OTT News:ವಿಜಯ್ ಸೇತುಪತಿ To ಮಹೇಶ್; ಈ 'ಪೆಂಗ್ವಿನ್' ಸೀರಿಸ್‌ನಲ್ಲಿ ಭಾರತದ ಯಾವ ನಟ ನಟಿಸಿದ್ರೆ ಉತ್ತಮ?

ಓಟಿಟಿ ಪ್ರಿಯರು ಕಾತುರದಿಂದ ಕಾಯುತ್ತಿರುವ ಪೆಂಗ್ವಿನ್ ಸೀರಿಸ್ ಇದೇ ತಿಂಗಳು ಸೆಪ್ಟೆಂಬರ್ 20ರಂದು ಪ್ರೀಮಿಯರ್ ಆಗುತ್ತಿದೆ. ಜಿಯೋ ಸಿನಿಮಾ ಪ್ರೀಮಿಯರ್‌ನಲ್ಲಿ ಈ ಪೆಂಗ್ವಿನ್ ಸೀರಿಸ್‌ ಸ್ಟ್ರೀಮಿಂಗ್ ಆಗುತ್ತಿದೆ. ಕಾಲ್ಪನಿಕ ಗೋಥಮ್‌ನಲ್ಲಿ ಕ್ರೈಂ ಪ್ರಪಂಚದ ದೊರೆ ಓಸ್ವಾಲ್ಡ್ ಕೋಬಲ್ಪಾಟ್ ಅಥವಾ ಪೆಂಗ್ವಿನ್‌ ಮತ್ತೊಂದು ಕಥೆಯನ್ನು ಹೊತ್ತು ಈ ಸೀರಿಸ್ ಬರುತ್ತಿದೆ.

ಈ ಬಾರಿ ಕಾಲಿನ್ ಫಾರೆಲ್ ಪೆಂಗ್ವಿನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕೆ ವಿಶ್ವದಾದ್ಯಂತ ಫ್ಯಾನ್ ಫಾಲೋವಿಂಗ್ ಇದೆ. ಹಾಲಿವುಡ್‌ನ ಜನಪ್ರಿಯ ಸರಣಿ ಬ್ಯಾಟ್‌ಮ್ಯಾನ್‌ನಲ್ಲಿ ಬರುವ ಫೇಮಸ್ ಕ್ಯಾರೆಕ್ಟರ್ ಈ ಪೆಂಗ್ವಿನ್. ಇದರ ಜನಪ್ರಿಯತೆಯನ್ನು ಅರಿತ ಫಿಲ್ಮ್‌ ಮೇಕರ್ಸ್ ಪೆಂಗ್ವಿನ್ ಸೀರಿಸ್‌ಗೆ ಮುಂದಾಗಿದ್ದರು.

Vijay Sethupathi to Mahesh Manjrekar top 5 actors Who can play The Penguin Indian Batman Adaptation

ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ನಟಿಸಿದ 'ಸಿಟಾಡೆಲ್' ಸೀರಿಸ್‌ ಅನ್ನು ಭಾರತಕ್ಕೆ ತರಲಾಗಿದೆ. ಈ ಸೀರಿಸ್‌ನ ಭಾರತದ ಅವತರಣಿ ಬಿಡುಗಡೆ ರೆಡಿಯಾಗಿದೆ. ಪ್ರಿಯಾಂಕಾ ಚೋಪ್ರಾ ನಟಿಸಿದ ಪಾತ್ರದಲ್ಲಿ ಸಮಂತಾ ನಟಿಸಿದ್ದಾರೆ. ಹಾಗೇ ಪೆಂಗ್ವಿನ್ ಸೀರಿಸ್‌ನ ಭಾರತದ ಅವತರಣಿಕೆ ಬಂದರೆ, ಈ ಪಾತ್ರಕ್ಕೆ ಯಾರೆಲ್ಲ ನಟರು ಸೂಟ್ ಆಗುತ್ತಾರೆ ಅನ್ನೋದನ್ನು ನೋಡುವುದಾದರೆ,

ವಿಜಯ್ ಸೇತುಪತಿ: ದಕ್ಷಿಣ ಭಾರತದ ಜನಪ್ರಿಯ ನಟ ವಿಜಯ್ ಸೇತುಪತಿ ತಮ್ಮ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇತ್ತೀಚೆಗೆ ತೆರೆಕಂಡ 'ಮಹಾರಾಜ' ಸಿನಿಮಾವನ್ನು ಜನರು ಮೆಚ್ಚಿಕೊಂಡಿದ್ದರು. ಅದೆಂತಹದ್ದೇ ಪಾತ್ರಗಳಿದ್ದರೂ ಅದನ್ನು ಸಲೀಸಾಗಿ ನಿಭಾಯಿಸಬಲ್ಲ ವಿಜಯ್ ಸೇತುಪತಿ ಈ ಪೆಂಗ್ವಿನ್ ಪಾತ್ರವನ್ನು ಸಲೀಸಾಗಿ ನಿಭಾಯಿಸಬಲ್ಲರು.

ಜೈದೀಪ್ ಅಹ್ಲಾವತ್: ಈಗಾಗಲೇ ಓಟಿಟಿಯ ಸ್ಟಾರ್‌ಗಳ ಪಟ್ಟಿಯಲ್ಲಿ ಜೈದೀಪ್ ಅಹ್ಲಾವತ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 'ಪಾತಾಳ್‌ಲೋಕ್' ಸೇರಿದಂತೆ ಹಲವು ವೆಬ್‌ ಸೀರಿಸ್‌ನಲ್ಲಿ ಕಾಣಿಸಿಕೊಂಡಿರುವ ಜೈದೀಪ್ ನೆಗೆಟಿವ್ ಹಾಗೂ ಪಾಸಿಟಿವ್ ಎರಡೂ ತರಹದ ಪಾತ್ರಗಳಲ್ಲಿ ನಟಿಸಿ ಗೆದ್ದಿದ್ದಾರೆ. ಹೀಗಾಗಿ ಪೆಂಗ್ವಿನ್ ಅಂತಹ ಪಾತ್ರಕ್ಕೆ ಜೈದೀಪ್ ಅಹ್ಲಾವತ್ ಸೂಟ್ ಆಗುತ್ತಾರೆ.

Vijay Sethupathi to Mahesh Manjrekar top 5 actors Who can play The Penguin Indian Batman Adaptation

ಅನುರಾಗ್ ಕಶ್ಯಪ್: ಬಾಲಿವುಡ್‌ ಕಲ್ಟ್ ಸಿನಿಮಾಗಳ ನಿರ್ದೇಶಕ ಅನುರಾಗ್ ಕಶ್ಯಪ್ ಈಗ ನಟನೆಯತ್ತ ಮುಖ ಮಾಡಿದ್ದಾರೆ. ಬಹುತೇಕ ನೆಗೆಟಿವ್ ಶೇಡ್‌ಗಳಲ್ಲಿ ನಟಿಸಿ ಅನುರಾಗ್‌ ಕಶ್ಯಪ್ ಜನಮನ್ನಣೆ ಗಿಟ್ಟಿಸಿಕೊಂಡಿದ್ದಾರೆ. ಹೀಗಾಗಿ ಈ ರಗಡ್ ಪೆಂಗ್ವಿನ್ ವರ್ಷನ್‌ಗೆ ಸೂಕ್ತ ನಟ ಎಂದು ಹೇಳಬಹುದು.

ಮನೋಜ್ ಪಹ್ವಾ: ಪೆಂಗ್ವಿನ್ ಪಾತ್ರದಲ್ಲಿ ಕೇವಲ ನೆಗೆಟಿವ್ ಶೇಡ್ ಅಷ್ಟೇ ಅಲ್ಲ. ಅದರಲ್ಲಿ ಹಾಸ್ಯದ ಛಾಯೆ ಕೂಡ ಇದೆ. ಹೀಗಾಗಿ ವೈವಿದ್ಯತೆಯಿಂದ ಕೂಡಿರುವ ಪೆಂಗ್ವಿನ್ ಪಾತ್ರಕ್ಕೆ ಮನೋಜ್ ಪಹ್ವಾ ಸೂಟ್ ಆಗುತ್ತಾರೆ.

ಮಹೇಶ್ ಮಂಜ್ರೇಕರ್: ಬಾಲಿವುಡ್ ಹಾಗೂ ಮರಾಠಿ ಸಿನಿಮಾಗಳಲ್ಲಿ ನಟಿಸಿರುವ ಮಹೇಶ್ ಮಂಜ್ರೇಕರ್ 'ಪೆಂಗ್ವಿನ್' ಪಾತ್ರ ಮಾಡಬಹುದು. ಇವರ ಮ್ಯಾನರಿಸಂ ಈ ಪಾತ್ರಕ್ಕೆ ಸೂಟ್ ಆಗುತ್ತೆ. ಈ ಕಾರಣಕ್ಕೆ ಈ ಐವರಲ್ಲಿ ಯಾರೇ ನಟಿಸಿದರೂ, ಪೆಂಗ್ವಿನ್ ಪಾತ್ರ ಭಾರತದಲ್ಲಿ ಜಾದು ಮಾಡಬಹುದು.

More from Filmibeat

English summary
Vijay Sethupathi to Mahesh Manjrekar top 5 actors Who can play The Penguin Indian Batman Adaptation
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X