ಬಹು ನಿರೀಕ್ಷಿತ 'ದ ಪೆಂಗ್ವಿನ್' ಸೀರಿಸ್‌ಗೆ ಕ್ಷಣಗಣನೆ; ಎಂದೂ ಮರೆಯಲಾಗದ 5 ಪಾತ್ರಗಳು ಲಿಸ್ಟ್ ಇಲ್ಲಿದೆ

ವೆಬ್ ಸೀರಿಸ್‌ಗಳು ಹಾಗೂ ಟಿವಿ ಸೀರಿಸ್‌ಗಳು ವೀಕ್ಷಕರನ್ನು ಸಿನಿಮಾದಷ್ಟೇ ಸೆಳೆಯುತ್ತಿವೆ. ಅದರಲ್ಲೂ ಹಾಲಿವುಡ್‌ನಲ್ಲಿ ನಿರ್ಮಾಣ ಆಗುವ ಸೀರಿಸ್‌ಗಳಂತೂ ಯಾವುದೇ ಸಿನಿಮಾಗೂ ಕಮ್ಮಿಯಿರುವುದಿಲ್ಲ. ಮೇಕಿಂಗ್, ಪ್ರಮೋಷನ್ ಎಲ್ಲವೂ ಅಷ್ಟೇ ಕ್ವಾಲಿಟಿಯಾಗಿರುತ್ತೆ. ಸದ್ಯ ಇಡೀ ವಿಶ್ವವೇ 'ದ ಪೆಂಗ್ವಿನ್' ಸೀರಿಸ್‌ಗೆ ಕಾತುರದಿಂದ ಕಾದು ಕೂತಿದೆ.

ಈ 'ದ ಪೆಂಗ್ವಿನ್' ಸೀರಿಸ್ ಸೆಪ್ಟೆಂಬರ್ 19, 2014ರಂದು ರಿಲೀಸ್ ಆಗಲಿದೆ. ಅದರಲ್ಲೂ ಭಾರತದಲ್ಲಿ ಜಿಯೋ ಸಿನಿಮಾ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರೀಮಿಯರ್ ಆಗುತ್ತಿದೆ. ಈ ಥ್ರಿಲ್ಲಿಂಗ್ ಸೀರಿಸ್ ಹಾಲಿವುಡ್‌ ಪ್ರಿಯರಿಗೆ ಮಸ್ತ್ ಮನರಂಜನೆ ನೀಡಲಿದೆ. 'ದ ಪೆಂಗ್ವಿನ್' ಸೀರಿಸ್‌ನ ಅಭಿಮಾನಿಗಳು ಗೊಥಮ್‌ನ ಕುಖ್ಯಾತ ಕ್ರೈಮ್ ಲಾರ್ಡ್‌ನ ಕರಾಳ ಜಗತ್ತಿಗೆ ಎಂಟ್ರಿ ಕೊಡುವುದಕ್ಕೆ ಉತ್ಸುಕರಾಗಿದ್ದಾರೆ.

The Penguin premier in jio cinema Five Unforgettable Performances That Defined the Character

2021ರಲ್ಲಿ ರಿವೀಲ್‌ ಆಗಿದ್ದ ಪ್ರಮುಖ ಪಾತ್ರಧಾರಿ ಕಾಲಿನ್ ಫಾರೆಲ್‌ನ ಓಜ್ ಕಾಬ್‌ನ ಫಸ್ಟ್ ಗ್ಲಿಂಮ್ಸ್ ಇಂಟರ್‌ನೆಟ್‌ನಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. ಅಭಿಮಾನಿಗಳು ಈ ಪಾತ್ರವನ್ನು ಕಣ್ತುಂಬಿ ಕೊಂಡು ಅವರ ಪ್ಲ್ಯಾನ್‌ಗಳನ್ನು ತಿಳಿದುಕೊಳ್ಳುವುದಕ್ಕೆ ಕಾತುರರಾಗಿದ್ದಾರೆ. ಈಗ ಬಹು ನಿರೀಕ್ಷಿತ ಸೀರಿಸ್ ಬಿಡುಗಡೆಯ ಸಂದರ್ಭದಲ್ಲಿ ಈ ಹಿಂದೆ ಬಂದಿರುವ ಅದ್ಭುತ ಪೆಂಗ್ವಿನ್‌ ಪಾತ್ರಗಳನ್ನು ನೋಡುವುದಾದರೆ.

'ಬ್ಯಾಟ್‌ಮ್ಯಾನ್ ರಿಟರ್ನ್ಸ್‌'ನಲ್ಲಿ ಡ್ಯಾನಿ ಡೆವಿಟೊ

1992ರಲ್ಲಿ ತೆರೆಕಂಡಿರುವ ಬ್ಯಾಟ್‌ಮ್ಯಾನ್ ರಿಟರ್ನ್ಸ್‌ನಲ್ಲಿ ಪೆಂಗ್ವಿನ್ ಗೋಥಮ್ ಸಿಟಿಯನ್ನು ಕಂಟ್ರೋಲ್‌ಗೆ ತೆಗೆದುಕೊಳ್ಳುವುದಕ್ಕೆ ಬಯಸುತ್ತೆ. ಆದರೆ, ಬ್ಯಾಟ್‌ಮ್ಯಾನ್ ಪೆಂಗ್ವಿನ್‌ ಅನ್ನು ತಡೆಯುವುದಕ್ಕೆ ತನ್ನಲ್ಲಿರುವ ಎಲ್ಲಾ ಪವರ್ ಅನ್ನೂ ಹಾಕುತ್ತಾನೆ. ಟಿಮ್ ಬರ್ಟನ್ ನಿರ್ದೇಶಿಸಿದ ಈ ಸೂಪರ್ ಹೀರೋ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದರಲ್ಲಿ ಪೆಂಗ್ವಿನ್ ಪಾತ್ರದಲ್ಲಿ ಡ್ಯಾನಿ ಡೆವಿಟೊ ನಟಿಸಿದ್ದರು. ಈ ಪಾತ್ರವನ್ನು ಹಾಲಿವುಡ್ ಸಿನಿಮಾ ಪ್ರಿಯರು ಮರೆತಿಲ್ಲ.

ಬ್ಯಾಟ್‌ಮ್ಯಾನ್ ಸೀರಿಸ್‌ನಲ್ಲಿ ಬರ್ಗೆಸ್ ಮೆರೆಡಿತ್

1966 ರಿಂದ 1967ರವರೆಗೆ ಪ್ರಸಾರವಾದ 'ದ ಬ್ಯಾಟ್‌ ಮ್ಯಾನ್' ಟಿವಿ ಸೀರಿಸ್ ಕೂಡ ಜನಪ್ರಿಯತೆ ಪಡೆದುಕೊಂಡಿತ್ತು. ಬರ್ಗೆಸ್ ಮೆರೆಡಿತ್ ಈ ಪೆಂಗ್ವಿನ್ ಪಾತ್ರಕ್ಕೆ ವಿಶಿಷ್ಠ ಮೆರುಗನ್ನು ನೀಡಿದ್ದರು. ಈ ಸೀರಿಸ್‌ನಲ್ಲಿ ಬರ್ಗೆಸ್ ಮೆರೆಡಿತ್ ಪಾತ್ರ ಅಚ್ಚರಿಯನ್ನು ಹುಟ್ಟಾಕುತ್ತಿತ್ತು. ಈ ಸರಣಿಯಲ್ಲಿ ಆಗಾಗ್ಗೆ ಪೆಂಗ್ವಿನ್ ಪಾತ್ರಗಳ ಸಿಲ್ಲಿ ವರ್ತನೆಯನ್ನು ಹೆಚ್ಚಾಗಿ ಫೋಕಸ್ ಮಾಡುತ್ತಿದ್ದರು. ಪೆಂಗ್ವಿನ್ ಪಾತ್ರ ಈ ಸೀರಿಸ್‌ನಲ್ಲಿ ಅಭಿಮಾನಿಗಳ ನೆನಪಿನಲ್ಲಿ ಇನ್ನೂ ಉಳಿದಿದೆ.

ಗೋಥಮ್‌ನಲ್ಲಿ ರಾಬಿನ್ ಲಾರ್ಡ್ ಟೇಲರ್

2014 ರಿಂದ 2019ರವರೆಗೆ ಪ್ರಸಾರವಾಗಿದ್ದ 'ಗೋಥಮ್' ಟಿವಿ ಸೀರಿಸ್‌ನಲ್ಲೂ ಪೆಂಗ್ವಿನ್ ಪಾತ್ರ ಗಮನ ಸೆಳೆದಿತ್ತು. ಈ ಸೀರಿಸ್‌ನಲ್ಲಿ ರಾಬಿನ್ ಲಾರ್ಡ್ ಟೇಲರ್ ಪೆಂಗ್ವಿನ್ ಪಾತ್ರದಲ್ಲಿ ನಟಿಸಿದ್ದರು. ಈ ಸೀರಿಸ್‌ನಲ್ಲಿ ಸಣ್ಣ ಕ್ರಿಮಿನಲ್‌ನಿಂದ ಪವರ್‌ಫುಲ್ ಬಾಸ್ ಆಗುವ ತನಕ ವೀಕ್ಷಕರ ಗಮನ ಸೆಳೆದಿದ್ದರು. ಪೆಂಗ್ವಿನ್ ಪಾತ್ರ ಹೆಚ್ಚು ಕಾಲ ವೀಕ್ಷಕರನ್ನು ಕಾಡಿತ್ತು.

ಬ್ಯಾಟ್‌ಮ್ಯಾನ್‌ನಲ್ಲಿ ಟಾಮ್ ಕಿನ್ನಿ

2008-2011ರಲ್ಲಿ ಪ್ರಸಾರವಾದ 'ಬ್ಯಾಟ್‌ಮ್ಯಾನ್‌: ದಿ ಬ್ರೇವ್ ಅಂಡ್ ದಿ ಬಾಲ್ಡ್'ನಲ್ಲಿ ಪೆಂಗ್ವಿನ್ ಪಾತ್ರದಲ್ಲಿ ಟಾಮ್ ಕಿನ್ನಿ ನಟಿಸಿದ್ದರು. ಈ ಬಾರಿ ಪೆಂಗ್ವಿನ್ ಪಾತ್ರ ಎಂಟರ್‌ಟೈನಿಂಗ್ ಹಾಗೂ ನೆನಪಿನಲ್ಲಿ ಉಳಿಯುವಂತಹ ಪಾತ್ರವಾಗಿತ್ತು. ಈ ಪಾತ್ರ ತನ್ನ ಕಾಮಿಡಿ ಸೆನ್ಸ್‌ನಿಂದ ವೀಕ್ಷಕರನ್ನು ಹೆಚ್ಚು ನಗಿಸಿತ್ತು. ಈ ಪಾತ್ರವನ್ನು ಫ್ಯಾಮಿಲಿ ಫ್ರೆಂಡ್ಲಿಯಾಗಿ ಸೃಷ್ಟಿ ಮಾಡಿದ್ದರು.

'ದಿ ಲೆಗೊ ಬ್ಯಾಟ್‌ಮ್ಯಾನ್‌' ಸಿನಿಮಾದಲ್ಲಿ ಕಾನ್ರಾಡ್ ವೆರ್ನಾನ್

2017ರಲ್ಲಿ 'ದಿ ಲೆಗೊ ಬ್ಯಾಟ್‌ಮ್ಯಾನ್‌' ಸಿನಿಮಾ ರಿಲೀಸ್ ಆಗಿತ್ತು. ಇದರಲ್ಲಿ ಪೆಂಗ್ವಿನ್ ಪಾತ್ರಕ್ಕೆ ಕಾನ್ರಾಡ್ ವೆರ್ನಾನ್ ಧ್ವನಿಯನ್ನು ನೀಡಿದ್ದರು. ಈ ಪಾತ್ರಕ್ಕೆ ಹಾಸ್ಯದ ಲೇಪ ನೀಡಲಾಗಿತ್ತು. ಈ ಪಾತ್ರವನ್ನು ಪರ್ಫೆಕ್ಟ್ ಆಗಿ ಕ್ಯಾಪ್ಚರ್ ಮಾಡಲಾಗಿತ್ತು.

More from Filmibeat

English summary
The Penguin's Legacy: Five Unforgettable Performances
Read more about: ott hollywood filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X