'ಗರುಡ ಗಮನ ವೃಷಭ ವಾಹನ' ಆಸ್ಕರ್ ಪ್ರಶಸ್ತಿ ಗೆಲ್ಲಬೇಕಿರುವ ಸಿನಿಮಾ ಎಂದ ತೆಲುಗು ನಿರ್ದೇಶಕ
2021ರಲ್ಲಿ ತೆರೆಕಂಡ ಕನ್ನಡದ ಅತ್ಯುತ್ತಮ ಸಿನಿಮಾ 'ಗರುಡ ಗಮನ ವೃಷಭ ವಾಹನ' ಎಂಬುದು ಹಲವರ ವಾದ. ಈ ಸಿನಿಮಾ ನೋಡಿದ ಬಹುತೇಕ ಮಂದಿ ಹೊಗಳಿ ಕೊಂಡಾಡಿದ್ದಾರೆ. ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಕಾಂಬಿನೇಷನ್‌ಗೆ ಜೈ ಅಂದಿದ್ದಾರೆ. ಪರ ಭಾಷೆಯ ನಿರ್ದೇಶಕರೆಲ್ಲರೂ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಕನ್ನಡ ಚಿತ್ರವನ್ನು ಹಾಡಿ ಹೊಗಳಿಸಿದ್ದಾರೆ.
Recommended Video
ಕಳೆದ ವರ್ಷ ನವೆಂಬರ್ 19 ರಂದು 'ಗರುಡ ಗಮನ ವೃಷಭ ವಾಹನ' ಥಿಯೇಟರ್‌ಗೆ ಲಗ್ಗೆ ಇಟ್ಟಿತ್ತು. ಒಂದಿಷ್ಟು ಮಂದಿ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು, ಮತ್ತೆ ಕೆಲವರು ಸಿನಿಮಾ ಬಗ್ಗೆ ಟೀಕೆ ಮಾಡಿದ್ದರು. ಟೀಕೆ ಟಿಪ್ಪಣಿಗಳು ಏನೇ ಇದ್ದರೂ ಗರುಡ ಗಮನ ನೋಡಿದ ಬಹುತೇಕ ಮಂದಿ ಮೆಚ್ಚುಗೆ ಸೂಚಿಸಿದ್ದರು. ಈಗ ತೆಲುಗು ಹಾಗೂ ಬಾಲಿವುಡ್ ಸಿನಿಮಾಗಳನ್ನು ನಿರ್ದೇಶಿಸಿರುವ ದೇವ ಕಟ್ಟ ಕನ್ನಡ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ.

ತೆಲುಗು ನಿರ್ದೇಶಕ ಮೆಚ್ಚಿದ 'ಗರುಡ ಗಮನ'
ರಾಜ್ ಬಿ ಶೆಟ್ಟಿ ನಿರ್ದೇಶಕ ಸಿನಿಮಾವನ್ನು ತೆಲುಗಿನ ನಿರ್ದೇಶಕ ದೇವ ಕಟ್ಟ ಮನಸಾರೆ ಹೊಗಳಿದ್ದಾರೆ. ಅದರಲ್ಲೂ ರಾಜ್ ಬಿ ಶೆಟ್ಟಿ ನಿರ್ದೇಶನ ಟಾಲಿವುಡ್ ನಿರ್ದೇಶಕನಿಗೆ ಸಿಕ್ಕಾಪಟ್ಟೆ ಕಿಕ್ ಕೊಟ್ಟಿದೆ. ಹೀಗಾಗಿ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, "ಒಂದು ಮೊಟ್ಟೆಯ ಕಥೆ' ಯಂತಹ ಹಾಸ್ಯ ಪ್ರಧಾನ ಸಿನಿಮಾ ಮಾಡಿದ್ದ ರಾಜ್ ಬಿ. ಶೆಟ್ಟಿ ಇಂತಹ ಗ್ಯಾಂಗ್‌ಸ್ಟರ್ ಚಿತ್ರವನ್ನು ನಿರ್ದೇಶನ ಮಾಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅವರ ಶಿವನ ಪಾತ್ರ ಸಿಕ್ಕಾಪಟ್ಟೆ ರಗಡ್ ಆಗಿದೆ. ರಾಜ್ ಬಿ. ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಜೋಡಿ ನೋಡುಗರಿಗೆ ಇಷ್ಟವಾಗುತ್ತಾರೆ." ಎಂದು ಟಾಲಿವುಡ್ ನಿರ್ದೇಶಕ ದೇವ ಕಟ್ಟ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪವರ್ ಇದ್ದಿದ್ರೆ ಆಸ್ಕರ್‌ಗೆ ಆಯ್ಕೆ ಮಾಡುತ್ತಿದ್ದೆ
ತೆಲುಗು ನಿರ್ದೇಶಕ ದೇವ ಕಟ್ಟ ಸ್ನೇಹಿತರ ಜೊತೆ ಕೂತು ಸಿನಿಮಾ ನೋಡಿದ್ದರು. ಆದರೆ ಇನ್ನೊಮ್ಮೆ ನೋಡಬೇಕು ಎನ್ನುವಷ್ಟರಲ್ಲಿ ಸಿನಿಮಾ ಥಿಯೇಟರ್‌ನಿಂದ ಗಾಯಬ್ ಆಗಿತ್ತು. ಹೀಗಾಗಿ ಮತ್ತೊಮ್ಮೆ ನೋಡಲು ಸಾಧ್ಯವಾಗಿಲ್ಲ. ನನಗೆ ಪವರ್ ಇದ್ದಿದ್ದರೆ ಆಸ್ಕರ್‌ಗೆ ಆಯ್ಕೆ ಮಾಡುತ್ತಿದ್ದೆ ಎಂದಿದ್ದಾರೆ. "2021ರಲ್ಲಿ ತೆರೆಕಂಡ ಭಾರತೀಯ ಸಿನಿಮಾಗಳ ಪೈಕಿ ಅತ್ಯುತ್ತಮ ಚಲನಚಿತ್ರ 'ಗರುಡ ಗಮನ ವೃಷಭ ವಾಹನ'. ನನಗೆ ಪವರ್ ಇದ್ದಿದ್ದರೆ ಆಸ್ಕರ್‌ಗೆ ಈ ಸಿನಿಮಾವನ್ನು ಆಯ್ಕೆ ಮಾಡುತ್ತಿದ್ದೆ. 'ಗರುಡ ಗಮನ ವೃಷಭ ವಾಹನ' ಚಿತ್ರವನ್ನು ನನ್ನ ಗೆಳಯರೊಂದಿಗೆ ನೋಡಿದ್ದೆ. ಸಿನಿಮಾ ಚಿತ್ರೀಕರಿಸಿದ ರೀತಿ ಅದ್ಭುತವಾಗಿದೆ. ಸಿನಿಮಾ ಸಿಕ್ಕಾಪಟ್ಟೆ ಇಷ್ಟ ಆಗಿದ್ದರಿಂದ ಥಿಯೇಟರ್‌ಗೆ ಮತ್ತೆ ಹೋಗಿ ನೋಡಿದಾಗ ಇರಲಿಲ್ಲ. ಈ ಕಾರಣಕ್ಕೆ ಬೇಸರ ಆಗಿತ್ತು." ಎಂದು ದೇವ ಕಟ್ಟ ಹೇಳಿದ್ದಾರೆ.

ದೇವ ಕಟ್ಟ ನಿರ್ದೇಶಿಸಿದ ಸಿನಿಮಾಗಳ್ಯಾವುವು?
ದೇವ ಕಟ್ಟ ತೆಲುಗಿನಲ್ಲಿ ಸಾಕಷ್ಟು ಉತ್ತಮ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇವರು ನಿರ್ದೇಶಿಸಿದ 'ಪ್ರಸ್ಥಾನಂ' ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಸಮಂತಾ, ನಾಗಚೈತನ್ಯ ನಟಿಸಿದ 'ಆಟೋನಗರ್ ಸೂರ್ಯ', ಇತ್ತೀಚೆಗೆ ಸಾಯಿ ಧರಂ ತೇಜಾ ನಟಿಸಿದ 'ರಿಪಬ್ಲಿಕ್' ಸಿನಿಮಾವನ್ನು ನಿರ್ದೇಶಿಸಿದ್ದಾರೆ. 'ಬಾಹುಬಲಿ ಬಿ ಫೋರ್ ದಿ ಬಿಗಿನಿಂಗ್' ವೆಬ್ ಸಿರೀಸ್ ನಿರ್ದೇಶಕರು ಕೂಡ ಇವರೇ.

ಸಂಕ್ರಾಂತಿಗಾಗಿ ಜೀ 5ನಲ್ಲಿ ರಿಲೀಸ್
'ಗರುಡ ಗಮನ ವೃಷಭ ವಾಹನ' ಬಿಡುಗಡೆಯಾದ ಹೊಸ್ತಿಲಲ್ಲೇ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರಿಗೂ ತೋರಿಸಲಾಗಿತ್ತು. ಈ ಸಿನಿಮಾ ನೋಡಿ ಅನುರಾಗ್ ಕಶ್ಯಪ್ ಹೊಗಳಿಕೊಂಡಾಡಿದ್ದರು. ಈಗ ಅದೇ ಸಿನಿಮಾ ಜೀ 5ನಲ್ಲಿ ಬಿಡುಗಡೆಯಾಗಿದೆ. ಜನವರಿ 13ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಓಟಿಟಿ ವೀಕ್ಷಕರಿಗಾಗಿ ಸಿನಿಮಾವನ್ನು ರಿಲೀಸ್ ಮಾಡಲಾಗಿದೆ. ಥಿಯೇಟರ್‌ನಲ್ಲಿ ಸದ್ದು ಮಾಡಿದ ಸಿನಿಮಾಗೆ ಓಟಿಟಿಯಲ್ಲಿ ಪ್ರತಿಕ್ರಿಯೆ ಹೇಗೆ ಸಿಗುತ್ತೆ ಅನ್ನುವುದು ಕುತೂಹಲ ಕೆರಳಿಸಿದೆ.


Click it and Unblock the Notifications











