Heart Beat:ಕನ್ನಡಕ್ಕೂ ಬಂತು ಮೆಗಾ ಮೆಡಿಕಲ್ ಡ್ರಾಮಾ ಸೀರಿಸ್ 'ಹಾರ್ಟ್‌ಬೀಟ್'; ಎಲ್ಲಿ ನೋಡ್ಬಹುದು?

ಥಿಯೇಟರ್‌ನಲ್ಲಿ ಸಿನಿಮಾಗಳು ಡಲ್ ಹೊಡೆಯುತ್ತಿವೆ ಅಂದರೆ, ಜನರು ಸಾಮಾನ್ಯವಾಗಿ ಓಟಿಟಿ ಕಡೆಗೆ ಮುಖ ಮಾಡುತ್ತಾರೆ. ಓಟಿಟಿ ವೇದಿಕೆಗಳು ತನ್ನ ವೀಕ್ಷಕರಿಗಾಗಿ ಪ್ರತಿ ವಾರ ಹೊಸ ಹೊಸ ಕಂಟೆಂಟ್‌ಗಳನ್ನು ರಿಲೀಸ್ ಮಾಡುತ್ತಲೇ ಇರುತ್ತೆ. ಅದರಲ್ಲೂ ಭಾರತದ ಐದು ಪ್ರಮುಖ ಭಾಷೆಗಳಲ್ಲಿ ಹತ್ತು ಹಲವು ಕಂಟೆಂಟ್‌ಗಳು ರಿಲೀಸ್ ಆಗುತ್ತಿರುತ್ತವೆ. ಈ ವಾರ ಕನ್ನಡದಲ್ಲಿ ಒಂದು ಮೆಗಾ ಮೆಡಿಕಲ್ ಡ್ರಾಮಾ ಸೀರಿಸ್ ರಿಲೀಸ್ ಆಗಿದೆ.

ಹಿಂದಿಗೆ ಹೋಲಿಸಿದರೆ, ದಕ್ಷಿಣ ಭಾರತದ ಭಾಷೆಗಳಲ್ಲಿ ಸೀರಿಸ್‌ಗಳು ಬಂದಿದ್ದು ತೀರಾ ಕಡಿಮೆ. ಅದರಲ್ಲೂ ಕನ್ನಡಲ್ಲಿ ಈಗೀಗ ವೆಬ್ ಸೀರಿಸ್‌ಗಳು ಬರುವುದಕ್ಕೆ ಶುರುವಾಗಿವೆ. ಕನ್ನಡದಲ್ಲೂ ವೆಬ್ ಸೀರಿಸ್‌ಗಳನ್ನು ನೋಡಬೇಕು ಅಂತ ಆಸೆ ಪಟ್ಟಿರೋ ಕನ್ನಡಿಗರಿಗಾಗಿ ಜಿಯೋ ಹಾಟ್‌ಸ್ಟಾರ್ ಒಂದು ಮೆಗಾ ಸೀರಿಸ್ ಅನ್ನು ಹೊತ್ತು ತಂದಿದೆ. ಅದುವೇ 'ಹಾರ್ಟ್ ಬೀಟ್'.

Tamil famous tv series Heart Beat Kannada Dubbed version releasing on November 28th in jiohotstar

'ಹಾರ್ಟ್ ಬೀಟ್' ಜಿಯೋಹಾಟ್‌ಸ್ಟಾರ್‌ನ ಬಹು ನಿರೀಕ್ಷಿತ ವೆಬ್ ಸೀರಿಸ್. ಈ ಮೆಡಿಕಲ್ ಡ್ರಾಮಾ ಮೂಲತ: ತಮಿಳು ಭಾಷೆಯದ್ದು. ಅಲ್ಲಿನ ಸ್ಟಾರ್ ವಿಜಯ್‌ನಲ್ಲಿ ಎರಡು ಸೀಸನ್‌ಗಳು ಪ್ರಸಾರ ಕಂಡಿದ್ದು, ವೀಕ್ಷಕರಿಂದ ಜನಪ್ರಿಯತೆ ಗಳಿಸಿದೆ. ಪ್ರತಿಯೊಂದು ಸೀಸನ್‌ ಕೂಡ ಸುಮಾರು 100 ಸಂಚಿಕೆಗಳನ್ನು ಒಳಗೊಂಡಿದೆ. ತಮಿಳಿನಲ್ಲಿ ಯಶಸ್ವಿ ಕಂಡಿರೋ ಈ ಸೀರಿಸ್ ಈಗ ಕನ್ನಡಕ್ಕೆ ಡಬ್ ಆಗಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ರಿಲೀಸ್ ಆಗಿದೆ.

ಈ ಮೆಗಾ ಮೆಡಿಕಲ್ ಸೀರಿಸ್‌ನಲ್ಲಿ ವೈದ್ಯಕೀಯ ಲೋಕದ ಸವಾಲುಗಳನ್ನು ತೆರೆದಿಡಲಾಗಿದೆ. ವೈದ್ಯರು, ಅವರು ಬಿಡುವಿಲ್ಲ ಕೆಲಸಗಳು, ಅವರ ಭಾವನಾತ್ಮಕ ಸಂಬಂಧಗಳು, ಮಾನವೀಯತೆ, ಸಹಕಾರ ಮನೋಭಾವ, ಕಿತ್ತಾಟ ಸೇರಿದಂತೆ ಹಲವು ಅಂಶಗಳನ್ನು ಇದು ಒಳಗೊಂಡಿದೆ. ಹೀಗಾಗಿ ತಮಿಳಿನಲ್ಲಿ 100 ಎಪಿಸೋಡ್‌ಗಳ ಎರಡೂ ಸೀಸನ್‌ಗಳು ಭರ್ಜರಿ ಯಶಸ್ಸು ಕಂಡಿದೆ.

ಜಿಯೋಹಾಟ್‌ಸ್ಟಾರ್‌ನಲ್ಲಿ ನವೆಂಬರ್ 28ರಿಂದ 'ಹಾರ್ಟ್ ಬೀಟ್' ಮೆಗಾ ಸೀರಿಸ್ ಪ್ರಸಾರ ಆಗುತ್ತಿದೆ. ಈ ಶೋಗೆ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. IMDBಯಲ್ಲಿಯೂ ಈ ಮೆಗಾ ಸೀರಿಸ್ 8.6 ರೇಟಿಂಗ್ ಅನ್ನು ಪಡೆದುಕೊಂಡಿದೆ. ಇದು ಮೆಡಿಕಲ್ ಮೆಗಾ ಸರಣಿಯ ಗುಣಮಟ್ಟ ಹಾಗೂ ಕಥೆಯಲ್ಲಿ ಕಟ್ಟಿತನಕ್ಕೆ ಸಾಕ್ಷಿಯಾಗಿದೆ. ತಮಿಳಿಗರ ಮನಸ್ಸು ಗೆದ್ದಿರುವ ಈ ಸಿರೀಸ್‌ ಈಗ ಕನ್ನಡಕ್ಕೂ ಬಂದಿದೆ.

'ಹಾರ್ಟ್ ಬೀಟ್' ಮೆಗಾ ಮೆಡಿಕಲ್ ಸೀರಿಸ್‌ನ ಪ್ರಮುಖ ಪಾತ್ರದಲ್ಲಿ ದೀಪಾ ಬಾಲು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಅನುಮೋಲ್, ಚಾರುಕೇಶ್, ಕಾರ್ತಿಕ್ ಕುಮಾರ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ ಈ ಮೆಡಿಕಲ್ ಸರಣಿಗೆ ಕಥೆ ಬರೆದಿರೋದು ದೀಪಕ್ ಸುಂದರರಾಜನ್, ಹಾಗೇ ಅಬ್ದುಲ್ ಕಬೀಝ್ ಮತ್ತು ಚಿದಂಬರಂ ಮಣಿವಣ್ಣನ್ ಜೊತೆ ಸೇರಿ ನಿರ್ದೇಶನ ಮಾಡಿದ್ದಾರೆ.

Tamil famous tv series Heart Beat Kannada Dubbed version releasing on November 28th in jiohotstar

ಈ ಮೆಗಾ ಸೀರಿಸ್ ಅಮೆರಿಕದ ಜನಪ್ರಿಯ ಮೆಡಿಕಲ್ ಸೀರಿಸ್‌ಗಳಾದ 'ನ್ಯೂ ಆಮ್ಸ್‌ಟರ್ಡ್ಯಾಮ್' ಹಾಗೂ 'ಗ್ರೇ'ಸ್ ಅನಾಟಮಿ'ಯ ಪ್ರೇರಣೆಯಗಿದೆ. ಈ ಎರಡೂ ಸೀರಿಸ್‌ಗಳಿಗೂ ವಿಶ್ವದಾದ್ಯಂತ ಉತ್ತಮ ಪ್ರತಿಕ್ರಿಯೆಗಳು ಸಿಕ್ಕಿವೆ. 'ಹಾರ್ಟ್‌ಬೀಟ್‌'ನಲ್ಲಿ ಸೀರಿಸ್‌ ಆರ್‌ಕೆ ಮಲ್ಟಿ-ಸ್ಪೆಷಾಲಿಟಿ ಎಂಬ ಕಾಲ್ಪನಿಕ ಆಸ್ಪತ್ರೆಯ ಹಿನ್ನೆಲೆಯನ್ನು ಇಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆ. ಇದರಲ್ಲಿ ಸರ್ಜಿಕಲ್ ಇಂಟರ್ನ್‌ಗಳು, ರೆಸಿಡೆಂಟ್‌ಗಳು, ವೈದ್ಯರ ದಿನನಿತ್ಯದ ವೃತ್ತಿಜೀವನದ ಒತ್ತಡಗಳು ಹಾಗೂ ಅವರ ವೈಯಕ್ತಿಕ ಬದುಕಿನ ಸಂಘರ್ಷಗಳನ್ನು ನೋಡಬಹುದಾಗಿದೆ.

ಇನ್ನು ಕಥೆ ಕಡೆಗೆ ಬರೋದಾರೆ, 'ಹಾರ್ಟ್‌ಬೀಟ್'ನಲ್ಲಿ ರಿನಾ ಎಂಬ ಪ್ರತಿಭಾವಂತ ಯುವ ವೈದ್ಯೆಯ ಕಥೆಯನ್ನು ಹೇಳಲಾಗಿದೆ. ಜನಪ್ರಿಯ ಜನರಲ್ ಸರ್ಜನ್ ಡಾ. ರಧಿಯ ಮಗಳು ಎಂದು ಗೊತ್ತಾದಾಗ ರಿನಾ ಹಾಗೂ ರಧಿಯ ಬದುಕು ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತವೆ. ಆರ್‌ಕೆ ಹಾಸ್ಪಿಟಲ್‌ನ ಸರ್ಜಿಕಲ್ ರೆಸಿಡೆನ್ಸಿ ಪ್ರೋಗ್ರಾಂಗೆ ಸೇರಿರುವ ರಿನಾ, ಸಹ-ಇಂಟರ್ನ್‌ಗಳಾದ ತೇಜು, ನವೀನ್ , ರಾಕಿ, ಗುಣ ಹಾಗೂ ಸೀನಿಯರ್ ರೆಸಿಡೆಂಟ್‌ಗಳಾದ ಅನಿತಾ, ರವಿ ಅವರೊಂದಿಗೆ ವೈಯಕ್ತಿಕ ಬದುಕಿನ ಜೊತೆ ವೃತ್ತಿ ಜೀವನದ ಒತ್ತಡಗಳನ್ನು ನಿಭಾಯಿಸುವ ಪ್ರಯತ್ನಕ್ಕೆ ಮುಂದಾಗುತ್ತಾಳೆ. ಇದರಲ್ಲಿ ಆರ್‌ಕೆ ಆಸ್ಪತ್ರೆಯ ಸಂಸ್ಥಾಪಕನ ಮಗ ಅರ್ಜುನ್ ಜೊತೆಗಿನ ಲವ್ ಸ್ಟೋರಿಯನ್ನೂ ನೋಡಬಹುದಾಗಿದೆ.

More from Filmibeat

English summary
Tamil famous tv series Heart Beat Kannada Dubbed version releasing on November 28th in jiohotstar.
Read more about: series sandalwood hotstar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X