ಅರೆ ಬೆತ್ತಲೆ, ಬೆಡ್ ರೂಂ ದೃಶ್ಯಗಳಲ್ಲಿ ತಮನ್ನಾ: "ನಿಮ್ಮ ನಟನೆಗಿಂತ ಬೋಲ್ಡ್ ಸೀನ್‌ಳೇ ಉತ್ತಮ" ನೆಟ್ಟಿಗರು ಗರಂ
ಮಿಲ್ಕಿ ಬ್ಯೂಟಿ ತಮನ್ನಾ ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿ ಇದ್ದಾರೆ. ತೆಲುಗು ಬಹುತೇಕ ಎಲ್ಲಾ ಸೂಪರ್‌ಸ್ಟಾರ್ ಸಿನಿಮಾಗಳಿಗೆ ನಾಯಕಿಯಾಗಿ ನಟಿಸಿದ್ದಾರೆ. ಆದರೆ, ಇತ್ತೀಚೆಗೆ ಯಾಕೋ ಇವರಿಗೆ ಡಿಮ್ಯಾಂಡ್ ಕಮ್ಮಿ ಆದಂತಿದೆ. ಒಂದು ಕಾಲದಲ್ಲಿ ತಮನ್ನಾ ಪಡ್ಡೆ ಹುಡುಗರು ಈಕೆಯ ಸಿನಿಮಾಗಾಗಿ ನಿದ್ದೆ ಬಿಟ್ಟು ಕಾಯತ್ತಿದ್ದರು.
ತನ್ನ ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗ ತಮನ್ನಾ ಗ್ಲಾಮರ್ ಡಾಲ್ ಆಗಿ ಕಂಡಿದ್ದರು. ತಮ್ಮ ಮೈಮಾಟದಿಂದ, ನಟನೆಯಿಂದ ಸಿನಿಪ್ರಿಯರನ್ನು ಸೆಳೆದಿದ್ದರು. ಆದರೆ, ಇತ್ತೀಚೆಗೆ ದಕ್ಷಿಣ ಭಾರತದಲ್ಲಿ ಯಾಕೋ ಈಕೆಗೆ ಡಿಮ್ಯಾಂಡ್ ಕಡಿಮೆ ಆಗಿದೆ. ಅದಕ್ಕೆ ಬಾಲಿವುಡ್‌ನಲ್ಲಿಯೇ ಬೀಡು ಬಿಟ್ಟಿದ್ದಾರೆ.

ಸಿನಿಮಾಗಳಲ್ಲಿ ಅವಕಾಶ ಕಡಿಮೆ ಆಗುತ್ತಿದ್ದಂತೆ ತಮನ್ನಾ ಓಟಿಟಿಗೆ ಲಗ್ಗೆ ಇಟ್ಟಿದ್ದಾರೆ. 'ಜೀ ಕರ್ದಾ' ಅನ್ನೋ ಅಮೆಜಾನ್ ಪ್ರೈಂ ವೆಬ್ ಸೀರಿಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಇದರ ಟ್ರೈಲರ್ ರಿಲೀಸ್ ಆಗಿದ್ದು, ತಮನ್ನಾ ಅವತಾರ ಕಂಡು ಫ್ಯಾನ್ಸ್ ಶಾಕ್ ಆಗಿದ್ದಾರೆ. ಓಟಿಟಿಗಾಗಿ ಇಷ್ಟೊಂದು ಬೋಲ್ಡ್ ಆದ್ರಾ? ಅಂತ ನೆಟ್ಟಿಗರು ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.
ಓಟಿಟಿಗೆ ಲಗ್ಗೆ ಇಟ್ಟ ತಮನ್ನಾ
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾಗೆ ಯಾಕೋ ಸಿನಿಮಾಗಳೇ ಸಿಗುತ್ತಿಲ್ಲ. ಒಂದು ಕಾಲದಲ್ಲಿ ದಕ್ಷಿಣ ಭಾರತದ ಸಿನಿಮಾ ಬ್ಯುಸಿಯಾಗಿದ್ದರು. ಸೌತ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದೇ ಅಪರೂಪ ಎನ್ನುವಂತಾಗಿದೆ. ಹೀಗಾಗಿ ಹಿಂದಿ ಚಿತ್ರರಂಗದ ಕಡೆ ಮುಖ ಮಾಡಿದ್ದರು. ಸದ್ಯಕ್ಕೀಗ ಓಟಿಟಿ ಕಡೆ ಮುಖ ಮಾಡಿದ್ದಾರೆ.
ಅಮೆಜಾನ್ ಪ್ರೈಂ ವೆಬ್ ಸೀರಿಸ್ 'ಜೀ ಕರ್ದಾ'ದಲ್ಲಿ ತಮನ್ನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಜೂನ್ 15ರಿಂದ ಈ ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗಲಿದೆ. ಇತ್ತೀಚೆಗೆ ಟೀಸರ್ ಕೂಡ ರಿಲೀಸ್ ಆಗಿದ್ದು, ತಮನ್ನಾ ಬೋಲ್ಡ್ ಅವತಾರ ಕಂಡು ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ. ಸಿನಿಮಾ ಹೀಗೆಲ್ಲ ಕಾಣಿಸಿಕೊಂಡೇ ಇರಲಿಲ್ಲ. ಓಟಿಟಿಗಾಗಿ ಇಷ್ಟೊಂದು ಬೋಲ್ಡ್ ಆದ್ರಾ? ಅಂತ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ತಮನ್ನಾ ಸಿಕ್ಕಾಪಟ್ಟೆ ಬೋಲ್ಡ್
ತಮನ್ನಾ ಭಾಟಿಯಾ ಸಿನಿಮಾಗಳಲ್ಲೂ ಬೋಲ್ಡ್ ಲುಕ್ ಕೊಟ್ಟಿದ್ದರೂ, ತಾನೇ ಒಂದು ಗೆರೆಯನ್ನು ಹಾಕಿಕೊಂಡಿದ್ದರು. ಹಾಟ್ ಸೀನ್‌ಗಳನ್ನೇ ಮಾಡಿದ್ರೂ, ಅಲ್ಲೊಂದು ಬೇಲಿ ಇರುತ್ತಿತ್ತು. ಅದನ್ನು ದಾಟುತ್ತಿರಲಿಲ್ಲ. ಆದ್ರೀಗ ತಮನ್ನಾ ಅಚ್ಚರಿ ಎಂಬಂತೆ ಅರೆ ಬೆತ್ತಲೆ ದೃಶ್ಯಗಳಲ್ಲಿ, ಬೆಡ್ ರೂಂ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾಗಿಂತ ಓಟಿಟಿ ಕಂಟೆಂಟ್‌ಗಳು ಬೋಲ್ಡ್ ಆಗಿರುತ್ತವೆ. ಆದರೆ, ಹಿಂದೆಂದೂ ಹೀಗೆ ಕಾಣಿಸಿಕೊಳ್ಳದ ತಮನ್ನಾ, ಇದೇ ಮೊದಲ ಬಾರಿಗೆ ಇಂತಹ ಹಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಓಟಿಟಿಗಾಗಿ ಬೋಲ್ಡ್ ಅವತಾರ ಎತ್ತಿದ್ದಾಗಿ ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ.
ನೆಟ್ಟಿಗರ ಕೆಂಗಣ್ಣಿಗೆ ಗುರಿ
ತಮನ್ನಾ ಭಾಟಿಯಾ ಇದೇ ಮೊದಲ ಬಾರಿಗೆ ಓಟಿಟಿ ವೆಬ್ ಸೀರಿಸ್‌ನಲ್ಲಿ ನಟಿಸಿದ್ದು, ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವರು ಇಂತಹ ದೃಶ್ಯಗಳಲ್ಲಿ ತಮನ್ನಾ ಊಹಿಸಿಕೊಳ್ಳಲೂ ಆಗುವುದಿಲ್ಲ ಎಂದಿದ್ದಾರೆ. 2 ನಿಮಿಷದ ಟ್ರೈಲರ್‌ನಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಲುಕ್ ಕೊಟ್ಟಿದ್ದನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ.
ಅರೆ ಬೆತ್ತಲೆ ದೃಶ್ಯಗಳು, ಬೆಡ್ ರೂಂ ದೃಶ್ಯಗಳು, 'F' ಪದಗಳನ್ನು ಬಳಸಿದ್ದಾರೆ. ಟ್ರೈಲರ್‌ನಲ್ಲಿ ಇವುಗಳನ್ನು ಕೇಳುತ್ತಿದ್ದಂತೆ, "ನಿಮ್ಮ ನಟನೆಗಿಂತ ಬೋಲ್ಡ್ ಸೀನ್‌ಳೇ ಉತ್ತಮ" ಎಂದು ನೆಟ್ಟಿಗರು ಕಿಡಿಕಾಡುತ್ತಿದ್ದಾರೆ. ಮತ್ತೆ ಕೆಲವರು ತಮನ್ನಾಳ ಈ ದೃಶ್ಯಗಳಿಗೇ ವೆಬ್ ಸೀರಿಸ್ ನೋಡುತ್ತೇನೆ ಎಂದು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ತಮನ್ನಾ ಕೂಡ ಬೋಲ್ಡ್ ನಟಿ ಅನ್ನೋ ಹಣೆಪಟ್ಟಿ ಬಿದ್ದಂತಾಗಿದೆ.


Click it and Unblock the Notifications











