The 50 Reality Show: ಬರ್ತಿದೆ 'ಬಿಗ್ ಬಾಸ್' ಅನ್ನೂ ಮೀರಿಸುವ ರಿಯಾಲಿಟಿ ಶೋ; 'ದಿ 50' ಶೋನ ಹೈಲೈಟ್ ಏನು?
ಭಾರತದ ಟಿವಿ ಇತಿಹಾಸದಲ್ಲಿ ಅತ್ಯಂತ ದುಬಾರಿ ಹಾಗೂ ಜನಪ್ರಿಯ ಶೋ 'ಬಿಗ್ ಬಾಸ್'. ಭಾರತದ ಪ್ರಮುಖ ಭಾಷೆಗಳಲ್ಲಿ ಈ ಶೋನ ಜನಪ್ರಿಯತೆ ಉತ್ತುಂಗದಲ್ಲಿದೆ. ಇತ್ತೀಚೆಗಷ್ಟೇ ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಅದ್ದೂರಿಯಾಗಿ ತೆರೆ ಎಳೆಯಲಾಗಿದೆ. ಕಳೆದ 11 ಸೀಸನ್‌ಗೆ ಹೋಲಿಸಿದರೆ, 12ನೇ ಸೀಸನ್ ಇದೂವರೆಗೂ ಅತೀ ಯಶಸ್ಸು ಕಂಡ ರಿಯಾಲಿಟಿ ಶೋ ಎನಿಸಿಕೊಂಡಿದೆ.
ಹಿಂದಿ ಭಾಷೆಯಲ್ಲಿ ಬಿಗ್ ಬಾಸ್ ಭಾರತದಲ್ಲಿ ಮೊದಲು ಆರಂಭ ಆಗಿತ್ತು. ಅಲ್ಲಿಂದ ಇಲ್ಲಿವರೆಗೂ ಸುಮಾರು 19 ಸೀಸನ್‌ಗಳು ನಡೆದಿವೆ. ಪ್ರತಿ ಸೀಸನ್‌ನಲ್ಲೂ ಟಿಆರ್‌ಪಿಗಳು ಏರಿಕೆಯಾಗುತ್ತಲೇ ಇದೆ. ಹಾಗಿದ್ದರೆ, ಬಿಗ್ ಬಾಸ್ ಅನ್ನೂ ಮೀರಿಸುವ ರಿಯಾಲಿಟಿ ಶೋ ಬರೋದಿಲ್ವಾ? ಅದಕ್ಕಿಂತಲೂ ದೊಡ್ಡ ಶೋ ಸಾಧ್ಯನೇ ಇಲ್ಲವೇ? ಇಂತಹ ಪ್ರಶ್ನೆಗಳು ಕಿರುತೆರೆ ವೀಕ್ಷಕರನ್ನು ಕಾಡುತ್ತಲೇ ಇತ್ತು.

ಹಲವು ವರ್ಷಗಳ ಬಳಿಕ ಬಿಗ್ ಬಾಸ್ ಅನ್ನೂ ಮೀರಿಸುವಂತಹ ರಿಯಾಲಿಟಿ ಶೋ ರೆಡಿಯಾಗಿದೆ. ಅದುವೇ 'ದಿ 50'. ಇದು ಭಾರತೀಯ ರಿಯಾಲಿಟಿ ಶೋ ಇತಿಹಾಸದಲ್ಲಿ ಅತೀ ದುಬಾರಿ ಶೋ ಎಂದು ಹೇಳಲಾಗುತ್ತಿದೆ. ಅಂದ್ಹಾಗೆ ಇದು ಕೇವಲ ಅತೀ ದೊಡ್ಡ ರಿಯಾಲಿಟಿ ಶೋ ಅಷ್ಟೇ ಅಲ್ಲ. ಬೋಲ್ಡ್ ರಿಯಾಲಿಟಿ ಶೋ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ 'ದಿ 50' ಶೋನ ಹೈಲೈಟ್ಸ್ ಏನು? ಎಷ್ಟು ಜನ ಸ್ಪರ್ಧಿಗಳು ಭಾಗವಹಿಸುತ್ತಾರೆ? ಎಲ್ಲಿ ನಡೆಯುತ್ತೆ? ಯಾವಾಗ ಪ್ರಸಾರ ಆಗುತ್ತೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
'ದಿ 50' ವಿಭಿನ್ನ ಶೋ
ಭಾರತದ ರಿಯಾಲಿಟಿ ಶೋ ಇತಿಹಾಸದಲ್ಲಿಯೇ 'ದಿ 50' ಅತೀ ದುಬಾರಿ ಶೋ ಎಂದು ವರದಿಯಾಗಿದೆ. ಹಿಂದೆಂದೂ ಇರದ ಫಾರ್ಮೆಟ್‌ನಲ್ಲಿ ಈ ಶೋ ಇರುತ್ತೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ಶೋ ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಂದ್ಹಾಗೆ ಈ ಶೋಗಲ್ಲಿ ಸುಮಾರು 50 ಮಂದಿ ಸ್ಪರ್ಧಿಗಳು ಒಂದೇ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಎಲ್ಲಾ ಸ್ಪರ್ಧಿಗಳು ಬೋಲ್ಡ್ ಆಗಿ ಆಟ ಆಡುತ್ತಾರೆಂದು ಹೇಳಲಾಗುತ್ತಿದೆ.
ಬಿಗ್ ಬಾಸ್ ಶೋ ಸಂಸ್ಥೆಯಿಂದಲೇ ನಿರ್ಮಾಣ
'ದಿ 50' ಹೆಸರೇ ಹೇಳುವಂತೆ ವಿಭಿನ್ನ ಮನಸ್ಥಿತಿ ಹಾಗೂ ವಿವಾದಗಳಿಂದ ಫೇಮಸ್ ಆಗಿರುವ 50 ಸ್ಪರ್ಧಿಗಳು ಈ ಶೋನಲ್ಲಿ ಭಾಗವಹಿಸಲಿದ್ದಾರೆ. ಈ ಶೋ ಅನ್ನು ಬಿಗ್ ಬಾಸ್ ನಿರ್ಮಾಣ ಮಾಡುತ್ತಿರುವ ಬನಿಜಯ್ ಏಷ್ಯಾ ಸಂಸ್ಥೆಯೇ ನಿರ್ಮಾಣ ಮಾಡುತ್ತಿದೆ. ಮುಂಬೈನ 'ಮಧ್ ಐಲ್ಯಾಂಡ್'ನಲ್ಲಿ 'ಮಹಲ್' ಪರಿಕಲ್ಪನೆಯಲ್ಲಿ ಬೃಹತ್ ಸೆಟ್ ಅನ್ನು ನಿರ್ಮಾಣ ಮಾಡಲಾಗಿದೆ. ಫಿಲ್ಮಿಬೀಟ್ ಈ ಸೆಟ್ಟಿಗೆ ಭೇಟಿ ಕೊಟ್ಟಿದ್ದು, ಸುಂದರ ಸೆಟ್ ಅನ್ನು ಸೆರೆ ಹಿಡಿದಿದೆ.

ಎಲ್ಲಿ? ಯಾವಾಗ? ಪ್ರಸಾರ
ಬಿಗ್ ಬಾಸ್ ಶೋ ಅನ್ನು ಜಿಯೋಸ್ಟಾರ್ ಅಡಿಯಲ್ಲಿ ಕಲರ್ಸ್ ಕನ್ನಡ ಹಾಗೂ ಸ್ಟಾರ್ ಪ್ರಸಾರ ಮಾಡುತ್ತಿದೆ. ಇನ್ನು ಓಟಿಟಿ ವೇದಿಕೆ ಜಿಯೋಹಾಟ್‌ಸ್ಟಾರ್ ಪ್ರಸಾರ ಮಾಡಿತ್ತು. 'ದಿ 50' ಬಿಗ್ಗೆಸ್ಟ್ ರಿಯಾಲಿಟಿ ಶೋ ಅನ್ನು ಕಲರ್ಸ್ ಕನ್ನಡ ಹಾಗೂ ಜಿಯೋಹಾಟ್‌ಸ್ಟಾರ್ ಪ್ರಸಾರ ಮಾಡಲಿದೆ. ಫೆಬ್ರವರಿ 1 ರಿಂದ 'ದಿ 50' ರಿಯಾಲಿಟಿ ಶೋ ಪ್ರಸಾರ ಆಗುತ್ತಿದೆ. ಬಾಲಿವುಡ್ ನಿರ್ದೇಶಕಿ ಫರ್ಹಾ ಖಾನ್ ಈ ಶೋ ಅನ್ನು ನಿರೂಪಣೆ ಮಾಡಲಾಗಿದ್ದಾರೆ.
'ದಿ 50' ಶೋ ಹೈಲೈಟ್ ಏನು?
'ದಿ 50' ಶೋ ಸೋಶಿಯಲ್ ಮೀಡಿಯಾ, ಸಿನಿಮಾ, ಕಿರುತೆರೆ ಹಾಗೂ ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದ 50 ಮಂದಿಯನ್ನು ಒಂದೇ ಸೂರಿನಲ್ಲಿ ಕೂಡಿ ಹಾಕಲಿದ್ದಾರೆ. ಈ ಶೋನಲ್ಲಿ ನಿರಂತರವಾಗಿ ಟ್ವಿಸ್ಟ್‌ಗಳು, ಸವಾಲುಗಳು, ಪವರ್ ಶಿಫ್ಟ್ ಆಗುತ್ತಲೇ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಶೋನಲ್ಲಿ ವೀಕ್ಷಕರ ವೋಟಿಂಗ್ ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸಲಿದೆ. ಈ ಮೆಗಾ ರಿಯಾಲಿಟಿ ಶೋ ಗೆಲ್ಲುವವರಿಗೂ ಅಷ್ಟೇ ಅಷ್ಟೇ ದೊಡ್ಡ ಮೊತ್ತದ ಬಹುಮಾನ ಕೂಡ ಸಿಗಲಿದೆ. ಸದ್ಯಕ್ಕೆ ಆ ಅಮೌಂಟ್ ಎಷ್ಟು? ಅನ್ನೋದು ಇನ್ನೂ ರಿವೀಲ್ ಆಗಿಲ್ಲ. ಉರ್ಫಿ ಜಾವೇದ್, ನಿಕ್ಕಿ ತಂಬೋಲಿ, ಕರಣ್ ಪಟೇಲ್, ರಿದ್ಧಿ ದೋಗ್ರ, ಊರ್ವಶಿ ಧೋಲಾಕಿಯಾ ಅಂತಹವರು ಈ ಶೋನಲ್ಲಿ ಭಾಗವಹಿಸಲಿದ್ದಾರೆಂಬ ಸುದ್ದಿ ಕೇಳಿ ಬರುತ್ತಿದೆ.


Click it and Unblock the Notifications











