Maadeva OTT Release: 2025ರ ಮೊದಲ ಹಿಟ್ ಸಿನಿಮಾ 'ಮಾದೇವ' ಓಟಿಟಿಗೆ ಎಂಟ್ರಿ: ಯಾವಾಗ, ಎಲ್ಲಿ ನೋಡಬಹುದು?
2025ರ ಆರಂಭದಿಂದಲೂ ಕನ್ನಡ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿರಲಿಲ್ಲ. ಒಂದು ಒಂದು ಸಿನಿಮಾ ಬಾಕ್ಸಾಫೀಸ್ ಹಿಟ್ ಆಗಿರಲಿಲ್ಲ. ಅಂತಹ ಸಂದರ್ಭದಲ್ಲಿ ತೆರೆಕಂಡ ಸಿನಿಮಾ 'ಮಾದೇವ'. ವಿನೋದ್ ಪ್ರಭಾಕರ್ ಹಾಗೂ ಸೋನಾಲ್ ಮಾಂಟೆರೋ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಜೂನ್ 6, 2025ರಂದು ರಿಲೀಸ್ ಆಗಿತ್ತು. ನವೀನ್ ರೆಡ್ಡಿ ನಿರ್ದೇಶಿಸಿದ ಈ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಈ ವರ್ಷ ತೆರೆಕಂಡ ಕನ್ನಡದ ಮೊದಲ ಹಿಟ್ ಅಂತ ಸಾಬೀತಾಯ್ತು.
'ಮಾದೇವ' ಸಿನಿಮಾ ವಿನೋದ್ ಪ್ರಭಾಕರ್ ವೃತ್ತಿ ಬದುಕಿನ ಅತ್ಯುತ್ತಮ ಸಿನಿಮಾ ಎಂದು ಹೇಳಲಾಗಿದೆ. ಅತಿರೇಕ ಎನಿಸುವ ಆಕ್ಷನ್ ಸೀನ್‌ಗಳು, ಡೈಲಾಗ್‌ಗಳಿಲ್ಲದ ನೀಟ್ ಅಂಡ್ ಕ್ಲೀನ್ ಸಿನಿಮಾ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆಕ್ಷನ್ ಕಮ್ ಭಾವನಾತ್ಮಕ ಸನ್ನಿವೇಶಗಳಲ್ಲಿ ವಿನೋದ್ ಪ್ರಭಾಕರ್ ಹಾಗೂ ಸೋನಾಲ್ ಮಾಂಟೆರೋ ಜೋಡಿಗೆ ಪ್ರೇಕ್ಷಕರು ಬಹುಪರಾಕ್ ಹೇಳಿದ್ದಾರೆ.

ವಿನೋದ್ ಪ್ರಭಾಕರ್ ಸಿನಿಮಾ 'ಮಾದೇವ' ಚಿತ್ರಮಂದಿರದಲ್ಲಿ 25 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡು ಹಿಟ್ ಸಿನಿಮಾಗಳ ಲಿಸ್ಟ್ ಸೇರಿದೆ. ಈ ವರ್ಷದ ಮೊದಲ ಹಿಟ್ ಸಿನಿಮಾ ಓಟಿಟಿಯಲ್ಲಿ ನೋಡುವುದಕ್ಕೆ ಸಿನಿಪ್ರಿಯರು ಎದುರು ನೋಡುತ್ತಿದ್ದರು. ಅದಕ್ಕೀಗ ಮುಹೂರ್ತ ಕೂಡಿ ಬಂದಿದೆ. 'ಮಾದೇವ' ಸಿನಿಮಾ ಓಟಿಟಿ ಲಗ್ಗೆ ಇಡುವುದಕ್ಕೆ ಇನ್ನೇನು ಕೆಲವೇ ಕ್ಷಣಗಳು ಬಾಕಿ ಉಳಿದಿವೆ. ಹಾಗಿದ್ರೆ, ಯಾವ ವೇದಿಕೆಯಲ್ಲಿ? ಯಾವಾಗ? ರಿಲೀಸ್ ಆಗುತ್ತೆ ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
'ಮಾದೇವ' ಓಟಿಟಿಗೆ ಎಂಟ್ರಿ
ನವೀನ್ ರೆಡ್ಡಿ ನಿರ್ದೇಶಿಸಿದ 'ಮಾದೇವ' ಸಿನಿಮಾದ ಓಟಿಟಿ ಹಕ್ಕನ್ನು ಜೀ ನೆಟ್‌ವರ್ಕ್ ಪಡೆದುಕೊಂಡಿದೆ. ವಿನೋದ್ ಪ್ರಭಾಕರ್ ವೃತ್ತಿ ಬದುಕಿಗೆ ಸೂಪರ್ ಸಿನಿಮಾ ಕೊಟ್ಟಿರೋ ಮಾದೇವ ಜೀ 5ನಲ್ಲಿ ಪ್ರಸಾರ ಆಗಲಿದೆ. ವಿಶೇಷ ಅಂದರೆ, 2025ನಲ್ಲಿ Z5ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಮೊದಲ ಸಿನಿಮಾ ಆಗಿದೆ. ಈ ವರ್ಷದ ಕನ್ನಡ ಮೊದಲ ಹಿಟ್ ಸಿನಿಮಾ ಓಟಿಟಿಯಲ್ಲಿ ಹೇಗೆ ಸದ್ದು ಮಾಡುತ್ತೆ ಎಂದು ಎದುರು ನೋಡಲಾಗುತ್ತಿದೆ.

'ಮಾದೇವ' ಯಾವಾಗ ರಿಲೀಸ್?
Z5 ನಲ್ಲಿ ಈ ಹಿಂದೆ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ರಿಲೀಸ್ ಆಗಿತ್ತು. ಅದು ಬಿಟ್ಟರೆ, ಈಗ ವಿನೋದ್ ಪ್ರಭಾಕರ್ ನಟನೆಯ 'ಮಾದೇವ' ಸಿನಿಮಾವೇ ಬಿಡುಗಡೆಯಾಗುತ್ತಿದೆ. ಇದೇ ಆಗಸ್ಟ್ 8, 2025 ರಂದು Z5 ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಸಿನಿಮಾ ಥಿಯೇಟರ್‌ನಲ್ಲೂ ಸುಮಾರು 25 ದಿನಗಳ ಕಾಲ ಯಶಸ್ವಿ ಪ್ರದರ್ಶನವನ್ನು ಕಂಡಿತ್ತು. ಹೀಗಾಗಿ ಓಟಿಟಿ ವೇದಿಕೆಯಲ್ಲಿಸ ಹೇಗೆ ರೆಸ್ಪಾನ್ಸ್ ಸಿಗುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
₹4 ಕೋಟಿ ಬಜೆಟ್ ಸಿನಿಮಾ
'ಮಾದೇವ' ಸಿನಿಮಾವನ್ನು ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಬಾಕ್ಸಾಫೀಸ್‌ನಲ್ಲಿ ದುಪ್ಪಟ್ಟು ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ವಿಕ್ಕಿಪೀಡಿಯಾ ಪ್ರಕಾರ, ₹4 ಕೋಟಿ ಬಜೆಟ್ ಸಿನಿಮಾ ಗಳಿಸಿದ್ದು ಬರೋಬ್ಬರು ₹10 ಕೋಟಿ ಎಂದು ತೋರಿಸಲಾಗಿದೆ. ಕಲೆಕ್ಷನ್ ಬಗ್ಗೆ ಸಿನಿಮಾ ನಿರ್ಮಾಪಕರು ಅಧಿಕೃತವಾಗಿ ಎಲ್ಲೂ ಹೇಳಿಕೆ ನೀಡಿಲ್ಲ. ಆದರೆ, ಬೆಂಗಳೂರು, ಮೈಸೂರು ಭಾಗಗಳಲ್ಲಿ ಈ ಸಿನಿಮಾ ಯಶಸ್ವಿಯಾಗಿ 25 ವಾರಗಳನ್ನು ಪೂರೈಸಿತ್ತು.
'ಮಾದೇವ'ನಿಗೆ ಬಿಗ್ ಸ್ಟಾರ್‌ಕಾಸ್ಟ್
ವಿನೋದ್ ಪ್ರಭಾಕರ್ ನಟನೆಯ 'ಮಾದೇವ' ಸಿನಿಮಾದಲ್ಲಿ ಕನ್ನಡದ ಹಿರಿಯ ಕಲಾವಿದರು ನಟಿಸಿದ್ದಾರೆ. ಹಿರಿಯ ನಟಿ ಶ್ರುತಿ, ಶೃಂಗಾರ ಕಿಟ್ಟಿ, ಅಚ್ಯುತ್ ಕುಮಾರ್ ಮತ್ತು ಮಾಲಾಶ್ರೀ ಜೊತೆಗೆ ಹಲವು ಕಲಾವಿದರು ನಟಿಸಿದ್ದಾರೆ. ಈ ಕಥೆಯನ್ನು ಕನ್ನಡದ ಬೇರೆ ಬೇರೆ ಸ್ಟಾರ್‌ಗಳಿಗೆ ಹೇಳಿದ್ದರು. ಆದರೆ, ಅವರು ಒಪ್ಪಿರಲಿಲ್ಲ. ಹೀಗಾಗಿ ವಿನೋದ್ ಪ್ರಭಾಕರ್‌ಗೆ ಹೇಳಿದಾಗ, ನಟನೆಗೆ ಅವಕಾಶವಿದೆ ಎಂದು ಹೇಳಿ ಒಪ್ಪಿಕೊಂಡಿದ್ದನ್ನು ನಿರ್ದೇಶಕರು ನೆನಪಿಸಿಕೊಂಡಿದ್ದರು.


Click it and Unblock the Notifications











