Chhaava OTT Release: ರಶ್ಮಿಕಾ ಮಂದಣ್ಣ-ವಿಕ್ಕಿ ಸಿನಿಮಾ 'ಛಾವಾ' ಓಟಿಟಿ ರಿಲೀಸ್ ಯಾವಾಗ? ಎಲ್ಲಿ?
ಬಾಲಿವುಡ್‌ನಲ್ಲಿ ಈ ವಾರ ಬಿಗ್ ಬಜೆಟ್ ಸಿನಿಮಾ 'ಛಾವಾ' ರಿಲೀಸ್ ಆಗಿದೆ. ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟಿಸಿರುವ ಈ ಐತಿಹಾಸಿಕ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. 'ಛಾವಾ' ನಿನ್ನೆ (ಫೆಬ್ರವರಿ 14) ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಇದೊಂದು ಐತಿಹಾಸ ಸಿನಿಮಾ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ವಿಕ್ಕಿ ಕೌಶಲ್ ಹಾಗೂ ಅಕ್ಷಯ್ ಖನ್ನ ಅಭಿನಯ ಕಣ್ತುಂಬಿಕೊಂಡ ಪ್ರೇಕ್ಷಕರು ಕಳೆದು ಹೋಗಿದ್ದಾರೆ. ವಿಕ್ಕಿ ಕೌಶಲ್ ಈ ಸಿನಿಮಾದಲ್ಲಿ ಮರಾಠ ಕಿಂಗ್ ಛತ್ರಪತಿ ಸಾಂಬಾಜಿ ಮಹಾರಾಜ್ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಮಹಾರಾಣಿ ಯೆಸುಬಾಯಿ ಪಾತ್ರದಲ್ಲಿ ನಟಿಸಿದ್ದರೆ, ಅಕ್ಷಯ್ ಖನ್ನ ಮೊಘಲ್ ದೊರೆ ಔರಂಗಜೇಬನ ಪಾತ್ರದಲ್ಲಿ ಅಬ್ಬರಿಸಿದ್ದಾರೆ.

ಈ ಮೂರು ಪಾತ್ರಗಳು ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುತ್ತಿದೆ. ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿರುವ 'ಛಾವಾ' ಓಟಿಟಿ ರಿಲೀಸ್ ಬಗ್ಗೆನೂ ಚರ್ಚೆಯಾಗುತ್ತಿದೆ. ಚಿತ್ರಮಂದಿರಲ್ಲಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ಸದ್ಯದಲ್ಲೇ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುವುದಿಲ್ಲ. ಆದರೆ, ಸಹಜವಾಗಿ ಸಿನಿಮಾ ಬಿಡುಗಡೆಯಾದ 45 ರಿಂದ 60 ದಿನಗಳ ಅಂತರದಲ್ಲಿ ಓಟಿಟಿಗೆ ಲಗ್ಗೆ ಇಡುತ್ತಿದೆ ಎನ್ನಲಾಗಿದೆ.
ಹೌದು, ಯಾವುದೇ ಸಿನಿಮಾ ರಿಲೀಸ್ ಆದರೂ, ಅದು ಥಿಯೇಟರ್‌ನಲ್ಲಿ 45 ರಿಂದ 60 ದಿನಗಳ ಒಳಗೆ ಓಟಿಟಿಯಲ್ಲಿ ರಿಲೀಸ್ ಆಗುವುದಿಲ್ಲ. ಈ ಒಡಂಬಡಿಕೆಯನ್ನು ಪ್ರತಿಯೊಂದು ಸಿನಿಮಾ ತಂಡವೂ ಓಟಿಟಿ ವೇದಿಕೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುತ್ತೆ. ಹಾಗೇ 'ಛಾವಾ' ಸಿನಿಮಾ ಕೂಡ ಒಪ್ಪಂದದಂತೆ 45 ದಿನಗಳ ಬಳಿಕ ಥಿಯೇಟರ್‌ಗೆ ಲಗ್ಗೆ ಇಡಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ.

ಓಟಿಟಿ ಪ್ಲೇ ವರದಿ ಪ್ರಕಾರ, ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಹಾಗೂ ಅಕ್ಷಯ್ ಖನ್ನ ನಟನೆಯ ಈ ಸಿನಿಮಾದ ಓಟಿಟಿ ರೈಟ್ಸ್ ನೆಟ್‌ಫ್ಲಿಕ್ಸ್‌ಗೆ ಮಾರಾಟ ಆಗಿದೆ ಎಂದು ಹೇಳಲಾಗುತ್ತಿದೆ. 60 ದಿನಗಳ ಓಳಗೆ ಓಟಿಟಿಗೆ ಲಗ್ಗೆ ಇಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಎಲ್ಲದಕ್ಕೂ ಸಿನಿಮಾ ಚಿತ್ರಮಂದಿರದಲ್ಲಿ ಯಾವ ರೀತಿ ಪ್ರದರ್ಶನ ಮಾಡುತ್ತೆ ಅನ್ನೋದರ ಮೇಲೆ ಎಲ್ಲವೂ ನಿಂತಿದೆ. 60 ದಿನಗಳ ಆಸುಪಾಸಿನಲ್ಲೂ ಥಿಯೇಟರ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದರೆ ಮತ್ತೆ ಮುಂದಕ್ಕೆ ಹೋಗಬಹುದು.
ಅಲ್ಲು ಅರ್ಜುನ್ ನಟಿಸಿದ ಪ್ಯಾನ್ ಇಂಡಿಯಾ ಸಿನಿಮಾ 'ಪುಪ್ಪ 2' ಥಿಯೇಟರ್‌ನಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿತ್ತು. ಹೀಗಿದ್ದರೂ ನೆಟ್‌ಫ್ಲಿಕ್ಸ್‌ನಲ್ಲಿ 56 ದಿನಗಳಲ್ಲಿ ರಿಲೀಸ್ ಆಗಿತ್ತು. ಈ ಕಾರಣಕ್ಕಾಗಿಯೇ ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ನಟನೆಯ 'ಛಾವಾ' ಸಿನಿಮಾ ಇಷ್ಟು ದಿನಗಳ ಅಂತರದಲ್ಲಿಯೇ ರಿಲೀಸ್ ಆಗಬಹುದು ಎಂದಾಜಿಸಲಾಗುತ್ತಿದೆ.
ಇನ್ನು ವಿಕ್ಕಿ ಕೌಶಲ್ ವೃತ್ತಿ ಬದುಕಿನಲ್ಲಿಯೇ 'ಛಾವಾ' ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಮೊದಲ ದಿನ ಈ ಸಿನಿಮಾ 31 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಇಂಡಸ್ಟ್ರಿ ಟ್ರೇಡ್ ವೆಬ್‌ಸೈಟ್ Sacnilk ವರದಿ ಮಾಡಿದೆ. ಇದು ವಿಕ್ಕಿ ಕೌಶಲ್ ವೃತ್ತಿ ಬದುಕಿನ ಅತೀ ದೊಡ್ಡ ಓಪನಿಂಗ್ ಪಡೆದುಕೊಂಡ ಸಿನಿಮಾ ಎನಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮೊತ್ತದ ಕಲೆಕ್ಷನ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
Disclaimer:'ಛಾವಾ' ಸಿನಿಮಾ ಓಟಿಟಿ ರಿಲೀಸ್ ಬಗ್ಗೆ ಚಿತ್ರತಂಡ ಅಥವಾ ನಿರ್ಮಾಣ ಸಂಸ್ಥೆ ಮಾಹಿತಿಯನ್ನು ಇನ್ನೂ ಹಂಚಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಓಟಿಟಿ ರಿಲೀಸ್ ಬಗ್ಗೆ ಮಾಹಿತಿಯನ್ನು ನೀಡಬಹುದು.


Click it and Unblock the Notifications











