ಈ ವಾರ ಒಟಿಟಿಯಲ್ಲಿ ಯಾವ್ಯಾವ ಸಿನಿಮಾ, ವೆಬ್ ಸಿರೀಸ್ ರಿಲೀಸ್? ಇಲ್ಲಿದೆ ಡಿಟೈಲ್ಸ್

ವೀಕೆಂಡ್ ಬಂತು ಅಂದರೆ ಮೋಜು ಮಸ್ತಿ ಕಾಮನ್. ಶನಿವಾರ ಹಾಗೂ ಭಾನುವಾರ ಮನೆಯಲ್ಲೇ ಕೂತು ಎಂಟರ್‌ಟೈನ್ಮೆಂಟ್ ಪಡೆಯುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ. ಮನೆಯಲ್ಲೇ ಇರಬೇಕು ಅನ್ನುವವರಿಗೆ ಒಟಿಟಿ ಆಪ್ತಮಿತ್ರನಂತಾಗಿಬಿಟ್ಟದೆ. ಒಟಿಟಿ ಪ್ಲ್ಯಾಟ್‌ಫಾರ್ಮ್‌ಗಳು ಕೂಡ ಒಟಿಟಿಯಲ್ಲಿ ಹೊಸ ಹೊಸ ಸಿನಿಮಾ ಹಾಗೂ ವೆಬ್‌ ಸಿರೀಸ್ ಅನ್ನು ವೀಕೆಂಡ್‌ಗೆ ರಿಲೀಸ್ ಮಾಡುತ್ತಲೇ ಇರುತ್ತೆ.

ಈ ವಾರ ಕೂಡ ಒಟಿಟಿ ಪ್ರಿಯರಿಗೆ ಭರ್ಜರಿ ಮನರಂಜನೆ ಇದೆ. ಸಿನಿಮಾ ನೋಡಬೇಕು ಅಂತ ಬಯಸುವವರಿಗೆ ಒಟಿಟಿಯಲ್ಲಿ ಸಿನಿಮಾಗಳು ರಿಲೀಸ್ ಆಗುತ್ತಿವೆ. ಇನ್ನೊಂದು ವೆಬ್ ಸಿರೀಸ್ ಇಷ್ಟ ಪಡುವವರಿಗೂ ಹೊಸ ಹೊಸ ಸಿರೀಸ್ ರಿಲೀಸ್ ಆಗುತ್ತಿದೆ. ಅಮೆಜಾನ್ ಪ್ರೈಂ, ನೆಟ್‌ಫ್ಲಿಕ್ಸ್, ಡಿಸ್ನಿ ಹಾಟ್‌ಸ್ಟಾರ್, ಜೀ 5, ಸೋನಿ ಲೈವ್ ಸೇರಿದಂತೆ ಹಲವು ವೇದಿಕೆಗಳಲ್ಲಿ ಹೊಸ ಹೊಸ ಕಂಟೆಂಟ್ ರಿಲೀಸ್ ಆಗಿದೆ. ಆ ಹೊಸ ಸಿನಿಮಾ, ವೆಬ್ ಸಿರೀಸ್ ಯಾವುದು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

'ಡಾನ್'

'ಡಾನ್'

ತಮಿಳು ಬಾಕ್ಸಾಫೀಸ್‌ನಲ್ಲಿ ಸೂಪರ್‌ಹಿಟ್ ಅಂತ ಸಾಬೀತಾದ ಸಿನಿಮಾ 'ಡಾನ್'. ಶಿವಕಾರ್ತಿಕೇಯನ್ ಅಭಿನಯದ ಈ ಸಿನಿಮಾ ಈಗ ಒಟಿಟಿಯಲ್ಲಿ ರಿಲೀಸ್ ಆಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ 'ಡಾನ್' ಪ್ರೀಮಿಯರ್ ಆಗುತ್ತಿದ್ದು, ಹಾಸ್ಯ ಪ್ರಿಯರಿಗೆ ಸಖತ್ ಮನರಂಜನೆ ನೀಡುತ್ತಿದೆ.

ಟ್ವೆಂಟಿ ಒನ್ ಗ್ರಾಮ್ಸ್- ಡಿಸ್ನಿ ಹಾಟ್‌ಸ್ಟಾರ್

ಟ್ವೆಂಟಿ ಒನ್ ಗ್ರಾಮ್ಸ್- ಡಿಸ್ನಿ ಹಾಟ್‌ಸ್ಟಾರ್

'ಟ್ವೆಂಟಿ ಒನ್ ಗ್ರಾಮ್ಸ್' ಮಲಯಾಳಂನ ಮರ್ಡರ್‌ ಮಿಸ್ಟ್ರಿ. ಒಬ್ಬರು ಒಡಹುಟ್ಟಿದವರ ಮರ್ಡರ್ ರಹಸ್ಯವನ್ನು ಅನ್ನು ಪೊಲೀಸ್ ಅಧಿಕಾರಿ ತನ್ನದೇ ಶೈಲಿಯಲ್ಲಿ ಹೇಗೆ ಸಾಬೀತು ಮಾಡುತ್ತಾನೆ ಎನ್ನುವುದೇ ಕಥೆ. ಅನುಪ್ ಮೆನನ್, ರೆಮಜಿ ಪಣಿಕ್ಕರ್, ಲಿಯೋನಾ ಲಿಶೋಯ್, ಲೀನಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಟ್ವೆಂಟಿ ಒನ್ ಗ್ರಾಮ್ಸ್' ಈಗಾಗಲೇ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಪ್ರೀಮಿಯರ್ ಆಗುತ್ತಿದೆ.

'ಸಿಬಿಐ 5: ದಿ ಬ್ರೈನ್': ನೆಟ್‌ಫ್ಲಿಕ್ಸ್

'ಸಿಬಿಐ 5: ದಿ ಬ್ರೈನ್': ನೆಟ್‌ಫ್ಲಿಕ್ಸ್

'ಸಿಬಿಐ 5: ದಿ ಬ್ರೈನ್' ಕೆ ಮಧು ಎಂಬುವವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ನಟಿಸಿದ್ದಾರೆ. ಈ ಸಿನಿಮಾ ಮೇ 1ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಜೂನ್ 12ರಂದು ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಸಿಬಿಐನ 5ನೇ ಸರಣಿ ಇದಾಗಿದ್ದು, ಮಮ್ಮುಟ್ಟಿ ಇಲ್ಲಿ ಸೇತುರಾಮ ಅಯ್ಯರ್ ಆಗಿ ಇನ್ನೊಂದು ಸಮಸ್ಯೆಯನ್ನು ಬಗೆಹರಿಸಲಿದ್ದಾರೆ.

'ಕಿನ್ನೆರಸಾನಿ'- ಜೀ 5

'ಕಿನ್ನೆರಸಾನಿ'- ಜೀ 5

ತೆಲುಗು ಸಿನಿಮಾ 'ಕಿನ್ನೆರಸಾನಿ' ಜೀ 5ನಲ್ಲಿ ಶುಕ್ರವಾರ ( ಜೂನ್ 10) ಬಿಡುಗಡೆಯಾಗಿದೆ. ಈ ಸಿನಿಮಾದ ಪ್ರಮುಖ ಪಾತ್ರ ಶೀತಲ್ ತನ್ನ ತಂದೆಯನ್ನು ಹುಡುಕಿಕೊಂಡು ಹೊರಡುತ್ತಾಳೆ. ಈ ವೇಳೆ ಕತೆ ಶೀತಲ್‌ಗೆ ರೊಮ್ಯಾಂಟಿಕ್ ಟ್ವಿಸ್ಟ್ ಕೊಡುತ್ತೆ. ರವೀಂದ್ರ ವಿಜಯ್, ಕಲ್ಯಾಣ್ ದೇವ್, ಮಹಥಿ ಭಿಕ್ಷು, ಶೀತಲ್ ಹಾಗೂ ಕಶಿಶ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ದಿ ಬ್ರೋಕನ್ ನ್ಯೂಸ್- ಜೀ 5

ದಿ ಬ್ರೋಕನ್ ನ್ಯೂಸ್- ಜೀ 5

'ದಿ ಬ್ರೋಕನ್ ನ್ಯೂಸ್' ಜೀ 5ನ ಹೊಸ ವೆಬ್ ಸಿರೀಸ್. ಸೋನಾಲಿ ಬೇಂದ್ರೆ ಈ ವೆಬ್ ಸಿರೀಸ್ ಮೂಲಕ ಒಟಿಟಿಗೆ ಪಾದಾರ್ಪಣೆ ಮಾಡಿದ್ದಾರೆ. ಬ್ರಿಟಿಷ್ ವೆಬ್ ಸಿರೀಸ್ 'ಪ್ರೆಸ್'ನಿಂದ ಪ್ರೇರಣೆ ಪಡೆದು ಈ ಸಿರೀಸ್‌ ಅನ್ನು ನಿರ್ಮಿಸಲಾಗಿದೆ. ಸೋನಾಲಿ ಬೇಂದ್ರೆ ಜೊತೆ 'ಪಾತಾಳ್ ಲೋಕ್' ಖ್ಯಾತಿಯ ಜೈದೀಪ್ ಅಹ್ಲಾವತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಅಯ್ಯಂಗಾರನ್-ಆಹಾ ಒಟಿಟಿ

ಅಯ್ಯಂಗಾರನ್-ಆಹಾ ಒಟಿಟಿ

ಜಿ ವಿ ಪ್ರಕಾಶ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ತಮಿಳು ಸಿನಿಮಾ 'ಅಯ್ಯಂಗಾರನ್'. ನಗರದಲ್ಲಿ ನಡೆಯುವ ಹೈ ಪ್ರೊಫೈಲ್ ಕಳ್ಳತನದ ಕೇಸ್ ಅನ್ನು ಅದ್ಭುತ ಮಷೀನ್‌ ಕಂಡು ಹಿಡಿಯುತ್ತೆ. ಇದರ ಸುತ್ತಮುತ್ತವೇ ಕಥೆ ಸಾಗುತ್ತೆ. ಇದು ಆಹಾ ತಮಿಳಿನಲ್ಲಿ ಈಗ ಪ್ರಸಾರವಾಗುತ್ತಿದೆ.

More from Filmibeat

English summary
Watch This Weekend On OTT Like Amazon Prime, Netflix, Disney Hostar and Zee 5, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X