫ್ಲಿಕ್ಸ್‌ನ ಬಹು ಚರ್ಚಿತ ಡಾಕ್ಯೂ ವೆಬ್‌ಸೀರಿಸ್ 'ದಿ ಇಂದ್ರಾಣಿ ಮುಖರ್ಜಿ ಸ್ಟೋರಿ: ಬರೀಡ್ ಟ್ರೂತ್' ಬಿಡುಗಡೆಗೆ ತಡೆ ನೀಡುವಂತೆ ಸಿಬಿಐ ಬಾಂಬೆ ಹೈ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಬಳಿಕ, ಸಿಬಿಐ ಸಲ್ಲಿಸಿದ ಅರ್ಜಿಯನ್ನು ಬಾಂಬೆ ಹೈ ಕೋರ್ಟ್ ತಿರಸ್ಕರಿಸಿದೆ.

'ದಿ ಇಂದ್ರಾಣಿ ಮುಖರ್ಜಿ ಸ್ಟೋರಿ: ಬರೀಡ್ ಟ್ರೂತ್' ವೆಬ್‌ ಸೀರಿಸ್ ಅನ್ನು ನ್ಯಾಯ ಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಮಂಜೂಷಾ ದೇಶಪಾಂಡೆ ಅವರ ವಿಭಾಗೀಯ ಪೀಠ ವೀಕ್ಷಣೆ ಮಾಡಿತ್ತು. ಆ ಸೀರಿಸ್‌ನಿಂದ ವಿಚಾರಣೆಗೆ ಹಿನ್ನಡೆಯಾಗುವಂತಹ ಯಾವುದೇ ಅಂಶಗಳು ಗಮನಕ್ಕೆ ಬಂದಿದ್ದ ಎಂದು ನಿರ್ಣಯವನ್ನು ತೆಗೆದುಕೊಂಡಿದೆ.

Sheena Bora case: Netflix docu-series on Indrani Mukerjea Bombay HC rejects CBI plea

ಭಾರತದಲ್ಲಿ ಸಂಚಲ ಸೃಷ್ಟಿಸಿದ್ದ ಶೀನಾ ಬೋರಾ ಕೊಲೆ ಪ್ರಕರಣವನ್ನು ಹಿನ್ನೆಲೆಯನ್ನು ಇಟ್ಟುಕೊಂಡು ನೆಟ್‌ಫ್ಲಿಕ್ಸ್ 'ದಿ ಇಂದ್ರಾಣಿ ಮುಖರ್ಜಿ ಸ್ಟೋರಿ: ಬರೀಡ್ ಟ್ರೂತ್' ಡಾಕ್ಯೂ ಸೀರಿಸ್ ಅನ್ನು ನಿರ್ಮಾಣ ಮಾಡಿತ್ತು. ಈ ಸೀರಿಸ್ ಅನ್ನು ಕಳೆದ ತಿಂಗಳು (ಫೆಬ್ರವರಿ 23) ರಂದು ಬಿಡುಗಡೆ ಮಾಡುವುದಕ್ಕೆ ನೆಟ್‌ಫ್ಲಿಕ್ಸ್ ನಿರ್ಧರಿಸಿತ್ತು. ಆದರೆ, ಸಿಬಿಐ ಇನ್ನೂ ಈ ಕೇಸ್‌ನ ವಿಚಾರ ನಡೆಯುತ್ತಿದ್ದು, ಹಿನ್ನೆಲೆಯಾಗುವ ಸಾಧ್ಯತೆ ಇರುವುದರಿಂದ ನ್ಯಾಯಾಲಯದ ಮೆಟ್ಟಿಲೇರಿದ್ದರು.

'ದಿ ಇಂದ್ರಾಣಿ ಮುಖರ್ಜಿ ಸ್ಟೋರಿ: ಬರೀಡ್ ಟ್ರೂತ್' ವೆಬ್‌ ಸೀರಿಸ್‌ಗೆ ತಡೆ ನೀಡುವಂತೆ ಸಿಬಿಐ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಲ್ಲಿ ತಿರಸ್ಕರಿಸಿದ ಬಳಿಕ ಸಿಬಿಐ, ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿತ್ತು. ಈ ಸರಣಿಯಲ್ಲಿ ಮಾಡಿರುವ ಆರೋಪಿಗಳು ಹಾಗೂ ಸಾಕ್ಷಿಗಳ ಸಂದರ್ಶನದ ಬಗ್ಗೆ ಸಿಬಿಐ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ ನ್ಯಾಯಾಲಯ ನ್ಯಾಯಮೂರ್ತಿಗಳಿಗೆ ಹಾಗೂ ವಕೀಲರಿಗಾಗಿ ವಿಶೇಷ ಪ್ರದರ್ಶನವನ್ನು ಏರ್ಪಾಡು ಮಾಡುವಂತೆ ನೆಟ್‌ಫ್ಲಿಕ್ಸ್‌ಗೆ ಆದೇಶಿಸಿತ್ತು. ಹೀಗಾಗಿ ಬಿಡುಗಡೆ ದಿನವನ್ನು ಅನಿವಾರ್ಯವಾಗಿ ಮುಂದೂಡಬೇಕಾಗಿತ್ತು.

Sheena Bora case: Netflix docu-series on Indrani Mukerjea Bombay HC rejects CBI plea

ಡಾಕ್ಯೂ ಸೀರಿಸ್ ವೀಕ್ಷಿಸಿ, ಸಿಬಿಐ ಮನವಿಯನ್ನು ತಿರಸ್ಕರಿಸಿದ ಬಳಿಕ ಬಾಂಬೆ ಹೈ ಕೋರ್ಟ್‌ನ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಮಂಜೂಷಾ ದೇಶಪಾಂಡೆಯವರ ವಿಭಾಗೀಯ ಪೀಠ ಹೀಗೆ ಹೇಳಿದೆ. " ಈ ಸೀರಿಸ್‌ನಲ್ಲಿ ನಮ್ಮ ಗಮನಕ್ಕೆ ಬರುವಂತಹ ಅಂಶ ಏನೂ ಇಲ್ಲ. ಆರಂಭದಲ್ಲಿ ಈ ಸೀರಿಸ್‌ನಲ್ಲಿ ಏನೋ ಇರಬಹುದು ಎಂದು ಅಂದುಕೊಂಡಿದ್ದೆವು. ಸಾರ್ವಜನಿಕ ಗ್ರಹಿಕೆಯು ನಮ್ಮ ಕಾಳಜಿಯಾಗಿತ್ತು." ಎಂದು ಹೇಳಿದೆ.

ಏನಿದು ಕೊಲೆ ಪ್ರಕರಣ?

ಉದ್ಯಮಿ ಇಂದ್ರಾಣಿ ಮುಖರ್ಜಿ ಮೇಲೆ ಮಗಳು ಶೀನಾ ಬೋರಾರನ್ನು ಕೊಲೆ ಮಾಡಿದ ಆರೋಪವಿದೆ. ಈ ಸಂಬಂಧ ಇಂದ್ರಾಣಿ ಮುಖರ್ಜಿ, ಮಾಜಿ ಪತಿಯರಾದ ಸಂಜೀವ್ ಖನ್ನಾ, ಪೀಟರ್ ಮುಖರ್ಜಿಯಾ, ಕಾರು ಚಾಲಕ ಚಾಲಕ ಶ್ಯಾಮ್ವರ್ ರಾಯ್ ಸಹಾಯದಿಂದ ಮಗಳ ಕೊಲೆ ಮಾಡಿರುವ ಆರೋಪವಿದ್ದು ಸಿಬಿಐ ತನಿಖೆ ನಡೆಸುತ್ತಿದ್ದಾರೆ. 2022ರಲ್ಲಿ ಇಂದ್ರಾಣಿ ಮುಖರ್ಜಿಗೆ ಜಾಮೀನು ಮಂಜೂರಾಗಿದ್ದು, ನೆಟ್‌ಫ್ಲಿಕ್ಸ್‌ ಸೀರಿಸ್‌ ಈ ಪ್ರಕರಣದ ಬಗ್ಗೆ ಸಂದರ್ಶನ ನೀಡಿದ್ದಾರೆ.

ಇಂದ್ರಾಣಿಯ ಮುಖರ್ಜಿ ಹಾಗೂ ಮೊದಲ ಪತಿ ಸಂಜೀವ ಖನ್ನಾ ಪುತ್ರಿ ಶೀನಾ ಬೋರಾ. ಸಂಜೀವ ಖನ್ನಾ ಜೊತೆ ವಿಚ್ಛೇದನ ಪಡೆದ ಬಳಿಕ ಉದ್ಯಮಿ ಪೀಟರ್ ಮುಖರ್ಜಿಯಾರನ್ನು ವಿವಾಹವಾಗಿದ್ದರು. ಈ ವೇಳೆ ಪೀಟರ್ ಮುಖರ್ಜಿಯಾ ಮೊದಲ ಪತ್ನಿಯ ಪುತ್ರ ರಾಹುಲ್ ಮುಖರ್ಜಿಯಾ ಜೊತೆ ಶೀನಾ ಬೋರಾ ಡೇಟಿಂಗ್ ಮಾಡುತ್ತಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಶೀನಾ ಕೊಲೆ ನಡೆದಿರಬಹುದೆಂಬ ಆರೋಪವಿದೆ. ಈ ಪ್ರಕರಣ ಹೊರಬಿದ್ದಾಗ, ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು.

More from Filmibeat

English summary
Bombay HC rejects CBI plea on Netflix docu-series on Indrani Mukerjea.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X