"ಹೊರಗಡೆ ಮೊಸಳೆಗಳು ಹೊಂಚು ಹಾಕಿವೆ,ಯಾರಿಗೂ ಸಪೋರ್ಟ್ ಮಾಡ್ಬೇಡಿ": ರಜನಿಗೆ ಇಂತಹ ಸಲಹೆ ಯಾಕೆ ಕೊಟ್ಟಿದ್ದ ವೀರಪ್ಪನ್?

ಸೂಪರ್‌ಸ್ಟಾರ್ ರಜನಿಕಾಂತ್ ಇತ್ತೀಚೆಗಷ್ಟೇ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು, ಚಿತ್ರರಂಗದ ಗಣ್ಯರಿಂದ ಭರಪೂರ ಶುಭಾಶಗಳು ಹರಿದು ಬಂದಿದ್ದವು. ತಲೈವಾ ನಟಿಸುತ್ತಿರುವ ಹೊಚ್ಚ ಹೊಸ ಸಿನಿಮಾಗಳ ಟೀಸರ್‌ಗಳು ರಿಲೀಸ್ ಆಗಿದ್ದವು.

ರಜನಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಜೀ 5 ವಿಡಿಯೋ ಒಂದನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿತ್ತು. ಅದರಲ್ಲಿ ಏನು ಹೊಸ ವಿಷಯ ಅಂದ್ಕೊಳ್ಬೇಡಿ. ಕಾಡುಗಳ್ಳ ವೀರಪ್ಪನ್ ಸಂದರ್ಶನ ನೀಡಿದ್ದ ಹಳೇ ವಿಡಿಯೋ ಅದು. ಇದರಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಗಂಭೀರವಾದ ಸಲಹೆಯನ್ನು ನೀಡಿದ್ದರು. ಆ ವಿಡಿಯೋ ಈಗ ವೈರಲ್ ಆಗುತ್ತಿದೆ.

Throwback video late Veerappan suggesting Rajinikath don’t support anyone goes viral

ಸೂಪರ್‌ಸ್ಟಾರ್ ರಜನಿಕಾಂತ್‌ಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಅವರಿಗೆ ಒಳಿತನ್ನೇ ಬಯಸುವ ಹಿತೈಶಿಗಳಿದ್ದಾರೆ. ನಟೋರಿಯಸ್ ವೀರಪ್ಪನ್ ಕೂಡ ರಜನಿಕಾಂತ್ ಬಗ್ಗೆ ಒಳ್ಳೆ ಅಭಿಪ್ರಾಯ ಹೊಂದಿದ್ದ. ಅದಕ್ಕೆ ವೈರಲ್ ಆಗುತ್ತಿರುವ ಈ ವಿಡಿಯೋನೇ ಸಾಕ್ಷಿ. ಅಷ್ಟಕ್ಕೂ ಈ ವಿಡಿಯೋದಲ್ಲಿ ರಜನಿ ಬಗ್ಗೆ ವೀರಪ್ಪನ್ ಅಂತದ್ದು ಏನು ಹೇಳಿದ್ದಾನೆ? ತಿಳಿಯಲು ಮುಂದೆ ಓದಿ.

ಜೀ 5 ಹಂಚಿಕೊಂಡ ವಿಡಿಯೋದಲ್ಲಿ ವೀರಪ್ಪನ್ ಎರಡು ವಿಭಿನ್ನ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದಾನೆ. ಆರಂಭದಲ್ಲಿ ವೀರಪ್ಪನ್ ಎಂಜಿಆರ್ ಬಗ್ಗೆ ಮಾತಾಡುತ್ತಾನೆ. ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಆರಾಧ್ಯ ದೈವ ಆಗಿದ್ದ ಎಂಜಿಆರ್ ಅವರ ಕಷ್ಟದ ದಿನಗಳ ಬಗ್ಗೆ ಮಾತಾಡುತ್ತಾರೆ. ಆ ಬಳಿಕ ಸೂಪರ್‌ಸ್ಟಾರ್ ರಜನಿಕಾಂತ್ ಬಗ್ಗೆ ಮಾತು ಆರಂಭಿಸುತ್ತಾರೆ.

"ಯಾಕಂದ್ರೆ ಅವನು ಕಷ್ಟ ಪಟ್ಟವನು ಅವನಿಗೆ ಎಲ್ಲಾ ಗೊತ್ತು. ನಮ್ಮತರ ಆತನೂ ಒಬ್ಬ ಮನುಷ್ಯ ಅಂತ ಎಂಜಿಆರ್‌ಗೂ ಗೊತ್ತಿತ್ತು. ಆ ರೀತಿ ಎಂಜಿಆರ್ ಕಷ್ಟಪಟ್ಟವರು. ಎಂಜಿಆರ್ ತರ ಮತ್ತೊಬ್ಬರು ಹುಟ್ಟುವುದು ಕಷ್ಟ. ಈ ರಜನಿಕಾಂತ್ ಕೂಡ ಅದೇ ರೀತಿ ನಡೆದುಕೊಳ್ಳತ್ತಾನೆ ಅಂತ ನನಗೂ ಗೊತ್ತು. ಎಲ್ಲರಿಗೂ ಗೌರವ ಕೊಡುತ್ತಾನೆ. ಕೊಡದೇನೂ ಇರುವುದಿಲ್ಲ. ನನ್ನ ರೀತಿ ಅವನಿಗೆ ದೈವ ಭಕ್ತಿ ಜಾಸ್ತಿ." ಎಂದು ಹಳೇ ವಿಡಿಯೋದಲ್ಲಿ ವೀರಪ್ಪನ್ ಹೇಳಿದ್ದಾರೆ.

Throwback video late Veerappan suggesting Rajinikath don’t support anyone goes viral

ಬಳಿಕ ಮತ್ತೊಂದು ಸಂದರ್ಭದಲ್ಲಿ ರಜನಿಕಾಂತ್‌ಗೆ ಸಲಹೆ ನೀಡಿದ್ದಾರೆ. "ರಜನಿಕಾಂತ್ ಅವರೇ ನಿಮ್ಮಲ್ಲಿ ನಾನು ಕೇಳಿಕೊಳ್ಳುತ್ತೇನೆ. ನೀವು ಯಾರ ಜೊತೆನೂ ಸೇರಬೇಡಿ. ಯಾರಿಗೂ ಬೆಂಬಲ ಕೊಡಬೇಡಿ. ನಿಮ್ಮ ತುಳಿಬೇಕು ಅಂತ ತುಂಬಾ ಜನ ಮೊಸಳೆಗಳ ರೀತಿ ಕಾಯ್ತಿದ್ದಾರೆ. ಯಾಮಾರಬೇಡ." ಎಂದು ವೀರಪ್ಪನ್ ಅಂದು ರಜನಿಕಾಂತ್‌ಗೆ ಸಂದೇಶ ನೀಡಿದ್ದರು.

ಅಸಲಿಗೆ ವೀರಪ್ಪನ್ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಯಾಕೆ ಹೀಗೆ ಹೇಳಿದ್ದ. ರಜನಿಯನ್ನು ತುಳಿಯುವುದಕ್ಕೆ ರೆಡಿಯಾಗಿದ್ದವರು ಯಾರು? ಯಾವ ಸಂದರ್ಭದಲ್ಲಿ ಈ ವಿಡಿಯೋವನ್ನು ರಿಲೀಸ್ ಮಾಡಿದ್ದರು? ಅನ್ನೋದಕ್ಕೆ ವಿವರಣೆ ಸಿಕ್ಕಿಲ್ಲ. ಜೀ 5 ಸಂಸ್ಥೆ ವೀರಪ್ಪನ್ ಸಂದರ್ಶನ ನೀಡಿದ್ದ ವಿಡಿಯೋಗಳನ್ನು ಸಂಗ್ರಹಿಸಿ, 'ಮೂಸೆ ಮುನಿಸ್ವಾಮಿ ವೀರಪ್ಪನ್' ಡಾಕ್ಯೂಮೆಂಟರಿ ಸೀರಿಸ್ ಇಂದಿನಿಂದ (ಡಿಸೆಂಬರ್ 14) ಪ್ರಸಾರ ಮಾಡುತ್ತಿದೆ. ಇದರ ಒಂದು ಝಲಕ್ ಅನ್ನು ರಜನಿಕಾಂತ್ ಹುಟ್ಟುಹಬ್ಬಕ್ಕಾಗಿ ರಿವೀಲ್ ಮಾಡಿತ್ತು. ಸದ್ಯ ಆ ವಿಡಿಯೋ ಈಗ ವೈರಲ್ ಆಗುತ್ತಿದೆ.

More from Filmibeat

English summary
Late Veerappan old video released by Zee5 about suggestinng Rajinikanth not support anyone
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X