Panchayat 3: ಬಹು ನಿರೀಕ್ಷಿತ 'ಪಂಚಾಯತ್ 3' ವೆಬ್ ಸೀರಿಸ್ ರಿಲೀಸ್ ಆಗೇಬಿಡ್ತು; ನೆಟ್ಟಿಗರು ಸೀದಾ 5 ಸ್ಟಾರ್ ಕೊಟ್ಟಿದ್ದೇಕೆ?

ಜನಪ್ರಿಯ ವೆಬ್ ಸೀರಿಸ್ 'ಪಂಚಾಯತ್' ಸೀಸನ್ 3 ರಿಲೀಸ್ ಆಗಿದೆ. ಕಳೆದ ಎರಡು ಸೀಸನ್‌ಗಳು ಓಟಿಟಿ ಪ್ರಿಯರನ್ನು ರಂಜಿಸಿದ್ದವು. ಹೀಗಾಗಿ ಮೂರನೇ ಸರಣಿಗೆ ಓಟಿಟಿ ಬಳಸುವ ವೀಕ್ಷಕರು ಕಾದು ಕೂತಿದ್ದರು. ಕೊನೆಗೂ ನಿರೀಕ್ಷೆಯಂತೆಯೇ 'ಪಂಚಾಯತ್ 3' ವೆಬ್ ಸೀರಿಸ್ ರಿಲೀಸ್ ಆಗಿದೆ. ರಿಲೀಸ್ ಆಗುತ್ತಿದ್ದಂತೆ ವೀಕ್ಷಕರು ಒಂದೇ ಏಟಿಗೆ ವೆಬ್ ಸೀರಿಸ್ ನೋಡಿ ಮುಗಿಸಿದ್ದಾರೆ.

ಉತ್ತರ ಪ್ರದೇಶದ ಪುಲೇರಾ ಅನ್ನು ಚಿಕ್ಕ ಗ್ರಾಮವೊಂದರ ಗ್ರಾಮ ಪಂಚಾಯ್ತಿ ಹಾಗೂ ಆ ಊರಿನ ಜನರ ನಡುವಿನ ಕಥೆ. ಪಕ್ಕಾ ಹಳ್ಳಿ ಸೊಗಡಿನ ಈ ವೆಬ್ ಸೀರಿಸ್ ಇಡೀ ಮನೆ ಮಂದಿ ಕೂತು ನಿರ್ಭಯವಾಗಿ ನೋಡಬಹುದು. ಈ ಹಿಂದೆ ಬಂದಿದ್ದ ಎರಡೂ ಸೀರಿಸ್‌ಗಳು ಕೂಡ ಓಟಿಟಿಯಲ್ಲಿ ಸೂಪರ್ ಹಿಟ್ ಆಗಿದ್ದವು. ಹೀಗಾಗಿ ಪಂಚಾಯತ್ ಟೀಮ್ ಮೂರನೇ ಸೀಸನ್‌ಗೆ ಕೈ ಹಾಕಿತ್ತು.

The most-expected Panchayat 3 web series is released on Amazon Prime Video Here is netizens review

ಈ ವೆಬ್ ಸೀರಿಸ್‌ನಲ್ಲಿ ಜಿತೇಂದ್ರ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಂಚಾಯ್ತಿಯ ಸಚಿವ ಅಭಿಷೇಕ್ ತ್ರಿಪಾಠಿ ಪಾತ್ರದಲ್ಲಿ ಮುಂದುವರೆದಿದ್ದಾರೆ. ಪಂಚಾಯತ್ ಸೀಸನ್ 2 ಉಪಾಧ್ಯಕ್ಷ ಪ್ರಹ್ಲಾದ್ ಪಾಂಡೆ ಪುತ್ರನನ್ನು ಕಳೆದುಕೊಂಡಿದ್ದರು. ಇದು ಸೀಸನ್ 2ರ ಕೊನೆಯಲ್ಲಿ ಎಮೋಷನಲ್ ಆಗಿ ಮಾಡಿತ್ತು ಉಪಾಧ್ಯಕ್ಷ ಪ್ರಹ್ಲಾದ್ ಪಾಂಡೆ ಪಾತ್ರದಲ್ಲಿ ಫೈಸಲ್ ಮಲಿಕ್ ನಟಿಸಿದ್ದರು. ಇವರಿಗೆ ಮೆಚ್ಚುಗೆ ವ್ಯಕ್ತವಾಗಿತ್ತು.

ಸೀಸನ್ 3ನಲ್ಲಿ ಅದೇ ಪ್ರಮುಖ ಪಾತ್ರಗಳು ಮುಂದುವರೆದಿವೆ. ಪಂಚಾಯ್ತಿಯ ಅಧ್ಯಕ್ಷೆ ಮಂಜು ದೇವಿ ಹಾಗೂ ಪತ್ನಿ ಬ್ರಿಜ್ ಭೂಷಣ್ ಪಾತ್ರಗಳು ಕೂಡ ಅಷ್ಟೇ ಪ್ರಮುಖವಾಗಿದೆ. ಅಧ್ಯಕ್ಷೆ ಪಾತ್ರದಲ್ಲಿ ನೀನಾ ಗುಪ್ತಾ ಹಾಗೂ ಅಧ್ಯಕ್ಷೆ ಪತಿಯ ಪಾತ್ರದಲ್ಲಿ ರಘುಬಿರ್ ಯಾದವ್ ನಟಿಸಿದ್ದಾರೆ. ಹಾಗೇ ಗ್ರಾಮ ಪಂಚಾಯ್ತಿಯ ಸಹಾಯಕ ವಿಕಾಸ್ ಪಾತ್ರದಲ್ಲಿ ಚಂದನ್ ರಾಯ್ ಈ ಸೀಸನ್‌ನಲ್ಲೂ ಇದ್ದಾರೆ.

The most-expected Panchayat 3 web series is released on Amazon Prime Video Here is netizens review

ಇನ್ನು ಎರಡನೇ ಸೀಸನ್‌ನಲ್ಲಿ ಪಂಚಾಯ್ತಿಯ ಸಚಿವ ಅಭಿಷೇಕ್ ತ್ರಿಪಾಠಿಯನ್ನು ರಾಜಕೀಯ ಉದ್ದೇಶದಿಂದ ಮತ್ತೊಂದು ಹಳ್ಳಿಗೆ ವರ್ಗಾವಣೆ ಮಾಡಲಾಗಿರುತ್ತೆ. ಮೂರನೇ ಸೀಸನ್‌ನಲ್ಲಿ ಮತ್ತೆ ಪಂಚಾಯ್ತಿಗೆ ಹಿಂತಿರುಗಿದ್ದಾರೆ. ಇಲ್ಲಿಂದ ಮತ್ತೆ ಫೂಲೇರಾದಲ್ಲಿ ಡ್ರಾಮ ಶುರುವಾಗಿದೆ. ಎಂಟು ಎಪಿಸೋಡ್‌ಗಳಿರುವ ಸೀಸನ್ 3 ವೀಕ್ಷಕರಿಗೆ ಮಸ್ತ್ ಮಜಾ ಕೊಟ್ಟಿದೆ. ಚಂದನ್ ಕುಮಾರ್ ಕಥೆ ಹೆಣೆದಿದ್ದರೆ, ಧೀರಜ್ ಕುಮಾರ್ ಮಿಶ್ರಾ ನಿರ್ದೇಶಕಕ್ಕೆ ಜೈ ಎಂದಿದ್ದಾರೆ. ನೆಟ್ಟಿಗರಿಗೆ ಈ ಸೀರಿಸ್ ಎಷ್ಟು ಇಷ್ಟ ಆಗಿದೆ ನೋಡೋದಾದರೆ..

"ಒಂದೇ ಏಟಿಗೆ ಪಂಚಾಯತ್ ಸೀರಿಸ್ ಅನ್ನು ನೋಡಿ ಮುಗಿಸಿದೆ. ಸಂಪೂರ್ಣ ಹಳ್ಳಿ ಲೈಫ್‌ನ ವೈಬ್ಸ್ ಇದೆ. ಇದು ನನಗೆ ಸಂಬಂಧ ಪಟ್ಟಿದ್ದು ಅಂತ ಅನಿಸಿತ್ತು. ಸೀಸನ್ 2 ನಾನು ಇಷ್ಟ ಪಟ್ಟ ಸೀರಿಸ್‌ಗಳಲ್ಲಿ ಒಂದು." ಎಂದು ನೆಟ್ಟಿಗರೊಬ್ಬರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

"ಪಂಚಾಯತ್ 3 ತುಂಬಾನೇ ಇಷ್ಟ ಆಯ್ತು. ಬಹು ನಿರೀಕ್ಷಿತ ಪಂಚಾಯತ್ ಸೀರಿಸ್‌ ಅನ್ನು ನೀಟಾಗಿ ರಚನೆ ಮಾಡಲಾಗಿದೆ. ಆಳವಾಗಿ ಸಂಶೋಧನೆ ಮಾಡಲಾಗಿದೆ. ಈ ಬಾರಿಯ ನಿರೂಪಣೆ ಕೂಡ ಹಾಸ್ಯದಿಂದ ಕೂಡಿದೆ. ಹಾಗೇ ಕುತೂಹಲಕಾರಿ ಘಟನೆಗಳ ಸುಳಿವು ನೀಡುವುದರ ಮೂಲಕ ಕೊನೆಗೊಳ್ಳುತ್ತದೆ. ಹಿಂದಿನ ಸೀಸನ್‌ಗಳಂತೆ ಎಲ್ಲರ ಪಾತ್ರಗಳು ಅದ್ಭುತವಾಗಿ ಮುಂದುವರೆದಿವೆ." ಎಂದಿದ್ದಾರೆ.

" ಪಂಚಾಯತ್ 3 ಬಗ್ಗೆ ಎಲ್ಲರಿಂದಲೂ ವ್ಯಕ್ತವಾಗುತ್ತಿರುವ ಅಭಿಪ್ರಾಯ ತುಂಬಾನೇ ಅದ್ಭುತವಾಗಿದೆ. ದ ವೈರಲ್ ಫೀವರ್ ಯಾವಾಗಲೂ ನಮ್ಮನ್ನು ನಿರಾಸೆ ಮಾಡುವುದಿಲ್ಲ" ಎಂದು ಮತ್ತೊಬ್ಬ ನೆಟ್ಟಿಗರು ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ 'ಪಂಚಾಯತ್ 3' ವೆಬ್ ಸೀರಿಸ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ಟ್ರೀಮಿಂಗ್ ಆರಂಭ ಆದ ಮೊದಲ ದಿನ ಮೆಚ್ಚುಗೆ ಗಳಿಸಿದೆ. ಈಗಾಗಲೇ ಈ ಸೀರಿಸ್ ನೋಡಿದವರು ಸೀಸನ್ 4 ಹಾಗೂ ಸೀಸನ್ 5ಕ್ಕಾಗಿ ಕಾದು ಕೂತಿದ್ದಾರೆ.

More from Filmibeat

English summary
OTT News: Panchayat 3 web series details and netizens review|
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X