ಬಾಲಕೃಷ್ಣ ಅಖಾಡಕ್ಕೆ ಎಂಟ್ರಿ ಕೊಟ್ಟ ರಾಜಮೌಳಿ, ಕೀರವಾಣಿ: 'Unstoppable' ಮಾತುಕತೆ

ನಂದಮೂರಿ ಬಾಲಕೃಷ್ಣ 'ಅಖಂಡ' ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಮಾಸ್ ಡೈರೆಕ್ಟರ್ ಬೊಯಾಪಟಿ ಶ್ರೀನು ನಿರ್ದೇಶಿಸಿದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಅಂತ ಸಾಬೀತಾಗಿದೆ. ಬಾಲಕೃಷ್ಣ ಅಭಿಮಾನಿಗಳು ಬಹಳ ದಿನಗಳ ಬಳಿಕ ಸಿಕ್ಕಿದ ಈ ಯಶಸ್ಸಿನಿಂದ ಫುಲ್ ಖುಷಿಯಾಗಿದ್ದಾರೆ. ಈ ನಡುವೆ ಬಾಲಯ್ಯನ ಫ್ಯಾನ್‌ಗೆ ಇನ್ನೊಂದು ಖುಷಿ ವಿಷಯ ಸಿಕ್ಕಿದೆ.

ಬಾಲಕೃಷ್ಣ ಸಿನಿಮಾ ಜೊತೆ ಜೊತೆಗೆ ನಿರೂಪಣೆಯಲ್ಲಿ ಬ್ಯೂಸಿಯಾಗಿದ್ದಾರೆ. ವಿಶೇಷ ಏನಂದರೆ, ಆಹಾ ಓಟಿಟಿಯಲ್ಲಿ ಪ್ರಸಾರವಾಗುವ 'ಅನ್‌ಸ್ಟಾಪಬಲ್' ಶೋಗೆ ಸೂಪರ್‌ ಸಕ್ಸಸ್ ಸಿಕ್ಕಿದೆ. ಈ ಶೋಗೆ ಟಾಲಿವುಡ್‌ನ ದಿಗ್ಗಜರು ಆಗಮಿಸುತ್ತಿದ್ದಾರೆ. ಈ ಬಾರಿ ತೆಲುಗಿನ ಟಾಪ್ ಡೈರೆಕ್ಟರ್ ಎಸ್ ಎಸ್ ರಾಜಮೌಳಿ ಹಾಗೂ RRR ಸಿನಿಮಾದ ಸಂಗೀತ ನಿರ್ದೇಶಕ ಕೀರವಾಣಿ ವಿಶೇಷ ಅತಿಥಿಗಳಾಗಿ ಆಗಮಿಸಿದ್ದಾರೆ. ಈ ಶೋ ನೋಡಲು ಬಾಲಯ್ಯ ಹಾಗೂ ರಾಜಮೌಳಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಬಾಲಯ್ಯನ ಜೊತೆ ಜಕ್ಕಣ್ಣನ ಮಾತುಕತೆ

ಬಾಲಯ್ಯನ ಜೊತೆ ಜಕ್ಕಣ್ಣನ ಮಾತುಕತೆ

ರಾಜಮೌಳಿ ಹಾಗೂ ಸಂಗೀತ ನಿರ್ದೇಶಕ ಕೀರವಾಣಿ RRR ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಜನವರಿ 7ನೇ ತಾರೀಕಿನಂದು ಬಿಡುಗಡೆಯಾಗುತ್ತಿರುವ ಸಿನಿಮಾಗೆ ಎಷ್ಟು ಪ್ರಚಾರ ಕೊಡಲು ಸಾಧ್ಯವೋ ಅಷ್ಟು ಪ್ರಚಾರ ನೀಡುತ್ತಿದ್ದಾರೆ. ವಿಶೇಷ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಆಹಾ ಓಟಿಟಿ ವೇದಿಕೆಯಲ್ಲಿ ಬಾಲಕೃಷ್ಣ ನಡೆಸಿಕೊಡುವ 'ಅನ್‌ಸ್ಟಾಪಬಲ್' ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ರಾಜಮೌಳಿ ಹಾಗೂ ಕೀರವಾಣಿ ಆಗಮಿಸಿದ್ದಾರೆ. ಟಾಲಿವುಡ್ ಮೂಲಗಳ ಪ್ರಕಾರ, ಈ ಶೋ ಆಸಕ್ತಿದಾಯಕ ಹಾಗೂ ಮನರಂಜನಾತ್ಮಕವಾಗಿ ಇರಲಿದೆ.

ಬಾಲಯ್ಯ ಜೊತೆ ಅತಿಥಿಗಳ ಸಂಬಂಧ ಹೇಗಿದೆ?

ಬಾಲಯ್ಯ ಜೊತೆ ಅತಿಥಿಗಳ ಸಂಬಂಧ ಹೇಗಿದೆ?

ಬಾಲಕೃಷ್ಣ ಕುಟುಂಬ ಹಾಗೂ ರಾಜಮೌಳಿ ಕುಟುಂಬ ಚಿತ್ರರಂಗದಲ್ಲಿ ಉತ್ತಮ ಸಂಬಂಧ ಹೊಂದಿವೆ. ಎರಡೂ ಕುಟುಂಬಗಳೂ ಆತ್ಮೀಯವಾಗಿವೆ. ಇನ್ನೊಂದೆಡೆ ಬಾಲಯ್ಯನ ಸಾಕಷ್ಟು ಸಿನಿಮಾಗಳಿಗೆ ಸಂಗೀತ ನಿರ್ದೇಶಕ ಕೀರವಾಣಿ ಟ್ಯೂನ್ ಹಾಕಿದ್ದಾರೆ. ಹೀಗಾಗಿ ಇವರಿಬ್ಬರಿಂದಲೂ ಬಾಲಕೃಷ್ಣ ಯಾವ ರೀತಿಯ ಮಾಹಿತಿಯನ್ನು ಹೊರ ಹಾಕಿಸುತ್ತಾರೆ ಎಂಬುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಹೀಗಾಗಿ ಈ ಶೋ ನೋಡಲು ಕಾದು ಕೂತಿದ್ದಾರೆ.

ಬಾಲಯ್ಯ ಶೋಗೆ ದಿಗ್ಗಜರ ಎಂಟ್ರಿ

ಬಾಲಯ್ಯ ಶೋಗೆ ದಿಗ್ಗಜರ ಎಂಟ್ರಿ

ಟಾಲಿವುಡ್ ಲೆಜೆಂಡ್ ಬಾಲಕೃಷ್ಣ ಶೋಗೆ ಟಾಲಿವುಡ್‌ನ ದಿಗ್ಗಜರು ಬಂದು ಹೋಗಿದ್ದಾರೆ. ಮೋಹನ್ ಬಾಬು, ನ್ಯಾಚುರಲ್ ಸ್ಟಾರ್ ನಾನಿ, ನಿರ್ದೇಶಕ ಅನಿಲ್ ರವಿಪುಡಿ ಹಾಗೂ ಹಾಸ್ಯನಟ ಬ್ರಹ್ಮಾನಂದಂ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾರೆ. ಅತೀ ಶೀಘ್ರದಲ್ಲಿಯೇ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಕೂಡ ಆಗಮಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಈಗ ರಾಜಮೌಳಿ ಹಾಗೂ ಕೀರವಾಣಿ ಎಂಟ್ರಿ ಕೊಟ್ಟಿದ್ದು ಈ ಶೋಗೆ ಮತ್ತಷ್ಟು ಕಿಕ್ ಕೊಟ್ಟಂತಾಗಿದೆ. ಇದರೊಂದಿಗೆ ಓಟಿಟಿಯಲ್ಲಿ ಬಾಲಯ್ಯನ ಶೋಗೆ ಭರಪೂರ ವೀವ್ಸ್ ಸಿಗುತ್ತಿದೆ ಎನ್ನಲಾಗಿದೆ.

'ಅಖಂಡ' ಬಳಿಕ ಹೊಸ ಸಿನಿಮಾ ಶುರು

'ಅಖಂಡ' ಬಳಿಕ ಹೊಸ ಸಿನಿಮಾ ಶುರು

ಬಾಲಯ್ಯ ನಟಿಸಿದ 'ಅಖಂಡ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿದೆ. 100 ಕೋಟಿ ಕ್ಲಬ್ ಸೇರಿರುವ 'ಅಖಂಡ' ತಂಡ ಯಶಸ್ಸಿನ ಅಲೆಯಲ್ಲಿ ತೇಲುತ್ತಿದೆ. ಇದೇ ಖುಷಿಯಲ್ಲಿ ಬಾಲಕೃಷ್ಣ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಕ್ರ್ಯಾಕ್' ಅಂತಹ ಯಶಸ್ವಿ ಸಿನಿಮಾ ನೀಡಿದ ಗೋಪಿಚಂದ್ ಮಲಿನೇನಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅತೀ ಶೀಘ್ರದಲ್ಲಿ ಬಾಲಯ್ಯ ಹೊಸ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ.

More from Filmibeat

English summary
SS Rajamouli and Keeravani participated in Akhanda star Balakrishna Show Unstoppable. SS Rajamouli and music director Keeravani promoting RRR through Balakrishnas Unstoppable.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X