ಥಿಯೇಟರ್‌ನಲ್ಲಿ ಆಗ್ಲಿಲ್ಲ.. ಓಟಿಟಿಯಲ್ಲಾದ್ರೂ ಮೋಡಿ ಮಾಡಬಹುದೇ ನರೇಶ್-ಪವಿತ್ರಾ? 'ಮತ್ತೆ ಮದುವೆ'ಗೆ ಮುಹೂರ್ತ ಫಿಕ್ಸ್

ತೆಲುಗಿನ ಹಿರಿಯ ನಟ ವಿಕೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ದಕ್ಷಿಣ ಭಾರತದ ವಿವಾದಾತ್ಮಕ ಜೋಡಿ, ಬೋಲ್ಡ್ ಜೋಡಿ ಅಂತಲೇ ಫೇಮಸ್. ತಮ್ಮ ರಿಯಲ್ ಲೈಫ್ ಘಟನೆಗಳನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದರು. ಅದಕ್ಕೆ ತೆಲುಗಿನಲ್ಲಿ 'ಮಳ್ಳಿ ಪೆಳ್ಳಿ' ಅಂತಲೂ, ಕನ್ನಡದಲ್ಲಿ 'ಮತ್ತೆ ಮದುವೆ' ಅಂತಲೂ ಟೈಟಲ್ ಇಟ್ಟು ರಿಲೀಸ್ ಮಾಡಿದ್ದರು.

ಈ ಸಿನಿಮಾ ರಿಲೀಸ್‌ಗೂ ಮುನ್ನ ನರೇಶ್-ಪವಿತ್ರಾ ಲೋಕೇಶ್ ಇಬ್ಬರೂ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. ಲಿವ್‌ಇನ್‌ರಿಲೇಷನ್‌ನಲ್ಲಿ ಇದ್ದ ಈ ಜೋಡಿಯ ಸಂಬಂಧವನ್ನು ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಹೊರಹಾಕಿದ್ದರು. ಇಲ್ಲಿಂದ ನರೇಶ್, ಪವಿತ್ರಾ ಲೋಕೇಶ್ ವಿವಾದಾತ್ಮಕ ಜೋಡಿಯೇ ಕಂಡಿದ್ದರು.

VK Naresh and Pavitra Lokesh Movie Malli Pelli or Matte Maduve Release on Amazon prime on june 23rd

ಕಳೆದೊಂದು ವರ್ಷದಿಂದ ವಿವಾದ ಮಾಡಿಕೊಳ್ಳುತ್ತಿದ್ದ ಜೋಡಿ ರಿಯಲ್‌ ಲೈಫ್‌ನಲ್ಲಿ ಅಲ್ಲದಿದ್ದರೂ ರೀಲ್ ಲೈಫ್‌ನಲ್ಲಿ 'ಮತ್ತೆ ಮದುವೆ'ಯಾಗಿತ್ತು. ಆದರೆ, ಪ್ರೇಕ್ಷಕರು ಮಾತ್ರ ಥಿಯೇಟರ್‌ಗೆ ಹೋಗಿ ನೋಡುವ ಗೋಜಿಗೆ ಹೋಗಲಿಲ್ಲ. ಹೀಗಾಗಿ ಈ ಸಿನಿಮಾವನ್ನು ಓಟಿಟಿಯಲ್ಲಿ ಸ್ಟ್ರೀಮಿಂಗ್ ಮಾಡುವುದಕ್ಕೆ ಮುಂದಾಗಿದೆ. ಇನ್ನೂ ಈ ಸಿನಿಮಾ ನೋಡದವರು 'ಮತ್ತೆ ಮದುವೆ' ಯಾವಾಗ? ಎಲ್ಲಿ ರಿಲೀಸ್ ಆಗುತ್ತೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಓಟಿಟಿಗೆ ಬರುತ್ತೆ 'ಮತ್ತೆ ಮದುವೆ'

'ಮತ್ತೆ ಮದುವೆ' (ಮಳ್ಳಿ ಪೆಳ್ಳಿ) ನರೇಶ್ ಹಾಗೂ ಪವಿತ್ರಾ ಲೋಕೇಶ್‌ ಇಬ್ಬರನ್ನೂ ಬೋಲ್ಡ್ ಜೋಡಿಯಾಗಿಸಿದ ಸಿನಿಮಾ. ನರೇಶ್, ಮೂರನೇ ಪತ್ನಿ ರಮ್ಯಾ ರಘುಪತಿ ಹಾಗೂ ಪವಿತ್ರಾ ಲೋಕೇಶ್ ಮೂವರ ಕಥೆಯನ್ನು ತೆರೆಮೇಲೆ ತರಲಾಗಿತ್ತು. ಸ್ವತ: ನರೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಮೇ 26ರಂದು ತೆಲುಗಿನಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಅಂತೆಯೇ ಜೂನ್ 9ರಂದು ಕನ್ನಡದಲ್ಲಿ ತೆರೆಕಂಡಿತ್ತು.

ತೆಲುಗು ಹಾಗೂ ಕನ್ನಡ ಎರಡೂ ಭಾಷೆಯಲ್ಲೂ ನರೇಶ್, ಪವಿತ್ರಾ ಲೋಕೇಶ್ ಸಿನಿಮಾ ಸದ್ದು ಮಾಡಲಿಲ್ಲ. ವಿವಾದಗಳಿಂದ ಸುದ್ದಿಯಲ್ಲಿದ್ದರೂ, ಜನರು ಯಾಕೋ ಆಸಕ್ತಿ ತೋರಿಸಲಿಲ್ಲ. ಹೀಗಾಗಿ ಈ ಸಿನಿಮಾವನ್ನು ಓಟಿಟಿಯಲ್ಲಿ ರಿಲೀಸ್ ಮಾಡುವುದಕ್ಕೆ ಮುಂದಾಗಿದೆ. ಇದೇ ತಿಂಗಳು ಸಿನಿಮಾ ಓಟಿಟಿಗೆ ಲಗ್ಗೆ ಇಡಲಿದೆ.

VK Naresh and Pavitra Lokesh Movie Malli Pelli or Matte Maduve Release on Amazon prime on june 23rd

'ಮತ್ತೆ ಮದುವೆ' ಎಲ್ಲಿ? ಯಾವಾಗ?

'ಮತ್ತೆ ಮದುವೆ' (ಮಳ್ಳಿಪೆಳ್ಳಿ) ಸಿನಿಮಾ ನಿರೀಕ್ಷೆ ಮಾಡಿದಂತೆ ರಿಲೀಸ್ ಆದ ಒಂದು ತಿಂಗಳೊಳಗಾಗಿ ಒಟ್ಟಿಯಲ್ಲಿ ರಿಲೀಸ್ ಆಗುತ್ತಿದೆ. ಸಹಜವಾಗಿ ಪ್ರತಿಯೊಂದು ಸಿನಿಮಾ ರಿಲೀಸ್ ಆದಾಗಲೂ ಒಂದು ತಿಂಗಳ ಅಂತರವಾದರೂ ಇರುತ್ತೆ. ಆದರೆ, ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಿನಿಮಾದಲ್ಲಿ ಒಂದು ತಿಂಗಳ ಅಂತವೂ ಇಲ್ಲ.

ಇದೇ ಜೂನ್ 23ರಂದು 'ಮತ್ತೆ ಮದುವೆ' (ಮಳ್ಳಿ ಪೆಳ್ಳಿ) ರಿಲೀಸ್ ಆಗುತ್ತಿದ್ದು, ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಸಿನಿಮಾಗೆ ಕಥೆ ಬರೆದು, ತೆಲುಗಿನ ಹಿರಿಯ ನಿರ್ದೇಶಕ ಎಂಎಸ್ ರಾಜು ನಿರ್ದೇಶನ ಮಾಡಿದ್ದಾರೆ.

ಬಾಕ್ಸಾಫೀಸ್‌ನಲ್ಲಿ ನಿರಸ ಪ್ರತಿಕ್ರಿಯೆ

ನರೇಶ್ ತಾಯಿ, ನಟಿ, ನಿರ್ದೇಶಕಿ, ನಿರ್ಮಾಪಕಿಯೂ ಆಗಿದ್ದ ದಿವಂಗತ ವಿಜಯ ನಿರ್ಮಮಾ ಹಾಗೂ ಟಾಲಿವುಡ್ ಸೂಪರ್‌ಸ್ಟಾರ್ ಕೃಷ್ಣ ಜಂಟಿಯಾಗಿ 'ವಿಜಯ್ ಕೃಷ್ಣ ಮೂವೀಸ್' ಸಂಸ್ಥೆಯನ್ನು ಹುಟ್ಟಾಕಿದ್ದರು. 1973ರಲ್ಲಿ ನಿರ್ಮಾಣಗೊಂಡಿದ್ದ ಈ ಸಂಸ್ಥೆ 50 ವರ್ಷಗಳನ್ನು ಪೂರೈಸಿದ್ದರಿಂದ ನರೇಶ್ ತಮ್ಮದೇ ಕಥೆಯನ್ನು ತೆರೆಮೇಲೆ ತರುವುದಕ್ಕೆ ನಿರ್ಧರಿಸಿದ್ದರು.

ನರೇಶ್ ಹಾಗೂ ಪವಿತ್ರಾ ಲೋಕೇಶ್ ಜೊತೆ ಜಯಸುಧಾ, ದಿವಂಗತ ಶರತ್ ಬಾಬು ಕೂಡ ನಟಿಸಿದ್ದಾರೆ. ಹಾಗೇ ವನಿತಾ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಸೇರಿದಂತೆ ಹಲವರು ನಟಿಸಿದ್ದಾರೆ. ಅದೆಷ್ಟೇ ವಿವಾದಗಳನ್ನು ಮೈ ಮೇಲೆ ಹಾಕಿಕೊಂಡರೂ, ಸದಾ ಸುದ್ದಿಯಲ್ಲಿದ್ದರೂ, ಸಿನಿಮಾವನ್ನು ಗೆಲ್ಲಿಸುವುದಕ್ಕೆ ಸಾಧ್ಯವಾಗಿಲ್ಲ. ಈಗ ಓಟಿಟಿಯಲ್ಲಾದರೂ ಸಿನಿಮಾ ಗೆಲ್ಲುತ್ತಾ? ಅನ್ನೋದು ನೋಡಬೇಕಿದೆ.

More from Filmibeat

English summary
VK Naresh and Pavitra Lokesh Movie Malli Pelli or Matte Maduve Release on Amazon prime on june 23rd, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X