Gatha Vaibhava OTT: ಓಟಿಟಿಗೆ ಲಗ್ಗೆ ಇಟ್ಟ ಸಿಂಪಲ್ ಸುನಿ 'ಗತ ವೈಭವ'; 4 ವಿಭಿನ್ನ ಕಥೆಗಳನ್ನು ಎಲ್ಲಿ ನೋಡ್ಬಹುದು?

ಸ್ಯಾಂಡಲ್‌ವುಡ್‌ನಲ್ಲಿ ಸಿಂಪಲ್ ಆಗಿ ಕಥೆ ಹೇಳಿ ಪ್ರೇಕ್ಷಕರನ್ನು ರಂಜಿಸುವ ನಿರ್ದೇಶಕ ಸಿಂಪಲ್ ಸುನಿ. ಪ್ರೇಕ್ಷಕರನ್ನು ಭಾವನಾತ್ಮಕವಾಗಿ ತಮ್ಮ ಸಿನಿಮಾದಿಂದ ಸೆಳೆಯುತ್ತಾರೆ. ಸ್ಟಾರ್‌ಗಳಿಗಿಂತ ಹೆಚ್ಚಾಗಿ ಕತೆ, ಚಿತ್ರಕತೆ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ಈ ಕಾರಣಕ್ಕೆ ಸಿಂಪಲ್ ಸುನಿ ಸಿನಿಮಾಗಳನ್ನು ಪ್ರೇಕ್ಷಕರ ಜೊತೆ ಸಿನಿಮಾ ಮಂದಿ ಕೂಡ ಅಷ್ಟೇ ಕುತೂಹಲದಿಂದ ಎದುರು ನೋಡುತ್ತಿರುತ್ತಾರೆ.

ಇತ್ತೀಚೆಗೆ ಸಿಂಪಲ್ ಸುನಿ ತಮ್ಮ ರೆಗ್ಯೂಲರ್ ಸಿನಿಮಾ ಫಾರ್ಮೂಲವನ್ನು ಪಕ್ಕಕ್ಕೆ ಇಟ್ಟು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದರು. ಅದುವೇ 'ಗತ ವೈಭವ. ಹೊಸ ಪ್ರತಿಭೆ ದುಷ್ಯಂತ್ ಅವರನ್ನು ತಮ್ಮ ಸಿನಿಮಾಗೆ ನಾಯಕನನ್ನಾಗಿ ಆಯ್ಕೆ ಮಾಡಿದ್ದರು. ಆಶಿಕಾ ರಂಗನಾಥ್ ಅವರನ್ನು ಹೀರೋಯಿನ್ ಆಗಿ ಕರೆ ತಂದಿದ್ದರು. ಸಿನಿಮಾ ಆರಂಭ ಮಾಡುವುದಕ್ಕೂ ಮುನ್ನವೇ ಜನರಿಗೆ ಹೀರೋನಾ ವಿಭಿನ್ನವಾಗಿ ಪರಿಚಯಿಸಿದ್ದರು.

Simple Suni Dushyanth Ashika Ranganath movie Gatha Vaibhava streaming in Ott platform and other details

ಹೀರೋ ಇಂಟ್ರುಡ್ಯೂಸ್ ಮಾಡಿದ ಬಳಿಕ ಸಿಂಪಲ್ ಸುನಿ 'ಗತವೈಭವ' ಸಿನಿಮಾವನ್ನು ಸದ್ದಿಲ್ಲದೆ ಮುಗಿಸಿದ್ದರು. ನಾಲ್ಕು ಕಥೆಗಳನ್ನು ಒಂದೇ ಸಿನಿಮಾದಲ್ಲಿ ಹೇಳಿ ಮುಗಿಸಿದ್ದರು. ಹೀಗಾಗಿ ಸ್ಯಾಂಡಲ್‌ವುಡ್‌ನಲ್ಲಿ ಬಂದ ವಿಭಿನ್ನ ಸಿನಿಮಾಗಳ ಸಾಲಿನಲ್ಲಿ ಇದೂ ಕೂಡ ನಿಲ್ಲುತ್ತೆ. ಈ ಸಿನಿಮಾ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ಬಳಿಕ ಈಗ ಓಟಿಟಿಗೆ ಲಗ್ಗೆ ಇಟ್ಟಿದೆ. ಇಂದಿನಿಂದ (ಜನವರಿ 30) ಸ್ಟ್ರೀಮಿಂಗ್ ಆರಂಭ ಆಗಿದೆ.

'ಗತ ವೈಭವ' ಸಿನಿಮಾ ಬಿಡುಗಡೆಗೂ ಮುನ್ನವೇ ಸಿಂಪಲ್ ಸುನಿ ಒಂದು ಹೇಳಿಕೆ ಕೊಟ್ಟಿದ್ದರು. ಕೆಲವು ಸಿನಿಮಾ ಪ್ರಚಾರ ಮಾಡಿ ತೆರೆಗೆ ಬರುತ್ತವೆ. ಈ ಸಿನಿಮಾ ರಿಲೀಸ್ ಆದ್ಮೇಲೆ ಪ್ರಚಾರವಾಗುತ್ತೆ ಎಂದು ಹೇಳಿದ್ದರು. ಈ ಚಿತ್ರ ಥಿಯೇಟರ್‌ಗೆ ಎಂಟ್ರಿ ಕೊಟ್ಟಾಗ ನೋಡಿದವರು ಮೆಚ್ಚುಕೊಂಡಿದ್ದರು. ಹೊಸ ಪ್ರತಿಭೆಯನ್ನು ಇಟ್ಟುಕೊಂಡು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಕ್ಕೆ ಸಿಂಪಲ್ ಸುನಿಗೆ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಆದರೆ, ಗಳಿಕೆಯಲ್ಲಿ ಹಿಂದೆ ಬಿದ್ದಿತ್ತು.

Simple Suni Dushyanth Ashika Ranganath movie Gatha Vaibhava streaming in Ott platform and other details

ಕಳೆದ ವರ್ಷ ನವೆಂಬರ್ 14ರಂದು ತೆರೆಕಂಡ ಈ ಸಿನಿಮಾವನ್ನು ಮಿಸ್ ಮಾಡಿಕೊಂಡವರಿಗೆ ಮತ್ತೆ 'ಗತ ವೈಭವ' ನೋಡುವ ಅವಕಾಶ ಸಿಕ್ಕಿದೆ. ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಇಂದಿನಿಂದ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ನಿರ್ದೇಶಕ ಸಿಂಪಲ್ ಸುನಿ ನಾಲ್ಕು ವಿಭಿನ್ನ ಕಥೆಗಳನ್ನು ಪ್ರೇಕ್ಷಕರಿಗೆ ಮುಂದಿಟ್ಟಿದ್ದು, ದುಷ್ಯಂತ್ ಚೊಚ್ಚಲ ಸಿನಿಮಾದಲ್ಲಿ ಪಳಗಿದ ನಾಯಕನಂತೆ ಅಭಿನಯಿಸಿದ್ದಾರೆ. ಹೀಗಾಗಿ ಓಟಿಟಿಯಲ್ಲಿ ರೆಸ್ಪಾನ್ಸ್ ಹೇಗಿರುತ್ತೆ ಅನ್ನೋ ಕುತೂಹಲವಿದೆ.

'ಗತವೈಭವ' ಸಿನಿಮಾಗೆ ಸಿಂಪಲ್ ಸುನಿ ಕಥೆ-ಚಿತ್ರಕಥೆ ಜೊತೆಗೆ ಸಂಭಾಷಣೆ ಕೂಡ ಬರೆದಿದ್ದಾರೆ. ಸುನಿ ಸಿನಿಮಾಸ್ ಸಂಸ್ಥೆಯಲ್ಲಿ ದೀಪಿಕ್ ಹಾಗೂ ಸುನಿ ಇಬ್ಬರೂ ಸೇರಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್, ಜೂಡಾ ಸ್ಯಾಂಡಿ ಸಂಗೀತವಿದೆ. ದುಷ್ಯಂತ್ ಹಾಗೂ ಆಶಿಕಾ ರಂಗನಾಥ್ ಜೋಡಿಯನ್ನು ಈಗಾಗಲೇ ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಓಟಿಟಿಯಲ್ಲಿ ಇನ್ನೂ ಉತ್ತಮ ಪ್ರತಿಕ್ರಿಯೆ ಸಿಗುವ ಸಾಧ್ಯತೆಯಿದೆ.

ಇನ್ನು 'ಗತವೈಭವ' ಸಿನಿಮಾವನ್ನು ಅದ್ಧೂರಿಯಾಗಿ ಚಿತ್ರೀಕರಣ ಮಾಡಲಾಗಿದೆ. ಪೋರ್ಚುಗಲ್ ಸೇರಿದಂತೆ ಸುಮಾರು 100 ದಿನಕ್ಕೂ ಅಧಿಕ ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಅಂದ್ಹಾಗೆ ಇದೊಂದು ರೊಮ್ಯಾಂಟಿಕ್ ಲವ್ ಸ್ಟೋರಿ, ಜೊತೆಗೆ ಸೈಂಟಿಫಿಕ್ ಥ್ರಿಲ್ಲರ್ ಕೂಡ ಹೌದು. ಇವೆರಡೂ ಜಾನರ್ ಅನ್ನು ಮಿಕ್ಸ್ ಮಾಡಿ ಈ ಸಿನಿಮಾವನ್ನು ಮಾಡಲಾಗಿದೆ. ಈ ಕಾರಣಕ್ಕೆ ದುಷ್ಯಂತ್, ಆಶಿಕಾ ರಂಗನಾಥ್‌ಗೆ ಅಷ್ಟೇ ಅಲ್ಲ, ಇದು ಸಿಂಪಲ್ ಸುನಿ ಕರಿಯರ್‌ಗೂ ವಿಭಿನ್ನ ಸಿನಿಮಾ.

More from Filmibeat

English summary
Simple Suni directed Dushyanth, Ashika Ranganath movie Gatha Vaibhava streaming in Ott platform and other details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X