OTT Releases:ಈ ವೀಕೆಂಡ್ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಬೆಸ್ಟ್ ಸಿನಿಮಾ-ಸೀರಿಸ್‌ಗಳು ಇವೇ!

ವೀಕೆಂಡ್ ಬಂತು ಎಂದರೆ ಸಿನಿಮಾ ನೋಡೋಕೆ ಥಿಯೇಟರ್‌ಗೆ ಹೋಗೋದು, ಹಾಗೇ ಶಾಪಿಂಗ್ ಔಟಿಂಗ್ ಅಂತೆಲ್ಲಾ ಪ್ಲಾನ್ ಮಾಡುತ್ತಿದ್ದ ಕಾಲ ಒಂದಿತ್ತು. ಆದರೆ, ಈಗ ಈ ಲಿಸ್ಟ್‌ನಿಂದ ಸಿನಿಮಾ ಸ್ವಲ್ಪ ಹಿಂದೆ ಸರಿದಿದೆ. ಯಾಕಂದರೆ, ಈಗೆಲ್ಲಾ ಜನ ಮನೆಯಲ್ಲೇ ಕುಳಿತು ಒಟಿಟಿಯಲ್ಲಿ ಸಿನಿಮಾ ಅಥವಾ ಸೀರೀಸ್ ನೋಡುತ್ತಾ ವೀಕೆಂಡ್ ಕಳೆಯುವ ಪ್ಲಾನ್ ಮಾಡಿರುತ್ತಾರೆ.

ಈ ವೀಕೆಂಡ್ ನೀವೂ ಇದೇ ಬಗೆಯ ಪ್ಲಾನಿಂಗ್‌ನಲ್ಲಿದ್ದರೆ, ಈ ಲಿಸ್ಟ್ ನಿಮಗೆ ಸಹಾಯ ಮಾಡುತ್ತದೆ. ಈ ವಾರ ಪ್ರಮುಖ ಒಟಿಟಿ ಪ್ಲಾಟ್ ಫಾರ್ಮ್‌ಗಳಲ್ಲಿ ಬಿಡುಗಡೆಯಾಗುವ ಒಳ್ಳೆಯ ಸೀರಿಸ್ ಮತ್ತು ಸಿನಿಮಾಗಳ ಪಟ್ಟಿ ಇಲ್ಲಿದೆ.

Watch these 4 best movies and series on OTT this weekend list here

ಆಲ್ ಆಫ್ ಅಸ್ ಸ್ಟ್ರೇಂಜರ್ಸ್ (ಮೇ 8 - ಡಿಸ್ನಿ+ಹಾಟ್ ಸ್ಟಾರ್)

2023ರಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾ ಒಂದು ರೊಮ್ಯಾಂಟಿಕ್ ಫ್ಯಾಂಟಸಿ. ಆಂಡ್ರೂ ಸ್ಕಾಟ್ ಮತ್ತು ಪಾಲ್ ಮೆಸ್ಕಲ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಗತಿಸಿರುವ ತನ್ನ ತಂದೆ ತಾಯಿಗಳ ಬಗ್ಗೆ ಅವನಿಗೆ ಇರುವ ಆಲೋಚನೆಗಳು, ಆ ಬಗೆಗಿನ ಭಾವನೆಗಳನ್ನು ಆತ ಮೀರುವ ಸನ್ನಿವೇಶಗಳು ಈ ಚಿತ್ರದ ಮೂಲ ಕಥಾವಸ್ತು.

ಡಾರ್ಕ್ ಮ್ಯಾಟರ್ (ಮೇ 8 - ಆಪಲ್ ಟಿವಿ +)

ಬೇರೆಯೇ ಜಗತ್ತಿಗೆ ಅಪಹರಿಸಲ್ಪಡುವ ಕಾಲ್ಪನಿಕ ಸೈನ್ಸ್ ಸೀರೀಸ್ ಡಾರ್ಕ್ ಮ್ಯಾಟರ್. ಆಪಲ್ ಟಿವಿ+ ನಲ್ಲಿ ಬಿಡುಗಡೆಯಾಗಲಿರುವ ಈ ಸೀರೀಸ್ ಒಬ್ಬ ವ್ಯಕ್ತಿಯ ಪುನರ್ಜನ್ಮಗಳ ಬಗ್ಗೆ, ತನ್ನ ನಿಜವಾದ ಕುಟುಂಬವನ್ನು ಹುಡುಕುವ ಆತನ ಪಯಣದ ಕುರಿತಾದ ಫಿಕ್ಷನ್ ಸೀರೀಸ್ ಇದು. ತನ್ನ ವಿರುದ್ಧ ತಾನೇ ಸಿಕ್ಕಿಕೊಳ್ಳುವ ವಿಚಿತ್ರ ಸನ್ನಿವೇಶಗಳು ಇದರ ಮೂಲ ಕಥಾವಸ್ತು.

Watch these 4 best movies and series on OTT this weekend list here

ಅನ್ ದೇಖಿ -ಸೀಸನ್ 3 (ಮೇ 10) -ಸೋನಿ ಲೈವ್

ಈಗಾಗಲೇ ಅನ್ ದೇಖಿಯ ಮೊದಲೆರಡು ಸೀಸನ್‌ಗಳು ದೊಡ್ಡ ಅಭಿಮಾನಿ ಬಳಗವನ್ನೇ ಸೃಷ್ಟಿಸಿಕೊಂಡಿವೆ. ಮೇ 10ರಂದು ಸೋನಿ ಲೈವ್‌ನಲ್ಲಿ ಬಿಡುಗಡೆಯಾಗುವ ಈ ಸೀರಿಸ್‌ನಲ್ಲಿ ಹರ್ಷ್ ಛಾಯಾ ಪಾಪಾಜಿ ಪಾತ್ರದಲ್ಲಿ ಮಿಂಚಿದ್ದಾರೆ. ತನ್ನ ಭೂತಕಾಲ ಮತ್ತು ಅಧಿಕಾರ ದಾಹದ ನಡುವೆ ಸಿಕ್ಕಿಕೊಂಡ ಮುಖ್ಯ ಪಾತ್ರಧಾರಿ ಏನೆಲ್ಲಾ ಚಾಲೆಂಜ್‌ಗಳನ್ನು ಎದುರಿಸುತ್ತಾನೆ ಎನ್ನುವ ಕುತೂಹಲ ನೋಡುಗರಿಗಿದೆ. ಅದಕ್ಕೆ ತಕ್ಕಂತೆ ಬಿಗಿಯಾದ ಕಥಾಹಂದರ ಇಡೀ ಸೀರೀಸ್‌ನ ಪ್ರತೀ ಎಪಿಸೋಡಿನಲ್ಲೂ ಇದೆ ಎಂದು ತಂಡ ಈಗಾಗಲೇ ಹೇಳಿದೆ. ಮೇ 10ರಂದು ಸೋನಿ ಲೈವ್ ನಲ್ಲಿ ಮೂರನೇ ಸೀಸನ್ ನ ಅನ್ ದೇಖಿ ಬಿಡುಗಡೆಯಾಗಲಿದೆ.

ಮದರ್ ಆಫ್ ದಿ ಬ್ರೈಡ್ (ಮೇ 9)- ನೆಟ್ ಫ್ಲಿಕ್ಸ್

ಲಂಡನ್‌ನಲ್ಲಿ ಒಂದು ವರ್ಷ ಇದ್ದ ನಂತರ ವಾಪಸ್ಸಾಗುವ ಎಮ್ಮಾ ಎನ್ನುವ ಯುವತಿಯ ಕತೆಯಿಂದ ಈ ಸಿನಿಮಾ ಶುರುವಾಗುತ್ತದೆ. ಥೈಲ್ಯಾಂಡ್‌ನಲ್ಲಿ ತಾನು ಪ್ರೀತಿಸಿದ ಹುಡುಗನ ಜೊತೆ ಮದುವೆಯಾಗುವುದಾಗಿ ಆಕೆ ಘೋಷಿಸುತ್ತಿದ್ದಂತೆ ಆಕೆಯ ತಾಯಿಗೆ ದೊಡ್ಡ ಶಾಕ್ ಉಂಟಾಗುತ್ತದೆ. ವರ್ಷಗಳ ಹಿಂದೆ ತನ್ನ ಪ್ರೀತಿಯನ್ನು ಅವಮಾನಿಸಿದ್ದ ವ್ಯಕ್ತಿಯ ಮಗನನ್ನೇ ತನ್ನ ಮಗಳು ಮದುವೆಯಾಗಲು ಹೊರಟಿರುವುದನ್ನು ಆ ತಾಯಿ ಸಹಿಸಿಕೊಳ್ಳಲು ತಯಾರಿರುವುದಿಲ್ಲ. ನಂತರ ನಡೆಯುವ ರೊಮ್ಯಾಂಟಿಕ್ ಕಾಮಿಡಿ ಸನ್ನಿವೇಶಗಳೇ ಈ ಸಿನಿಮಾದ ಪಯಣ. ಬ್ರೂಕ್ ಶೀಲ್ಡ್ಸ್, ಮಿರಾಂಡಾ ಕಾಸ್ ಗ್ರೋವ್ ಮತ್ತು ಬೆಂಜಮಿನ್ ಬ್ರಾಟ್ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ನೆಟ್ ಫ್ಲಿಕ್ಸ್‌ ನಲ್ಲಿ ಮೇ 9ನೇ ತಾರೀಖು ಈ ಹಾಲಿವುಡ್ ಸಿನಿಮಾ ಬಿಡುಗಡೆಯಾಗಲಿದೆ.

More from Filmibeat

English summary
Weekend OTT releases on May 8th to 10th of 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X