HanuMan OTT; ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ 'ಹನುಮಾನ್' ಓಟಿಟಿ ಬರೋದ್ಯಾಗ? ನೋಡುವುದು ಎಲ್ಲಿ?

'ಹನುಮಾನ್' ಸಿನಿಮಾ ನಿರೀಕ್ಷೆ ಮಾಡಿದ್ದಕ್ಕಿಂತಲೂ ಬಾಕ್ಸಾಫೀಸ್‌ನಲ್ಲಿ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ತೆಲುಗು ಭಾಷೆಯ ಸಿನಿಮಾ ಆಗಿದ್ದರೂ, ಮೂಲ ಭಾಷೆಯ ಜೊತೆಗೆ ಹಿಂದಿ ಬೆಲ್ಟ್‌ಗಳಲ್ಲೂ ಮೆಚ್ಚುಗೆ ಗಳಿಸಿತ್ತು. ಹಿಂದಿ ಆಡಿಯನ್ಸ್‌ 'ಹನುಮಾನ್' ಸೂಪರ್ ಹೀರೊ ಸಿನಿಮಾವನ್ನು ನೋಡಿ ಮೆಚ್ಚುಕೊಂಡಿದ್ದಾರೆ. ಹೀಗಾಗಿ ಓಟಿಟಿಯಲ್ಲೂ ಈ ಸಿನಿಮಾವನ್ನು ಮತ್ತೆ ಕಣ್ತುಂಬಿಕೊಳ್ಳುವುದಕ್ಕೆ ಕಾತುರರಾಗಿದ್ದಾರೆ.

ಈ ಸಿನಿಮಾದಲ್ಲಿ ತೆಲುಗಿನ ಯುವ ಪ್ರತಿಭೆ ತೇಜ ಸಜ್ಜಾ ಸೂಪರ್ ಹೀರೊ ಲುಕ್ ಕೊಟ್ಟಿದ್ದಾರೆ. ಇವರೊಂದಿಗೆ ಅಮೃತಾ ಅಯ್ಯರ್, ವರಲಕ್ಷ್ಮಿ ಶರತ್ ಕುಮಾರ್, ರಾಜ್ ದೀಪಕ್ ಶೆಟ್ಟಿ ಮತ್ತು ವಿನಯ್ ರೈ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸೂಪರ್ ಹೀರೋ ಥ್ರಿಲ್ಲಿಂಗ್ ಎಕ್ಸ್‌ಪೀರಿಯನ್ಸ್‌ಗೆ ಪ್ರೇಕ್ಷಕರು ಭೇಷ್ ಎಂದಿದ್ದರು. ವಿಶ್ವದಾದ್ಯಂತ ಕಲೆಕ್ಷನ್‌ನಲ್ಲೂ ಏರಿಕೆಯಾಗಿತ್ತು.

Teja Sajjas Movie HanuMan OTT Release Date: Know when and where to watch

ತೆಲುಗಿನ ಈ ಪ್ಯಾನ್ ಇಂಡಿಯಾ ಸಿನಿಮಾ 2024, ಜನವರಿ 12 ರಂದು ಸಂಕ್ರಾಂತಿ ಹಬ್ಬಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಅಲ್ಲಿಂದ ಇಲ್ಲಿವರೆಗೂ 'ಹನುಮಾನ್' ಸಿನಿಮಾ ಥಿಯೇಟರ್‌ನಲ್ಲಿ ತಕ್ಕ ಮಟ್ಟಿಗೆ ಉತ್ತಮ ಪ್ರದರ್ಶನ ಕಾಣುತ್ತಲೇ ಇದೆ. ಹೀಗಾಗಿ ಓಟಿಟಿಯಲ್ಲೂ ಯಾವಾಗ ರಿಲೀಸ್ ಆಗುತ್ತೆ ಅನ್ನೋ ಕಾಯುತ್ತಿದ್ದರು. ಅದಕ್ಕೀಗ ಉತ್ತರ ಸಿಕ್ಕಿದೆ. ಇದೂವರೆಗೂ ಈ ಸಿನಿಮಾ ನೋಡದವರು ಓಟಿಟಿಯಲ್ಲಿ 'ಹನುಮಾನ್' ನೋಡಬಹುದು.

ಹನುಮಾನ್ ಓಟಿಟಿ ಹಕ್ಕುಗಳು

'ಹನುಮಾನ್' ಥಿಯೇಟರ್‌ನಲ್ಲಿ ಸದ್ದು ಮಾಡುತ್ತಿದ್ದಂತೆ ನಿರ್ದೇಶಕ ಪ್ರಶಾಂತ್ ವರ್ಮಾ ಹಲವು ಭಾಷೆಗಳಲ್ಲಿ ಸಿನಿಮಾ ಡಬ್ ಮಾಡಿದ್ದರು. ತೆಲುಗು ಜೊತೆಗೆ ಕನ್ನಡ, ತಮಿಳು, ಮಲಯಾಳಂ, ಹಿಂದಿ, ಮರಾಠಿ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಇದರೊಂದಿಗೆ ವಿದೇಶಿ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ.

Teja Sajjas Movie HanuMan OTT Release Date: Know when and where to watch

ಇಂಗ್ಲಿಷ್, ಸ್ಪಾನಿಶ್, ಕೊರಿಯನ್, ಚೈನೀಸ್ ಹಾಗೂ ಜಪಾನಿಸ್ ಭಾಷೆಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ನಿರ್ಧರಿಸಿದೆ. ಸದ್ಯ ಭಾರತೀಯ ಭಾಷೆಗಳ ಓಟಿಟಿ ಹಕ್ಕನ್ನು ಜೀ 5 ಖರೀದಿ ಮಾಡಿದೆ. ಇನ್ನು ವಿದೇಶಿ ಭಾಷೆಯಲ್ಲಿ ಡಬ್ ಆದ ವರ್ಷನ್‌ ಯಾವ ವೇದಿಕೆಯಲ್ಲಿ ರಿಲೀಸ್ ಆಗುತ್ತೋ ಅನ್ನೋದನ್ನು ಎದುರು ನೋಡಬೇಕಿದೆ.

'ಹನುಮಾನ್' ಓಟಿಟಿ ರಿಲೀಸ್ ಯಾವಾಗ?

ಪ್ರಶಾಂತ್ ವರ್ಮಾ ಹಾಗೂ ತೇಜ ಸಜ್ಜಾ ಕಾಂಬಿನೇಷನ್ ವರ್ಕ್‌ಔಟ್ ಆಗಿದೆ. ಸೂಪರ್ ಹೀರೊ ಸಿನಿಮಾಗೆ ಈ ಮಟ್ಟಿಗೆ ರೆಸ್ಪಾನ್ಸ್ ಸಿಗುತ್ತೆ ಅನ್ನೋದು ಸ್ವತ: ಚಿತ್ರತಂಡಕ್ಕೆ ಗೊತ್ತಿರಲಿಲ್ಲ. ಹೀಗಾಗಿ ಅಂದ್ಕೊಂಡಿದ್ದಕ್ಕಿಂತ ತಡವಾಗಿಯೇ 'ಹನುಮಾನ್' ಓಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಮೂಲಗಳ ಪ್ರಕಾರ, ಮಾರ್ಚ್ 2ರಂದು ಜೀ 5ನಲ್ಲಿ ಹನುಮಾನ್ ರಿಲೀಸ್ ಆಗಲಿದೆ.

ಈ ಸಿನಿಮಾದಲ್ಲಿ ತೇಜ ಸಜ್ಜಾ ಹನುಮಂತು ಪಾತ್ರದಲ್ಲಿ ನಟಿಸಿ ಮನ ಗೆದ್ದಿದ್ದರು. ಮೀನಾಕ್ಷಿ ಪಾತ್ರದಲ್ಲಿ ಅಮೃತಾ ಅಯ್ಯರ್, ಅಂಜಮ್ಮ ಪಾತ್ರದಲ್ಲಿ ವರಲಕ್ಷ್ಮಿ ಶರತ್ ಕುಮಾರ್. ಮೈಕಲ್ ಪಾತ್ರದಲ್ಲಿ ವಿನಯ್ ರೈ ನಟಿಸಿದ್ದರು. ಹಾಗೇ ಅನುದೀಪ್ ದೇವ್, ಹರಿ ಗೌರ್ರ, ಕೃಷ್ಣ ಸೌರಭ್ ಸಂಗೀತ ನೀಡಿದ್ದು, ಸಿನಿ ಮಂದಿಗೆ ಸಂಕ್ರಾಂತಿ ಮನರಂಜನೆ ನೀಡಿದ್ದರು.

More from Filmibeat

English summary
HanuMan OTT Release Date.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X