10 ಕೋಟಿ ನಿಮಿಷ ವೀಕ್ಷಣೆ ಪಡೆದ ಶಿವರಾಜ್‌ಕುಮಾರ್ 'ಭಜರಂಗಿ 2' : ಓಟಿಟಿಯಲ್ಲಿ ಭರ್ಜರಿ ದಾಖಲೆ

'ಭಜರಂಗಿ 2' ಓಟಿಟಿಯಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಕನ್ನಡ ಸಿನಿಮಾಗಳು ಓಟಿಟಿಯಲ್ಲಿ ಸದ್ದು ಮಾಡುವುದಿಲ್ಲವೆಂದು ಆರೋಪಗಳು ಕೇಳಿ ಬಂದ ಬೆನ್ನಲ್ಲೇ 'ಭಜರಂಗಿ 2' ದಾಖಲೆಗಳ ಮೇಲೆ ದಾಖಲೆಗಳನ್ನು ಮಾಡುತ್ತಿದೆ. ಈ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾದ 16 ದಿನಗಳಲ್ಲಿ ಭರ್ಜರಿ ದಾಖಲೆ ಮಾಡಿದೆ. ಓಟಿಟಿಯಲ್ಲಿ ಮತ್ತೆ ಕನ್ನಡ ಸಿನಿಮಾಗಳು ರಾರಾಜಿಸುವಂತೆ ಮಾಡಿದೆ.

ಲಾಕ್‌ಡೌನ್ ವೇಳೆ ಕನ್ನಡ ಸಿನಿಮಾಗಳು ಓಟಿಟಿ ಮೊರೆ ಹೋಗಿದ್ದವು. ಈ ಸಂದರ್ಭದಲ್ಲಿ ಸಾಕಷ್ಟು ಸಿನಿಮಾಗಳು ಓಟಿಟಿಯಲ್ಲಿ ತೆರೆಕಂಡಿದ್ದವು. ಆದರೆ, ಕೆಲವು ದಿನಗಳ ಬಳಿಕ ಓಟಿಟಿಯಲ್ಲಿ ಕನ್ನಡ ಸಿನಿಮಾಗಳನ್ನು ನೋಡುವವರ ಸಂಖ್ಯೆ ಇದೆ ಎನ್ನುವ ಸುದ್ದಿ ಹರಿದಾಡಿತ್ತು. ಆದ್ರೀಗ ಶಿವರಾಜ್‌ಕುಮಾರ್ ನಟನೆಯ ಸಿನಿಮಾ 'ಭಜರಂಗಿ 2' ಹೊಸ ಹೊಸ ದಾಖಲೆಗಳನ್ನು ಬರೆಯುತ್ತಾ ಮುನ್ನುಗ್ಗುತ್ತಿದೆ.

ಜೀ 5ನಲ್ಲಿ 'ಭಜರಂಗಿ 2' ಮ್ಯಾಜಿಕ್

ಜೀ 5ನಲ್ಲಿ 'ಭಜರಂಗಿ 2' ಮ್ಯಾಜಿಕ್

ಸೆಂಚುರಿ ಸ್ಟಾರ್ ಶಿವಣ್ಣ ಹಾಗೂ ಭಾವನಾ ಮೆನನ್‌ 'ಭಜರಂಗಿ 2' ಸಿನಿಮಾದ ಪ್ರಮುಖ ಆಕರ್ಷಣೆ. ಶಿವರಾಜ್‌ಕುಮಾರ್ ಹಾಗೂ ಎ. ಹರ್ಷ ಕಾಂಬಿನೇಷನ್ ಮತ್ತೊಂದು ಹೈಲೈಟ್. ಡಿಸೆಂಬರ್ 23ರಂದು ಈ ಸಿನಿಮಾ ಓಟಿಟಿಯಲ್ಲಿ ತೆರೆಕಂಡಿತ್ತು. ಅಲ್ಲಿಂದ ಇಲ್ಲಿವರೆಗೂ ಒಂದೊಂದು ಹೊಸ ದಾಖಲೆ ಸೃಷ್ಟಿಸುತ್ತಿದೆ. ಜೀ 5 ಓಟಿಟಿ ಸಂಸ್ಥೆಗೆ ಈ ಸಿನಿಮಾ ಸಿಕ್ಕಾಪಟ್ಟೆ ಬೂಸ್ಟ್ ನೀಡಿದೆ. ಥಿಯೇಟರ್‌ನಲ್ಲಿ ಸಿನಿಮಾ ನೋಡದವರು ಓಟಿಟಿಯಲ್ಲಿ ಸಿನಿಮಾ ನೋಡಿ ಗೆಲ್ಲಿಸಿದ್ದಾರೆ.

 'ಭಜರಂಗಿ 2' ಚಿತ್ರಕ್ಕೆ 10 ಕೋಟಿ ನಿಮಿಷ ವೀಕ್ಷಣೆ

'ಭಜರಂಗಿ 2' ಚಿತ್ರಕ್ಕೆ 10 ಕೋಟಿ ನಿಮಿಷ ವೀಕ್ಷಣೆ

'ಭಜರಂಗಿ 2' ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದ್ದಂತೆ ಸಿನಿಮಾ ನೋಡಲು ಜನರು ಮುಗಿಬಿದ್ದಿದ್ದರು. ಮೊದಲ ಮೂರು ದಿನವೇ ಶಿವಣ್ಣನ ಸಿನಿಮಾವನ್ನು 5 ಕೋಟಿಗೂ ಅಧಿಕ ನಿಮಿಷಗಳ ಕಾಲ ವೀಕ್ಷಣೆ ಮಾಡಲಾಗಿತ್ತು. ಕನ್ನಡ ಸಿನಿಮಾರಂಗದ ಮಟ್ಟಿಗೆ ಇಷ್ಟು ಕಡಿಮೆ ಸಮಯದಲ್ಲಿ ಈ ದಾಖಲೆ ಮಾಡಿದ ಮೊದಲ ಸಿನಿಮಾ ಆಗಿತ್ತು. ಈಗ 16ನೇ ದಿನಕ್ಕೆ ಮತ್ತೊಂದು ಮೈಲಿಗಲ್ಲು ತಲುಪಿದ್ದು, 10 ಕೋಟಿ ನಿಮಿಷ ವೀಕ್ಷಣೆ ಪಡೆದುಕೊಂಡಿದೆ.

'ಭಜರಂಗಿ 2' ಬಳಿಕ 'ಗರುಡ ಗಮನ ವೃಷಭ ವಾಹನ' ಸರದಿ

'ಭಜರಂಗಿ 2' ಬಳಿಕ 'ಗರುಡ ಗಮನ ವೃಷಭ ವಾಹನ' ಸರದಿ

'ಭಜರಂಗಿ 2'ಗೆ ಸಿಕ್ಕ ಪ್ರತಿಕ್ರಿಯೆಯಿಂದ ಮತ್ತೆ ಓಟಿಟಿಯಲ್ಲಿ ಕನ್ನಡ ಸಿನಿಮಾಗಳ ಬೇಡಿಕೆ ಹೆಚ್ಚಾಗವ ಸಾಧ್ಯತೆಯಿದೆ. ಒಂದು ವೇಳೆ ಮೂರನೇ ಅಲೆ ರಾಜ್ಯದಲ್ಲಿ ಮತ್ತಷ್ಟು ಭೀಕರ ಎನಿಸಿದರೆ, ಈಗಾಗಲೇ ಬಿಡುಗಡೆಗೆ ಸಜ್ಜಾಗಿರುವ ಸಿನಿಮಾಗಳು ಓಟಿಟಿ ಮೊರೆ ಹೋಗುವ ಸಾಧ್ಯತೆಯಿದೆ. ಸದ್ಯ ಕನ್ನಡದ ಮತ್ತೊಂದು ಸಿನಿಮಾ 'ಗರುಡ ಗಮನ ವೃಷಭ ವಾಹನ' ಸಿನಿಮಾ ಕೂಡ ಜನವರಿ 13ರಂದು ಜೀ 5ನಲ್ಲಿ ಪ್ರದರ್ಶನ ಕಾಣಲಿದೆ. ಈ ಸಿನಿಮಾಗೆ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿರುತ್ತೆ ಅನ್ನುವುದನ್ನು ನೋಡಬೇಕಿದೆ.

ವೇದ ಸಿನಿಮಾ ಶೂಟಿಂಗ್ ಶುರು

ವೇದ ಸಿನಿಮಾ ಶೂಟಿಂಗ್ ಶುರು

'ಭಜರಂಗಿ', 'ವಜ್ರಕಾಯ' ಹಾಗೂ 'ಭಜರಂಗಿ 2' ಸಿನಿಮಾ ಬಳಿಕ ಮತ್ತೊಂದು ಸಿನಿಮಾಗಾಗಿ ಈ ಜೋಡಿ ಒಂದಾಗಿದೆ. ಹರ್ಷ ನಿರ್ದೇಶನದಲ್ಲಿ ಶಿವಣ್ಣ 'ವೇದ' ನಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಶಿವಣ್ಣನ ಹೋಮ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಇನ್ನೊಂದು ಹಂತದ ಚಿತ್ರೀಕರಣಕ್ಕೆ ಸಿನಿಮಾ ತಂಡ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

More from Filmibeat

English summary
Shivarajkumar starrer Bhajarangi 2 crossed 10 crore viewing minutes on zee 5 OTT. Shivarajkumar and Harsha combination Bhajarangi 2 released ott on December 23rd.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X