ಮತ್ತೆ ಸದ್ದು ಮಾಡುತ್ತಿದೆ ಮದ್ಯದ ದೊರೆ ವಿಜಯ್ ಮಲ್ಯ ಜೀವನಾಧಾರಿತ ವೆಬ್ ಸೀರಿಸ್!

ಮದ್ಯದ ದೊರೆ ಅಂತಲೇ ಹೆಸರು ಮಾಡಿದ್ದ ವಿಜಯ್ ಮಲ್ಯ ಈಗ ವಿಶ್ವದ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಅದು ತನ್ನ ಉದ್ಯಮದಿಂದಲ್ಲ, ವಿಲಾಸಿ ಜೀವನದಿಂದಲೂ ಅಲ್ಲ. ತಾನು ಮಾಡಿದ ಸಾಲ ತೀರಿಸಲಾರದೆ ಹೆದರಿ ಓಡಿ ಹೋಗಿದ್ದು ಇನ್ನು ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ. ಕಿಂಗ್‌ಫಿಶರ್ ಏರ್‌ಲೈನ್ಸ್‌ ದಿವಾಳಿಯಾದ ಮೇಲೆ ಪಡೆದುಕೊಂಡ 9,000 ಕೋಟಿ ರೂಪಾಯಿಗೂ ಅಧಿಕ ಬ್ಯಾಂಕ್ ಸಾಲವನ್ನು ತೀರಿಸದೆ ಪರಾರಿಯಾಗಿರುವ ಮಲ್ಯ ವಿರುದ್ದ ಹಲವು ಪ್ರಕರಣ ದಾಖಲಾಗಿದೆ.

ಪರಾರಿಯಾದ ಉದ್ಯಮಿ ವಿಜಯ್ ಮಲ್ಯ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಆರೋಪ ಕೂಡ ಇದೆ. ವಿಜಯ್ ಮಲ್ಯ ಭಾರತವನ್ನು ತೊರೆದು ಬ್ರಿಟನ್‌ನಲ್ಲಿ ನೆಲೆಸಿದ್ದಾರೆ. ಹೀಗಾಗಿ ಬ್ರಿಟನ್‌ನಲ್ಲಿ ಇರುವ ವಿಜಯ್ ಮಲ್ಯರನನ್ನು ಗಡಿಪಾರು ಮಾಡಿಸುವ ಮೂಲಕ ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ. ಈ ಮಧ್ಯೆ ವಿಜಯ್ ಮಲ್ಯ ಜೀವನ ಚರಿತ್ರೆಯನ್ನು ಆಧರಿಸಿದ ವೆಬ್ ಸಿರೀಸ್‌ಗೆ ಶೀಘ್ರವೇ ಚಾಲನೆ ಸಿಗಲಿದೆ. ವಿಜಯ್ ಮಲ್ಯ ಕುರಿತ ವೆಬ್ ಸಿರೀಸ್ ಎಲ್ಲಿ ಪ್ರಸಾರ ಆಗುತ್ತೆ? ಈಗ ಯಾವ ಹಂತದಲ್ಲಿದೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

ವಿಜಯ್ ಮಲ್ಯ ವೆಬ್ ಸೀರಿಸ್ ಶೂಟಿಂಗ್ ಆರಂಭ

ವಿಜಯ್ ಮಲ್ಯ ವೆಬ್ ಸೀರಿಸ್ ಶೂಟಿಂಗ್ ಆರಂಭ

ಭಾರತದಲ್ಲಿ ಈ ಮದ್ಯದ ಜಗತ್ತಿನಲ್ಲಿ ವಿಜಯ್ ಮಲ್ಯರನ್ನೂಯಾರೂ ಹಿಂದಿಕ್ಕಲು ಸಾಧ್ಯವಾಗಿರಲಿಲ್ಲ. ವಿದೇಶದ ಮದ್ಯದ ಕಂಪನಿಗಳನ್ನು ಖರೀದಿ ಮಾಡಿದಾಗಲೂ ವಿಜಯ್ ಮಲ್ಯ ಬಗ್ಗೆ ಹೆಮ್ಮೆ ಪಟ್ಟುವರು ಸಾಕಷ್ಟು ಮಂದಿ ಇದ್ದಾರೆ. ವಿಜಯ್ ಮಲ್ಯ ವಿಲಾಸಿ ಬದುಕು, ಕಾರು, ಬಂಗಲೆ ಮಲ್ಯ ದರ್ಬಾರ್ ಜೋರಾಗೇ ಇತ್ತು. ವಿಜಯ್ ಮಲ್ಯ ಲೈಫ್ ಸ್ಟೈಲ್ ನೋಡಿದವರಿಗೆ ಬದುಕಿದರೆ ಹೀಗೆ ಬದುಕಬೇಕು ಅಂದುಕೊಂಡ ಜನರಗೇನು ಕಮ್ಮಿಯಿರಲಿಲ್ಲ. ಆದರೆ, ಈಗ ಏರ್‌ಲೈನ್ಸ್ ಉದ್ಯಮಕ್ಕೆ ಕೈ ಹಾಕಿ 9 ಸಾವಿರ ಕೋಟಿ ರೂಪಾಯಿ ಸಾಲ ಮಾಡಿ ಪರಾರಿಯಾಗಿದ್ದಾರೆ. ಇವರ ಈ ಬದುಕನ್ನೇ ವೆಬ್ ಸಿರೀಸ್ ಮಾಡಲಾಗುತ್ತಿದ್ದು, ಸದ್ಯ ಪ್ರೀ ಪ್ರೊಡಕ್ಷನ್ ಕೆಲಸ ಮುಗಿದಿದೆ. ಲೇಖಕ ಕೆ ಗಿರಿ ಪ್ರಕಾಶ್ ಬರೆದ 'ದಿ ವಿಜಯ್ ಮಲ್ಯ ಸ್ಟೋರಿ' ಆಧರಿಸಿ ಈ ವೆಬ್ ಸಿರೀಸ್ ನಿರ್ಮಾಣ ಮಾಡಲಾಗುತ್ತಿದೆ. ಅತೀ ಶೀಘ್ರದಲ್ಲಿ ಚಿತ್ರೀಕರಣ ಆರಂಭ ಆಗಲಿದೆ.

OTTಯಲ್ಲಿ ವಿಜಯ್ ಮಲ್ಯ ಸ್ಟೋರಿ

OTTಯಲ್ಲಿ ವಿಜಯ್ ಮಲ್ಯ ಸ್ಟೋರಿ

2020ರಲ್ಲಿ ಕೆ ಗಿರಿ ಪ್ರಕಾಶ್ ಬರೆದ 'ದಿ ವಿಜಯ್ ಮಲ್ಯ ಸ್ಟೋರಿ' ಪುಸ್ತಕದ ಹಕ್ಕುಗಳನ್ನು ಖರೀದಿ ಮಾಡಲಾಗಿತ್ತು. ಓಟಿಟಿ ವೇದಿಕೆ PZ ಪಿಕ್ಚರ್ಸ್ ಹಾಗೂ ಅಲ್‌ಮೈಟಿ ಮೋಷನ್ ಪಿಕ್ಚರ್ ಸಂಸ್ಥೆ ಜಂಟಿಯಾಗಿ ಈ ವೆಬ್ ಸೀರಿಸ್ ಅನ್ನು ನಿರ್ಮಾಣ ಮಾಡುತ್ತಿದೆ. ನಟಿ-ನಿರ್ಮಾಪಕಿ ಪ್ರಬ್ಲಿನ್ ಕೌರ್ ಈ ಪುಸ್ತಕದ ಹಕ್ಕನ್ನು ಖರೀದಿ ಮಾಡಿದ್ದರು. ವಿಜಯ್ ಮಲ್ಯ ಅವರ ವೆಬ್ ಸಿರೀಸ್‌ನ ಚಿತ್ರೀಕರಣ ಮುಗಿದ ಬಳಿಕ ಎಮ್‌ಎಕ್ಸ್ ಪ್ಲೇಯರ್‌ನಲ್ಲಿ ಈ ಸಿರೀಸ್ ಪ್ರಸಾರ ಆಗಲಿದೆ.

ವಿಜಯ್ ಮಲ್ಯ ವೆಬ್ ಸಿರೀಸ್ ಹೈಲೈಟ್ ಏನು?

ವಿಜಯ್ ಮಲ್ಯ ವೆಬ್ ಸಿರೀಸ್ ಹೈಲೈಟ್ ಏನು?

ವಿಜಯ್ ಮಲ್ಯ ಬಾಲ್ಯದ ದಿನಗಳಿಂದ ಭಾರತ ಬಿಟ್ಟು ಬ್ರಿಟನ್‌ಗೆ ಓಡಿ ಹೋದ ದಿನಗಳವರೆಗೂ ಈ ಪುಸ್ತಕದಲ್ಲಿ ಬರೆಯಲಾಗಿದೆ. ಅದೆಲ್ಲವೂ ವೆಬ್ ಸಿರೀಸ್‌ನಲ್ಲಿ ಇರಲಿದೆ. ವಿಜಯ್ ಮಲ್ಯ ಉದ್ಯಮ, ಕಂಪನಿಗಳ ಖರೀದಿ, ವಿಲಾಸಿ ಜೀವನ, ಮಲ್ಯ ಬದುಕಿನ ಉತ್ತುಂಗದ ಕಾಲ, ಕುದುರು ಹುಚ್ಚು, ಆರ್‌ಸಿಬಿ, ಕಿಂಗ್‌ಫಿಶರ್, ವಿಜಯ್ ಮಲ್ಯ ಅವನತಿಗೆ ಕಾರಣ ಇವೆಲ್ಲವನ್ನೂ ಈ ವೆಬ್ ಸಿರೀಸ್‌ನಲ್ಲಿ ಬಿಂಬಿಸಲಾಗುತ್ತಿದೆ. ಹೀಗಾಗಿ ವಿಜಯ್ ಮಲ್ಯ ವೆಬ್ ಸಿರೀಸ್ ಟಾಕ್ ಆಫ್ ದಿ ಟೌನ್ ಆಗಿದೆ.

ವಿಜಯ್ ಮಲ್ಯ ಪಾತ್ರದಲ್ಲಿ ಗೋವಿಂದ?

ವಿಜಯ್ ಮಲ್ಯ ಪಾತ್ರದಲ್ಲಿ ಗೋವಿಂದ?

ಮೂರು ವರ್ಷಗಳ ಹಿಂದೆನೇ ವಿಜಯ್ ಮಲ್ಯ ಜೀವನಾಧಾರಿಸಿದ ಸಿನಿಮಾ ಸೆಟ್ಟೇರಲು ಸಜ್ಜಾಗಿತ್ತು. ಕೇಂದ್ರ ಸೆನ್ಸಾರ್ ಮಂಡಳಿಯ ಮಾಜಿ ಅಧ್ಯಕ್ಷ ಪಹಲಾಜ್ ನಿಹಾಲನಿ ಈ ಚಿತ್ರವನ್ನ ನಿರ್ದೇಶನದ ಜೊತೆ ನಿರ್ಮಾಣ ಮಾಡಲು ಮುಂದಾಗಿದ್ದರು. ಈ ಚಿತ್ರಕ್ಕೆ 'ರಂಗೀನ್ ರಾಜ' ಎನ್ನುವ ಹೆಸರು ಕೂಡ ಇಡಲಾಗಿತ್ತು. ಬಾಲಿವುಡ್ ನಟ ಗೋವಿಂದ ಮದ್ಯದ ದೊರೆ ವಿಜಯ್ ಮಲ್ಯ ಪಾತ್ರದಲ್ಲಿ ನಟಿಸುತ್ತಿದ್ದರು. ಒಂದು ಸೆಟ್ ಹಾಡಿನ ಶೂಟಿಂಗ್ ಕೂಡ ಮುಗಿದಿತ್ತು. ಮೂರು ವರ್ಷದ ಹಿಂದೆ ಆರಂಭ ಆಗಿದ್ದ ಈ ಸಿನಿಮಾ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

More from Filmibeat

English summary
Disgraced tycoon Vijay Mallya life to be made into a show for MX Player. The story is based on the novel written by Prakash Giri for Penguin India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X