ವೀಕೆಂಡ್‌ನಲ್ಲಿ ವೂಟ್‌ ಸೆಲೆಕ್ಟ್‌ನಲ್ಲಿ 4 ಕನ್ನಡ ಸಿನಿಮಾ ಪ್ರಸಾರ!

ಜನರು ಥಿಯೇಟರ್‌ಗಳಲ್ಲಿ ಸಿನಿಮಾ ನೋಡುತ್ತಾರೋ ಇಲ್ಲವೋ ಬೇರೆ ಮಾತು. ಆದರೆ, ಓಟಿಟಿಯಲ್ಲಂತೂ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿಯೇ ವೂಟ್ ಸೆಲೆಕ್ಟ್ ಈ ವೀಕೆಂಡ್‌ನಲ್ಲಿ ಭರ್ಜರಿ ಮನರಂಜನೆ ನೀಡುವುದಕ್ಕೆ ಸಜ್ಜಾಗಿ ನಿಂತಿದೆ.

ವೂಟ್ ಸೆಲೆಕ್ಟ್ ಈಗಾಗಲೇ ಹಲವಾರು ಬ್ಲಾಕ್ ಬಸ್ಟರ್ ಸಿನೆಮಾಗಳನ್ನು ತನ್ನ ಒಟಿಟಿ ಪ್ಲಾಟ್ ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಮಾಡುತ್ತಿದೆ. ಇದೀಗ ಕನ್ನಡಿಗರಿಗೆ ಒಂದೊಳ್ಳೆ ವೀಕೆಂಡ್ ಮಜಾ ನೀಡಲು ಸಜ್ಜಾಗಿ ನಿಂತಿದೆ. ಈಗಾಗ್ಲೇ ಸಿನಿಪ್ರಿಯರ ಮನಗೆದ್ದಿರುವ ನಾಲ್ಕು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ತೋರಿಸಲು ಸಜ್ಜಾಗಿದೆ.

ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ, ನೀನಾಸಂ ಸತೀಶ್ ಹಾಗೂ ಹರಿಪ್ರಿಯ ಅಭಿನಯದ 'ಪೆಟ್ರೋಮ್ಯಾಕ್ಸ್' ಮತ್ತು ರಿಷಬ್ ಶೆಟ್ಟಿಯ 'ಹರಿಕಥೆ ಅಲ್ಲಗಿರಿಕಥೆ', ಶಿವಣ್ಣ, ಡಾಲಿಯ 'ಬೈರಾಗಿ' ಈ ನಾಲ್ಕು ಸಿನಿಮಾಗಳನ್ನು ವೂಟ್ ಸೆಲೆಕ್ಟ್ ಪ್ರಸಾರ ಮಾಡುತ್ತಿದೆ.

ರಕ್ಷಿತ್ ಶೆಟ್ಟಿಯ 777 ಚಾರ್ಲಿ

ರಕ್ಷಿತ್ ಶೆಟ್ಟಿಯ 777 ಚಾರ್ಲಿ

ಸ್ಯಾಂಡಲ್‌ವುಡ್‌ನ ಪ್ಯಾನ್ ಇಂಡಿಯಾ ಸಿನಿಮಾ '777 ಚಾರ್ಲಿ' ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿತ್ತು. ಈ ಸಿನಿಮಾ ಮೂಲಕ ರಕ್ಷಿತ್ ಶೆಟ್ಟಿ ಪ್ಯಾನ್ ಇಂಡಿಯಾ ಹೀರೊ ಆಗಿ ಕಾಣಿಸಿಕೊಂಡಿದ್ದಾರೆ. ಧರ್ಮನ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ಕಾಣಿಸಿಕೊಂಡಿದ್ದು, ಶ್ವಾನ ಹಾಗೂ ಮಾನವನ ನಡುವಿನ ಸಂಬಂಧದ ಕಥೆಯಾಗಿದೆ. ಈ ಚಿತ್ರದಲ್ಲಿ ನಾಯಕ ನಟ ಒಂಟಿತನವನ್ನು ಶ್ವಾನ ಚಾರ್ಲಿ ಹೇಗೆ ಹೋಗಲಾಡಿಸುತ್ತೆ? ಧರ್ಮನ ಬಾಳಲ್ಲಿ ಪ್ರೀತಿ ಪ್ರೇಮವನ್ನುಹೇಗೆ ಕಲಿಸಿಕೊಡುತ್ತೆ ಅನ್ನೋದು ಸಿನಿಮಾದಲ್ಲಿ ತೋರಿಸಲಾಗಿದೆ. ಚಾರ್ಲಿ ಮತ್ತು ಧರ್ಮನ ಭಾವನೆಗಳು ಹಾಗೂ ಬಂಧ ಮತ್ತು ವಿಶೇಷ ಸಂಬಂಧವನ್ನು ಇಲ್ಲಿ ಚಿತ್ರಿಸಲಾಗಿದೆ. ಈ ಸಿನಿಮಾವನ್ನು ವೂಟ್ ಸೆಲೆಕ್ಟ್‌ನಲ್ಲಿ ಪ್ರತ್ಯೇಕವಾಗಿ ಸ್ಟ್ರೀಮ್ ಮಾಡಲಾಗುತ್ತಿದೆ.

ಶಿವಣ್ಣ, ಡಾಲಿಯ 'ಬೈರಾಗಿ'

ಶಿವಣ್ಣ, ಡಾಲಿಯ 'ಬೈರಾಗಿ'

ಬೈರಾಗಿಯ ಕಥೆಯು ತನ್ನ ಮೌಲ್ಯಗಳು ಮತ್ತು ತತ್ತ್ವಗಳಿಗೆ ಖ್ಯಾತರಾಗಿರುವ ಕಲಾವಿದ ಹುಲಿ ಶಿವನ ಸುತ್ತ ಹೆಣೆದಿರುವ ಸಿನಿಮಾ. ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡುವ ಹುಲಿ ಶಿವ ಅಲಿಯಾಸ್ ಶಿವಣ್ಣ ಯಾರಿಗೂ ಹೆದರುವುದಿಲ್ಲ. ತನ್ನ ಕೋಪವನ್ನು ನಿಯಂತ್ರಣ ಮಾಡಲು ಈತನ ಅಜ್ಜನೇ ಸರಿಯಾದ ವ್ಯಕ್ತಿ. ಆದರೆ, ಅಜ್ಜನ ಮರಣದ ನಂತರ ಶಿವನು ಹೊಸ ಪಟ್ಟಣಕ್ಕೆ ಹೋದಾಗ, ಅಲ್ಲಿ ನಡೆಯೋ ಒಂದು ಕೆಟ್ಟ ಘಟನೆಯು ಆತನಿಗೆ ಕೋಪ ತರಿಸುತ್ತೆ. ಮುಂದೆ ಏನಾಗುತ್ತೆ ಅನ್ನೋದೇ 'ಬೈರಾಗಿ'. ಈ ಸಿನಿಮಾ ಕೂಡ ವಿಶೇಷವಾಗಿ ವೂಟ್ ಸೆಲೆಕ್ಟ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

ನೀನಾಸಂ ಸತೀಶ್ 'ಪ್ರೆಟ್ರೋಮ್ಯಾಕ್ಸ್'

ನೀನಾಸಂ ಸತೀಶ್ 'ಪ್ರೆಟ್ರೋಮ್ಯಾಕ್ಸ್'

'ನೀರ್ ದೋಸೆ' ನಿರ್ದೇಶಕ ವಿಜಯ ಪ್ರಸಾದ್ ಅವರ ಪೆಟ್ರೋಮ್ಯಾಕ್ಸ್ ಕೂಡ ಪ್ರಸಾರ ಆಗುತ್ತಿದೆ. ಇದೊಂದು ವಯಸ್ಕ ಕಾಮಿಡಿ ಚಿತ್ರವಾಗಿದ್ದು, ಜೊತೆ ಕೌಟುಂಬಿಕ ಮೌಲ್ಯ ಮತ್ತು ಸಂಬಂಧಗಳನ್ನು ಸೇರಿಸಲಾಗಿದೆ. 'ಪೆಟ್ರೋಮ್ಯಾಕ್ಸ್' ಸಿನಿಮಾ ನಾಲ್ವರು ಅನಾಥರ ಜೀವನದ ಮೇಲೆ ಹೆಣೆದ ಕಥೆ. ಬಾಲ್ಯದಿಂದಲೂ ಅನಾಥಾಶ್ರಮದಲ್ಲಿ ಬೆಳೆದ ನಾಲ್ವರು ಪೋಷಕರ ಕಾಳಜಿ ಪಡೆಯಲು ಹಾತೊರೆಯುತ್ತಾರೆ. ಎಲ್ಲರೂ ಒಟ್ಟಿಗೆ ಸೇರಿ ಮನೆಗಳನ್ನು ಹುಡುಕಲು ಆರಂಭಿಸುತ್ತಾರೆ. ಸಂಪೂರ್ಣ ಮನರಂಜನೆ ನೀಡುವ ಈ ಚಿತ್ರ ವೂಟ್ ಸೆಲೆಕ್ಟ್‌ನಲ್ಲಿ ಈ ವಾರ ಪ್ರಸಾರವಾಗಲಿದೆ.

ರಿಷಬ್ ಶೆಟ್ಟಿಯ 'ಹರಿಕಥೆ ಅಲ್ಲ ಗಿರಿಕಥೆ'

ರಿಷಬ್ ಶೆಟ್ಟಿಯ 'ಹರಿಕಥೆ ಅಲ್ಲ ಗಿರಿಕಥೆ'

ರಿಷಭ್ ಶೆಟ್ಟಿ ನಟನೆಯ 'ಹರಿಕಥೆ ಅಲ್ಲ ಗಿರಿಕಥೆ' ಪಕ್ಕಾ ಕಾಮಿಡಿ ಸಿನಿಮಾ, 'ಹರಿಕಥೆ ಅಲ್ಲ ಗಿರಿಕಥೆ' ಸಹ ವೂಟ್ ಸೆಲೆಕ್ಟ್‌ನಲ್ಲಿ ಪ್ರಸಾರವಾಗಲಿದೆ. ಇದು ಪ್ರೇಕ್ಷಕರಿಗೆ ನಾನ್ ಸ್ಟಾಪ್ ಮನರಂಜನೆ ನೀಡುವ ಸಿನಿಮಾ. ಮೂವರು ಗಿರಿ ಎಂಬುವವರ ಕಥೆಯನ್ನು ಒಟ್ಟಿಗೆ ಸೇರಿಸಿ ಒಂದು ಕತೆಯನ್ನು ಹೆಣೆದಿದ್ದಾರೆ. ಇದು ಕೂಡ ವೂಟ್ ಸೆಲೆಕ್ಟ್‌ನಲ್ಲಿ ಪ್ರಸಾರ ಆಗಲಿದೆ.

More from Filmibeat

English summary
Voot Select Will be streaming 777 Charlie, Petromax, bairagee, Hari Kathe Alla Girikathe, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X