ಕಿರುತೆರೆಯಲ್ಲಿ ಬ್ಲಾಕ್ ಬಸ್ಟರ್ ಸಿನಿಮಾ 'ಅಮರನ್' ಕನ್ನಡ ವರ್ಷನ್; ಎಲ್ಲಿ? ಯಾವಾಗ?

ಕಳೆದ ವರ್ಷ ಶಿವಕಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ ನಟಿಸಿದ 'ಅಮರನ್' ಪ್ರೇಕ್ಷಕರ ಮನಗೆದ್ದಿತ್ತು. ಕಮಲ್ ಹಾಸನ್ ನಿರ್ಮಿಸಿದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲೂ 335 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಬರೋಬ್ಬರಿ ಐದು ವಾರಗಳ ಕಾಲ ಥಿಯೇಟರ್‌ನಲ್ಲಿ ಸದ್ದು ಮಾಡಿದ್ದ ಸಿನಿಮಾವಿದು. ಬಳಿಕ ಓಟಿಟಿಯಲ್ಲೂ ವೀಕ್ಷಕರ ಮೆಚ್ಚುಗೆ ಗಳಿಸಿತ್ತು.

ಭಯೋತ್ಪಾದಕರ ಜೊತೆ ಹೋರಾಡುತ್ತಾ ವೀರ ಮರಣವನ್ನಪ್ಪಿದ ಮೇಜರ್ ಮುಕುಂದ್ ವರದರಾಜ್ ಲೈಫ್ ಸ್ಟೋರಿಯನ್ನು ತೆರೆಮೇಲೆ ತರಲಾಗಿತ್ತು. ಅಮರನ್ 2024, ಅಕ್ಟೋಬರ್ 31ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಮೊದಲ ಶೋನಲ್ಲಿಯೇ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಶಿವಕಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ ಇಬ್ಬರ ಪರ್ಫಾಮೆನ್ಸ್ ಅನ್ನು ಹಾಡಿ ಹೊಗಳಿದ್ದರು.

Sivakarthikeyan Sai Pallavi film Amaran Kannada version telecasting in Star Suvarna

ಥಿಯೇಟರ್ ಹಾಗೂ ಓಟಿಟಿಯಲ್ಲಿ ಸದ್ದು ಮಾಡಿದ್ದ 'ಅಮರನ್' ಈಗ ಕಿರುತೆರೆಯಲ್ಲೂ ಸದ್ದು ಮಾಡುವುದಕ್ಕೆ ಹೊರಟಿದೆ. ಈ ಸಿನಿಮಾದ ಕನ್ನಡ ವರ್ಷನ್ ಸ್ಟಾರ್ ಸುವರ್ಣದಲ್ಲಿ ಶೀಘ್ರವೇ ಪ್ರಸಾರ ಆಗಲಿದೆ. ಈಗಾಗಲೇ ಪ್ರೋಮೊ ರಿಲೀಸ್ ಆಗಿದ್ದು, ಸಂಕ್ರಾಂತಿ ಹಬ್ಬಕ್ಕೆ ಪ್ರಸಾರ ಆಗುವ ಸಾಧ್ಯತೆಯಿದೆ. ಸ್ಟಾರ್ ಸುವರ್ಣ ಇನ್ನೂ ಡೇಟ್ ಅನ್ನು ರಿವೀಲ್ ಮಾಡಿಲ್ಲ.

'ಅಮರನ್' ತಮಿಳು ಚಿತ್ರರಂಗದ ದಿಗ್ಗಜ ಕಮಲ್ ಹಾಸನ್ ನಿರ್ಮಾಣ ಸಂಸ್ಥೆ ರಾಜ್‌ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಪ್ರಡ್ಯೂಸ್ ಮಾಡಿತ್ತು. ಥಿಯೇಟರ್‌ನಲ್ಲಿ ಈ ಸಿನಿಮಾ ದೊಡ್ಡ ಮಟ್ಟಕ್ಕೆ ಕಲೆಕ್ಷನ್ ಮಾಡಿದೆ. ಆದರೆ, ಸಿನಿಮಾ ರಿಲೀಸ್ ಆದ ನಾಲ್ಕು ವಾರಗಳಲ್ಲಿಯೇ ಓಟಿಟಿಗೂ ಲಗ್ಗೆ ಇಟ್ಟಿತ್ತು. ಈಗ ಕನ್ನಡದ ಕಿರುತೆರೆಯಲ್ಲಿ ಮೋಡಿ ಮಾಡುವುದಕ್ಕೆ ಹೊರಟಿದೆ.

'ಅಮರನ್' ಕಲೆಕ್ಷನ್ ಎಷ್ಟು?

ಈ ಸಿನಿಮಾ ತಮಿಳು ನಟ ಶಿವಕಾರ್ತಿಕೇಯನ್ ವೃತ್ತಿ ಬದುಕಿನಲ್ಲೇ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿದೆ. ಸಾಯಿ ಪಲ್ಲವಿ ಜೋಡಿಯಾಗಿ ನಟಿಸಿದ್ದ ಈ ಸಿನಿಮಾವನ್ನು ರಾಜ್‌ಕುಮಾರ್ ಪೆರಿಯಸ್ವಾಮಿ ನಿರ್ದೇಶಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಸೆಣಸಾಡುವಾಗ ಬಿದ್ದ ಗುಂಡೇಟಿಗೆ ತಮಿಳುನಾಡಿನ ಮೇಜರ್ ಮುಕುಂದ್ ವರದರಾಜ್ ವೀರ ಮರಣವನ್ನಪ್ಪಿದ್ದರು. ಆ ಘಟನೆಯನ್ನು ಇಟ್ಟುಕೊಂಡು ನಿರ್ಮಸಿದ್ದ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸುಮಾರು ಬಾಕ್ಸಾಫೀಸ್‌ನಲ್ಲಿ ಸುಮಾರು 335 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ದಾಖಲೆಯನ್ನು ಬರೆದಿದೆ.

ಐದನೇ ವಾರಕ್ಕೆ ಓಟಿಟಿಗೆ ಎಂಟ್ರಿ

ಶಿವಕಾರ್ತಿಕೇಯನ್ ಸಿನಿಮಾ 'ಅಮರನ್' ಥಿಯೇಟರ್‌ನಲ್ಲಿ ಉತ್ತಮ ಪ್ರದರ್ಶನ ಕಾಣಿತ್ತಿತ್ತು. ಐದನೇ ವಾರಕ್ಕೆ ನೆಟ್‌ಪ್ಲಿಕ್ಸ್‌ಗೆ ಲಗ್ಗೆ ಇಟ್ಟಿತ್ತು. ಓಟಿಟಿಯಲ್ಲೂ ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಡಿಸೆಂಬರ್ 5ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದೇ ವೇಳೆ ಕಿರುತೆರೆಯಲ್ಲಿ ಪ್ರಸಾರ ಆಗುವುದಕ್ಕೆ ಸಜ್ಜಾಗಿದೆ.

2024ರ ಬಿಗ್ ಸಿನಿಮಾ

'ಅಮರನ್' 2024ರಲ್ಲಿ ಎರಡನೇ ಅತೀ ಹೆಚ್ಚು ಗಳಿಕೆ ಕಂಡ ತಮಿಳು ಸಿನಿಮಾ ಆಗಿ ಹೊರ ಹೊಮ್ಮಿದೆ. ಇಡೀ ದೇಶದ ಸಿನಿರಸಿಕರ ಮನಗೆದ್ದ ಶಿವ ಕಾರ್ತಿಕೇಯನ್ ಸಿನಿಮಾ ಇನ್ನೂ ನೋಡದವರಿಗಾಗಿ ಕನ್ನಡ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿದೆ. ಸ್ಟಾರ್ ಸುವರ್ಣದಲ್ಲಿ ವರ್ಲ್ಡ್‌ ಪ್ರೀಮಿಯರ್ ಆಗುತ್ತಿದೆ.

More from Filmibeat

English summary
Sivakarthikeyan Sai Pallavi film Amaran Kannada version telecasting in Star Suvarna
Read more about: tv filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X