ಜಿಯೋ ಸಿನಿಮಾದಲ್ಲಿ IMDB ಟಾಪ್ ರೇಟಿಂಗ್ ಕೊಟ್ಟ ಚಿತ್ರಗಳು; '777 ಚಾರ್ಲಿ'ನೂ ಫೇವರಿಟ್
ಈಗಂತೂ ಸಿನಿಮಾಗಳನ್ನು ಥಿಯೇಟರ್‌ಗೆ ಹೋಗಿ ನೋಡುವುದಕ್ಕಿಂತ ಹೆಚ್ಚಾಗಿ ಓಟಿಟಿಯಲ್ಲಿ ನೋಡುವವರ ಸಂಖ್ಯೆನೇ ಹೆಚ್ಚಾಗಿದೆ. ಈ ಕಾರಣಕ್ಕೆ ಕಾಂಪಿಟೇಷನ್‌ಗೆ ಬಿದ್ದು ಓಟಿಟಿ ವೇದಿಕೆಗಳು ಒಳ್ಳೊಳ್ಳೆ ಸಿನಿಮಾಗಳನ್ನು ಸ್ಟ್ರೀಮಿಂಗ್ ಮಾಡುತ್ತಿದೆ. ಈ ಸಾಲಿನಲ್ಲಿ ಜಿಯೋ ಸಿನಿಮಾ ಕೂಡ ಇದೆ. ಭಾರತದ ಪ್ರಮುಖ ಭಾಷೆಗಳ ಅತ್ಯುತ್ತಮ ಸಿನಿಮಾಗಳನ್ನು ಸ್ಟ್ರೀಮಿಂಗ್ ಮಾಡುತ್ತಿದೆ.
ಜಿಯೋದಲ್ಲಿ ಸಿನಿಮಾದಲ್ಲಿ ಎಲ್ಲಾ ವಯಸ್ಸಿನವರಿಗೂ ಇಷ್ಟ ಆಗುವಂತಹ ಕಂಟೆಂಟ್ ಇದೆ. ಸಿನಿಮಾ, ವೆಬ್‌ಸೀರಿಸ್, ಟಿವಿ ಶೋಗಳನ್ನು ಈ ವೇದಿಕೆಯಲ್ಲಿ ನೋಡಬಹುದು. ಭಾರತದ ಪ್ರಮುಖ ಭಾಷೆಯಲ್ಲಿ ಇದೂವರೆಗೆ ತೆರೆಕಂಡಿರುವ ಅತ್ಯುತ್ತಮ ಸಿನಿಮಾಗಳು ಜಿಯೋ ಸಿನಿಮಾದಲ್ಲಿ ಇವೆ.
ಇದೀಗ ಸಿನಿಮಾ, ಟಿವಿ ಶೋ ಹಾಗೂ ಸೆಲೆಬ್ರಿಟಿಗಳ ಜನಪ್ರಿಯತೆ ಬಗ್ಗೆ ಅಧಿಕೃತ ಮಾಹಿತಿ ಕೊಡುವ ವೇದಿಕೆ IMDB. ಈ ವೇದಿಕೆ ಕೂಡ ವೀಕ್ಷಕರು ಸರ್ಚ್ ಆಧಾರದ ಮೇಲೆ ಸಿನಿಮಾಗಳಿಗೆ ರೇಟಿಂಗ್ ಅನ್ನು ಕೊಡುತ್ತೆ. ಇದು ಟಾಪ್ ರೇಟಿಂಗ್ ಕೊಟ್ಟ ಸಿನಿಮಾಗಳು ಜಿಯೋ ಸಿನಿಮಾದಲ್ಲಿ ಲಭ್ಯವಿದೆ. ಜಿಯೋ ಸಿನಿಮಾದಲ್ಲಿರುವ ಟಾಪ್ 5 ಸಿನಿಮಾಗಳು ಇಲ್ಲಿವೆ.

ಎನ್‌ಟಿಆರ್ 'ಮಾಯಾಬಜಾರ್'
ತೆಲುಗು ಚಿತ್ರರಂಗದ ಲೆಜೆಂಡ್ ಎನ್‌ಟಿಆರ್ ನಟಿಸಿದ ಎವರ್‌ಗ್ರೀನ್ ಸಿನಿಮಾ 'ಮಾಯಾಬಜಾರ್'. ಕೆವಿ ರೆಡ್ಡಿ ನಿರ್ದೇಶಿಸಿದ ಈ ಪೌರಾಣಿಕ ಸಿನಿಮಾ ಅಲ್ ಟೈಮ್ ಫೇವರಿಟ್. 'ಮಾಯಾಬಜಾರ್' ಮಹಾಭಾರತದ ಕೆಲವು ಪ್ರಮುಖ ಪಾತ್ರಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿತ್ತು. ಎನ್‌ಟಿಆರ್, ಸಾವಿತ್ರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. IMDB ಈ ಸಿನಿಮಾಗೆ 9.1 ರೇಟಿಂಗ್ ಕೊಟ್ಟಿದೆ.

ಮಲಯಾಳಂ ಸಿನಿಮಾ 'ಸಂದೇಶಂ'
1991ರಲ್ಲಿ ತೆರೆಕಂಡಿರುವ ಸೂಪರ್ ಹಿಟ್ ಮಲಯಾಳಂ ಸಿನಿಮಾ 'ಸಂದೇಶಂ'. ಈ ಸಿನಿಮಾದಲ್ಲಿ ಮಲಯಾಳಂ ದಿಗ್ಗಜ ಜಯರಾಂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಇಬ್ಬರು ಸಹೋದರರ ವಿಭಿನ್ನ ರಾಜಕೀಯ ಸಿದ್ಧಾಂತಗಳನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಲಾಗಿತ್ತು. ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿತ್ತು. IMDB ಈ ಸಿನಿಮಾಗೆ 9 ರೇಟಿಂಗ್ ಕೊಟ್ಟಿದೆ.

ಮಲಯಾಳಂ ಸಿನಿಮಾ 'ಮಣಿಚಿತ್ರತಾಳ್'
ಮಲಯಾಳಂ ಚಿತ್ರರಂಗದ ಮತ್ತೊಂದು ಅದ್ಭುತ ಸಿನಿಮಾ 'ಮಣಿಚಿತ್ರತಾಳ್'. ಮೋಹನ್‌ಲಾಲ್, ಸುರೇಶ್ ಗೋಪಿ, ಶೋಭನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಸಿನಿಮಾವನ್ನು ಕನ್ನಡದಲ್ಲಿ ರೀಮೆಕ್ ಮಾಡಲಾಗಿತ್ತು. ಅದುವೇ 'ಆಪ್ತಮಿತ್ರ. ಈ ಸಿನಿಮಾಗೆ IMDB 8.7 ರೇಟಿಂಗ್ ಕೊಟ್ಟಿದೆ.

'ರಾಕೆಟ್ರಿ: ದಿ ನಂಬಿ ಎಫೆಕ್ಟ್'
ಮಾಜಿ ಇಸ್ರೋ ವಿಜ್ಞಾನಿ ನಂಬಿ ನಾರಾಯಣ್ ಅವರ ಬಯೋಪಿಕ್ 'ರಾಕೆಟ್ರಿ: ದಿ ನಂಬಿ ಎಫೆಕ್ಟ್'. ಈ ಸಿನಿಮಾದಲ್ಲಿ ಆರ್. ಮಾಧವನ್ ನಟಿಸಿ, ನಿರ್ದೇಶಿಸಿದ್ದರು. ಈ ವಿವಾದಾತ್ಮಕ ಪರ್ಸನಾಲಿಟಿಯ ಸಿನಿಮಾಗೆ ಮೆಚ್ಚುಗೆ ಕೂಡ ವ್ಯಕ್ತವಾಗಿದ್ದವು. 'ರಾಕೆಟ್ರಿ: ದಿ ನಂಬಿ ಎಫೆಕ್ಟ್'ಗೆ IMDB 8.7 ರೇಟಿಂಗ್ ಕೊಟ್ಟಿದೆ.

'777 ಚಾರ್ಲಿ'
ರಕ್ಷಿತ್ ಶೆಟ್ಟಿ ನಟಿಸಿದ '777 ಚಾರ್ಲಿ' ಸಿನಿಮಾ ಕೂಡ IMDB ಲಿಸ್ಟ್‌ನಲ್ಲಿದೆ. ರಕ್ಷಿತ್ ಶೆಟ್ಟಿ, ಸಂಗೀತ ಶೃಂಗೇರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾವನ್ನು ಕಿರಣ್ ರಾಜ್ ನಿರ್ದೇಶನ ಮಾಡಿದ್ದರು. ಈ ಸಿನಿಮಾಗೆ IMDB 8.7 ರೇಟಿಂಗ್ ಕೊಟ್ಟಿದ್ದು,ಇದು ಜಿಯೋ ಸಿನಿಮಾದಲ್ಲಿ ಲಭ್ಯವಿದೆ. ರಕ್ಷಿತ್ ಶೆಟ್ಟಿ ಹಾಗೂ ಚಾರ್ಲಿಯ ಬಾಂಧವ್ಯವನ್ನು ಈ ಸಿನಿಮಾದಲ್ಲಿ ತೋರಿಸಲಾಗಿತ್ತು. ಶ್ವಾನ ಪ್ರಿಯರಿಗೆ ಈ ಸಿನಿಮಾ ಮೆಚ್ಚುಗೆಯಾಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಅಲ್ಲದೆ ಹಲವು ಪ್ರಶಸ್ತಿಗಳನ್ನು ಈ ಸಿನಿಮಾ ಬಾಚಿಕೊಂಡಿತ್ತು.


Click it and Unblock the Notifications











