ಚಿತ್ರಮಂದಿರ 100% ಓಪನ್ ಇದ್ದರೂ OTT ಮೊರೆ ಹೋದ ತೆಲುಗು ದೃಶ್ಯಂ 2

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ ಚಿತ್ರ ದೃಶ್ಯಂ. ಮೋಹನ್ ಲಾಲ್, ಮೀನಾ ನಟಿಸಿ, ಜೀತು ಜೋಸೆಫ್ ನಿರ್ದೇಶಿಸಿದ್ದ ಸಿನಿಮಾ ಹೊಸ ಟ್ರೆಂಡ್ ಅನ್ನೇ ಹುಟ್ಟಾಕಿತ್ತು. 2013ರಲ್ಲಿ ತೆರೆಕಂಡ ಮಲಯಾಳಂ ಸಿನಿಮಾ ದೃಶ್ಯಂಗೆ ಸಿಕ್ಕ ಯಶಸ್ಸು ಕಂಡು ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿಗೆ ರಿಮೇಕ್‌ ಆಗಿತ್ತು. ಈ ಯಶಸ್ಸಿನ ಬೆನ್ನಲ್ಲೇ ದೃಶ್ಯಂ 2 ಕೂಡ ನಿರ್ಮಾಣಗೊಂಡಿತ್ತು. ಆದರೆ, ಕೊರೊನಾ ಎರಡನೇ ಅಲೆಯಿಂದಾಗಿ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾಗದೆ ನೇರವಾಗಿ ಒಟಿಟಿಯಲ್ಲಿ ತೆರೆಕಂಡಿತ್ತು. ಈಗ ಅದೇ ಹಾದಿಯನ್ನು ತೆಲುಗಿನ ದೃಶ್ಯಂ 2 ಚಿತ್ರತಂಡ ಕೂಡ ಹಿಡಿದಿದೆ.

ಕೊರೊನಾ ಎರಡನೇ ಅಲೆ ಹೆಚ್ಚಾಗಿದ್ದರಿಂದ ಮೋಹನ್‌ಲಾಲ್‌ 'ದೃಶ್ಯಂ-2' ಸಿನಿಮಾ ಒಟಿಟಿಯಲ್ಲಿ ಪ್ರದರ್ಶನಗೊಂಡು ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಅಮೆಜಾನ್ ಪ್ರೈಮ್‌ನಲ್ಲಿ ಈ ಸಿನಿಮಾ ನೋಡಿ ಪ್ರೇಕ್ಷಕರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೇ ಯಶಸ್ಸಿನ ಪ್ರೇರಣೆಯಿಂದ ಟಾಲಿವುಡ್‌ನಲ್ಲೂ ದೃಶ್ಯಂ 2 ಶೂಟಿಂಗ್ ಆರಂಭಿಸಿ ಚಿತ್ರೀಕರಣವನ್ನೂ ಮುಗಿಸಿದೆ. ಆದರೆ, ವಿಕ್ಟರಿ ವೆಂಕಟೇಶ್ ಅಭಿನಯದ ಈ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗುವ ಬದಲು ಒಟಿಟಿಯಲ್ಲಿ ರಿಲೀಸ್ ಆಗಲಿದೆ. ತೆಲುಗಿನ ದೃಶ್ಯಂ 2 ಬಿಡುಗಡೆಗೆ ಮುಹೂರ್ತ ಕೂಡ ಫಿಕ್ಸ್ ಆಗಿದೆ.

ಅಮೆಜಾನ್ ಪ್ರೈಮ್‌ನಲ್ಲಿ ರಿಲೀಸ್ ಆಗಲಿದೆ ತೆಲುಗು ದೃಶ್ಯಂ 2

ಎರಡನೇ ಅಲೆ ಆರಂಭಕ್ಕೂ ಮುನ್ನವೇ ವಿಕ್ಕರಿ ವೆಂಕಟೇಶ್ ನಟನೆಯ ತೆಲುಗು ದೃಶ್ಯಂ 2 ಚಿತ್ರೀಕರಣ ಮುಗಿದಿತ್ತು. ಪೋಸ್ಟ್‌ಪ್ರೊಡಕ್ಷನ್ ತಯಾರಿಯಲ್ಲಿ ಚಿತ್ರತಂಡ ಬ್ಯುಸಿಯಾಗಿತ್ತು. ವಿಶೇಷ ಅಂದ್ರೆ, ಮಲಯಾಳಂ ದೃಶ್ಯಂ 2 ನಿರ್ದೇಶಿಸಿದ್ದ ಜೀತು ಜೋಸೆಫ್ ತೆಲುಗು ಚಾಪ್ಟರ್‌ಗೂ ಆಕ್ಷನ್ ಕಟ್ ಹೇಳಿದ್ದರು. ಹೀಗಾಗಿ ತೆಲುಗು ಪ್ರೇಕ್ಷಕರಲ್ಲಿ ಈ ಸಿನಿಮಾ ಸಾಕಷ್ಟು ಕುತೂಹಲ ಕೆರಳಿಸಿತ್ತು. ಅಷ್ಟರಲ್ಲೇ 2ನೇ ಅಲೆ ತಾರಕ್ಕೇರಿದ್ದರಿಂದ ಥಿಯೇಟರ್‌ಗಳನ್ನು ಮತ್ತೆ ಮುಚ್ಚಬೇಕಾದ ಅನಿವಾರ್ಯತೆ ಎದುರಾಗಿತ್ತು. ಸಿನಿಮಾದ ಸಂಪೂರ್ಣ ಮುಗಿದು ಬಿಡುಗಡೆಗೆ ಸಿದ್ಧವಾಗಿದೆ ಅನ್ನುವಾಗ ಚಿತ್ರಮಂದಿರದಲ್ಲಿ ಶೇ. 100ರಷ್ಟು ಸೀಟು ಭರ್ತಿಗೆ ಅವಕಾಶ ಸಿಕ್ಕಿದೆ. ಹೀಗಿದ್ದರೂ ತೆಲುಗು ದೃಶ್ಯಂ ಒಟಿಟಿಯಲ್ಲೇ ಬಿಡುಗಡೆಯಾಗುವುದಕ್ಕೆ ಮುಂದಾಗಿದೆ.

Telugu Actor Venkatesh Starrer, Jeethu Joseph Directed Drushyam 2 will not be released in Theaters

ತೆಲುಗು ದೃಶ್ಯಂ ಒಟಿಟಿ ರಿಲೀಸ್ ಯಾವಾಗ?

ತೆಲುಗು ದೃಶ್ಯಂ 2 ಚಿತ್ರದ ಟೀಸರ್ ಈಗಾಗಲೇ ರಿಲೀಸ್ ಆಗಿದೆ. ಜೀತು ಜೋಸೆಫ್ ನಿರ್ದೇಶನದಲ್ಲಿ ರೆಡಿಯಾಗಿರುವ ದೃಶ್ಯಂ 2 ಇದೇ ನವೆಂಬರ್ 25ರಂದು ಅಮೆಜಾನ್ ಪ್ರೈಮ್‌ನಲ್ಲಿ ಗ್ರ್ಯಾಂಡ್ ಆಗಿ ಪ್ರೀಮಿಯರ್ ಆಗಲಿದೆ. ಈ ವಿಷಯ ಹೊರಬೀಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ತೆಲುಗು ದೃಶ್ಯಂ 2 ಟ್ರೆಂಡಿಂಗ್‌ನಲ್ಲಿದೆ.

ಕೈಯಲ್ಲಿ ಥಿಯೇಟರ್‌ಗಳಿದ್ದರೂ OTT ರಿಲೀಸ್ ಯಾಕೆ?

ಆಂಧ್ರ ಹಾಗೂ ತೆಲಂಗಾಣದಲ್ಲಿ ದಗ್ಗುಬಾಟಿ ಕುಟುಂಬದ ಕೈಯಲ್ಲಿ ಸಾಕಷ್ಟು ಚಿತ್ರಮಂದಿರಗಳಿವೆ. ವೆಂಕಟೇಶ್ ಸಹೋದರ ಸುರೇಶ್ ಬಾಬು ಮನಸ್ಸು ಮಾಡಿದ್ದರೆ ದೃಶ್ಯಂ 2 ಸಿನಿಮಾವನ್ನು 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಆರಾಮಾಗಿ ಬಿಡುಗಡೆ ಮಾಡಬಹುದಿತ್ತು. ಆದರೆ, ಒಟಿಟಿ ಮೊರೆ ಹೋಗಿದ್ದು, ಚಿತ್ರಮಂದಿರದ ಮಾಲೀಕರಿಗೆ ಬೇಸರ ತರಿಸಿದೆ. ಆದರೆ, ಒಟಿಟಿ ಮೊರೆ ಹೋಗಲು ಬಲವಾದ ಕಾರಣವಿದೆ. ಅದೇನಂದರೆ, ದೃಶ್ಯಂ 2 ಮಲಯಾಳಂನಲ್ಲಿ ಈಗಾಗಲೇ ಬಿಡುಗಡೆಯಾಗಿ ಯಶಸ್ಸು ಕಂಡಿದೆ. ಅದು ಒಟಿಟಿಯಲ್ಲಿ ತೆರೆಕಂಡಿದ್ದರಿಂದ ಭಾಷೆ ಅರ್ಥ ಆಗದೇ ಇದ್ದರೂ ಬಹುತೇಕ ಮಂದಿ ಲಾಕ್‌ಡೌನ್‌ ವೇಳೆ ವೀಕ್ಷಿಸಿದ್ದಾರೆ. ಅಲ್ಲದೆ ತೆಲುಗು ದೃಶ್ಯಂ 2 ಕೂಡ ಒಟಿಟಿಯಿಂದ ದೊಡ್ಡ ಮೊತ್ತಕ್ಕೆ ಖರೀದಿಸಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ದೃಶ್ಯಂ 2 ಒಟಿಟಿಯಲ್ಲೇ ನವೆಂಬರ್ 25ರಿಂದ ತೆರೆಕಾಣಲಿದೆ.

Telugu Actor Venkatesh Starrer, Jeethu Joseph Directed Drushyam 2 will not be released in Theaters

ಕನ್ನಡದ ದೃಶ್ಯ 2 ಚಿತ್ರಮಂದಿರದಲ್ಲೇ ರಿಲೀಸ್

ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿರುವ ದೃಶ್ಯ 2 ಚಿತ್ರೀಕರಣ ಕೂಡ ಮುಗಿದೆ. ಕನ್ನಡದ ದೃಶ್ಯ 2 ಚಿತ್ರ ಒಟಿಟಿಯಲ್ಲಿ ಬಿಡುಗಡೆ ಮಾಡುವುದಿಲ್ಲವೆಂದು ರವಿಚಂದ್ರನ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೆ, ಯಾವಾಗ ಬಿಡುಗಡೆ ಅನ್ನುವುದನ್ನು ಇನ್ನೂ ತಿಳಿಸಿಲ್ಲ. ಹೀಗಾಗಿ ಕನ್ನಡಿಗರು ಈ ಸಸ್ಪೆನ್ಸ್ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

More from Filmibeat

English summary
Telugu actor venkatesh starrer, jeethu joseph directed drushyam 2 will not be released in theaters. But it will release on Amazon Prime on november 25th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X