IMDb Indian Series List: 2025ರ ಭಾರತದ ವೆಬ್ ಸೀರಿಸ್‌ಗಳ ಪಟ್ಟಿಯಲ್ಲಿ ಟಾಪ್ ನಂ 1 ಯಾವುದು?
ಸಿನಿಮಾ, ಟಿವಿ ಹಾಗೂ ವೆಬ್ ಸೀರಿಸ್‌ಗಳ ಬಗ್ಗೆ ಮಾಹಿತಿ ನೀಡುವ ಜನಪ್ರಿಯ ತಾಣ IMDb ಪ್ರತಿ ವರ್ಷದಂತೆ 2025ರ ಟಾಪ್ 10 ವೆಬ್ ಸೀರಿಸ್‌ಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಭಾರತದಲ್ಲಿ ಈ ವರ್ಷ ಜನವರಿ 1 ರಿಂದ ನವೆಂಬರ್ 30ರ ವರೆಗೂ ಸದ್ದು ಮಾಡಿದ ವೆಬ್ ಸೀರಿಸ್‌ಗಳನ್ನು ಪಟ್ಟಿಯನ್ನು ರಿಲೀಸ್ ಮಾಡಿದೆ.
IMDbಯ ವೀಕ್ಷಕರು ಭಾರತದ ಯಾವ ವೆಬ್ ಸೀರಿಸ್‌ಗೆ 6 ಅಥವಾ ಅದಕ್ಕಿಂತ ಹೆಚ್ಚು ರೇಟಿಂಗ್ ಕೊಟ್ಟಿದ್ದಾರೋ ಅಂತಹವುಗಳನ್ನು ಗಣನೆಗೆ ತೆಗೆದುಕೊಂಡು ಟಾಪ್ 10 ಪಟ್ಟಿಯನ್ನು ಸಿದ್ಧಪಡಿಸಿದೆ.
ವಿಶ್ವಾದ್ಯಂತದ IMDbಗೆ ಸುಮಾರು 250 ಮಿಲಿಯನ್‌ಗೂ ಅಧಿಕ ಮಂದಿ ಒಂದು ತಿಂಗಳಿಗೆ ಭೇಟಿ ನೀಡುತ್ತಾರೆ. ಇದನ್ನು ಗಮನದಲ್ಲಿ ಇಟ್ಟುಕೊಂಡು IMDb ಟಾಪ್ 10 ಪಟ್ಟಿಯನ್ನು ಸಿದ್ಧಪಡಿಸಿದೆ. ಆ ಪಟ್ಟಿಯಲ್ಲಿ ಜನಪ್ರಿಯ ವೆಬ್ ಸೀರಿಸ್‌ಗಳು ಇವೆ. ಅವುಗಳ ಪಟ್ಟಿ ಹೀಗಿವೆ.

ಭಾರತದಲ್ಲಿ ಓಟಿಟಿಗಳ ಪ್ರಾಬಲ್ಯ ಹೆಚ್ಚಾಗುತ್ತಿದ್ದಂತೆ ಸಿನಿಮಾ ಮಂದಿ ವೆಬ್ ಸೀರಿಸ್ ಕಡೆಗೆ ವಾಲಿದ್ದರು. ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್‌ಗಳು ವೆಬ್ ಸೀರಿಸ್‌ನಲ್ಲಿ ನಟಿಸುವುದರ ಕಡೆಗೆ ಗಮನ ಹರಿಸಿದ್ದರು. ಅದರಂತೆ, ಕಳೆದ ಐದಾರು ವರ್ಷಗಳಿಂದ ವೆಬ್ ಸೀರಿಸ್‌ಗಳಿಗೆ ಕ್ರೇಜ್ ಹೆಚ್ಚಾಗಿದೆ. ಓಟಿಟಿ ವೇದಿಕೆಗಳು ಕಾಂಪಿಟೇಷನ್‌ಗೆ ಬಿದ್ದು, ವೆಬ್ ಸೀರಿಸ್‌ಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದಕ್ಕೆ ವೀಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
2025ರಲ್ಲಿ ನೂರಾರು ವೆಬ್ ಸೀರಿಸ್‌ಗಳು ನಿರ್ಮಾಣ ಆಗಿವೆ. ಹಿಂದಿ ಭಾಷೆಯನ್ನು ಬಿಟ್ಟು ಇತ್ತೀಚೆಗೆ ಪ್ರಾದೇಶಿಕ ಭಾಷೆಗಳಲ್ಲೂ ವೆಬ್ ಸೀರಿಸ್‌ಗಳ ನಿರ್ಮಾಣ ಆಗುತ್ತಿವೆ. ಆದರೆ, ಈ ವರ್ಷ ಕೂಡ ಹಿಂದಿ ಭಾಷೆಯ ವೆಬ್ ಸೀರಿಸ್ ಮೇಲುಗೈ ಸಾಧಿಸಿವೆ. ದಕ್ಷಿಣ ಭಾರತದ ವೆಬ್ ಸರಣಿಗಳು IMDbಯ ಟಾಪ್ 10 ಪಟ್ಟಿಯಲ್ಲಿ ಇಲ್ಲ. ಅಂದ್ಹಾಗೆ IMDbಯ ಟಾಪ್ 10 ವೆಬ್ ಸೀರಿಸ್ ಪಟ್ಟಿ ಹೀಗಿದೆ.

IMDb 2025ರ ಟಾಪ್ 10 ಭಾರತೀಯ ವೆಬ್ ಸೀರಿಸ್
1 ದಿ ಬಾರ್ಡ್ಸ್ ಆಫ್ ಬಾಲಿವುಡ್
2 ಬ್ಲಾಕ್ ವಾರಂಟ್
3 ಪಾತಾಳ್ ಲೋಕ್- ಸೀಸನ್ 2
4 ಪಂಚಾಯತ್- ಸೀಸನ್ 4
5 ಮಂಡಲ ಮರ್ಡರ್ಸ್
6 ಖೌಫ್
7 ಸ್ಪೆಷಲ್ ಆಪ್ಸ್- ಸೀಸನ್ 2
8 ಖಾಕಿ: ದಿ ಬೆಂಗಾಲ್ ಚಾಪ್ಟರ್
9 ದಿ ಫ್ಯಾಮಿಲಿ ಮ್ಯಾನ್- ಸೀಸನ್ 3
10 ಕ್ರಿಮಿನಲ್ ಜಸ್ಟೀಸ್: ಎ ಫ್ಯಾಮಿಲಿ ಮ್ಯಾಟರ್
ಈ ವರ್ಷ ವೆಬ್ ಸೀರಿಸ್‌ಗಳ ಸಾಧನೆಯನ್ನು ನೋಡುವುದಾರೇ,
• IMDbಯ ಭಾರತದ ಜನಪ್ರಿಯ ವೆಬ್ ಸೀರಿಸ್ 2025 ಪಟ್ಟಿಯಲ್ಲಿ ನೆಟ್‌ಫ್ಲಿಕ್ಸ್ ಹಾಗೂ ಪ್ರೈಮ್ ವಿಡಿಯೋ ಚಾಲ್ತಿಯಲ್ಲಿದೆ. ಈ ಎರಡೂ ಪ್ಲಾಟ್‌ಫಾರ್ಮ್‌ನಿಂದ ತಲಾ ನಾಲ್ಕು ವೆವ್ ಸೀರಿಸ್‌ಗಳು ಈ ಪಟ್ಟಿಯಲ್ಲಿ ಇದ್ದರೆ, ಜಿಯೋಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್‌ನಲ್ಲಿರುವ ಎರಡು ವೆಬ್ ಸೀರಿಸ್‌ಗಳು ಟಾಪ್ 10 ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿವೆ.
• ಇನ್ನೊಂದು ಇಂಟ್ರೆಸ್ಟೆಂಟ್ ವಿಷಯ ಅಂದರೆ, ಈ ಟಾಪ್ 10 ವೆಬ್ ಸೀರಿಸ್ ಪಟ್ಟಿಯಲ್ಲಿ ಏಳು ಸೀರಿಸ್‌ಗಳು ಕ್ರೈಂ ಥ್ರಿಲ್ಲರ್ ಆಗಿವೆ. ಇವುಗಳಲ್ಲಿ 6 ಸೀರಿಸ್‌ಗಳು ಹೊಸ ಸೀಸನ್‌ನಿಂದ ಗಮನ ಸೆಳೆದಿವೆ. ಇದು ಓಟಿಟಿ ವೇದಿಕೆಗಳಿಗೆ ಮತ್ತಷ್ಟು ಬಲ ಕೊಟ್ಟಿದೆ ಎಂದು ಹೇಳಬಹುದು. ಒಟ್ಟಿನಲ್ಲಿ ಈ ವರ್ಷ ವೆಬ್ ಸೀರಿಸ್‌ಗಳ ದರ್ಬಾರ್ ಜೋರಾಗಿಯೇ ಇದೆ. ಆದರೆ, ಇದರಲ್ಲಿ ದಕ್ಷಿಣ ಭಾರತದ ಸಿನಿಮಾಗಳು ಇದ್ದಿದ್ದರೆ, ಇನ್ನೊಂದು ಹಂತಕ್ಕೆ ಹೋಗುತ್ತಿತ್ತು.


Click it and Unblock the Notifications











