ಕೇರಳದ ವಿವಾದಾತ್ಮಕ ‘ಜಾನಕಿ ವಿ Vs ಸ್ಟೇಟ್ ಆಫ್ ಕೇರಳ’ ಓಟಿಟಿಗೆ ಎಂಟ್ರಿ; ಕನ್ನಡದಲ್ಲೂ ನೋಡ್ಬಹುದು.. ಯಾವಾಗ? ಎಲ್ಲಿ?

ಕಳೆದ ತಿಂಗಳು ಕೇರಳದಲ್ಲಿ ವಿವಾದ ಸೃಷ್ಟಿಸಿದ್ದ ಸಿನಿಮಾ 'ಜಾನಕಿ ವಿ Vs ಸ್ಟೇಟ್ ಆಫ್ ಕೇರಳ'. ಟೈಟಲ್ ಕುರಿತಂತೆ ಈ ಸಿನಿಮಾ ವಿವಾದಕ್ಕೆ ಒಳಗಾಗಿತ್ತು. ಎಲ್ಲಿವರೆಗೆ ಅಂದರೆ, ನ್ಯಾಯಾಧೀಶರೇ ಬಂದು ಸಿನಿಮಾ ನೋಡಿದ ಬಳಿಕ ತೀರ್ಪುಕೊಡಬೇಕಾಗಿ ಬಂತು. ಅದೇ ಸಿನಿಮಾವೀಗ ಓಟಿಟಿಗೆ ಲಗ್ಗೆಇಡುವುದಕ್ಕೆ ತುದಿಗಾಲಲ್ಲಿ ನಿಂತಿದೆ. ಮಲಯಾಳಂ ನಟ ಹಾಗೂ ಕೇಂದ್ರ ಸಚಿವ ಸುರೇಶ್ ಗೋಪಿ ಹಾಗೂ ಅನುಪಮಾ ಪರಮೇಶ್ವರನ್ ನಟನೆಯ ಈ ಸಿನಿಮಾವನ್ನು ಇನ್ನು ಕೆಲವೇ ದಿನಗಳಲ್ಲಿ ಓಟಿಟಿಯಲ್ಲಿ ವೀಕ್ಷಿಸಬಹುದು.

'ಜಾನಕಿ ವಿ Vs ಸ್ಟೇಟ್ ಆಫ್ ಕೇರಳ' ರಿಲೀಸ್ಗೂ ಮುನ್ನ ದೇಶಾದ್ಯಂತ ಸದ್ದು ಮಾಡಿತ್ತು. ಸಿನಿಮಾ ಟೈಟಲ್ನಲ್ಲಿ ಜಾನಕಿ ಪದ ಬಳಸಿದ್ದಕ್ಕೆ ಸೆನ್ಸಾರ್ ಬೋರ್ಡ್ ತಗಾದೆ ತೆಗೆದಿತ್ತು. ಇದು ಹಿಂದೂಗಳ ಭಾವನೆಯ ಧಕ್ಕೆಯಾಗಬಹುದೆಂದು ಆಕ್ಷೇಪ ತೆಗೆದಿತ್ತು. ಈ ಸಂಬಂಧ ವಿವಾದ ಕೇರಳ ಹೈ ಕೋರ್ಟ್ ಮೆಟ್ಟಿಲೇರಿತ್ತು. ಆ ವೇಳೆ ಈ ಸಿನಿಮಾ ಇಡೀ ಭಾರತದಾದ್ಯಂತ ಚರ್ಚೆ ಮಾಡಿತ್ತು.

Suresh Gopi Anupama Parameswaran Malayalam movie Janaki V Vs State of Kerala Ott Release details

ಕೊನೆಗೂ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಲು ನಿರ್ಮಾಪಕರು ಒಪ್ಪಿದ ಬಳಿಕ ಸಿನಿಮಾ ರಿಲೀಸ್ ಆಗಿತ್ತು. ಜಾನಕಿ ಪಕ್ಕದಲ್ಲಿ ವಿ ಎಂಬ ಪದವನ್ನು ಸೇರಿಸುವಂತೆ ಸೆನ್ಸಾರ್ ಬೋರ್ಡ್ ಹೇಳಿತ್ತು. ಹಾಗೂ ಸಿನಿಮಾದಲ್ಲಿ ಜಾನಕಿ ಪದ ಎಲ್ಲೆಲ್ಲಿ ಬಳಕೆಯಾಗಿದೆಯೋ ಅಲ್ಲಿ ಮ್ಯೂಟ್ ಮಾಡಬೇಕೆಂದು ಸೆನ್ಸಾರ್ ಬೋರ್ಡ್ ಪಟ್ಟು ಹಿಡಿದು ಕೂತಿತ್ತು. ಅದಕ್ಕೆ ನಿರ್ಮಾಪಕರು ಒಪ್ಪಿದ ಬಳಿಕ ಸಿನಿಮಾ ರಿಲೀಸ್ ಆಗಿತ್ತು.

ಇಷ್ಟೆಲ್ಲ ವಿವಾದವನ್ನು ಸೃಷ್ಟಿಸಿದ 'ಜಾನಕಿ ವಿ Vs ಸ್ಟೇಟ್ ಆಫ್ ಕೇರಳ' ಸಿನಿಮಾ ಈಗ ಓಟಿಟಿಗ ಎಂಟ್ರಿ ಕೊಡುವುದಕ್ಕೆ ವೇದಿಕೆ ಸಿದ್ದವಾಗಿದೆ. ಎಷ್ಟು ಭಾಷೆಯಲ್ಲಿ ಬಿಡುಗಡೆಯಾಗುತ್ತೆ? ಯಾವಾಗ ರಿಲೀಸ್ ಆಗುತ್ತೆ? ಎಲ್ಲಿ ರಿಲೀಸ್ ಆಗುತ್ತೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

'ಜಾನಕಿ ವಿ Vs ಸ್ಟೇಟ್ ಆಫ್ ಕೇರಳ' ಸ್ವಾತಂತ್ರ್ಯ ದಿನಂದು ಈ ಸಿನಿಮಾ Z5ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಪ್ರವೀಣ್ ನಾರಾಯಣನ್ ಈ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜೆ ಫಣೀಂದ್ರ ಕುಮಾರ್ ಈ ಸಿನಿಮಾದ ನಿರ್ಮಾಪಕರು. ಇನ್ನು ಸೇತುರಾಮನ್ ನಾಯರ್ ಕಂಕೋಲ್ ಸಹ-ನಿರ್ಮಾಪಕರಾಗಿದ್ದಾರೆ.

ಇನ್ನು ಪ್ರಮುಖ ಪಾತ್ರದಲ್ಲಿ ನಟಿಸಿರುವ ಸುರೇಶ್ ಗೋಪಿ ವಕೀಲರಾಗಿ ಕಾಣಿಸಿಕೊಂಡಿದ್ದಾರೆ. ಡೇವಿಡ್ ಅಬೆಲ್ ಡೊನೊವನ್ ಎಂಬುವ ಪಾತ್ರದಲ್ಲಿ ಸುರೇಶ್ ಗೋಪಿ ಕಾಣಿಸಿಕೊಂಡಿದ್ದಾರೆ. ಹಾಗೇ ಅನುಪಮಾ ಪರಮೇಶ್ವರನ್ ಜಾನಕಿ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ದಿವ್ಯ ಪಿಳ್ಳೈ, ಶ್ರುತಿ ರಾಮಚಂದ್ರನ್, ಅಸ್ಕರ್ ಅಲಿ, ಮಾಧವ್ ಸುರೇಶ್ ಗೋಪಿ ಮತ್ತು ಬೈಜು ಸಂತೋಷ್ ಈ ಸಿನಿಮಾದಲ್ಲಿದ್ದಾರೆ.

'ಜಾನಕಿ ವಿ Vs ಸ್ಟೇಟ್ ಆಫ್ ಕೇರಳ' ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಕೇರಳದ ಕಾನೂನು ವ್ಯವಸ್ಥೆಯ ಬಗ್ಗೆ ಈ ಸಿನಿಮಾವಿದ್ದು, ಜಾನಕಿಯ ಬಾಳಲ್ಲಿ ಒಂದು ಘಟನೆ ನಡೆಯುತ್ತದೆ. ತನಗಾದ ಅನ್ಯಾಯಕ್ಕೆ ನ್ಯಾಯ ಧಕ್ಕಿಸಿಕೊಳ್ಳುವುದಕ್ಕೆ ಹೋರಾಡುತ್ತಾಳೆ. ಇದು ಸಿನಿಮಾದ ಒಂದೆಳೆ ಸ್ಟೋರಿ.

Suresh Gopi Anupama Parameswaran Malayalam movie Janaki V Vs State of Kerala Ott Release details

"ಜಾನಕಿ ವಿ Vs ಸ್ಟೇಟ್ ಆಫ್ ಕೇರಳ ಚಿತ್ರಕ್ಕೆ ಚಿತ್ರಮಂದಿರಗಳಲ್ಲಿ ಸಿಕ್ಕ ಪ್ರತಿಕ್ರಿಯೆಯು ಭಾವನಾತ್ಮಕವಾಗಿದೆ. ಪ್ರೇಕ್ಷಕರು ಈ ಸಿನಿಮಾವನ್ನು ಪ್ರೀತಿಯಿಂದ ಸ್ವೀಕರಿಸಿದ್ದಾರೆ ಎಂಬುದು ಸ್ಪಷ್ಟ. ಈಗ Z 5 ನಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಡಿಜಿಟಲ್ಗೆ ಈ ಹೆಜ್ಜೆ ಇಟ್ಟರೆ ಜಾನಕಿಯ ಧ್ವನಿ, ಅವರ ಹೋರಾಟ, ಅವರ ನೋವು ಮತ್ತು ಅವರ ಧೈರ್ಯವು ಕೊನೆಗೂ ಭಾರತದಾದ್ಯಂತ ಮನೆಗಳನ್ನು ತಲುಪುತ್ತದೆ" ಎಂದು ನಟ ಸುರೇಶ್ ಗೋಪಿ ಹೇಳಿದ್ದಾರೆ.

ಹಾಗೇ "ಜಾನಕಿಯ ಪಾತ್ರವು ನನ್ನ ವೃತ್ತಿಜೀವನದ ಅತ್ಯಂತ ಭಾವನಾತ್ಮಕ ಸಿನಿಮಾ. ಈ ಪಾತ್ರ ಲೆಕ್ಕವಿಲ್ಲದಷ್ಟು ಇಂತಹ ಧ್ವನಿಗಳ ಸಂಕೇತ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ನಮಗೆ ದೊರೆತ ಪ್ರೀತಿ ಮತ್ತು ಬೆಂಬಲ ಅದ್ಭುತವಾಗಿತ್ತು. ಈಗ, ದೇಶಾದ್ಯಂತ ಪ್ರೇಕ್ಷಕರು Z5 ನಲ್ಲಿ 'ಜಾನಕಿ ವಿ Vs ಸ್ಟೇಟ್ ಆಫ್ ಕೇರಳ'ವನ್ನು ವೀಕ್ಷಿಸಲಿದ್ದಾರೆ. ಈ ಸಂಗತಿ ನಾನೇ ನಂಬಲಾಗದಷ್ಟು ಉತ್ಸಾಹ ಕೊಟ್ಟಿದೆ. ಜಾನಕಿಯ ಧೈರ್ಯವು ನೋಡುವ ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುತ್ತದೆ" ಎಂದು ನಟಿ ಅನುಪಮಾ ಪರಮೇಶ್ವರನ್ ಹೇಳಿದ್ದಾರೆ.

More from Filmibeat

English summary
Suresh Gopi Anupama Parameshwaran Malayalam controversial movie Janaki V Vs State of Kerala Ott Release details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X