ಸಿಂಪಲ್ ಸುನಿಗೆ ಡಬಲ್ ಧಮಾಕ;'ಗತವೈಭವ' ಥಿಯೇಟರ್‌ಗೆ ಎಂಟ್ರಿ.. 'ಒಂದು ಸರಳ ಪ್ರೇಮಕಥೆ' ಓಟಿಟಿಗೆ ಲಗ್ಗೆ

ಸಿಂಪಲ್ ಸುನಿ ನಿರ್ದೇಶನದ ಸಿನಿಮಾಗಳಿಗೆ ಪ್ರತ್ಯೇಕ ಫ್ಯಾನ್ ಫಾಲೋವಿಂಗ್ ಇದೆ. ಹಾಗೇ ವಿನಯ್ ರಾಜ್‌ಕುಮಾರ್ ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳನ್ನು ಮೆಚ್ಚಿಕೊಳ್ಳುವ ವರ್ಗವೂ ಇದೆ. ಈ ಎರಡೂ ಕಾಂಬಿನೇಷನ್‌ನಲ್ಲಿ ಬಂದಿದ್ದ 'ಸಿನಿಮಾ ಒಂದು ಸರಳ ಪ್ರೇಮಕಥೆ'. ಈ ಸಿನಿಮಾ ರಿಲೀಸ್ ಆಗಿ ಹೆಚ್ಚು ಕಡಿಮೆ ಒಂದು ವರ್ಷ ಆಗಿದೆ. ಈಗ ಓಟಿಟಿಯಲ್ಲಿ ರಿಲೀಸ್ ಆಗುತ್ತಿದೆ.

ಸಿಂಪಲ್ ಸುನಿ ನಿರ್ದೇಶಿಸಿದ ಹೊಚ್ಚ ಹೊಸ ಸಿನಿಮಾ 'ಗತ ವೈಭವ' ಥಿಯೇಟರ್‌ಗೆ ಎಂಟ್ರಿ ಕೊಟ್ಟಿದೆ. ಯುವ ಪ್ರತಿಭೆ ದುಷ್ಯಂತ್ ಹಾಗೂ ಆಶಿಕಾ ರಂಗನಾಥ್ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಅವರೇ ನಿರ್ದೇಶಿಸಿದ ಮತ್ತೊಂದು ಸಿನಿಮಾ ' ಒಂದು ಸರಳ ಪ್ರೇಮಕಥೆ' ಓಟಿಟಿಗೆ ಲಗ್ಗೆ ಇಟ್ಟಿದೆ.

Vinay Rajkumar Simple Suni Movie Ondu Sarala Prema Kathe Ott release date and other details

ಎರಡು ವರ್ಷಗಳ ಹಿಂದೆ ಕನ್ನಡ ಸಿನಿಮಾಗಳನ್ನು ಖರೀದಿ ಮಾಡುವುದನ್ನು ಓಟಿಟಿ ಸಂಸ್ಥೆ ನಿಲ್ಲಿಸಿದ್ದವು. ಆದ್ರೀಗ ಮತ್ತೆ ಕನ್ನಡ ಸಿನಿಮಾಗಳ ಕಡೆ ಮುಖ ಮಾಡಿರುವ ಹಾಗೆ ಕಾಣುತ್ತಿದೆ. ಒಂದೊಂದೇ ಕನ್ನಡ ಸಿನಿಮಾಗಳು ಓಟಿಟಿಯಲ್ಲಿ ರಿಲೀಸ್ ಆಗುತ್ತಿವೆ. ಅದರಲ್ಲಿ 'ಒಂದು ಸರಳ ಪ್ರೇಮಕಥೆ' ಕೂಡ ಒಂದು. ಹಾಗಿದ್ದರೆ, ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ? ಓಟಿಟಿ ಪ್ಲಾಟ್‌ಫಾರ್ಮ್ ಯಾವುದು? ಇಂತಹ ಒಂದಿಷ್ಟು ವಿಷಯಗಳನ್ನು ತಿಳಿಯಲು ಮುಂದೆ ಓದಿ.

ಒಂದು ಸರಳ ಪ್ರೇಮಕಥೆ

ತೆರೆಮೇಲೆ ಸರಳವಾಗಿ ಕಥೆ ಹೇಳುವ ಸಿಂಪಲ್ ಸುನಿ ಸಿನಿಪ್ರಿಯರಿಗೆ ಇಷ್ಟ ಆಗೋದೇ ಅಲ್ಲಿ. ಕಾಮಿಡಿ ಹಾಗೂ ಎಮೋಷನ್ಸ್‌ ಅನ್ನು ನೀಟ್ ಆಗಿ ಬ್ಲೆಂಡ್ ಮಾಡಿ ಕಥೆ ಹೇಳುವ ಸಿಂಪಲ್ ಸುನಿ 'ಒಂದು ಸರಳ ಪ್ರೇಮಕಥೆ'ಯನ್ನೂ ತೆರೆಮೇಲೆ ತಂದಿದ್ದರು. ಈ ಸಿನಿಮಾದ ನಿರ್ದೇಶನ, ಹಾಸ್ಯ, ಎಮೋಷನ್ಸ್ ಎಲ್ಲವೂ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಥಿಯೇಟರ್‌ನಲ್ಲಿ ಈ ಸಿನಿಮಾವನ್ನು ನೋಡಿ ಇಷ್ಟ ಪಟ್ಟಿದ್ದ ಪ್ರೇಕ್ಷಕರಿಗೆ ಓಟಿಟಿಯಲ್ಲಿ ನೋಡುವ ಅವಕಾಶ ಸಿಕ್ಕಿದೆ.

ಓಟಿಟಿಗೆ ಎಂಟ್ರಿ ಯಾವಾಗ?

'ಒಂದು ಸರಳ ಪ್ರೇಮಕಥೆ' ಸಿನಿಮಾದ ಪ್ರಮುಖ ಪಾತ್ರದಲ್ಲಿ ವಿನಯ್ ರಾಜ್‌ಕುಮಾರ್ ನಟಿಸಿದ್ದಾರೆ. ಇವರೊಂದಿಗೆ ಸ್ವಾತಿಷ್ಠ, ಮಲ್ಲಿಕಾ ಸಿಂಗ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಸಂಗೀತ ನಿರ್ದೇಶನನಾಗಬೇಕು ಎನ್ನುವ ಕನಸು ಕಂಡ ನಾಯಕನ ಬಾಳಿನಲ್ಲಿ ನಡೆಯುವ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿತ್ತು. ಸಿಂಪಲ್ ಸುನಿ ನಿರ್ದೇಶಿಸಿದ ಈ ಸಿನಿಮಾಗೆ ಪ್ರೇಕ್ಷಕರಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಈ ಸಿನಿಮಾ ಜೀ 5 ಓಟಿಟಿಯಲ್ಲಿ ನವೆಂಬರ್ 21 ರಿಂದ ಸ್ಟ್ರೀಮಿಂಗ್ ಆಗುತ್ತಿದೆ.

Vinay Rajkumar Simple Suni Movie Ondu Sarala Prema Kathe Ott release date and other details

ಪ್ರೈಂ ವಿಡಿಯೋದಲ್ಲೂ ರಿಲೀಸ್ ಆಗಿತ್ತು?

ಸಿಂಪಲ್ ಸುನಿ ಹಾಗೂ ವಿನಯ್ ರಾಜ್‌ಕುಮಾರ್ ಕಾಂಬಿನೇಷನ್‌ ಸಿನಿಮಾ 'ಒಂದು ಸರಳ ಪ್ರೇಮಕಥೆ' ಬಿಡುಗಡೆಯಾದ ಒಂದು ತಿಂಗಳೊಳಗೆ ಅಮೆಜಾನ್ ಪ್ರೈಂ ವಿಡಿಯೋಗೆ ಲಗ್ಗೆ ಇಟ್ಟಿತ್ತು. ಕೇವಲ 25 ದಿನಗಳಲ್ಲಿಯೇ ಸಿನಿಮಾ ಓಟಿಟಿಗೆ ಲಗ್ಗೆ ಇಟ್ಟಾಗ ಸಿನಿಮಾ ಮಂದಿಗೆ ಅಚ್ಚರಿಯಾಗಿತ್ತು. ಈಗ ಎರಡನೇ ಬಾರಿಗೆ ಓಟಿಟಿಯಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಪೇ ಪರ್ ವಿವ್ಯೂ ಒಪ್ಪಂದದ ಮೇರೆ ರಿಲೀಸ್ ಆಗಿತ್ತು ಎಂದು ಹೇಳಲಾಗಿದೆ.

ಈ ಸಿನಿಮಾದ ಕಥೆಯೇನು?

'ಒಂದು ಸರಳ ಪ್ರೇಮಕಥೆ' ಟೈಟಲ್‌ಗೆ ತಕ್ಕಂತೆ ಸಿಂಪಲ್ ಲವ್‌ಸ್ಟೋರಿ. ಮನೆ ಮಂದಿಯೆಲ್ಲ ಕೂತು ನೋಡಬಹುದಾದ ಕಥೆ. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಅಂತ ಇರುವ ಮಧ್ಯಮ ವರ್ಗದ ಹುಡುಗನ ಕಥೆಯಿದು. ಸಂಗೀತ ನಿರ್ದೇಶಕನಾಗುವುದಕ್ಕೆ ಪರದಾಡುತ್ತಿದ್ದ ನಾಯಕನಿಗೆ ಗಾಯಕಿಯಾಗಿ ಬರುವ ಹುಡುಗಿಯೊಂದಿಗೆ ಲವ್ ಆಗುತ್ತೆ. ಮುಂದೆ ನಾಯಕನ ಬಾಳಿನಲ್ಲಿ ಏನೇನಾಗುತ್ತೆ ಅನ್ನೋದು ಕಥೆ. ಸಂಗೀತ ವೀರ್‌ ಸಮರ್ಥ್ ಅವರ ಸಂಗೀತ ಈ ಸಿನಿಮಾದ ಹೈಲೈಟ್.

More from Filmibeat

English summary
Vinay Rajkumar Simple Suni Movie Ondu Sarala Prema Kathe Ott release date and other details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X