"ಅದನ್ನು ನೋಡುವಾಗ ಯಾರಾದ್ರೂ ಬಂದ್ರೆ ಗಾಬರಿಯಾಗ್ಬೇಡಿ.. ಏನಾಗುತ್ತೆ? ಬಿರುಗಾಳಿ ಬರುತ್ತಾ?"- ನಟಿ ತಮನ್ನಾ

ಮಿಲ್ಕಿ ಬ್ಯೂಟಿ ತಮನ್ನಾ ಬಾಲಿವುಡ್‌ಗೆ ಹೋದ್ಮೇಲೆ ಕಂಪ್ಲೀಟ್ ಆಗಿ ಬದಲಾಗಿಬಿಟ್ಟಿದ್ದಾರೆ. ಪುಲ್ ಬಿಂದಾಸ್ ಲುಕ್ ಕೊಡ್ತಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕಿಸ್‌ ಮಾಡೋಕೂ ಅಂಜುತ್ತಿದ್ದ ನಟಿ, ಹಸಿಬಿಸಿ ದೃಶ್ಯಗಳಲ್ಲಿ ನಟಿಸೋದ್ರಲ್ಲಿ ಎಕ್ಸ್‌ಪರ್ಟ್ ಆಗಿಬಿಟ್ಟಿದ್ದಾರೆ.

ಅದಕ್ಕೆ ಒಂದೇ ತಿಂಗಳಲ್ಲಿ ತಮನ್ನ ನಟಿಸಿದ ಎರಡು ಬೋಲ್ಡ್ ಪ್ರಾಜೆಕ್ಟ್‌ಗಳು ಸಿನಿಪ್ರಿಯರಿಗೆ ಸಿಗುತ್ತಿವೆ. ಒಂದು 'ಜೀ ಕರ್ದಾ' ವೆಬ್ ಸೀರಿಸ್ ಈಗಾಗಲೇ ರಿಲೀಸ್ ಆಗಿದೆ. ಇನ್ನೊಂದು 'ಲಸ್ಟ್ ಸ್ಟೋರೀಸ್ 2' ಇನ್ನೇನು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗುತ್ತೆ.

Lust-Stories-2-Tamannaah-Bhatia

ಈ ಸಂಬಂಧ ತಮನ್ನಾ ತಮ್ಮ ಸಿನಿಮಾವನ್ನು ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಇದರಲ್ಲಿ ತನ್ನ ರಿಯಲ್ ಲೈಫ್ ಬಾಯ್‌ಫ್ರೆಂಡ್‌ ಜೊತೆ ರೀಲ್‌ನಲ್ಲೂ ರೊಮ್ಯಾನ್ಸ್ ಮಾಡಿದ್ದು, ಹಸಿ ಬಿಸಿ ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದಾರೆ. ಹೀಗಾಗಿ 'ಲಸ್ಟ್‌ ಸ್ಟೋರೀಸ್ 2'ನಲ್ಲಿ ಕೇವಲ ಕಾಮ ಅಷ್ಟೇ ಇಲ್ಲ. ಬೇರೆನೂ ಇದೆ ಗಾಬರಿಯಾಗ್ಬೇಡಿ ಅಂತ ಹೇಳ್ತಿದ್ದಾರೆ.

"ರೂಮಿಗೆ ಯಾರಾದ್ರೂ ಬಂದ್ರೆ ಗಾಬರಿಯಾಗ್ಬೇಡಿ"

'ಲಸ್ಟ್ ಸ್ಟೋರೀಸ್' ಪಾರ್ಟ್‌ 1 ನೋಡಿ ಓಟಿಟಿ ಪ್ರಿಯರು ಬೆಚ್ಚಿಬಿದ್ದರು. ಕೆಲವರು ಎಂಜಾಯ್ ಮಾಡಿದ್ದರು. ಈ ಗೊಂದಲಗಳ ನಡುವೆ ಸಿನಿಮಾ ಯಶಸ್ವಿಯಾಗಿತ್ತು. ಇದೇ ಹಿನ್ನೆಲೆಯಲ್ಲಿ 'ಲಸ್ಟ್ ಸ್ಟೋರೀಸ್ 2' ರಿಲೀಸ್ ಆಗುತ್ತಿದೆ. ಅದಕ್ಕೆ ಗಾಬರಿ ಪಟ್ಕೊಂಡು, ಕದ್ದು ಮುಚ್ಚಿ ನೋಡೋರಿಗೆ ತಮನ್ನ ಸಲಹೆ ಕೊಟ್ಟಿದ್ದಾರೆ.

"ಇಲ್ಲಿ ಕೇಳಿ.. ರೂಮ್‌ಗೆ ಯಾರಾದರೂ ಬಂದರೆ, ಗಾಬರಿಯಾಗೋದು.. ಲಸ್ಟ್‌ ಸ್ಟೋರೀಸ್ 2 ನೋಡುವುದನ್ನು ನಿಲ್ಲಿಸುವುದನ್ನು ಮಾಡಬೇಡಿ. ಇದರಲ್ಲಿ ಕಾಮವನ್ನು ಬಿಟ್ಟು ಬೇರೆನೂ ಇದೆ." ಎಂದು ಓಟಿಟಿ ವೀಕ್ಷಕರಿಗೆ ಮಿಲ್ಕಿ ಬ್ಯೂಟಿ ತಮನ್ನಾ ಧೈರ್ಯ ತುಂಬಿದ್ದಾರೆ.

ಕಾಮ ಬಿಟ್ಟು ಬೇರೆ ಏನೇನಿದೆ?

'ಲಸ್ಟ್‌ ಸ್ಟೋರೀಸ್' ಹೆಸರು ಕೇಳುತ್ತಿದ್ದಂತೆ ಇದರಲ್ಲಿ ಬರೀ ಹಸಿಬಿಸಿ ದೃಶ್ಯಗಳು, ಬೆಡ್ ರೂಮ್‌ ಸೀನ್‌ಗಳು ಇರುತ್ತೆ ಅಂತ ಭಾವಿಸಿರುವ ಅದೆಷ್ಟೋ ಮಂದಿ ಇದ್ದಾರೆ. ಅದಕ್ಕೆ ತಮನ್ನಾ ಇದರಲ್ಲಿ ಕಾಮವನ್ನು ಬಿಟ್ಟು ಬೇರೆನೂ ಇದೆ. ಆರಾಮಾ ಸಿನಿಮಾ ನೋಡಿ ಅಂತ ಹೇಳಿದ್ದಾರೆ.

"ಇದರಲ್ಲಿ ಡ್ರಾಮ ಇದೆ, ರೊಮ್ಯಾನ್ಸ್ ಇದೆ. ಆಕ್ಷನ್ ಇದೆ. ತಾಯಿ ಪ್ರೀತಿಯಿದೆ. ಅಜ್ಜಿ ಪ್ರೀತಿಯಿದೆ. ಮಾಜಿ ಪ್ರಿಯಕರನ ಪ್ರೀತಿಯಿದೆ. ಅಣ್ಣನ ಪ್ರೀತಿ ಎಲ್ಲವೂ ಇದೆ." ಎಂದು ಹೇಳುವ ಮೂಲಕ ತಮ್ಮ ಅಭಿಮಾನಿಗಳಿಗೆ, ಓಟಿಟಿ ವೀಕ್ಷಕರಿಗೆ ಮಾಹಿತಿ ನೀಡಿದ್ದಾರೆ.

ಎಲ್ಲರಿಗೂ ಸಿನಿಮಾ ತೋರಿಸಿ ಏನಾಗುತ್ತೆ?

'ಲಸ್ಟ್ ಸ್ಟೋರೀಸ್ 2' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಇದೇ ಜೂನ್ 29ರಂದು ರಿಲೀಸ್ ಆಗುತ್ತಿದೆ. ನಟಿ ತಮನ್ನಾ, ಬಾಯ್‌ಫ್ರೆಂಡ್ ವಿಜಯ್ ವರ್ಮಾ, ಮೃಣಾಲ್ ಠಾಕೂರ್, ಕಾಜೋಲ್, ನೀನಾ ಗುಪ್ತಾ ಸೇರಿದಂತೆ ದಿಗ್ಗಜರೇ ನಟಿಸಿದ್ದಾರೆ. ಹೀಗಾಗಿ ಗಾಬರಿಯಾಗ್ಬೇಡಿ, ಎಲ್ಲರಿಗೂ ಸಿನಿಮಾ ತೋರಿಸಿ ಅಂತ ತಮನ್ನಾ ಮನವಿ ಮಾಡಿಕೊಂಡಿದ್ದಾರೆ.

"ಹೆಸರನ್ನು ನೋಡಿ ಗಾಬರಿಯಾಗ್ಬೇಡಿ. ಎಲ್ಲರಿಗೂ ತೋರಿಸಿ. ಏನಾಗುತ್ತೆ? ಬಿರುಗಾಳಿ ಬರುತ್ತಾ? ಆಕಾಶ ತಲೆ ಮೇಲೆ ಬೀಳುತ್ತಾ? ವೈಫೈ ಬಂದ್ ಆಗುತ್ತಾ? ಇಲ್ಲ ಅಲ್ವಾ? ಇಷ್ಟೊಂದು ತಲೆ ಕೆಡಿಸಿಕೊಂಡರೆ, ಹಣೆ ಮೇಲೆ ಆಬ್ಸ್ ಬಂದ್ಬಿಡುತ್ತೆ. ಅದಕ್ಕೆ ರಿಲ್ಯಾಕ್ಸ್ ಆಗಿ ಲಸ್ಟ್ ಸ್ಟೋರೀಸ್ 2 ನೋಡಿ, ಎಂಜಾಯ್ ಮಾಡಿ." ಎಂದು ಮಿಲ್ಕಿ ಬ್ಯೂಟಿ ಓಟಿಟಿ ವೀಕ್ಷಕರಿಗೆ ಧೈರ್ಯ ತುಂಬಿದ್ದಾರೆ.

More from Filmibeat

English summary
Tamannaah says don't Panic if someone enters your room while watching Lust Stories 2, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X