ಪವನ್ ಕಲ್ಯಾಣ್ ಸಿನಿಮಾ ಲೀಕ್ ಮಾಡಿದ್ಯಾರು? ತಮಿಳ್‌ ರಾಕರ್ಸ್ ಸಿನಿಮಾದಲ್ಲಿ ಸುಳಿವು?

ಭಾರತೀಯ ಸಿನಿಮಾಗಳಿಗೆ ದೊಡ್ಡ ತಲೆ ನೋವಾಗಿರೋದು ಪೈರಸಿ. ಅದರಲ್ಲೂ ಬಿಡುಗಡೆ ಕೆಲವೇ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಲೀಕ್ ಮಾಡುವ ತಮಿಳು ರಾಕರ್ಸ್ ಬಗ್ಗೆ ಚಿತ್ರರಂಗ ತಲೆಕೆಡಿಸಿಕೊಂಡು ಕೂತಿದೆ. ಇದೂವರೆಗೂ ತಮಿಳು ರಾಕರ್ಸ್ ಯಾರು ಅನ್ನುವುದು ತಿಳಿಯುತ್ತಿಲ್ಲ.

ಎಲ್ಲಾ ಚಿತ್ರರಂಗಗಳೂ ತಮಿಳು ರಾಕರ್ಸ್ ಯಾರು ಅನ್ನುವುದನ್ನು ಹುಡುಕಲು ಪ್ರಯತ್ನ ಪಟ್ಟು ಸೋತಿವೆ. ಮತ್ತೆ ಕೆಲವರು ಇವರಿಂದ ತಪ್ಪಿಸಿಕೊಳ್ಳಲು ನಾನಾ ಪ್ರಯತ್ನ ಪಟ್ಟಿವೆ. ಆದರೆ ಸಾಧ್ಯವಾಗಿಲ್ಲ. ಇವನ್ನೇ ಇಟ್ಟುಕೊಂಡಯ ತಮಿಳು ರಾಕರ್ಸ್ ಎನ್ನುವ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಸಿನಿಮಾ ಪವನ್ ಕಲ್ಯಾಣ್ ಸಿನಿಮಾ ಲೀಕ್ ಆಗಿದ್ದರ ಬಗ್ಗೆ ಸುಳಿವು ನೀಡಿದೆಯಂತೆ.

Tamil Rockerz Movie Hinted Behind Pawan Kalyan Film Attarintiki Daaredi Piracy

ಪವನ್ ಕಲ್ಯಾಣ್ ಸಿನಿಮಾ ಲೀಕ್ ಮಾಡಿದ್ಯಾರು?

ಪವನ್ ಕಲ್ಯಾಣ್ ಅಭಿನಯಿಸಿದ್ದ 'ಅತ್ತಾರಿಂಟಿಕಿ ದಾರೇದಿ' ಸಿನಿಮಾ ಬಿಡುಗಡೆಗೂ ಮುನ್ನವೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿತ್ತು. ಈ ಸಿನಿಮಾ ಲೀಕ್ ಆಗಿದ್ದು ಟಾಲಿವುಡ್ ಮಂದಿಗೆ ಬಿಗ್ ಶಾಕ್ ಕೊಟ್ಟಿತ್ತು. ಯಾಕಂದ್ರೆ, ಅಲ್ಲಿವರೆಗೂ ಬಿಡುಗಡೆಗೂ ಮುನ್ನವೇ ಸಿನಿಮಾ ಲೀಕ್ ಆದ ಉದಾಹರಣೆಗಳು ಇರಲಿಲ್ಲ.

ಆದರೆ, ಪವನ್ ಕಲ್ಯಾಣ್ ಅಂತಹ ಸೂಪರ್ ಸ್ಟಾರ್ ಸಿನಿಮಾವನ್ನೇ ಲೀಕ್ ಮಾಡಿದ್ಯಾರು? ಅನ್ನು ಚರ್ಚೆ ಎದ್ದಿತ್ತು. ಇನ್ನೊಂದು ಕಡೆ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಈಗ ಈ ಸಿನಿಮಾ ಲೀಕ್ ಆಗಿದ್ದರ ಬಗ್ಗೆ 'ತಮಿಳು ರಾಕರ್ಸ್' ಸಿನಿಮಾದ ಟ್ರೈಲರ್‌ನಲ್ಲಿ ಚಿಕ್ಕದೊಂದು ಸುಳಿವು ನೀಡಲಾಗಿದೆ ಎಂದು ಟಾಲಿವುಡ್ ಹೇಳುತ್ತಿದೆ.

'ತಮಿಳು ರಾಕರ್ಸ್' ಸಿನಿಮಾದಟ ಟ್ರೈಲರ್‌ನಲ್ಲಿ ಸುಳಿವು

ಹೊಸ ಹೊಸ ಸಿನಿಮಾಗಳನ್ನು ಆನ್‌ಲೈನ್‌ನಲ್ಲಿ ಲೀಕ್ ಮಾಡುವ ತಮಿಳು ರಾಕರ್ಸ್‌ ಬಗ್ಗೆ ಸಿನಿಮಾವೊಂದು ನಿರ್ಮಾಣ ಆಗಿದೆ. ಈ ಸಿನಿಮಾದ ಟ್ರೈಲರ್‌ ಈಗ ಹೊರಬಿದ್ದಿದೆ. ಈ ಟ್ರೈಲರ್‌ನಲ್ಲಿ ಪವನ್ ಕಲ್ಯಾಣ್ ಸಿನಿಮಾ ಲೀಕ್ ಮಾಡಿದ್ದರ ಬಗ್ಗೆ ಸುಳಿವು ನೀಡಲಾಗಿದೆ.

Tamil Rockerz Movie Hinted Behind Pawan Kalyan Film Attarintiki Daaredi Piracy

'ತಮಿಳು ರಾಕರ್ಸ್' ಟ್ರೈಲರ್‌ನಲ್ಲಿ ಬರುವ ಒಂದು ಡೈಲಾಗ್ ಪವನ್ ಕಲ್ಯಾಣ್ ಸಿನಿಮಾ ಬಗ್ಗೆನೇ ಮಾತಾಡುತ್ತಿದೆ ಎನ್ನುತ್ತಿದೆ. ಸಿನಿಮಾದ ಹೆಸರನ್ನು ನೇರವಾಗಿ ತೆಗೆದುಕೊಳ್ಳದೆ ಹೋದರೂ, ಒದು ಡೈಲಾಗ್ ಅತ್ತಾರಿಂಟಿಕಿ ದಾರೇದಿ ಬಗ್ಗೆ ಸುಳಿವು ನೀಡಿದೆ ಎನ್ನಲಾಗಿದೆ.

ಸಿನಿಪ್ರಿಯರಲ್ಲಿ ಕೂತೂಹಲ

ತಮಿಳು ರಾಕರ್ಸ್ ಸಿನಿಮಾದ ಟ್ರೈಲರ್ ರಿಲೀಸ್ ಆದಲ್ಲಿಂದ ಸಿನಿಮಾ ನೋಡುವುದಕ್ಕೆ ತೆಲುಗು ಮಂದಿ ಕಾದು ಕೂತಿದ್ದಾರೆ. ಪವನ್ ಕಲ್ಯಾಣ್ ಸಿನಿಮಾ ಲೀಕ್ ಆಗಿದ್ದು ಹೇಗೆ ಎಂಬುದನ್ನು ನೋಡಲು ಕಾದು ಕೂತಿದ್ದಾರೆ.

'ಅತ್ತಾರಿಂಟಿಕಿ ದಾರೇದಿ' ಸಿನಿಮಾ ಅಸಲಿಗೆ ಲೀಕ್ ಆಗಿದ್ದು ಹೇಗೆ? ಲೀಕ್ ಆಗುವ ಮುನ್ನ ಏನಾಯಿತು ಎಂದು ತಿಳಿದುಕೊಳ್ಳುವ ಕಾತುರದಲ್ಲಿ ತೆಲುಗು ಮಂದಿ ಇದ್ದಾರೆ. ಆದರೆ ಈ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗುವುದಿಲ್ಲ. ಬದಲಾಗಿದೆ ಸೋನಿ ಲೈವ್‌ನಲ್ಲಿ ಆಗಸ್ಟ್ 19ಕ್ಕೆ ರಿಲೀಸ್ ಆಗುತ್ತಿದೆ.

More from Filmibeat

English summary
Tamil Rockerz Movie Hinted Behind Pawan Kalyan Film Attarintiki Daaredi Piracy, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X