ಓಟಿಟಿಯಲ್ಲಿ 125 ಮಿಲಿಯನ್ ನಿಮಿಷ 'ವೇದ' ವೀಕ್ಷಣೆ: ಚಿತ್ರಮಂದಿರದಲ್ಲಿ ZEE5 ಸೆಲೆಬ್ರೇಶನ್

ಫೆಬ್ರವರಿ 10ರಂದು ಸೆಂಚುರಿಸ್ಟಾರ್ ಶಿವರಾಜ್‌ಕುಮಾರ್ ಸಿನಿಮಾ 'ವೇದ' ಓಟಿಟಿಯಲ್ಲಿ ರಿಲೀಸ್ ಆಗಿತ್ತು. ಥಿಯೇಟರ್‌ನಲ್ಲಿ ಸದ್ದು ಮಾಡಿದ ಸಿನಿಮಾ ಓಟಿಟಿಯಲ್ಲೂ ಭರ್ಜರಿ ದಾಖಲೆ ಬರೆದಿದೆ. ಜೀ 5ನಲ್ಲಿ ಪ್ರಸಾರ ಆಗಿದ್ದ 'ವೇದ' ಸಿನಿಮಾ ಸುಮಾರು 125 ಮಿಲಿಯನ್ ನಿಮಿಷಗಳಷ್ಟು ವೀಕ್ಷಣೆ ಕಂಡು ಹೊಸ ರೆಕಾರ್ಟ್ ಕ್ರಿಯೇಟ್ ಮಾಡಿದೆ. ಶಿವಣ್ಣನ 125ನೇ ಸಿನಿಮಾ 125 ಮಿಲಿಯನ್ ನಿಮಿಷ ಸ್ಟ್ರಿಮಿಂಗ್ ಆಗಿದ್ದು ಇನ್ನೊಂದು ವಿಶೇಷ. ಹೀಗಾಗಿ ಈ ಸಂಭ್ರಮವನ್ನು ಬೆಂಗಳೂರಿನ ಸಂತೋಷ್ ಚಿತ್ರಮಂದಿರ ಮುಂದೆ ಆಚರಿಸಿ ಸಂಭ್ರಮಿಸಲಾಗಿದೆ.

ಓಟಿಟಿಯಲ್ಲಿ ಅತೀ ಕಡಿಮೆ ಅವಧಿಯಲ್ಲಿ 125 ಮಿಲಿಯನ್ ನಿಮಿಷಗಳಷ್ಟು ವೀಕ್ಷಣೆ ಕಂಡು ದಾಖಲೆ ಬರೆದಿದೆ. ಹೀಗಾಗಿ ಜೀ5 ಸಂಸ್ಥೆ ದಾಖಲೆಯನ್ನು ಸಂಭ್ರಮಿಸಲು ವಿನೂತ ಪ್ಲ್ಯಾನ್ ಮಾಡಿತ್ತು. ಬೆಂಗಳೂರಿನ ಪ್ರಮುಖ ಚಿತ್ರಮಂದಿರದಲ್ಲಿ ಕಟೌಟ್‌ಗಳನ್ನು ನಿಲ್ಲಿಸಿ, ದೊಡ್ಮನೆ ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಸೆಲೆಬ್ರೆಟ್ ಮಾಡಿದೆ. ಇಂತಹದ್ದೊಂದು ಪ್ರಯತ್ನ ಅತೀ ಅಪರೂಪ ಏನಿಸಿದೆ. ಹಾಗಾಗಿ ಸೆಂಚುರಿ ಸ್ಟಾರ್ ಅಭಿಮಾನಿಗಳು ಕೂಡ ಈ ರೆಕಾರ್ಡ್ ಅನ್ನು ಸಂಭ್ರಮಿಸಿದ್ದಾರೆ.

Shivarajkumar 125th Movie Vedha Got 125 million streaming Minutes Views In Zee 5 Celebration in theater

ಶಿವಣ್ಣ 'ವೇದ' ಸಿನಿಮಾ ಥಿಯೇಟರ್‌ಗಳಷ್ಟೇ ಅಲ್ಲ ZEE5 ಓಟಿಟಿಯಲ್ಲೂ ಹೊಸ ದಾಖಲೆ ಬರೆದಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಹೆಚ್ಚು ಕಡಿಮೆ 20 ದಿನಗಳ ಅಂತರದಲ್ಲಿಯೇ 'ವೇದ' ವೀಕ್ಷಕರ ಗಮನವನ್ನು ಸೆಳೆದಿದೆ. ಅಂದ್ಹಾಗೆ ಈ ಸಿನಿಮಾ ನಿರ್ದೇಶಕ ಎ.ಹರ್ಷ ಹಾಗೂ ಶಿವಣ್ಣ ಕಾಂಬಿನೇಷನ್‌ನಲ್ಲಿ ಬಂದಿರೋ ನಾಲ್ಕನೇ ಸಿನಿಮಾ. ಹೀಗಾಗಿ ಸಾಕಷ್ಟು ನಿರೀಕ್ಷೆಗಳೊಂದಿಗೆ ಡಿಸೆಂಬರ್ 23ರಂದು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿತ್ತು.

Shivarajkumar 125th Movie Vedha Got 125 million streaming Minutes Views In Zee 5 Celebration in theater

ಶಿವಣ್ಣನ 125ನೇ ಸಿನಿಮಾ ಆಗಿರುವುದರಿಂದ ಗೀತಾ ಶಿವರಾಜ್ ಕುಮಾರ್ ನಿರ್ಮಾಣಕ್ಕೆ ಮುಂದಾಗಿದ್ದರು. ಇದು ಶಿವಣ್ಣ ಪತ್ನಿ ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾ. 'ವೇದ' ಶಿವಣ್ಣ ಅಭಿನಯದ 125ನೇ ಸಿನಿಮಾ ಆಗಿರುವುದರಿಂದ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡಿದ್ದರು. ಈ ಸಿನಿಮಾದಲ್ಲಿ ಗಾನವಿ ಲಕ್ಷ್ಮಣ್, ಶ್ವೇತಾ ಚೆಂಗಪ್ಪ, ಉಮಾಶ್ರೀ, ಅದಿತಿ ಸಾಗರ್, ವೀಣಾ ಪೊನ್ನಪ್ಪ, ಕುರಿ ಪ್ರತಾಪ್, ಲಾಸ್ಯ ನಾಗರಾಜ್ ಸೇರಿದಂತೆ ಹಲವು ಮಂದಿ 'ವೇದ' ಸಿನಿಮಾದಲ್ಲಿ ನಟಿಸಿದ್ದಾರೆ.

More from Filmibeat

English summary
Shivarajkumar 125th Movie Vedha Got 125 million streaming Minutes Views In Zee 5 Celebration in theater, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X