'ಭಜರಂಗಿ 2' ಸಿನಿಮಾವನ್ನು ಪುನೀತ್‌ಗೆ ಅರ್ಪಿಸಿದ ಶಿವಣ್ಣ: ಈ ಚಿತ್ರಕ್ಕೂ ಅಪ್ಪುಗೂ ಇದೆ ಸಂಬಂಧ

'ಭಜರಂಗಿ 2' ಸಿನಿಮಾವನ್ನು ಶಿವಣ್ಣ ಎಂದೂ ಮರೆಯಲಾಗದ ಸಿನಿಮಾ. ಕನ್ನಡಿಗರೂ ಕೂಡ ಈ ಸಿನಿಮಾವನ್ನು ಮರೆಯಲು ಸಾಧ್ಯವೇ ಇಲ್ಲ. ಯಾಕೆ ಅಂತ ಇಡೀ ಕರ್ನಾಟಕಕ್ಕೇ ಗೊತ್ತು. ಅಕ್ಟೋಬರ್ 29ರಂದು 'ಭಜರಂಗಿ 2' ಸಿನಿಮಾ ಬಿಡುಗಡೆಯಾಗಿತ್ತು. ಅದೇ ದಿನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಪಾರ ಅಭಿಮಾನಿಗಳನ್ನು ಅಗಲಿದ್ದರು. ಸಂಭ್ರಮದಲ್ಲಿದ್ದ ಶಿವಣ್ಣನ ಅಭಿಮಾನಿಗಳು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿತ್ತು.

ಶಿವರಾಜ್‌ಕುಮಾರ್, ಭಾವನಾ ಮೆನನ್‌ ಅಭಿನಯದ 'ಭಜರಂಗಿ 2' ಪ್ರದರ್ಶನ ಬೆಳ್ಳಂಬೆಳಗ್ಗೆನೇ ಆರಂಭ ಆಗಿತ್ತು. ಶಿವರಾಜ್‌ಕುಮಾರ್ ಕೂಡ 'ಭಜರಂಗಿ 2' ಫಸ್ಟ್ ಡೇ ಫಸ್ಟ್ ಶೋನೇ ಥಿಯೇಟರ್ ವಿಸಿಟ್ ಹಾಕಿದ್ದರು. ಎಲ್ಲರೂ ಸಂಭ್ರಮದಲ್ಲಿರುವಾಗಲೇ ಅಪ್ಪು ನಿಧನದ ಸುದ್ದಿ ಸಿಡಿಲಿನಂತೆ ಬಂದಿತ್ತು. ನೋವು ನುಂಗಿಕೊಂಡೇ ಈ ಸಿನಿಮಾವನ್ನು ಶಿವಣ್ಣ ಪ್ರಚಾರ ಮಾಡಿದ್ದರು. ಈಗ 'ಭಜರಂಗಿ 2' ಜೀ5 ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲು ವೇದಿಕೆ ಸಜ್ಜಾಗಿದೆ. ಈ ವೇಳೆ ಶಿವಣ್ಣ ಈ ಸಿನಿಮಾವನ್ನು ಅಗಲಿದ ಸಹೋದರ ಪುನೀತ್‌ಗೆ ಅರ್ಪಿಸಿದ್ದಾರೆ.

'ಭಜರಂಗಿ 2' ಅಪ್ಪುಗೆ ಅರ್ಪಿಸಿದ ಶಿವಣ್ಣ

'ಭಜರಂಗಿ 2' ಅಪ್ಪುಗೆ ಅರ್ಪಿಸಿದ ಶಿವಣ್ಣ

ಶಿವರಾಜ್‌ಕುಮಾರ್ ಸಿನಿಮಾ ಬಿಡುಗಡೆಯಾದರೆ ತಮ್ಮದೇ ಸಿನಿಮಾ ಎನ್ನುವಷ್ಟು ಕಾಳಜಿ ವಹಿಸುತ್ತಿದ್ದರು. 'ಭಜರಂಗಿ 2' ಸಿನಿಮಾ ಬಿಡುಗಡೆ ವೇಳೆನೂ ಶಿವರಾಜ್‌ಕುಮಾರ್‌ಗಿಂತ ಹೆಚ್ಚು ಪುನೀತ್ ರಾಜ್‌ಕುಮಾರ್ ಉತ್ಸುಕರಾಗಿದ್ದರು. ಅಪ್ಪು ಅಗಲುವ ಮುನ್ನ ಕೂಡ 'ಭಜರಂಗಿ 2' ಸಿನಿಮಾದ ಬಗ್ಗೆನೇ ಮಾತಾಡಿದ್ದರು. ವಿತರಕರ ಬಳಿ ಸಿನಿಮಾ ಪ್ರತಿಕ್ರಿಯೆ ಹೇಗಿದೆ ಎಂದು ವಿಚಾರಿಸಿದ್ದರು. ಶಿವಣ್ಣ ಮತ್ತು ಪುನೀತ್ ಸಹೋದರರು ಎನ್ನುವುದಕ್ಕಿಂತ ಗೆಳೆಯರಂತೆ ಇದ್ದಿದ್ದೇ ಹೆಚ್ಚು. ಹೀಗಾಗಿ ಪ್ರೀತಿಯ ಅಪ್ಪುಗೆ ಶಿವಣ್ಣ ತಮ್ಮ ಭಜರಂಗಿ-2 ಸಿನಿಮಾವನ್ನು ಅರ್ಪಿಸಿದ್ದಾರೆ.

ಅಪ್ಪು ಎಡಿಟಿಂಗ್ ರೂಮಿನಲ್ಲಿತ್ತು 'ಭಜರಂಗಿ 2'

ಅಪ್ಪು ಎಡಿಟಿಂಗ್ ರೂಮಿನಲ್ಲಿತ್ತು 'ಭಜರಂಗಿ 2'

ಪವರ್‌ಸ್ಟಾರ್‌ ಪುನೀತ್ ರಾಜ್‌ಕುಮಾರ್ ಭಜರಂಗಿ 2 ಸಿನಿಮಾವನ್ನು ತುಂಬಾನೇ ಇಷ್ಟಪಟ್ಟಿದ್ದರು. ಈ ಸಿನಿಮಾವನ್ನು ಶಿವಣ್ಣ ಸಹೋದರನಿಗೆ ಅರ್ಪಿಸಿದ್ದಕ್ಕೆ ಬಲವಾದ ಕಾರಣವಿದೆ. 'ಭಜರಂಗಿ 2' ಸಿನಿಮಾವನ್ನು ಅಪ್ಪು ಎಡಿಟಿಂಗ್ ರೂಮ್ ನಲ್ಲಿ ಎಡಿಟ್ ಆಗಿತ್ತು. ಹೀಗಾಗಿ ಪುನೀತ್ ರಾಜ್‌ಕುಮಾರ್ ಸಾಕಷ್ಟು ಬಾರಿ ಈ ಸಿನಿಮಾವನ್ನು ನೋಡಿ‌‌ ಮೆಚ್ಚಿಕೊಂಡಿದ್ದರು. ಸಿನಿಮಾ ನೋಡಿ ಹೊಗಳಿ ಕೊಂಡಾಡಿದ್ದರು.

'ಭಜರಂಗಿ 2' ಸಿನಿಮಾದಲ್ಲಿ‌ ಅಪ್ಪುನೇ ನೋಡಬಹುದು

'ಭಜರಂಗಿ 2' ಸಿನಿಮಾದಲ್ಲಿ‌ ಅಪ್ಪುನೇ ನೋಡಬಹುದು

'ಭಜರಂಗಿ 2' ಸಿನಿಮಾದಲ್ಲಿ ಶಿವಣ್ಣ ನಟಿಸಿರಬಹುದು. ಆದರೆ, ಈ ಸಿನಿಮಾದಲ್ಲಿ ಅಪ್ಪುಗೆ ಸಂಬಂಧಿಸಿದ ಸಿನಿಮಾಗಳಿವೆ. ಅಪ್ಪುವನ್ನು ಈ ಸಿನಿಮಾದಲ್ಲಿ ನೋಡಬಹುದು. ಈ ಸಿನಿಮಾದಲ್ಲಿ ಅಪ್ಪು ಬಗ್ಗೆ ಗೊತ್ತಿರದ ಕೆಲ ಸಂಗತಿ 'ಭಜರಂಗಿ 2' ಸಿನಿಮಾದಿಂದ ತಿಳಿದುಕೊಳ್ಳಬಹುದು ಎಂದು ಶಿವಣ್ಣ ಹೇಳಿದ್ದಾರೆ. ಹೀಗಾಗಿ ಡಿಸೆಂಬರ್ 23ರಂದು 'ಭಜರಂಗಿ 2' ಸಿನಿಮಾವನ್ನು ನೋಡಿ ಎಂದು ಶಿವರಾಜ್‌ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಎ. ಹರ್ಷ - ಶಿವಣ್ಣ ಜೋಡಿಯ 3ನೇ ಸಿನಿಮಾ

ಎ. ಹರ್ಷ - ಶಿವಣ್ಣ ಜೋಡಿಯ 3ನೇ ಸಿನಿಮಾ

'ಭಜರಂಗಿ 2' ಸಿನಿಮಾವನ್ನು ಎ. ಹರ್ಷ ನಿರ್ದೇಶಿಸಿದ್ದು, ಶಿವಣ್ಣ ನಟಿಸಿದ್ದ ಮೂರನೇ ಸಿನಿಮಾ ಇದಾಗಿದೆ. 'ಭಜರಂಗಿ', 'ವಜ್ರಕಾಯ' ಬಳಿಕ ಶಿವಣ್ಣ-ಹರ್ಷ ಈ ಸಿನಿಮಾದಿಂದ ಜೊತೆಯಾಗಿದ್ದರು. ಈ ಶಿವಣ್ಣ ಹಾಗೂ ಹರ್ಷ ಕಾಂಬಿನೇಷನ್‌ನಲ್ಲಿ 4ನೇ ಸಿನಿಮಾ 'ವೇದ' ಸೆಟ್ಟೇರಿದ್ದು, ಚಿತ್ರೀಕರಣ ನಡೆಯುತ್ತಿದೆ. ಸದ್ಯ 'ಭಜರಂಗಿ 2' ಜೀ 5ನಲ್ಲಿ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದ್ದು, ಶಿವಣ್ಣನ ಅಭಿಮಾನಿಗಳು ಸಿನಿಮಾ ನೋಡಲು ಕಾತರದಿಂದ ಕಾದು ಕೂತಿದ್ದಾರೆ.

More from Filmibeat

English summary
Shivarajkumar dedicated his movie Bhajarangi 2 to Puneeth Rajkumar releasing on zee 5. Bhajarangi 2 movie was edited in Appu studio.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X