ಜಿಯೋ ಸಿನಿಮಾ ಡಿಸ್ನಿ ಹಾಟ್‌ಸ್ಟಾರ್ ವಿಲೀನ: ಮನರಂಜನೆ, ಕ್ರೀಡೆಯ ಮಹಾ ಸಂಗಮ!

ಓಟಿಟಿ ಕ್ಷೇತ್ರ ಮಹತ್ತರವಾದ ಬೆಳೆವಣಿಗೆಯಾಗಿದೆ. ಎರಡು ದೊಡ್ಡ ಓಟಿಟಿ ವೇದಿಕೆಗಳು ವಿಲೀನಗೊಂಡಿವೆ. ವಯೋಕಾಮ್ 18 ಸಂಸ್ಥೆಯ ಜಿಯೋ ಸಿನಿಮಾ ಹಾಗೂ ಸ್ಟಾರ್ ಇಂಡಿಯಾದ ಡಿಸ್ನಿ+ಹಾಟ್‌ಸ್ಟಾರ್ ಎರಡೂ ವೇದಿಕೆಗಳು ಒಟ್ಟಿಗೆ ಸೇರಿಕೊಂಡಿವೆ. ಇವೆರಡರ ವಿಲೀನವೇ 'ಜಿಯೋ ಹಾಟ್‌ಸ್ಟಾರ್'. ಈ ಮೂಲಕ ಓಟಿಟಿ ಪ್ರಿಯರಿಗೆ ಭರಪೂರ ಮನರಂಜನೆ ನೀಡುವುದಕ್ಕೆ ಸಜ್ಜಾಗಿದೆ.

ಜಿಯೋ ಸಿನಿಮಾ ಹಾಗೂ ಡಿಸ್ನಿ+ಹಾಟ್‌ಸ್ಟಾರ್ ಎರಡು ಸೇರಿ ಜಿಯೋಹಾಟ್‌ಸ್ಟಾರ್ ಆಗಿದ್ದು, ಓಟಿಟಿ ಕಂಟೆಂಟ್‌ಗಳನ್ನು ನೋಡುವವರಿಗೆ ಭರಪೂರ ಮನರಂಜನೆ ಸಿಗಲಿದೆ. ಈ ಜಿಯೋ ಹಾಟ್‌ಸ್ಟಾರ್ ಸುಮಾರು 10 ಭಾಷೆಯಲ್ಲಿ ಸಿನಿಮಾ, ವೆಬ್‌ ಸೀರಿಸ್, ಕ್ರೀಡೆ ಸೇರಿದಂತೆ ಹಲವು ಕಂಟೆಂಟ್‌ಗಳನ್ನು ನೀಡಲಿದೆ. ಇದರೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಂಟೆಂಟ್‌ಗಳನ್ನು ನೀಡುವ ಎನ್‌ಬಿಸಿ ಯುನಿವರ್ಸನ್ ಪೀಕಾಕ್, ವಾರ್ನರ್ ಬ್ರದರ್ಸ್, ಡಿಸ್ಕವರಿ, ಎಚ್‌ಬಿಓ ಅಂತ ವೇದಿಕೆಗಳ ಕಂಟೆಂಟ್‌ಗಳು ಕೂಡ ಇಲ್ಲಿ ಲಭ್ಯವಿದೆ.

Viacom18 and Star India launched JioHotstar here is the deailes about offer content and more

ಈ ವಿಲೀನದಿಂದ ಜಿಯೋ ಸಿನಿಮಾ ಹಾಗೂ ಡಿಸ್ನಿ+ಹಾಟ್‌ಸ್ಟಾರ್‌ನ ಚಂದಾದಾರರು ಇಬ್ಬರೂ ಈ ಎಲ್ಲಾ ಕಂಟೆಂಟ್‌ಗಳನ್ನು ನೋಡಬಹುದಾಗಿದೆ. ಹಾಗೇ ಮುಂದೆ ಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL), ಅಂತರಾಷ್ಟ್ರೀಯ ಕ್ರಿಕೆಟ್ ಮ್ಯಾಚ್‌ಗಳನ್ನು, ಫುಟ್‌ಬಾಲ್ ಸೇರಿದಂತೆ ಹಲವು ಕ್ರೀಡೆಗಳನ್ನು ಒಂದೇ ವೇದಿಕೆಯಲ್ಲಿ ನೋಡಿ ಎಂಜಾತಯ್ ಮಾಡಬಹುದಾಗಿದೆ.

ಈ ಮಹಾವಿಲೀನಕ್ಕೆ ಸಿನಿಮಾರಂಗ ತಾರೆಯರು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ. ಎಲ್ಲಾ ಭಾಷೆಯ ಸಿನಿಮಾ ತಾರೆಯರು ಖುಷಿಯನ್ನು ಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್, ಮಾಧುರಿ ದೀಕ್ಷಿತ್ ಸೇರಿದಂತೆ ಬಾಲಿವುಡ್ ಸ್ಟಾರ್‌ಗಳು, ಕನ್ನಡದ ಸಿನಿಮಾ ಹಾಗೂ ಕಿರುತೆರೆ ತಾರೆಯರು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಸುಮಾರು 3 ಲಕ್ಷ ಗಂಟೆಗಳ ಕಂಟೆಂಟ್‌ ಅನ್ನು ಇಲ್ಲಿ ನೋಡಬಹುದಾಗಿದೆ. ಅಂದ್ಹಾಗೆ ಸುಮಾರು 50 ಸಾವಿರ ಕೋಟಿಗೂ ಅಧಿಕ ಸಬ್‌ಸ್ಕ್ರೈಬರ್ ಅನ್ನು ಈ ಓಟಿಟಿ ವೇದಿಕೆ ಹೊಂದಿದೆ.

Viacom18 and Star India launched JioHotstar here is the deailes about offer content and more

ಜಿಯೋ ಹಾಟ್‌ಸ್ಟಾರ್‌ನ ಪ್ರತಿಯೊಬ್ಬ ಸಬ್‌ಸ್ಕ್ರೈಬರ್‌ಗೂ ಅವರ ಅಚ್ಚು ಮೆಚ್ಚುನ ಶೋಗಳು, ಚಲಚಿತ್ರಗಳು, ಲೈವ್ ಶೋಗಳನ್ನು ಚಂದಾದಾರಿಕೆಯ ಅಗತ್ಯವಿಲ್ಲದೆ ನೋಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮೊಬೈಲ್ ಪ್ಲಾನ್ ಮೂರು ತಿಂಗಳಿಗೆ 149 ರೂ. ಅಥವಾ ಒಂದು ವರ್ಷಕ್ಕೆ 499 ರೂ ಪಾವತಿಸಿ ವೀಕ್ಷಣೆ ಮಾಡಬಹುದಾಗಿದೆ. ಹಾಗೇ ಇನ್ನೂ ಹಲವು ಪ್ಲಾನ್‌ಗಳನ್ಉ ಜಾರಿಗೆ ತಂದಿದೆ.

ಭಾರತದಲ್ಲಿ ಓಟಿಟಿ ವೇದಿಕೆಗಳ ಮೇಲೆ ಜನರಿಗೆ ಆಸಕ್ತಿ ಹೆಚ್ಚಾಗುತ್ತಿದೆ. ಥಿಯೇಟರ್‌ಗಳ ಕಡೆಗೆ ಮುಖ ಮಾಡುವುದನ್ನು ಗಣನೀಯವಾಗಿ ಕಡಿಮೆ ಮಾಡಿದ್ದಾರೆ. ಹಾಗೇ ಓಟಿಟಿ ವೇದಿಕೆಗಳಲ್ಲಿ ಕಾಂಪಿಟೇಷನ್ ಹೆಚ್ಚಾಗಿದ್ದು, ಪ್ರತಿ ದಿನ ಒಂದೊಂದು ಹೊಸ ಕಂಟೆಂಟ್ ಅನ್ನು ಸ್ಟ್ರೀಮಿಂಗ್ ಮಾಡುತ್ತಿವೆ. ಈಗ ಜಿಯೋ ಸಿನಿಮಾ ಹಾಗೂ ಡಿಸ್ನಿ ಹಾಟ್‌ಸ್ಟಾರ್ ವಿಲೀನ ಆಗಿದ್ದು, ಓಟಿಟಿ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಕ್ರಾಂತಿ ಆಗಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಈಗಾಗಲೇ 50 ಕೋಟಿ ಚಂದಾದಾರರನ್ನು ಹೊಂದಿರುವ ಈ ಪ್ಲಾಟ್‌ಫಾರ್ಮ್ ಮುಂದಿನ ದಿನಗಳಲ್ಲಿ ಎಂತಹ ಕಂಟೆಂಟ್‌ಗಳನ್ನು ನೀಡಬಹುದು ಅನ್ನೋ ಕುತೂಹಲವೂ ಇದೆ.

More from Filmibeat

English summary
Viacom18 and Star India launched JioHotstar here is the deailes about offer, content and more;
Read more about: tv movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X