Malli Pelli Ott: ನರೇಶ್-ಪವಿತ್ರಾ ಲೋಕೇಶ್ 'ಮಳ್ಳಿ ಪೆಳ್ಳಿ' ಓಟಿಟಿಯಲ್ಲಿ ಯಾವಾಗ? ಬಾಕ್ಸಾಫೀಸ್ ಕಥೆಯೇನು?
ಹೆಚ್ಚು ಕಡಿಮೆ ಒಂದು ವರ್ಷದಿಂದ ಪವಿತ್ರಾ ಲೋಕೇಶ್ ಹಾಗೂ ನರೇಶ್ ಸುದ್ದಿಯಲ್ಲಿದ್ದಾರೆ. ಇಬ್ಬರ ವಿವಾದಾತ್ಮಕ ಲವ್ ಸ್ಟೋರಿ ಟಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನಲ್ಲಿ ಹಲ್‌ಚಲ್ ಎಬ್ಬಿಸಿತ್ತು. ಇಬ್ಬರ ಸಂಬಂಧದ ಬಗ್ಗೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮುಕ್ತವಾಗಿಯೇ ಮಾತಾಡಿದ್ದರು.
ಆದರೆ, ಇವರಿಬ್ಬರ ಕಥೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ ಅನ್ನೋ ಚಿಕ್ಕ ಸುಳಿವು ಕೂಡ ಇರಲಿಲ್ಲ. ವರ್ಷದ ಆರಂಭದಲ್ಲೊಂದು ಟೀಸರ್ ನೋಡಿದ ಮೇಲೆನೇ ಇವರಿಬ್ಬರ ಸೇರಿ ಮಾಡಿರೋ ಸಿನಿಮಾ ಬಗ್ಗೆ ಚಿಕ್ಕದೊಂದು ಸುಳಿವು ಸಿಕ್ಕಿತ್ತು.

ತೆಲುಗಿನ ಹಿರಿಯ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಂಬಂಧದ ಬಗ್ಗೆ ಒಂದ್ಕಡೆ ಚರ್ಚೆಯಾಗುತ್ತಿದ್ದರೆ, ಇನ್ನೊಂದು ಕಡೆ ಅವರದ್ದೇ 'ಮಳ್ಳಿ ಪೆಳ್ಳಿ' ಸುದ್ದಿಯಲ್ಲಿತ್ತು. ಕೊನೆಗೂ ಒಂದಿಷ್ಟು ವಿವಾದಗಳ ಬಳಿಕ ಈ ಸಿನಿಮಾ ಮೇ 26ರಂದು ತೆಲುಗು ವರ್ಷನ್ ಮಾತ್ರ ತೆರೆಕಂಡಿತ್ತು. ಅದೇ ಸಿನಿಮಾ ಈಗ ಓಟಿಟಿಗೆ ಲಗ್ಗೆ ಇಡಲಿದೆ ಅನ್ನೋ ಮಾತು ಟಾಲಿವುಡ್‌ನಲ್ಲಿ ಓಡಾಡುತ್ತಿದೆ. ಹಾಗಿದ್ದರೆ, 'ಮಳ್ಳಿ ಪೆಳ್ಳಿ' ಓಟಿಟಿ ರಿಲೀಸ್ ಯಾವಾಗ? ತೆಲುಗು ಚಿತ್ರರಂಗದಲ್ಲಿ ಎದ್ದಿರೋ ಗುಲ್ಲೇನು? ತಿಳಿಯೋಕೆ ಮುಂದೆ ಓದಿ..
ನೈಜ ಪ್ರೇಮಕಥೆಗೆ ಕಾಲ್ಪನಿಕ ರೂಪ
'ಮಳ್ಳಿ ಪೆಳ್ಳಿ' ವಿಕೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ನೈಜ ಪ್ರೇಮಕಥೆಯನ್ನು ಆಧರಿಸಿದೆ. ಆದರೆ, ಈ ಕಥೆಗೆ ಕಾಲ್ಪನಿಕ ಘಟನೆಗಳನ್ನು ಸೇರಿಸಿ ಸಿನಿಮಾವನ್ನು ಮಾಡಲಾಗಿದೆ. ತೆಲುಗಿನ ಜನಪ್ರಿಯ ನಿರ್ದೇಶಕ ಎಂಎಸ್ ರಾಜು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ನರೇಶ್ ಹಾಗೂ ಪವಿತ್ರಾ ಚರ್ಚೆಯಲ್ಲಿ ಇದ್ದಿದ್ದರಿಂದ ಸಿನಿಮಾ ಸದ್ದು ಮಾಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ನಿರೀಕ್ಷೆ ಮಾಡಿದಷ್ಟು ಸಿನಿಮಾ ಸದ್ದು ಮಾಡಲಿಲ್ಲ. ಹೀಗಾಗಿ ಬಿಡುಗಡೆಯಾದ ಮೂರೇ ವಾರಗಳಲ್ಲಿ ಓಟಿಟಿಗೆ ಲಗ್ಗೆ ಇಡುತ್ತಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ತೆಲುಗು ಚಿತ್ರರಂಗದಲ್ಲಿ ಇಂತಹದ್ದೊಂದು ಸುದ್ದಿ ಓಡಾಡುತ್ತಿದೆ.

'ಮಳ್ಳಿ ಪೆಳ್ಳಿ' ಓಟಿಟಿ ರಿಲೀಸ್ ಯಾವಾಗ?
ಮೇ 26ರಂದು 'ಮಳ್ಳಿ ಪೆಳ್ಳಿ' ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಮೊದಲ ದಿನ ಸೋಶಿಯಲ್ ಮೀಡಿಯಾಗಳಲ್ಲಿ ಪಾಸಿಟಿವ್ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಆದರೆ, ವಿಮರ್ಶಕರಿಗೆ ಮಾತ್ರ ಈ ಸಿನಿಮಾ ಇಷ್ಟ ಆಗಿರಲಿಲ್ಲ. ಕೆಲವು ಮಾಧ್ಯಮಗಳು ಈ ಸಿನಿಮಾಗೆ ನೆಗೆಟಿವ್ ವಿಮರ್ಶೆ ನೀಡಿತ್ತು. ಸಿನಿಮಾ ರಿಲೀಸ್ ಆಗಿ ಒಂದು ವಾರ ಆಗಿದೆ. ಆದರೆ, ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿಲ್ಲ.
ಈ ಕಾರಣಕ್ಕೆ 'ಮಳ್ಳಿ ಪೆಳ್ಳಿ' ಸಿನಿಮಾ ಬಿಡುಗಡೆಯಾದ ಮೂರು ವಾರಗಳಲ್ಲೇ ಓಟಿಟಿಗೆ ಲಗ್ಗೆ ಇಡುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಮುನ್ನ ಜುಲೈನಲ್ಲಿ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡಬಹುದು ಎಂದು ಹೇಳಲಾಗಿತ್ತು. ಆದರೆ, ನಿರೀಕ್ಷೆಯ ಮಟ್ಟಕ್ಕೆ ಸಿನಿಮಾಗೆ ಪ್ರತಿಕ್ರಿಯೆ ಸಿಗದೇ ಇದ್ದಿದ್ದರಿಂದ ಬೇಗನೇ ರಿಲೀಸ್ ಆಗುತ್ತಿದೆ ಎನ್ನಲಾಗಿದೆ. ನೆಟ್‌ಫ್ಲಿಕ್ಸ್, ಅಮೆಜಾನ್ ಹಾಗೂ ಜೀ 5 ಸಿನಿಮಾ ಖರೀದಿಗೆ ಮುಂದೆ ಬಂದಿದೆ ಅನ್ನೋ ಮಾತು ಓಡಾಡುತ್ತಿದೆ.
ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?
'ಮಳ್ಳಿ ಪೆಳ್ಳಿ' ವಿವಾದಗಳಿಂದ ಜನಪ್ರಿಯತೆ ಕಂಡಿತ್ತು. ತೆಲುಗು ಹಾಗೂ ಕನ್ನಡ ಎರಡೂ ಭಾಷೆಯಲ್ಲೂ ಬಿಡುಗಡೆ ಮಾಡುವುದಕ್ಕೆ ಪ್ಲ್ಯಾನ್ ಮಾಡಿದ್ದರೂ, ಕೊನೆಗೆ ತೆಲುಗಿನಲ್ಲಿ ಮಾತ್ರ ರಿಲೀಸ್ ಮಾಡಲಾಗಿತ್ತು. ಮೊದಲ ದಿನ 30 ಲಕ್ಷ ರೂ. ಶೇರ್ ಬಂದು ಭರವಸೆ ಮೂಡಿಸಿದ್ದರೂ, ಆರು ದಿನಗಳಲ್ಲಿ ಕೇವಲ 1 ಕೋಟಿ 47 ಲಕ್ಷ ರೂ. ಶೇರ್ ಬಂದಿದೆ ಎನ್ನಲಾಗಿದೆ.
ಸಿನಿಮಾ ಬಿಡುಗಡೆಗೂ ಮುನ್ನ ಈ ಜೋಡಿಯ ಮೇಲೆ ನೆಗೆಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ಅಲ್ಲದೇ ರಿಲೀಸ್‌ಗೆ ಒಂದು ದಿನ ಮುನ್ನ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಸಿನಿಮಾ ಬಿಡುಗಡೆಯನ್ನು ತಡೆಯಲು ಯತ್ನಿಸಿದ್ದರು. ಹೀಗಾಗಿ ನೆಗೆಟಿವ್ ರೆಸ್ಪಾನ್ಸ್ ಸಿಕ್ಕಿದ್ದರಿಂದ ಥಿಯೇಟರ್‌ಗೆ ಬಂದು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ನೋಡುತ್ತಿಲ್ಲ. ಇದರಿಂದ ಓಟಿಟಿಗೆ ಸೇಲ್ ಮಾಡುವುದಕ್ಕೆ ನರೇಶ್ ನಿರ್ಧರಿಸಿದ್ದಾರೆ ಅನ್ನೋದು ಟಾಲಿವುಡ್ ಮಂದಿ ಮಾತು.


Click it and Unblock the Notifications











