ಅಧಿಕಾರ,ರಾಜಕೀಯ ಹಾಗೂ ಪ್ರೀತಿಯ ಕಥೆ ಹೇಳುವ ಈ ವೆಬ್ ಸೀರಿಸ್ ಟ್ರೆಂಡ್ ಆಗ್ತಿರೋದ್ಯಾಕೆ? ಯಾವಾಗ ಸೀಸನ್ 2?

ಈಗೀಗ ಜನರು ಸಿನಿಮಾಗಳನ್ನು ನೋಡುವುದಕ್ಕೆ ಎಷ್ಟು ಕಾಯುತ್ತಾರೋ.. ವೆಬ್ ಸೀರಿಸ್ ಅನ್ನು ನೋಡುವುದಕ್ಕೂ ಕಾತುರರಾಗಿದ್ದಾರೆ. ಅದರಲ್ಲೂ ಹಿಂದಿ ಆಡಿಯನ್ಸ್ ವೆಬ್ ಸೀರಿಸ್‌ಗಳ ಮೊರೆ ಹೋಗ್ತಿದ್ದಾರೆ. ಹೀಗಾಗಿ ಓಟಿಟಿ ವೇದಿಕೆಗಳು ಕೂಡ ಒಂದರ ಹಿಂದೊಂದು ವೆಬ್‌ ಸೀರಿಸ್‌ಗಳನ್ನು ಸ್ಟ್ರೀಮಿಂಗ್ ಮಾಡುತ್ತಲೇ ಇವೆ. ಈಗ ಜಿಯೋ ಹಾಟ್‌ಸ್ಟಾರ್‌ನ ಬಹು ನಿರೀಕ್ಷಿತ ವೆಬ್ ಸೀರಿಸ್ 'ತುಕ್ರಾ ಕೆ ಮೇರಾ ಪ್ಯಾರ್' ಸೀಸನ್ 2 (Thukra Ke Mera Pyaar Season 2) ಸ್ಟ್ರೀಮಿಂಗ್‌ಗೆ ದಿನಗಣನೆ ಶುರುವಾಗಿದೆ.

'ತುಕ್ರಾ ಕೆ ಮೇರಾ ಪ್ಯಾರ್' ಸೀಸನ್ 2 ಓಟಿಟಿ ಲೋಕದ ಜನಪ್ರಿಯ ವೆಬ್ ಸೀರಿಸ್‌ನಲ್ಲಿ ಒಂದು. ಮೊದಲ ಸೀಸನ್ ಸಕ್ಸಸ್‌ ಕಂಡ ಬೆನ್ನಲ್ಲೇ ಮತ್ತೊಂದು ಸೀಸನ್‌ ಅನ್ನು ವೀಕ್ಷಕರ ಮುಂದಿಡುವುದಕ್ಕೆ ಸಜ್ಜಾಗಿದೆ. ಪ್ರೀತಿ, ದ್ವೇಷ, ರಾಜಕೀಯ ಹಾಗೂ ಸೇಡಿನ ಕತೆಯನ್ನು ಮತ್ತೆ ಹೊತ್ತು ಬರುತ್ತಿರುವ 2ನೇ ಸೀಸನ್‌ನ ಟ್ರೈಲರ್ ರಿಲೀಸ್ ಆಗಿದೆ. ಈಗ ಈ ಸರಣಿಯ ಝಲಕ್ ಎಲ್ಲರ ಗಮನ ಸೆಳೆಯುತ್ತಿದೆ.

Thukra Ke Mera Pyaar Season 2 Trailer released premiering June 19 on Jio Hoststar

ಯಾವಾಗ ಸ್ಟ್ರೀಮಿಂಗ್?

ಅಂದ್ಹಾಗೆ, 'ತುಕ್ರಾ ಕೆ ಮೇರಾ ಪ್ಯಾರ್' ಸೀಸನ್ 2 ಇದೇ ತಿಂಗಳು ಅಂದರೆ, ಜೂನ್ 19, 2026 ರಂದು ಓಟಿಟಿಯಲ್ಲಿ ಸದ್ದು ಮಾಡುವುದಕ್ಕೆ ಸಜ್ಜಾಗಿದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ಸೀರಿಸ್ ಅನ್ನು ನೋಡಬಹುದಾಗಿದೆ. ಈ ಸೀಸನ್‌ನಲ್ಲಿ ಕಥೆಯು ಮತ್ತಷ್ಟು ರೋಮಾಂಚನ ಹಾಗೂ ಅಪಾಯಕಾರಿ ತಿರುವುಗಳನ್ನು ಪಡೆದುಕೊಳ್ಳಲಿದೆ ಎಂಬುದು ಟ್ರೈಲರ್ ನೋಡಿದ ಕೂಡಲೇ ಅರಿವಿಗೆ ಬರುತ್ತೆ.

ಯಾರೆಲ್ಲ ಇದ್ದಾರೆ?

'ತುಕ್ರಾ ಕೆ ಮೇರಾ ಪ್ಯಾರ್' ಸೀಸನ್ 2ನಲ್ಲಿ ಕುಲದೀಪ್ ಕುಮಾರ್ ಪಾತ್ರದಲ್ಲಿ ಧವಳ್ ಠಾಕೂರ್ ಮತ್ತೊಮ್ಮೆ ಅಬ್ಬರಿಸಲಿದ್ದಾರೆ. ಕುಲದೀಪ್ ಕುಮಾರ್ ತನ್ನ ಹಳೆಯ ತಪ್ಪುಗಳ ಅಪರಾಧ ಪ್ರಜ್ಞೆ ಹಾಗೂ ಅತಿಯಾದ ವ್ಯಾಮೋಹದ ನಡುವೆ ಸಿಲುಕಿದ್ದಾನೆ. ಈ ಬಾರಿ ಕೂಡ ರಾಜಕೀಯ ಮತ್ತು ಅಧಿಕಾರದ ಜಾಲದಲ್ಲಿ ತಗಲಾಕಿಕೊಂಡಿದ್ದಾನೆ. ಈ ಸೀಸನ್‌ನ ಇನ್ನೊಂದು ಪ್ರಮುಖ ಪಾತ್ರ ಶಾನ್ವಿಕಾ ಚೌಹಾಣ್. ಈ ಪಾತ್ರದಲ್ಲಿ ಸಂಚಿತಾ ಬಸು ನಟಿಸಿದ್ದಾರೆ. ಶಾನ್ವಿಕಾ ಚೌಹಾಣ್ ಪಾತ್ರ ಈ ಸೀಸನ್‌ನಲ್ಲಿ ಹೆಚ್ಚು ಬಲಿಷ್ಠ ಹಾಗೂ ಧೈರ್ಯಶಾಲಿ ಹೆಣ್ಣುಮಗಳಾಗಿ ನೋಡಬಹುದು. ಕ್ರೂರ ರಾಜಕೀಯದ ಹಾದಿಯಲ್ಲಿ ಯಾವುದೇ ನಿಯಮಗಳಿಗೂ ತಲೆಬಾಗದೆ, ಸಂಬಂಧಗಳ ಅರ್ಥವನ್ನೇ ಬದಲಾಯಿಸುವುದಕ್ಕೆ ಸಜ್ಜಾಗಿದ್ದಾಳೆ.

ಸೀತಾಪುರ ಈಗ ರಣರಂಗ

'ತುಕ್ರಾ ಕೆ ಮೇರಾ ಪ್ಯಾರ್' ಮೊದಲ ಸೀಸನ್‌ನಲ್ಲಿ ಹಾರ್ಟ್‌ಬ್ರೇಕ್ ಹಾಗೂ ಸೇಡಿನ ಕಥೆಯಿಂದ ವೀಕ್ಷಕರನ್ನು ಸೆಳೆದಿತ್ತು. ಈಗ ದೊಡ್ಡ ಕ್ಯಾನ್ವಾಸ್‌ನಲ್ಲಿ ಮೂಡಿಬರುತ್ತಿದೆ. ಸೀತಾಪುರ ಎಂಬ ಜಾಗ ಈಗ ಮಹತ್ವಾಕಾಂಕ್ಷೆ ಮತ್ತು ದ್ರೋಹದ ರಣರಂಗವಾಗಿ ಬದಲಾಗಿದೆ. ಇಲ್ಲಿ ನಂಬಿಕೆ ಎಂಬುದು ತುಂಬಾ ಸೂಕ್ಷ್ಮವಾಗಿದ್ದು, ಕುಲದೀಪ್ ಮತ್ತು ಶಾನ್ವಿಕಾ ಇಬ್ಬರೂ ಪರಸ್ಪರ ಎದುರಾಳಿಗಳಾಗಿ ನಿಲ್ಲಲಿದ್ದಾರೆ.

ಕಲಾವಿದರು ಏನಂತಾರೆ?

ಪ್ರಮುಖ ಪಾತ್ರಧಾರಿ ಸಂಚಿತಾ ಬಸು ಹೀಗಂತಾರೆ, "ಸೀಸನ್ 2 ರಲ್ಲಿ ಶಾನ್ವಿಕಾ ಪಾತ್ರವು ಭಾವನಾತ್ಮಕವಾಗಿ ವಿಭಿನ್ನವಾಗಿದ್ದು, ಊಹಿಸಲು ಅಸಾಧ್ಯವಾದ ತಿರುವುಗಳಿವೆ. ಅವಳು ಬಹಳ ಜಾಗರೂಕಳಾಗಿದ್ದು, ಅಧಿಕಾರ ಮತ್ತು ದ್ರೋಹದ ನಡುವೆ ಪ್ರೀತಿಯ ನಿಜವಾದ ಅರ್ಥವನ್ನು ಪ್ರಶ್ನಿಸುತ್ತಾಳೆ. ಇಲ್ಲಿ ಪ್ರತಿಯೊಂದು ಭಾವನೆಗೂ ಅದರದ್ದೇ ಆದ ಪರಿಣಾಮವಿರೋದನ್ನು ನೋಡಬಹುದು" ಎಂದು ಹೇಳಿದ್ದಾರೆ.

ಧವಳ್ ಠಾಕೂರ್ ಈ ವೇಬ್ ಸೀರಿಸ್‌ನ ಹೀರೋ ಹೀಗಂತಾರೆ, "ಕುಲದೀಪ್ ತನ್ನ ಹಳೆಯ ನೆನಪುಗಳ ಜೊತೆಗೆ ತಪ್ಪುಗಳ ಭಾರವನ್ನು ಹೊತ್ತು ಸಾಗುತ್ತಿದ್ದಾನೆ. ತನ್ನ ವೈಯಕ್ತಿಕ ಭಾವನೆಗಳ ಜೊತೆಗೆ ನಿರೀಕ್ಷೆಗಳ ನಡುವೆ ತೊಳಲಾಡುತ್ತಿದ್ದಾನೆ. ಈ ಸೀಸನ್ ಭಾವನಾತ್ಮಕವಾಗಿ ಹತ್ತಿರವಾಗುತ್ತೆ" ಎಂದು ಹೇಳಿದ್ದಾರೆ. 'ತುಕ್ರಾ ಕೆ ಮೇರಾ ಪ್ಯಾರ್'- ಸೀಸನ್ 2 ಜಿಯೋಹಾಟ್‌ಸ್ಟಾರ್ (JioHotstar)ನಲ್ಲಿ ಜೂನ್ 19, 2026ರಂದು ಸ್ಟ್ರೀಮಿಂಗ್ ಆಗುತ್ತಿದೆ.

English summary
Thukra Ke Mera Pyaar Season 2 Trailer released premiering June 19 on Jio Hoststar.
Read more about: web series hindi trailer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X