ತುಳು-ಜವಾರಿ ಭಾಷೆಯಲ್ಲೂ ಹಾಲಿವುಡ್‌ ಸಿನಿಮಾ; ಕನ್ನಡಿಗರ 'ಟಾಕೀಸ್' ಓಟಿಟಿ ಪ್ಲಾಟ್‌ಫಾರ್ಮ್‌ನಿಂದ ಹೊಸ ಚರಿತ್ರೆ

ಸಿನಿ ಪ್ರಿಯರಿಗೆ ಪ್ರತಿ ವಾರ ಹೊಸ ಹೊಸ ಸಿನಿಮಾಗಳು ರಿಲೀಸ್ ಆಗುತ್ತಿರಬೇಕು. ಅದು ಥಿಯೇಟರ್‌ನಲ್ಲಿ ಆದರೂ ಸರಿ, ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಆದರೂ ಸರಿ. ಅವರಿಗೆ ಒಂದೊಳ್ಳೆ ಮನರಂಜನೆಯನ್ನು ನೀಡುವ ಕಂಟೆಂಟ್ ಬೇಕು. ಹೀಗಾಗಿ ವೀಕೆಂಡ್ ಬಂತು ಅಂದರೆ, ಸಿನಿಮಾ ಮಂದಿ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ತುದಿಗಾಲಲ್ಲಿ ನಿಂತಿರುತ್ತಾರೆ. ಅದರಲ್ಲೂ ಓಟಿಟಿ ವೇದಿಕೆಗಳು ಒಂದು ಹೆಜ್ಜೆ ಮುಂದೆ ಅಂತಲೇ ಹೇಳಬಹುದು.

ಓಟಿಟಿ ವೇದಿಕೆ ಹೊಸದೇನಾದರೂ ಪ್ರಯತ್ನ ಮಾಡುತ್ತಲೇ ಇರುತ್ತವೆ. ಅದರಲ್ಲೂ ಜನರ ನಾಡಿ-ಮಿಡಿತವನ್ನು ಅರಿತಿರುವ ಓಟಿಟಿ ವೇದಿಕೆಗಳು ಅದಕ್ಕೆ ತಕ್ಕಂತೆ ಮನರಂಜನೆಯನ್ನು ನೀಡುವುದಕ್ಕೆ ಪೈಪೋಟಿಗೆ ಬಿದ್ದಿವೆ. ಓಟಿಟಿ ಲೋಕದ ದಿಗ್ಗಜರು ಪ್ರತಿ ದಿನ ಹೊಸ ಹೊಸ ಕಂಟೆಂಟ್ ಕೊಡುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ. ಇವುಗಳ ಜೊತೆ ಕನ್ನಡಿಗರ 'ಟಾಕೀಸ್ ಆ್ಯಪ್' ಓಟಿಟಿ ವೇದಿಕೆ ಹೊಸ ಚರಿತ್ರೆ ಬರೆಯುವುದಕ್ಕೆ ಹೊರಟಿದೆ.

Talkies App bringing Hollywood movies in Karnataka local language Tulu and Jawari

ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಾಲಿವುಡ್‌ ಸಿನಿಮಾಗಳು ತುಳು ಭಾಷೆಯಲ್ಲಿ ಡಬ್‌ ಆಗಿದೆ. ತುಳು ಮಾತಾಡುವವರನ್ನು ಗಮನದಲ್ಲಿಟ್ಟುಕೊಂಡು ಹಾಲಿವುಡ್‌ ಸಿನಿಮಾಗಳನ್ನು ತಮ್ಮ ಓಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಮಾಡುತ್ತಿದ್ದಾರೆ. ಈ ಮೂಲಕ ಟಾಕೀಸ್ ಆ್ಯಪ್ ಡಿಜಿಟಲ್‌ ಮನೋರಂಜನೆಯಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ. ಈಗಾಗಲೇ ಹಾಲಿವುಡ್ ಸಿನಿಮಾಗಳು ತುಳುಗೆ ಡಬ್ ಆಗಿ ವೀಕ್ಷಕರ ವೀಕ್ಷಣೆಗೆ ಲಭ್ಯವಿದೆ.

ಒಂದು ತುಳು ಭಾಷೆಯಲ್ಲಿ ಹಾಲಿವುಡ್ ಸಿನಿಮಾಗಳು ಡಬ್ ಆಗುತ್ತಿದ್ದರೆ, ಇನ್ನೊಂದು ಕಡೆ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲೂ ಹಾಲಿವುಡ್‌ ಚಿತ್ರಗಳನ್ನು ಸ್ಟ್ರೀಮಿಂಗ್ ಮಾಡುವ ಬಗ್ಗೆ ಚಿಂತಿಸಿದ್ದು, ಈ ಬಗ್ಗೆ ಪ್ರಯತ್ನಗಳು ಶುರುವಾಗಿವೆ. ಪ್ರಾದೇಶಿಕ ಭಾಷೆಗಳಲ್ಲಿ ಹಾಲಿವುಡ್ ಸಿನಿಮಾಗಳು ಸಿಗಬೇಕು ಅನ್ನೋದು ಒಂದು ಕಡೆಯಾದರೆ, ಇನ್ನೊಂದು ಕಡೆ ಪ್ರಾದೇಶಿಕ ಭಾಷೆಗಳ ವ್ಯಾಪ್ತಿ ಮುಂದುವರೆಯಬೇಕು ಅನ್ನೋದು ಇನ್ನೊಂದು ಉದ್ದೇಶ. ಇದನ್ನು ಸೋನಿ ಪಿಕ್ಚರ್ಸ್ ಫಿಲ್ಮ್ಸ್‌ ಅವರ ಸಹಯೋಗದಲ್ಲಿ ಟಾಕೀಸ್ ಆ್ಯಪ್ ಯಶಸ್ವಿಯಾಗಿ ಮಾಡಿಕೊಂಡು ಬರುತ್ತಿದೆ.

ತಮ್ಮ ಪ್ರಾದೇಶಿಕ ಭಾಷೆಯಲ್ಲಿ ಸಿನಿಮಾ ನೋಡಿ ಆನಂದಿಸಬೇಕೆನ್ನುವ ವೀಕ್ಷಕರಿಗೆ ಇದೊಂದು ಸಿಹಿ‌ ಸುದ್ದಿ. ಈಗಾಗಲೇ ಹಾಲಿವುಡ್‌ನ ಜನಪ್ರಿಯ ಸಿನಿಮಾಗಳಾದ 'ಸ್ಪೈಡರ್ ಮ್ಯಾನ್', 'ಗಾಡ್ಜಿಲ್ಲ', 'ಕರಾಟೆ ಕಿಡ್', 'ಅನಕೊಂಡ', 'ಮೆನ್ ಇನ್ ಬ್ಲಾಕ್' ಸೇರಿದಂತೆ ಹಲವು ಸಿನಿಮಾಗಳು ಕರ್ನಾಟಕದ ದೇಸಿ ಭಾಷೆಗಳಲ್ಲಿ ಲಭ್ಯ ಆಗಲಿದೆ ಎಂದು ಟಾಕೀಸ್ ಆ್ಯಪ್ ವಿಶ್ವಾಸ ವ್ಯಕ್ತಪಡಿಸಿದೆ.

Talkies App bringing Hollywood movies in Karnataka local language Tulu and Jawari

ಹಾಲಿವುಡ್‌ ಚಿತ್ರಗಳನ್ನು ಸ್ಥಳೀಯ ಭಾಷೆಯಲ್ಲಿ ಪ್ರದರ್ಶಿಸುವ ವೇದಿಕೆಯಾಗಿ ಟಾಕೀಸ್ ಆ್ಯಪ್ ಸದ್ದು ಮಾಡುತ್ತಿದೆ. ಇದು ಭಾರತದಲ್ಲಿ ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್, ಜೀಯೋ ಹಾಟ್ ಸ್ಟಾರ್ ನಂತರ ನಾಲ್ಕನೇ ಒಟಿಟಿಯಾಗಿದೆ. ವಿಶೇಷವೇನೆಂದರೆ, ಇದೇ ಮೊದಲ ಬಾರಿಗೆ ಹಾಲಿವುಡ್ ಸಿನಿಮಾಗಳನ್ನು ತುಳು ಮತ್ತು ಜವಾರಿ ಭಾಷೆಗಳಲ್ಲಿ ನೋಡುವುದಕ್ಕೆ ಸಿಗುತ್ತಿದೆ. ಈ ಪ್ರಯತ್ನಕ್ಕೆ ತುಳುವಿನಲ್ಲಿ ಅಸ್ತ್ರ ಪ್ರೋಡಕ್ಷನ್ ಹಾಗೂ ಸಿಟಡೆಲ್ ಡೆವಲಪರ್ಸ್ ಪ್ರಾಯೋಜಕರಾಗಿ ಜೊತೆಯಾದರೆ, ಜವಾರಿ ಭಾಷೆಗೆ ಮಂಗಳಮ್ ಪೈಪ್ಸ್ ಕೈ ಜೋಡಿಸಿದ್ದಾರೆ.

ಟಾಕೀಸ್ ಆ್ಯಪ್ ಅನ್ನು ಸೆಂಚುರಿಸ್ಟಾರ್ ಡಾ.ಶಿವರಾಜ್ ಕುಮಾರ್ ಲಾಂಚ್ ಮಾಡಿದ್ದರು. ಕನ್ನಡ, ಕರಾವಳಿಯ ಮತ್ತು ಇತರೆ ಪ್ರಾದೇಶಿಕ ಕಲಾವಿದರಿಗೆ ಈ ಟಾಕೀಸ್ ಆ್ಯಪ್ ದೊಡ್ಡ ಡಿಜಿಟಲ್ ವೇದಿಕೆಯಾಗಿ ಅವಕಾಶ ಕಲ್ಪಿಸಿದೆ. ಸಿನಿಮಾಗಳು, ವೆಬ್‌ ಸೀರಿಸ್‌, ಕಿರುಚಿತ್ರಗಳು, ಕಾರ್ಟೂನ್ ಶೋಗಳು, ಕಾಮಿಡಿ, ಡ್ರಾಮಾ ರಿಯಾಲಿಟಿ ಶೋಗಳು ಮತ್ತು ಟಾಕೀಸ್ ಕಿಚನ್ ಮುಂತಾದ ವಿಭಿನ್ನ ಕಾರ್ಯಕ್ರಮಗಳ ಜೊತೆಗೆ ಈಗ ಹಾಲಿವುಡ್ ಸಿನಿಮಾಗಳನ್ನು 'ಸ್ವಂತ ಭಾಷೆಯಲ್ಲಿ' ನೋಡಬಹುದಾಗಿದೆ.

More from Filmibeat

English summary
Talkies App bringing Hollywood movies in Karnataka local language Tulu and Jawari.
Read more about: tulu hollywood uttara karnataka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X