ಅಮ್ಮಂದಿರ ದಿನ: ಅಮ್ಮ ಜೊತೆ ಕೂತು ಒಟಿಟಿಯಲ್ಲಿ ಈ 5 ಸಿನಿಮಾಗಳನ್ನು ನೋಡಿ

ಇದು ವಿಶ್ವ ಅಮ್ಮಂದಿರ ದಿನ. ಜಗತ್ತಿನ ಮೂಲೆ ಮೂಲೆಯಲ್ಲಿ ಅಮ್ಮಂದಿರ ದಿನವನ್ನು ಆಚರಿಸಲಾಗುತ್ತಿದೆ. ಅಮ್ಮ ಅಂದರೆ, ಪ್ರೀತಿ, ತ್ಯಾಗದ ಸಂಕೇತ. ತನ್ನೊಳಗಿರುವ ಅದೆಷ್ಟೋ ಆಸೆಗಳನ್ನು ಬಚ್ಚಿಕೊಂಡು ಮಕ್ಕಳನ್ನು ನಿಸ್ವಾರ್ಥದಿಂದ ಸಾಕುವ ತಾಯಿ ಬಗ್ಗೆ ಅದೆಷ್ಟು ದೊಡ್ಡ ಉಡುಗೊರೆ ಕೊಟ್ಟರೂ ಸರಿಹೊಂದುವುದಿಲ್ಲ. ನಮ್ಮ ಬ್ಯುಸಿ ಲೈಫ್‌ನಲ್ಲಿ ಅಮ್ಮನ ಪ್ರೀತಿ, ತ್ಯಾಗಗಳು ಮರೆತೇ ಹೋಗುತ್ತವೆ.

ಅಮ್ಮನಿಗಾಗಿ ಇದೊಂದು ದಿನ ಅಷ್ಟೇ ಅಲ್ಲ. ಜೀವನ ಪೂರ್ತಿ ಅವಳ ಋಣದಲ್ಲೇ ಇರಬೇಕು. ಆದರೂ, ಈ ದಿನವನ್ನು ಅವಳಿಗಾಗಿ ಸ್ಪೆಷಲ್ ಮಾಡಬಹುದು. ಅಮ್ಮನ ದಿನವನ್ನು ಸಂಭ್ರಮಿಸುವುದರ ಜೊತೆಗೆ ಆಕೆಯೊಂದಿಗೆ ಸ್ವಲ್ಪ ಕಾಲ ಕಳೆಯಬಹುದು. ಅಮ್ಮನ ಜೊತೆ ಕೂಡ ಕೆಲವು ಸಿನಿಮಾಗಳನ್ನು ನೋಡಬಹುದು. ಅವಳೊಂದಿಗೆ ಭಾವುಕರಾಗಬಹುದು.

Top 5 Best Mother s Day Kannada Movies to Watch With Your mother in 2025

ಅಮ್ಮ ಹಾಗೂ ಮಕ್ಕಳ ಸಂಬಂಧವನ್ನು ಇಟ್ಟುಕೊಂಡು ಈಗಾಗಲೇ ಕನ್ನಡದಲ್ಲಿ ಹಲವು ಸಿನಿಮಾಗಳು ಬಂದು ಹೋಗಿವೆ. ಅವುಗಳಲ್ಲಿ ಕೆಲವು ಸಿನಿಮಾಗಳನ್ನು ಇಂದು (ಮೇ 11) ಅಮ್ಮಂದಿರ ದಿನದಂದು ನೋಡಬಹುದು. ಹಾಗಿದ್ದರೆ, ಅಮ್ಮ ಹಾಗೂ ಕುಟುಂಬದ ಜೊತೆ ಕೂತು ನೋಡಬಹುದಾದ ಕನ್ನಡದ ಐದು ಸಿನಿಮಾಗಳು ಪಟ್ಟಿ ಇಲ್ಲಿದೆ. ಹಾಗೆ ಅವು ಯಾವ ಒಟಿಟಿ ವೇದಿಕೆಯಲ್ಲಿ ಲಭ್ಯವಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಅಮ್ಮ ಐ ಲವ್ ಯು'

ಚಿರಂಜೀವಿ ಸರ್ಜಾ ನಟಿಸಿದ ಸಿನಿಮಾ 'ಅಮ್ಮ ಐ ಲವ್‌ ಯು'. ಇದು ಅಮ್ಮಂದಿರ ದಿನದಂದು ನೋಡಲು ಅತ್ಯುತ್ತಮ ಆಯ್ಕೆ. ಅಮ್ಮನ ಜೀವ ಉಳಿಸಲು ಭಿಕ್ಷೆ ಬೇಡಿ ಹರಕೆ ತೀರಿಸುವುದಕ್ಕೆ ಹೊರಟ ಮಗನ ಕಥೆಯನ್ನು ತೆರೆಮೇಲೆ ತರಲಾಗಿದೆ. ಈ ಮೂಲಕ ಅಮ್ಮನ ಪ್ರೀತಿಯ ಪಡೆಯುವುದಕ್ಕೆ ಮುಂದಾಗುತ್ತಾನೆ. ಮೊದಲಾರ್ಧ ಮಮತೆ, ಪ್ರೀತಿಯ ಹುಡುಕಾಟ. ದ್ವಿತೀಯಾರ್ಧ ಸೆಂಟಿಮೆಂಟ್. ಇಲ್ಲಿ ಮಗನಾಗಿ ಚಿರಂಜೀವಿ ಸರ್ಜಾ ಹಾಗೂ ಅಮ್ಮನ ಪಾತ್ರದಲ್ಲಿ ಸಿತಾರ ನಟಿಸಿದ್ದಾರೆ. ಅಮ್ಮನ ಪ್ರೀತಿಗಾಗಿ ಭಿಕ್ಷುಕನಾಗಿವ ಮಗನ ಪ್ರೀತಿ ಬಯಸಿದ ಪ್ರೇಯಸಿ. ಚಿರಂಜೀವಿ ಸರ್ಜಾ ಪ್ರೇಯಸಿಯಾಗಿ ನಿಶ್ವಿಕಾ ನಾಯ್ಡು, ನಟಿಸಿದ್ದಾರೆ. ಈ ಸಿನಿಮಾ ಸನ್‌ ನೆಕ್ಸ್ಟ್‌ನಲ್ಲಿ ಲಭ್ಯವಿದೆ.

Top 5 Best Mother s Day Kannada Movies to Watch With Your mother in 2025

ರತ್ನನ್ ಪ್ರಪಂಚ

ಅಮ್ಮಂದಿರ ದಿನದಂದು ಓಟಿಟಿಯಲ್ಲಿ ನೋಡಬಹುದಾದ ಮತ್ತೊಂದು ಸಿನಿಮಾ 'ರತ್ನನ್ ಪ್ರಪಂಚ'. ಪ್ರಮುಖ ಪಾತ್ರದಲ್ಲಿ ಡಾಲಿ ಧನಂಜಯ್ ನಟಿಸಿದ್ದಾರೆ. ರತ್ನಾಕರನ ಧನಂಜಯ್) ಪ್ರಪಂಚದಲ್ಲಿ ಸಮಸ್ಯೆಗಳು ಒಂದೆರಡಲ್ಲ. ಸದಾ ಇದರ ಜಂಜಾಟದೊಂದಿಗೆ ಹೊಡೆದಾಡುತ್ತಿರುವ ರತ್ನಾಕರನ ತಾಯಿ ಹಠಮಾರಿ ತಾಯಿಯೊಂದಿಗೆ ಬರೀ ಜಗಳ. ತಾಯಿ ಜಗಳ ಆಡಿದರೂ ಮಗನ ಮೇಲೆ ಎಲ್ಲಿಲ್ಲದ ಪ್ರೀತಿ. ಸರೋಜ ಪಾತ್ರದಲ್ಲಿ ಉಮಾಶ್ರೀ ಪಾತ್ರ ಅದ್ಭುತವಾಗಿದೆ. ಸಿನಿಮಾದ ಕೊನೆಯಲ್ಲಿ ತಾಯಿಯ ಬೆಲೆ ಅರಿತುಕೊಳ್ಳುವ ಸಿನಿಮಾ 'ರತ್ನನ್ ಪ್ರಪಂಚ' ಎಲ್ಲಿರಿಗೂ ಇಷ್ಟ ಆಗುತ್ತೆ. ಇದು ಅಮೆಜಾನ್ ಪ್ರೈಮ್‌ ವಿಡಿಯೋದಲ್ಲಿ ನೋಡುವುದಕ್ಕೆ ಸಿಗುತ್ತೆ.

ಅಂಜನಿಪುತ್ರ

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಸಿನಿಮಾ 'ಅಂಜನಿಪುತ್ರ'. ಇದು ಕೂಡ ತಾಯಿ ಮಗನ ನಡುವಿನ ಕಥೆಯನ್ನು ಹೇಳುವ ಸಿನಿಮಾ. ಈ ಸಿನಿಮಾದಲ್ಲಿ ಅಮ್ಮ ಮಗನಾಗಿ ಪುನೀತ್ ರಾಜ್‌ಕುಮಾರ್ ಹಾಗೂ ರಮ್ಯಾ ಕೃಷ್ಣ ನಟಿಸಿದ್ದಾರೆ. ಯಾವುದೋ ಒಂದು ಕಾರಣಕ್ಕೆ ಅಮ್ಮನಿಂದ ದೂರ ಆಗಿರುವ ಮಗ ಹೇಗೆ ಬೆನ್ನೆಲುಬಾಗಿ ನಿಂತಿರುತ್ತಾನೆ ಎನ್ನುವುದೇ ಈ ಸಿನಿಮಾದ ಕಥೆ. ಈ ಸಿನಿಮಾ ಸನ್‌ ನೆಕ್ಸ್ಟ್‌ನಲ್ಲಿ ಲಭ್ಯವಿದೆ.

ಕೌಸಲ್ಯ ಸುಪ್ರಜಾ ರಾಮ

ಡಾರ್ಲಿಂಗ್ ಕೃಷ್ಣ ಹಾಗೂ ನಿರ್ದೇಶಕ ಶಶಾಂಕ್ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾ 'ಕೌಸಲ್ಯ ಸುಪ್ರಜಾ ರಾಮ'. ಹೆಣ್ಣು ಎಂದರೆ ಅಡುಗೆ ಮನೆಗೆ ಸೀಮಿತ ಎನ್ನುವ ಮನಸ್ಥತಿಯನ್ನು ಹೊಂದಿರುವ ಪತಿಯ ಧೋರಣೆಯನ್ನು ತಡೆದುಕೊಂಡು ಬದುಕಿತ್ತಿರುವ ಪತ್ನಿ. ತಾನಂದುಕೊಂಡಿದ್ದನ್ನೇ ಮಗನ ತಲೆಗೂ ತುಂಬುವ ತಂದೆ. ಕೊನೆಯಲ್ಲಿ ತಾಯಿ ಪ್ರಾಮುಖ್ಯತೆಯನ್ನು ಪ್ರೇಯಸಿಯಿಂದ ಅರಿತುಕೊಳ್ಳುವ ಮಗ ಕಥೆಯನ್ನು ತೆರೆಮೇಲೆ ಶಶಾಂಕ್ ತಂದಿದ್ದರು. ಫ್ಯಾಮಿಲಿ ಸಮೇತ ಕೂತು ಈ ಸಿನಿಮಾವನ್ನು ನೋಡಬಹುದು. ಇದು ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಇದೆ.

ಕೆಜಿಎಫ್ ಚಾಪ್ಟರ್ 1

ರಾಕಿಂಗ್ ಸ್ಟಾರ್ ಯಶ್ ಅನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದ ಸಿನಿಮಾ. ಸೆಮೆಂಟಿಮೆಂಟ್‌ ಜೊತೆ ಕಮರ್ಷಿಯಲ್ ಎಲಿಮೆಂಟ್ಸ್ ಅನ್ನು ಇಷ್ಟಪಡುವವರಿಗೆ 'ಕೆಜಿಎಫ್ ಚಾಪ್ಟರ್ 1' ಒಳ್ಳೆಯ ಆಯ್ಕೆ. ಆಕ್ಷನ್ ಜೊತೆಗೆ ತಾಯಿ ಹಾಗೂ ಮಗನ ನಡುವಿನ ದೃಶ್ಯಗಳು ಈ ಸಿನಿಮಾದ ಹೈಲೈಟ್. ಪ್ರಶಾಂತ್ ನೀಲ್ ನಿರ್ದೇಶಿಸಿದ ಈ ಸಿನಿಮಾ ಕೂಡ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಲಭ್ಯವಿದೆ.

Take a Poll

More from Filmibeat

English summary
Top 5 Best Mother's Day Kannada Movies to Watch With Your mother in 2025
Read more about: kannada movies mothers day
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X