ಮೇ 12-18ರವರೆಗೆ ಒಟಿಟಿಯಲ್ಲಿ ಅತೀ ವೀಕ್ಷಿಸಿದ ಸಿನಿಮಾಗಳು ಇವೇನೆ: ಟಾಪ್ 5 ಚಿತ್ರಗಳಿಗೆ ಎಷ್ಟೆಷ್ಟು ಮಿಲಿಯನ್ ವೀವ್ಸ್?

ಇತ್ತೀಚೆಗೆ ಸಿನಿಮಾ ಮಂದಿಯದ್ದು ಒಂದೇ ದೂರು. ಜನರು ಥಿಯೇಟರ್‌ಗೆ ಬಂದು ಸಿನಿಮಾ ನೋಡುತ್ತಿಲ್ಲ. ಒಟಿಟಿಯ ಕಣ್ಣು ತಪ್ಪಿಸಿ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಕರೆದುಕೊಂಡು ಬರೋದು ದೊಡ್ಡ ಸವಾಲು ಎಂದು ತಮ್ಮ ಅಸಹನೆಯನ್ನು ತೋರಿಸುತ್ತಿದ್ದಾರೆ. ಜನರು ಕೂಡ ಒಟಿಟಿಯಲ್ಲಿ ಸಿನಿಮಾಗಳನ್ನು ನೋಡುವುದಕ್ಕೆ ಹೆಚ್ಚು ಇಷ್ಟು ಪಡುತ್ತಿದ್ದಾರೆ. ಅದು ಸಿನಿಮಾ ಮಂದಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಜನರು ಒಟಿಟಿ ಕಡೆಗೆ ಹೆಚ್ಚು ವಾಲುತ್ತಿದ್ದಾರೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಐಪಿಎಲ್ ಅಂತಹ ಕ್ರಿಕೆಟ್ ಹಬ್ಬ ನಡೆಯುತ್ತಿರುವಾಗಲೂ ಜನರ ಕ್ರೇಜ್ ಸಿನಿಮಾ ಮೇಲಿದೆ. ಇತ್ತೀಚೆಗೆ ತೆರೆಕಂಡಿರುವ ಕೆಲವು ಸಿನಿಮಾಗಳು ಮಿಲಿಯನ್ ಲೆಕ್ಕದಲ್ಲಿ ವೀವ್ಸ್ ಪಡೆದುಕೊಂಡಿದೆ. ಟಾಪ್ 5 ಸಿನಿಮಾಗಳಲ್ಲಿ ಒಂದು ಬಾಲಿವುಡ್ ಸಿನಿಮಾ ಬಿಟ್ಟು ಉಳಿದ ನಾಲ್ಕು ಸಿನಿಮಾಗಳು ದಕ್ಷಿಣ ಭಾರತದ ಸಿನಿಮಾ ಅನ್ನೋದು ವಿಶೇಷ.

Top 5 most-watched films on OTT in India from May 12 to May 18 2025 Ormax report

ಮೇ 12 ರಿಂದ 18ರವರೆಗೆ ಒಟಿಟಿಯಲ್ಲಿ ಅತೀ ಹೆಚ್ಚು ವೀವ್ಸ್ ಪಡೆದ ಸಿನಿಮಾಗಳ ಟಾಪ್ 5 ಪಟ್ಟಿ ಹೊರ ಬಿದ್ದಿದೆ. ಓರ್ಮಾಕ್ಸ್ ಸಂಸ್ಥೆ ಪ್ರತಿ ವಾರ ಇಂತಹದ್ದೊಂದು ವರದಿಯನ್ನು ರಿಲೀಸ್ ಮಾಡುತ್ತೆ. ಅದರಲ್ಲಿ ಒಟಿಟಿಯಲ್ಲಿ ಕಳೆದ ವಾರ ಸದ್ದು ಮಾಡಿದ ಟಾಪ್‌ ಸಿನಿಮಾಗಳ ಪಟ್ಟಿಯಲ್ಲಿ ತಮಿಳು, ತೆಲುಗು ಹಾಗೂ ಒಂದು ಬಾಲಿವುಡ್ ಸಿನಿಮಾ ಇದೆ. ಹಾಗಿದ್ದರೆ, ಆ ಸಿನಿಮಾಗಳು ಯಾವುವು? ಎಷ್ಟು ಮಿಲಿಯನ್ ವೀವ್ಸ್ ಪಡೆದುಕೊಂಡಿದೆ ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಟಾಪ್ 5- 'ವೀರ ಧೀರ ಸೂರನ್'

ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಮ್ ನಟಿಸಿದ ಮತ್ತೊಂದು ವಿಭಿನ್ನ ಸಿನಿಮಾ 'ವೀರ ಧೀರ ಸೂರನ್'. ಇದೊಂದು ಗ್ಯಾಂಗ್‌ಸ್ಟರ್ ಸಿನಿಮಾ. ಕೊನೆಯ ಬಾರಿಗೆ ತಾನು ಮಾಡಬೇಕಿರುವ ಕೆಲಸವನ್ನು ಮುಗಿಸಿ ರೌಡಿಸಂ ಜಗತ್ತಿಗೆ ಗುಡ್‌ ಬೈ ಹೇಳಬೇಕು ಎಂದು ನಿರ್ಧಾರ ತೆಗೆದುಕೊಂಡಿರುತ್ತಾರೆ. ತನ್ನ ಮಾಜಿ ಬಾಸ್‌ನ ಮಗನನ್ನು ಪೊಲೀಸ್ ಅಧಿಕಾರಿಯಿಂದ ರಕ್ಷಿಸಲು ಹೇಗೆಲ್ಲ ಹೋರಾಡುತ್ತಾನೆ ಅನ್ನೋದು ಕಥೆ. ಈ ಸಿನಿಮಾ ಇತ್ತೀಚೆಗೆ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ರಿಲೀಸ್ ಆಗಿತ್ತು. ಇದು ಟಾಪ್‌ 5ನಲ್ಲಿದ್ದು ಮೇ 12 ರಿಂದ ಮೇ 18ರವರೆಗೆ 1.7 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.

ಟಾಪ್ 4- 'ಮ್ಯಾಡ್ ಸ್ಕ್ವೇರ್'

ತೆಲುಗು ಸಿನಿಮಾ 'ಮ್ಯಾಡ್ ಸ್ಕ್ವೇರ್' ನಾಲ್ಕನೇ ಸ್ಥಾನದಲ್ಲಿದೆ. ಪಕ್ಕಾ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜೋರಾಗಿ ಸದ್ದು ಮಾಡಿತ್ತು. ಸುಮಾರು 70 ಕೋಟಿ ರೂಪಾಯಿ ಗಳಿಸಿದ್ದ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದೆ. ಸಂಗೀತ ಶೋಭನ್, ನಾರ್ನೆ ನಿತಿನ್, ರಾಮ್ ನಿತಿನ್, ಪ್ರಿಯಾಂಕಾ ಜಾವಲ್ಕರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ನೆಟ್‌ಫಿಕ್ಸ್‌ನಲ್ಲಿದೆ. ಇದು ಮೇ 12 ರಿಂದ ಮೇ 18ರವರೆಗೆ ಸುಮಾರು 1.8 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.

Top 5 most-watched films on OTT in India from May 12 to May 18 2025 Ormax report

ಟಾಪ್ 3- 'ದಿ ಡಿಪ್ಲೊಮ್ಯಾಟ್'

ಬಾಲಿವುಡ್‌ ನಟ ಜಾನ್‌ ಅಬ್ರಾಹಂ ನಟಿಸಿರುವ 'ದಿ ಡಿಪ್ಲೊಮ್ಯಾಟ್' ಒಟಿಟಿಯಲ್ಲಿ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ಪಾಕಿಸ್ತಾನದಲ್ಲಿ ಸಿಲುಕಿದ್ದ ಉಜ್ಮಾಳನನ್ನು ಭಾರತಕ್ಕೆ ಕರೆತರುವ ರೋಚಕ ಕಥೆಯನ್ನು ತೆರೆಮೇಲೆ ತರಲಾಗಿತ್ತು. ಮತ್ತೊಮ್ಮೆ ದೇಶಪ್ರೇಮ, ಥ್ರಿಲ್ಲರ್ ಸಿನಿಮಾದಲ್ಲಿ ಜಾನ್ ಅಬ್ರಾಹಂ ಮಿಂಚಿದ್ದರು. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ. ಈ ಸಿನಿಮಾವನ್ನು 3.1 ಮಿಲಿಯನ್ ಮಂದಿ ವೀವ್ಸ್ ಪಡೆದುಕೊಂಡಿದ್ದಾರೆ.

ಟಾಪ್ 2- 'ಒಡೆಲಾ 2'

ತಮನ್ನಾ ಭಾಟಿಯಾ ಹಾಗೂ ವಸಿಷ್ಠ ಸಿಂಹ ಅಭಿನಯದ 'ಒಡೆಲಾ 2' ಸಿನಿಮಾ ಏಪ್ರಿಲ್ 17ಕ್ಕೆ ಥಿಯೇಟರ್‌ನಲ್ಲಿ ರಿಲೀಸ್ ಆಗಿತ್ತು. ಐಟಂ ಸಾಂಗ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ನಟಿ ಖಾವಿ ತೊಟ್ಟಿದ್ದರು. ವಸಿಷ್ಠ ಸಿಂಹ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾ ಅಮೆಜಾನ್‌ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಮೇ 12 ರಿಂದ 18ರವರೆಗೆ ಸುಮಾರು 3.8 ಮಂದಿ ವೀಕ್ಷಣೆ ಮಾಡಿದ್ದಾರೆ.

ಟಾಪ್ 1- 'ಗುಡ್ ಬ್ಯಾಡ್ ಅಗ್ಲಿ'

ತಮಿಳಿನ ಜನಪ್ರಿಯ ನಟ ಅಜಿತ್ ಕುಮಾರ್ ಅಭಿನಯದ ಸಿನಿಮಾ 'ಗುಡ್ ಬ್ಯಾಡ್ ಅಗ್ಲಿ'. ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ ಚಿತ್ರಮಂದಿರದಲ್ಲಿ ತಕ್ಕ ಮಟ್ಟಿಗೆ ಸದ್ದು ಮಾಡಿತ್ತು. ಈಗ ಒಟಿಟಿಗೆ ಎಂಟ್ರಿ ಕೊಟ್ಟಿರುವ ಸಿನಿಮಾ ಮೇ 12 ರಿಂದ 18ವರೆಗೂ ಅತೀ ವೀಕ್ಷಿಸಿದ ಸಿನಿಮಾಗಳ ಪಟ್ಟಿಯಲ್ಲಿ ಟಾಪ್‌ನಲ್ಲಿದೆ. ಈ ಸಿನಿಮಾವನ್ನು 6.1 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದಾರೆ. ಇದು ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.

More from Filmibeat

English summary
Top 5 most-watched films on OTT in India from May 12 to May 18, 2025 Ormax report.
Read more about: movies report kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X