OTTಯಲ್ಲಿ 100 ಮಿಲಿಯನ್ ನಿಮಿಷಗಳಷ್ಟು ವೀಕ್ಷಣೆ ಪಡೆದ 'ಘೋಸ್ಟ್': ಸಿನಿಮಾಗೆ ಸಿಕ್ತು ಭರ್ಜರಿ ಪ್ರಚಾರ

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ಘೋಸ್ಟ್' ಸಿನಿಮಾ ಥಿಯೇಟರ್‌ನಲ್ಲಷ್ಟೇ ಅಲ್ಲ. ಓಟಿಟಿಯಲ್ಲೂ ಸಿಕ್ಕಾಪಟ್ಟೆ ಜೋರಾಗಿಯೇ ಸದ್ದು ಮಾಡುತ್ತಿದೆ. ಈಗಾಗಲೇ ಈ ಸಿನಿಮಾ ಜೀ 5ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಸಿನಿಮಾ ಓಟಿಟಿಗೆ ಬಂದ ಕೆಲವೇ ದಿನಗಳಲ್ಲಿ ದಾಖಲೆ ಬರೆದಿದೆ.

ಇತ್ತ ಜೀ 5 ಕೂಡ ಭರ್ಜರಿಯಾಗಿಯೇ ಪ್ರಚಾರ ಮಾಡುತ್ತಿದೆ. ಇದೂವರೆಗೂ ಕನ್ನಡ ಸಿನಿಮಾಗಳು ಥಿಯೇಟರ್‌ನಲ್ಲಿ ರಿಲೀಸ್ ಆದರೆ ಮಾತ್ರ ಭರ್ಜರಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದವು. ಥಿಯೇಟರ್ ಮುಂದೆ ದೊಡ್ಡ ಮಟ್ಟದ ಪೋಸ್ಟರ್ ನೋಡುವುದಕ್ಕೆ ಸಿಗುತ್ತಿತ್ತು. ಆದರೆ, ಜೀ 5 'ಘೋಸ್ಟ್'ಗಾಗಿ ಬೃಹತ್ ಪೋಸ್ಟರ್ ಅನ್ನು ನಿರ್ಮಿಸಿತ್ತು.

Shivarajkumar Ghost movie got 100 million streaming minuts in Zee 5

ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ 10 ಸಾವಿರ ಅಡಿ ಉದ್ದದ ಪೋಸ್ಟರ್ ಅನ್ನು ನಿಲ್ಲಿಸಲಾಗಿತ್ತು. ಅದು ಶಿವಣ್ಣನ 'ಘೋಸ್ಟ್'ಗಾಗಿ ನಿರ್ಮಾಣಗೊಂಡಿದ್ದ ಪೋಸ್ಟರ್. ಈ ಪೋಸ್ಟರ್ ಗೆ ಅಭಿಮಾನಿಗಳು ಸಖತ್ ಸಖತ್ ಆಗಿಯೇ ರೆಸ್ಪಾನ್ಸ್ ಕೊಟ್ಟಿದ್ದರು. ಶಿವಣ್ಣ ಪೋಸ್ಟರ್ ಫ್ಯಾನ್ಸ್ ಫಿದಾ ಆಗಿದ್ದರು.

ಈ ಸಂಭ್ರವನ್ನು ಸ್ವತ: ಶಿವರಾಜ್‌ಕುಮಾರ್ ಕೂಡ ಎಂಜಾಯ್ ಮಾಡಿದ್ದರು. " ಘೋಸ್ಟ್ ಸಿನಿಮಾಗೆ ಕೇವಲ ಥಿಯೇಟರ್‌ನಲ್ಲಷ್ಟೇ ಅಲ್ಲ. ಓಟಿಟಿ ವೇದಿಕೆಯಲ್ಲೂ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಅಲ್ಲದೆ ಓಟಿಟಿಗೆ 100 ಮಿಲಿಯನ್ ಸ್ಟ್ರೀಮಿಂಗ್ ನಿಮಿಷಗಳಷ್ಟು ವೀವ್ಸ್ ಸಿಕ್ಕಿರೋದು ಮತ್ತಷ್ಟು ಖುಷಿಕೊಟ್ಟಿದೆ" ಎಂದು ಶಿವರಾಜ್‌ಕುಮಾರ್ ಹೇಳಿಕೆ ಕೊಟ್ಟಿದ್ದರು.

Shivarajkumar Ghost movie got 100 million streaming minuts in Zee 5

'ಘೋಸ್ಟ್' ಓಟಿಟಿಯಲ್ಲಿ ಮಹಾ ಯಶಸ್ಸು ಕಂಡ ಬೆನ್ನಲ್ಲೇ ಮಹಾ ಸಂಭ್ರಮವನ್ನು ಆಚರಿಸಿದೆ. ದೇಸಿ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳನ್ನು ಹೆಚ್ಚು ಪ್ರಸಾರ ಮಾಡುವ ಜೀ5 ಕನ್ನಡದ ಸಿನಿಮಾದ ಯಶಸ್ಸನ್ನು ಸಂಭ್ರಮಿಸುತ್ತಿದೆ. ಈ ಮೂಲಕ ಓಟಿಟಿಗಳು ಕನ್ನಡ ಸಿನಿಮಾಗಳನ್ನು ಖರೀದಿ ಮಾಡಲು ಹಿಂದೇಟು ಹಾಕುತ್ತಿರುವ ಬೆನ್ನಲ್ಲೇ 'ಫೋಸ್ಟ್' ಸಕ್ಸಸ್ ಫಿಲ್ಮ್ ಮೇಕರ್‌ಗಳಿಗೆ ಹೊಸ ಕಿಕ್ ಕೊಟ್ಟಿದೆ.

ಇತ್ತ ಅಭಿಮಾನಿಗಳು ಕೂಡ ಸಖತ್ ಆಗಿಯೇ ಸಂಭ್ರಮಿಸಿದ್ದಾರೆ. ಆಟೋಗೆ 'ಘೋಸ್ಟ್' ಪೋಸ್ಟರ್ ಅಂಟಿಸಿ, ಶಿವಣ್ಣನ ಅಭಿಮಾನಿಗಳು ಪ್ರಚಾರ ಆರಂಭಿಸಿದ್ದಾರೆ. ಜೀ 5ನಲ್ಲಿ 100 ಮಿಲಿಯನ್ ಸ್ಟ್ರೀಮಿಂಗ್ ನಿಮಿಷಗಳಷ್ಟು ವೀಕ್ಷಣೆ ಕಂಡಿದ್ದಕ್ಕೆ 'ಘೋಸ್ಟ್' ಟೈಟಲ್ ಹೋಲುವಂತೆ ಆಟೋಗಳನ್ನು ನಿಲ್ಲಿಸಿ ಖುಷಿ ಪಟ್ಟಿದ್ದಾರೆ.

ಶಿವಣ್ಣನಿಗೆ ಇದೇ ಮೊದಲ ಬಾರಿಗೆ ಶ್ರೀನಿ ನಿರ್ದೇಶನ ಮಾಡಿದ್ದಾರೆ. ಈ ಮೂಲಕ 'ಘೋಸ್ಟ್'ದೇ ಹೊಸ ಪ್ರಪಂಚ ನಿರ್ಮಾಣ ಆದರೂ ಆಗಬಹುದು. ಅನುಪಮ್ ಖೇರ್, ಜಯರಾಂ ನಟಿಸಿರುವ ಈ ಸಿನಿಮಾ ಓಟಿಟಿಯಲ್ಲೂ ಸೌಂಡ್ ಮಾಡಿದೆ. ಮುಂದೆ ಶಿವಣ್ಣ ಹಾಗೂ ಶ್ರೀನಿ ಕಾಂಬಿನೇಷನ್‌ನಲ್ಲಿ ದಳವಾಯಿ ಸೆಟ್ಟೇರಲಿದೆ.

More from Filmibeat

English summary
Shivarajkumar Ghost movie got 100 million streaming minuts in Zee 5.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X