Kaalapathar OTT: ಓಟಿಟಿಗೆ ಎಂಟ್ರಿ ಕೊಟ್ಟ ಮತ್ತೊಂದು ಕನ್ನಡ ಸಿನಿಮಾ; ಎಲ್ಲಿ? ಯಾವಾಗ?
ಸ್ಯಾಂಡಲ್‌ವುಡ್ ಸಿನಿಮಾಗಳು ಇತ್ತೀಚೆಗೆ ಥಿಯೇಟರ್‌ನಲ್ಲಿ ಸದ್ದು ಮಾಡುವುದಕ್ಕಿಂತ ಹೆಚ್ಚಾಗಿ ಓಟಿಟಿಯಲ್ಲಿ ಸೌಂಡು ಮಾಡುತ್ತಿದೆ. ಬಾಕ್ಸಾಫೀಸ್‌ನಲ್ಲಿ ದೊಡ್ಡ ಸದ್ದು ಮಾಡಿದೇ ಇದ್ದರೂ ಓಟಿಟಿಯಲ್ಲಿ ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಈಗ ಮತ್ತೊಂದು ಕನ್ನಡ ಸಿನಿಮಾ ಓಟಿಟಿಗೆ ಲಗ್ಗೆ ಇಟ್ಟಿದೆ. ಅದುವೇ ವಿಕ್ಕಿ ವರುಣ್ ನಟಿಸಿ, ನಿರ್ದೇಶಿಸಿದ 'ಕಾಲಾಪತ್ಥರ್'.
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ (2024) 'ಕಾಲಾಪತ್ಥರ್' ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಟ್ಟಿತ್ತು. ವಿಭಿನ್ನ ಕಲ್ಪನೆಯುಳ್ಳ ಕಥೆಯ ಮೂಲಕ ವಿಕ್ಕಿ ವರುಣ್ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನಿಮಾಗೆ ಹೀರೋ ಆಗಿನ ನಟಿಸುವುದರ ಜೊತೆಗೆ ಮೊದಲ ಬಾರಿಗೆ ನಿರ್ದೇಶನಕ್ಕೆ ಕೂಡ ಇಳಿದಿದ್ದರು. ಸಿನಿಮಾ ಕಥೆಯನ್ನು ಸಿನಿಪ್ರಿಯರು ಮೆಚ್ಚಿಕೊಂಡಿದ್ದರು. ಆಗ ಥಿಯೇಟರ್‌ಗೆ ಎಂಟ್ರಿ ಕೊಟ್ಟಾಗ ಯಾರೆಲ್ಲ ಮಿಸ್‌ಕೊಂಡಿದ್ದರೋ ಅವರೀಗ ಓಟಿಟಿಯಲ್ಲಿ ಈ ಸಿನಿಮಾವನ್ನು ನೋಡಬಹುದಾಗಿದೆ.

ವಿಕ್ಕಿ ವರುಣ್ ಭಾರತೀಯ ಸೇನೆಯ ಯೋಧನಾಗಿ ಕಾಣಿಸಿಕೊಂಡಿರುವ 'ಕಾಲಾಪತ್ಥರ್' ಕನ್ನಡ ಸಿನಿಮಾ ಈಗ ಓಟಿಟಿಗೆ ಲಗ್ಗೆ ಇಟ್ಟಿದೆ. ವಿಕ್ಕಿ ವರಣ್ ಹಾಗೂ ಧನ್ಯಾ ರಾಮ್‌ಕುಮಾರ್ ನಟನೆಯ ಈ ಸಿನಿಮಾ ಯಾವ ಓಟಿಟಿ ವೇದಿಕೆಯಲ್ಲಿ ನೋಡಬಹುದು? ಎಂದಿನಿಂದ ಸ್ಟ್ರೀಮಿಂಗ್ ಆಗಲಿದೆ ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಈ ಓಟಿಟಿ ವೇದಿಕೆಯಲ್ಲಿ 'ಕಾಲಾಪತ್ಥರ್'
ವಿಕ್ಕಿ ವರುಣ್ ಯೋಧನಾಗಿ ನಟಿಸಿರುವ 'ಕಾಲಾಪತ್ಥರ್' ಸಿನಿಮಾವನ್ನು ಥಿಯೇಟರ್‌ನಲ್ಲಿ ವೀಕ್ಷಿಸಿದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ವಿಕ್ಕಿ ಆಯ್ಕೆ ಮಾಡಿಕೊಂಡಿದ್ದ ಕಥೆ ಸಮಾಜದಲ್ಲಿ ಒಂದೊಳ್ಳೆ ಸಂದೇಶವನ್ನು ಹೇಳಿತ್ತು. ಇಂತಹ ಸಿನಿಮಾವನ್ನು ಮಿಸ್ ಮಾಡಿಕೊಂಡಿವರು ಈ ಸಿನಿಮಾವನ್ನು ಸನ್ ನೆಕ್ಸ್ಟ್ ಓಟಿಟಿ ವೇದಿಕೆಯಲ್ಲಿ ನೋಡಬಹುದು. ಇಂದಿನಿಂದ (ಮೇ 2) 'ಕಾಲಾಪತ್ಥರ್' ಓಟಿಟಿಯಲ್ಲಿ ಸ್ಕ್ರೀಮಿಂಗ್ ಆಗುತ್ತಿದೆ. ಥಿಯೇಟರ್‌ನಲ್ಲಿ ಸಿನಿಮಾವನ್ನು ಮಿಸ್ ಮಾಡಿಕೊಂಡವರು, ಇಲ್ಲಿ ನೋಡಬಹುದು.
'ಕಾಲಾಪತ್ಥರ್' ಕಥೆಯೇನು?
ಭಾರತೀಯ ಸೇನೆಯಲ್ಲಿ ಅಡುಗೆ ಭಟ್ಟನಾಗಿ ಸೇವೆ ಸಲ್ಲಿಸುತ್ತಿರುವ ಸಿನಿಮಾದ ಹೀರೋ ಒಂದು ಮಿಷನ್‌ನಲ್ಲಿ ಭಾಗವಹಿಸಬೇಕಾಗಿ ಬರುತ್ತೆ. ಈ ವೇಳೆ ಶಂಕರ್ (ವಿಕ್ಕಿ ವರುಣ್) ದಿಟ್ಟದಿಂದ ವೈರಿಗಳ ವಿರುದ್ಧ ಹೋರಾಡಿ ಅವರನ್ನು ಹೊಡೆದೋಡಿಸುತ್ತಾನೆ. ಇಲ್ಲಿಂದ ಶಂಕರ್ ರಾಷ್ಟ್ರ ಮಟ್ಟದಲ್ಲಿ ಹೀರೋ ಆಗಬಿಡುತ್ತಾನೆ. ಇದು ಆತ ಊರಿನ ಜನರಿಗೆ ಹೆಮ್ಮೆ ಎನಿಸಿ, ತಮ್ಮೂರಿನಲ್ಲೇ ಆತನಿಗೆ ಸನ್ಮಾನ ಮಾಡಿ, ಆತನ ಪುತ್ಥಳಿಯನ್ನು ಸ್ಥಾಪಿಸುತ್ತಾರೆ. ಇಲ್ಲಿಂದ ಯೋಧ ಶಂಕರ್ ಬದುಕು ಅನಿರೀಕ್ಷಿತ ಟರ್ನ್ ಅನ್ನು ತೆಗೆದುಕೊಳ್ಳುತ್ತೆ. ರಾಜಕೀಯ ಹಾಗೂ ಸಾಮಾಜಿಕ ಒತ್ತಡಗಳಿಸಿದ ಶಂಕರ್‌ಗೆ ಪುತ್ಥಳಿಯನ್ನು ರಕ್ಷಿಸಬೇಕಾ? ಸೇನೆಗೆ ಹೋಗಬೇಕಾ? ಎನ್ನುವ ಪ್ರಶ್ನೆ ಎದುರಾಗುತ್ತೆ. ಮುಂದೆ ಆತನ ಬದುಕಲ್ಲಿ ಹೊಗಳುತ್ತಿದ್ದವರೇ ಯಾಕೆ ತೆಗಳುವುದಕ್ಕೆ ಶುರು ಮಾಡುತ್ತಾರೆ? ಆನಂತರ ಏನಾಗುತ್ತೆ ಅನ್ನೋದು ಸಿನಿಮಾ ಕಥೆ.

ಸಿನಿಮಾಗೆ ಪ್ರತಿಕ್ರಿಯೆ ಹೇಗಿತ್ತು?
ವಿಕ್ಕಿ ವರುಣ್ ಇದೇ ಮೊದಲ ಬಾರಿಗೆ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಚೊಚ್ಚಲ ನಿರ್ದೇಶನಕ್ಕೆ ವಿಕ್ಕಿ ಆಯ್ಕೆ ಮಾಡಿಕೊಂಡ ಕಥೆಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದರು. ಕೆಲವು ಚಿಕ್ಕ ಪುಟ್ಟ ತಪ್ಪುಗಳನ್ನು ಹೊರತು ಪಡಿಸಿದರೇ, ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿತ್ತು. ತುಂಬಾ ದೊಡ್ಡ ಪ್ರತಿಕ್ರಿಯೆ ಸಿಗದೇ ಹೋದರೂ, 'ಕಾಲಾಪತ್ಥರ್'ಗೆ ಪ್ರೇಕ್ಷಕರು ಮೆಚ್ಚುಗೆಯನ್ನು ಸೂಚಿಸಿದ್ದರು. ಸಿನಿಮಾ ತಂಡದ ಪ್ರಯತ್ನಕ್ಕೆ ಬಹುಪರಾಕ್ ಹೇಳಿದ್ದರು.
ಓಟಿಟಿಯಲ್ಲಿ 'ಕಾಲಾಪತ್ಥರ್' ಉಚಿತ
ವಿಕ್ಕಿ ವರುಣ್, ಧನ್ಯ ರಾಮ್ ಕುಮಾರ್ ಜೊತೆಗೆ ಹಿರಿಯ ನಿರ್ದೇಶಕ ಕಮ್ ನಟ ಟಿ.ಎಸ್ ನಾಗಾಭರಣ, ಆಚ್ಯುತ್ ಕುಮಾರ್, ಸಂಪತ್, ರಾಜೇಶ್ ನಟರಂಗ, ಕಾಂತರಾಜ್ ಕಡ್ಡಿಪುಡಿ ಸೇರಿದಂತೆ ಹಲವು ಮಂದಿ ನಟಿಸಿದ್ದಾರೆ. ಪ್ರತಿಮೆಯ ಗೀಳನ್ನು ಹಚ್ಚಿಕೊಂಡ ನಾಯಕನ ವಿಶಿಷ್ಠ ದೃಷ್ಟಿಕೋನ, ಮಾನಸಿಕ ಸ್ಥಿತಿಯನ್ನು ಕಮರ್ಷಿಯಲ್ ಆಗಿ ಹೇಳುವ ಈ ಸಿನಿಮಾವನ್ನು ಸನ್ ನೆಕ್ಸ್ಟ್‌ನಲ್ಲಿ ಉಚಿತವಾಗಿ ನೋಡಬಹುದಾಗಿದೆ.


Click it and Unblock the Notifications











