ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ ಕಮಲ್ ಹಾಸನ್ 'ಥಗ್ ಲೈಫ್' ದಿಢೀರ್ ಓಟಿಟಿಗೆ?

ಮಣಿರತ್ನಂ ನಿರ್ದೇಶನದ 'ಥಗ್ ಲೈಫ್' ಸಿನಿಮಾ ನಸೀಬು ಚೆನ್ನಾಗಿಲ್ಲ ಅನ್ನಿಸ್ತಿದೆ. ಪದೇ ಪದೆ ಚಿತ್ರಕ್ಕೆ ಹಿನ್ನಡೆ ಆಗುತ್ತಿದೆ. ಬಾಕ್ಸಾಫೀಸ್‌ನಲ್ಲಿ ಕುಂಟುತ್ತಿರುವ ಚಿತ್ರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಂದುಕೊಂಡಿದ್ದಕ್ಕಿಂತ ಬೇಗ ಈ ಗ್ಯಾಂಗ್‌ಸ್ಟರ್ ಸಿನಿಮಾ ಓಟಿಟಿಗೆ ಎಂಟ್ರಿ ಕೊಡಲಿದೆ.

ಕಳೆದ ಗುರುವಾರ(ಜೂನ್ 5) 'ಥಗ್ ಲೈಫ್' ಸಿನಿಮಾ ತೆರೆಗಪ್ಪಳಿಸಿತ್ತು. ಮೊದಲ ಶೋನಿಂದಲೇ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಶುರುವಾಗಿತ್ತು. ತಮಿಳುನಾಡ ಬಿಟ್ಟರೆ ಉಳಿದ ಕಡೆಗಳಲ್ಲಿ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಫಸ್ಟ್ ವೀಕೆಂಡ್‌ನಲ್ಲಿ ಗಳಿಕೆ ಹೇಳಿಕೊಳ್ಳುವಂತಿಲ್ಲ. ಸೋಮವಾರದಿಂದ ಕೂಡ ಸಿನಿಮಾ ಜಾದೂ ಮಾಡಲಿಲ್ಲ. ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಯಾಗಿದೇ ಮತ್ತೊಂದು ಪೆಟ್ಟು ಬಿದ್ದಿದೆ. ಈಗ ಇಲ್ಲಿ ಸಿನಿಮಾ ಹಾಕಿದರೂ ಪ್ರೇಕ್ಷಕರು ನೋಡಲು ಹಿಂದೇಟು ಹಾಕುವಂತಾಗಿದೆ.

Thug Life Falters at Box Office Set for Early OTT Release Amid Back-to-Back Setbacks

ಸಾಮಾನ್ಯವಾಗಿ ದೊಡ್ಡ ಸಿನಿಮಾಗಳು ತೆರೆಗೆ ಬಂದ 7ರಿಂದ 8 ವಾರಗಳ ಬಳಿಕ ಓಟಿಟಿಯಲ್ಲಿ ಬಿಡುಗಡೆ ಮಾಡಲು ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಆದರೆ 'ಥಗ್ ಲೈಫ್' ಚಿತ್ರಕ್ಕೆ ಬಾಕ್ಸಾಫೀಸ್‌ನಲ್ಲಿ ಹಿನ್ನಡೆ ಆಗಿರುವುದರಿಂದ 4 ವಾರಗಳ ಬಳಿಕ ಡಿಜಿಟಲ್ ಸ್ಟ್ರೀಮಿಂಗ್ ಮಾಡುವ ಪ್ರಯತ್ನ ನಡೀತಿದೆ ಎನ್ನಲಾಗ್ತಿದೆ.

'ಥಗ್‌ ಲೈಫ್' ಓಟಿಟಿ ಡೀಲ್

38 ವರ್ಷಗಳ ಬಳಿಕ ಕಮಲ್ ಹಾಸನ್ ಹಾಗೂ ಮಣಿರತ್ನಂ ಒಟ್ಟಿಗೆ ಕೆಲಸ ಮಾಡಲು ಕೈಜೋಡಿಸಿದ್ದರು. ಇಬ್ಬರೂ ಸೇರಿ ಕಥೆ ಮಾಡಿದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ತರುವುದಾಗಿ ಹೇಳಿ ಒಂದು ಪ್ರೋಮೊ ರಿಲೀಸ್ ಮಾಡಿದ್ದರು. ಆಗಲೇ ಸಿನಿಮಾ ಬಗ್ಗೆ ನಿರೀಕ್ಷೆ ಗರಿಗದರಿತ್ತು. ತ್ರಿಶಾ, ಸಿಂಬು ತಂಡ ಸೇರಿಕೊಳ್ಳುತ್ತಿದ್ದಂತೆ ಮತ್ತಷ್ಟು ಕುತೂಹಲ ಮೂಡಿತ್ತು. ನೆಟ್‌ಫ್ಲಿಕ್ಸ್ ಸಂಸ್ಥೆ ಬರೋಬ್ಬರಿ 149 ಕೋಟಿ ರೂ.ಗೆ ಓಟಿಟಿ ಡೀಲ್ ಕುದುರಿಸಿತ್ತು ಎಂದು ವರದಿಯಾಗಿತ್ತು.

4 ವಾರದ ಬಳಿಕ ಓಟಿಟಿಗೆ

ಮೊದಲ ಹೇಳಿದಂತೆ 8 ವಾರಗಳ ಬಳಿಕ ಸಿನಿಮಾಗಳನ್ನು ಓಟಿಟಿ ಬಿಡುಗಡೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಆದರೆ 'ಥಗ್ ಲೈಫ್' ಚಿತ್ರ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿಲ್ಲ. ಹಾಗಾಗಿ 4 ವಾರಕ್ಕೆ ಓಟಿಟಿ ಸ್ಟ್ರೀಮಿಂಗ್‌ಗೆ ನೆಟ್‌ಫ್ಲಿಕ್ಸ್ ಮುಂದಾಗಿದೆ ಎನ್ನುವ ಊಹಾಪೋಹ ಶುರುವಾಗಿದೆ. ಇತ್ತೀಚೆಗೆ ಪೈರಸಿ ಕಾಟ ಕೂಡ ಹೆಚ್ಚಾಗಿದೆ. ಜನ 'ಥಗ್ ಲೈಫ್' ಸಿನಿಮಾ ಮರೆತುಬಿಡುವ ಮುನ್ನ, ಪೈರಸಿ ಕಾಪಿ ನೋಡುವ ಮುನ್ನ ಓಟಿಟಿಗೆ ತಂದರೆ ಉತ್ತಮ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಆದರೆ ಇದಕ್ಕೆ ನಿರ್ಮಾಪಕರು ಆಗಿರುವ ಕಮಲ್ ಒಪ್ಪುತ್ತಿಲ್ಲ ಎನ್ನಲಾಗ್ತಿದೆ.

ದೊಡ್ಡ ಸಿನಿಮಾಗಳು ಹೀಗೆ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದಾಗ 4 ವಾರಕ್ಕೆ ಓಟಿಟಿಯಲ್ಲಿ ರಿಲೀಸ್ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ. ಅದಕ್ಕಾಗಿ ಹಣಕಾಸಿನ ವಿಚಾರದಲ್ಲೂ ಚರ್ಚಿಸಿ ವ್ಯವಹಾರ ಕುದುರಿಸಿಕೊಳ್ಳಲಾಗುತ್ತಿದೆ. ಇದೀಗ 4 ವಾರಕ್ಕೆ 'ಥಗ್ ಲೈಫ್' ಸಿನಿಮಾ ಓಟಿಟಿಗೆ ತರಲು ನೆಟ್‌ಫ್ಲಿಕ್ಸ್ ಬೇಡಿಕೆ ಇಟ್ಟಿದೆ. ಇದಕ್ಕೆ ಚಿತ್ರತಂಡ ಒಪ್ಪಿಕೊಳ್ಳುತ್ತಾ ಕಾದು ನೋಡಬೇಕಿದೆ.

'ಥಗ್ ಲೈಫ್' ಬಾಕ್ಸಾಫೀಸ್

ಜೂನ್ 5ರಂದು ತೆರೆಗೆ ಬಂದಿದ್ದ 'ಥಗ್ ಲೈಫ್' ಸಿನಿಮಾ ಒಂದು ವಾರ ಪೂರೈಸಿದೆ. Sacnilk.com ವರದಿ ಪ್ರಕಾರ ಫಸ್ಟ್ ವೀಕ್ ಸಿನಿಮಾ 42.22 ಕೋಟಿ ನೆಟ್ ಕಲೆಕ್ಷನ್(ಇಂಡಿಯಾ) ಮಾಡಿದೆ. ಮೊದಲ ದಿನ 15.5 ಕೋಟಿ ರೂ. ಗಳಿಕೆ ಕಂಡಿದ್ದ ಸಿನಿಮಾ ಎರಡನೇ ದಿನ 7.15 ಕೋಟಿ ರೂ. ಕಲೆಕ್ಷನ್ ಮಾಡಿ ನಿರಾಸೆ ಮೂಡಿಸಿತ್ತು. ಮೂರನೇ ದಿನ 7.75 ಕೋಟಿ ರೂ. ನಾಲ್ಕನೇ ದಿನ 6.5 ಕೋಟಿ ರೂ. 5ನೇ ದಿನ ಕೇವಲ 3.25 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಹೀಗೆ ದಿನದಿಂದ ದಿನಕ್ಕೆ ಗಳಿಕೆ ಕಮ್ಮಿ ಆಗಿತ್ತು. ನಿನ್ನೆ(ಜೂನ್ 11) ಬಾಕ್ಸಾಫೀಸ್‌ನಲ್ಲಿ 'ಥಗ್ ಲೈಫ್' ಗಳಿಕೆ ಕೊಂಚ ಚೇತರಿಕೆ ಕಂಡಿದೆ.

ಸೂಚನೆ: 'ಥಗ್‌ ಲೈಫ್' ಓಟಿಟಿ ರಿಲೀಸ್ ಡೇಟ್ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸೋಶಿಯಲ್ ಮೀಡಿಯಾ ಚರ್ಚೆ ಹಾಗೂ ಚಿತ್ರರಂಗದ ಮೂಲಗಳಿಂದ ಕೇಳಿಬರುತ್ತಿರುವ ಊಹಾಪೋಹಗಳನ್ನು ಆಧರಿಸಿ ಆರ್ಟಿಕಲ್ ಬರೆಯಲಾಗಿದೆ.

More from Filmibeat

English summary
Thug Life is likely to hit OTT platforms within just four weeks—significantly earlier than the usual 7-8 week window for big films
Read more about: kamal haasan kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X